ಸದಸ್ಯ:Sukritha.s/ನನ್ನ ಪ್ರಯೋಗಪುಟ1

ಮಂಗರಬಳ್ಳಿ ಬದಲಾಯಿಸಿ

ಸಂ: ವಜ್ರವಲ್ಲಿ, ಅಸ್ಥಿಶ್ರಂಕಲ

ಹಿಂ: ಹ್ರರಹುರ

ಮ: ಚಾಂಗ್ಲಾಪೆರಾಂಡ

ಗು: ವಜ್ರವಲ್ಲಿ

ತೆ: ನಲ್ಲೇರು

ತ: ಪೆರಂಡೈ

ವರ್ಣನೆ ಬದಲಾಯಿಸಿ

ನಾಲ್ಕು ಮೂಲೆಯ ಚಪ್ಪಟೆ ಆಕಾರದ ಬಳ್ಳಿ. ಸಾಮಾನ್ಯವಾಗಿ ಗಿಡಗಳ ಮೇಲೆ ಅಥವಾ ಸಣ್ಣ ಗಿಡಗಳ ಮೇಲೆ ಹಬ್ಬಿರುತ್ತದೆ. ಎಲೆಗಳು ಗಿಣ್ಣುಗಳಲ್ಲಿ ಹುಟ್ಟುತ್ತವೆ ಮತ್ತು ಹಸಿರು ಬಣ್ಣದ್ದಾಗಿರುತ್ತವೆ. ಗಿಣ್ಣಗಳಲ್ಲಿ ಸಣ್ಣ ಕುಡಿ ಅಥವಾ ಹಂಬುಗಳು ಹುಟ್ಟುತ್ತವೆ. ಹೂವು ಬಿಳಿ ಹಸಿರು ಬಣ್ಣದ್ದು, ಚಿಕ್ಕ ಎಲೆಗಳು. ಇದರಲ್ಲಿ ಮೂರು ಮೂಲೆಯ ಮಂಗರವಳ್ಳಿ ಸಹ ಇರುತ್ತದೆ.

ಸರಳ ಚಿಕಿತ್ಸೆಗಳು ಬದಲಾಯಿಸಿ

ಮೂಳೆ ಮುರಿತದಲ್ಲಿ, ಮೂಳೆಗಳಿಗೆ ಶಕ್ತಿ ಬರಲು ಬದಲಾಯಿಸಿ

ಮಂಗರಬಳ್ಳಿಯನ್ನು ಚೆನ್ನಾಗಿ ಜಜ್ಜಿ, ಮೂಲೆ ಮುರಿದಿರುವ ಜಾಗದಲ್ಲಿ ಲೇಪಿಸುವುದು ಮತ್ತು ಮೂಳೆಯನ್ನು ಸರಿಯಾಗಿ ಜೋಡಿಸಿ, ಪಟ್ಟಿ ಹಾಕಿ ಬಟ್ಟೆ ಕಟ್ಟುವುದು. ಮಂಗರವಳ್ಳಿಯನ್ನು ಚೆನ್ನಾಗಿ ಕುಟ್ಟಿ ಉಪ್ಪು ಸೇರಿಸಿ ಸೇವಿಸುವುದು.

ಅಗ್ನಿಮಾಂದ್ಯ, ಅಜೀರ್ಣಕ್ಕೆ ಬದಲಾಯಿಸಿ

ಹಸಿರುಬಳ್ಳಿಯ ಎಳೆ ಎಲೆಗಳನ್ನು ಹಾಗೂ ಕುಡಿಗಳನ್ನು ಚೆನ್ನಾಗಿ ಕುಟ್ಟಿ ಬಟ್ಟೆಯಲ್ಲಿ ಸೋಸಿ ರಸ ತೆಗೆಯುವುದು. ಒಂದೆರಡು ಟೀ ಚಮಚ ರಸವನ್ನು ಬಿಸಿಮಾಡಿ ಸ್ವಲ್ಪ ತುಪ್ಪ ಸೇರಿಸಿ ಕುಡಿಸುವುದು.

ಗೂರಲು ಮತ್ತು ನರಗಳ ದೌರ್ಬಲ್ಯಕ್ಕೆ ಬದಲಾಯಿಸಿ

ಮಂಗರಬಳ್ಳಿ ರಸವನ್ನು ಒಂದು ಟೀ ಚಮಚ ಕುಡಿಸುವುದು. ಅಪಸ್ಮಾರ ಮತ್ತು ಭೂತೋನ್ಮಾದಗಳಲ್ಲಿ ಸಹ ಉಪಯೋಗಿಸಿತ್ತಾರೆ.

ಮೂಗಿನಲ್ಲಿ ರಕ್ತ ಸೋರುವುದಕ್ಕೆ ಬದಲಾಯಿಸಿ

ಹಸಿ ಮಂಗರಬಳ್ಳಿಯನ್ನು ಚೆನ್ನಾಗಿ ಜಜ್ಜಿ, ಬಟ್ಟೆಯಲ್ಲಿ ಹಿಂಡಿ ರಸವನ್ನು ಮೂಗಿನ ಹೊಳ್ಳೆಗಳಿಗೆ ತೊಟ್ಟಾಗಿ ಬಿಡುವುದು. ಜೇನು, ಅರ್ಧ ಹಸೀ ಶುಂಠಿ ರಸ ತಲಾ ಅರ್ಧ ಟೀ ಚಮಚ ಸೇರಿಸಿ ಸೇವಿಸುವುದು.