ಸದಸ್ಯ:Sujaykiran/sandbox
ಹಸಿರಿನಲ್ಲಿ ಕಂಗೊಳಿಸುವ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ಸಿಹಿಜನರು ಎಂದು ಕರಸಿಕೊಳ್ಳುವ ಆಲ್ಪೋನ್ಸ್ ನಗರದಲ್ಲಿ ೧೫-೧-೧೯೯೫ ರಂದು ಶ್ರೀ ಪ್ರಾನ್ಸಿಸ್ ಹಾಗೂ ಶ್ರೀಮತಿ ಆಗ್ನೇಸ್ ಮೇರಿ ದಂಪತಿಗಳಿಗೆ ಮೊದಲನೆಯ ಜೇಷ್ಠಪುತ್ರನಾಗಿ ಒಬ್ಬ ಗಂಡು ಗಲಿ ಹುಟ್ಟಿದ ಅದೇ ಸುಜಯ್ ಕಿರಣ್.
ನಾನು ಚಕ್ಕಂದಿನಿಂದಲೂ ತುಂಬಾ ತುಂಟ. ನನ್ನ ಕೆಲಸ ಕಾರ್ಯಗಳೆಂದರೆ ಪಕ್ಕದ ಮನೆಯ ಬೇಲಿ ಹಾರುವುದು, ಬೇರೆಯವರ ಮನೆಯಿಂದ ಹಣ್ಣುಗಳನ್ನು ಕಿತ್ತು ತಿನ್ನುವುದು, ಇವೇ ನನ್ನ ಬಾಲ್ಯದ ದಿನಗಳಾಗಿದ್ದವು. ನಂತರ ನಾನು ಊರಿನಲ್ಲೇ ಇದ್ದು ಸೇಂಟ್ ಮೇರಿಸ್ ಎಂಬ ಶಾಲೆಯಲ್ಲಿ ನನ್ನ ವಿದ್ಯಾರ್ಥಿಯ ಜೀವನ ಪ್ರಾರಂಭವಾಯಿತು.ತುಂಟನಾಗಿದ್ದ ನಾನು ಸ್ವಲ್ಪ ಎಚ್ಚೇತ್ತು ಓದಲು ಪ್ರಾರಂಭಿಸಿದೆ. ತಂದೆ-ತಾಯಿಗೆ ಅಚ್ಚು ಮೆಚ್ಚಿದ ಮಗನಾದೆ, ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಯಾದೆ, ಗೆಳೆಯರಿಗೆ ಆಪ್ತಮಿತ್ರನಾದೆ, ನೆಂಟೆರಿಗೆಲ್ಲಾ ಪ್ರೀತಿಯ ವ್ಯಕ್ತಿಯಾದೆ.ನಾನು ೧ನೆ ತರಗತಿಯಿಂದ ನನ್ನ ೧೦ನೇ ತರಗತಿಯವರೆಗೂ ಅದೇ ಶಾಲೆಯಲ್ಲಿ ಕಲಿತೆ. ನಂತರ ನನ್ನ ಪಿ.ಯು.ಸಿ ಯನ್ನು ಬೆಂಗಳೂರಿನ ಸಂತ್ ಜೋಸೆಫರ ಕಾಲೇಜಿನಲ್ಲಿ ಮುಗಿಸಿದೆ. ನನ್ನ ಹವ್ಯಾಸಗಳು ಅನೇಕ ಹಾಡುವುದು, ಅನೇಕ ಸಂಗೀತದ ವಾದ್ಯಗಳನ್ನು ನುಡಿಸುವುದು. ಓದುವುದು. ಆಟ ಆಡುವುದು, ಸಾಹಿತ್ಯ ಬರೆಯುವುದು ಇತ್ಯಾದಿ.ಪ್ರಸ್ತುತ ಈಗ ನಾನು ಮಂಗಳೂರಿನ ಸಂತ್ ಅಲೋಷಿಯಸ್ ಕಾಲೇಜಿನಲ್ಲಿ ನನ್ನ ಪ್ರಥಮ ಬಿ.ಎ ಪದವಿಯನ್ನು ಮುಂದುವರೆಸುತ್ತಾ ಇದ್ದೇನೆ. ಇದು ನನ್ನ ಜೀವನದಲ್ಲಿ ನಡೆದಂತ ಕೆಲವು ಘಟನೆಗಳು.