ಸದಸ್ಯ:Sukanyaswamy/ನನ್ನ ಪ್ರಯೋಗಪುಟ

ಲೋಕಸಭೆ

ಬದಲಾಯಿಸಿ

ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು.[೧]

  • ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು.[೨]
  • ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  • ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು.
* ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು.[೩]
  • ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ):

ಉಲ್ಲೇಖ

ಬದಲಾಯಿಸಿ