ಸದಸ್ಯ:Sujanac1
ನನ್ನ ಹೆಸರು ಸುಜನ .ಸಿ.ನಾನು ಪ್ರಸ್ತುತ ಕ್ರೈಸ್ತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಪ್ರಥಮ ಬಿ ಎಸ್ಸಿ,ಪಿ ಸಿ ಎಮ್ ಅಧ್ಯಯನ ಮಾಡುತ್ತಿದ್ದೇನೆ.
ಸುಜನ.ಸಿ | |
---|---|
Born | ೦೬-೦೯-೧೯೯೭ ಬೆಂಗಳೂರು |
Nationality | ಭಾರತೀಯ |
Citizenship | ಭಾರತೀಯ |
ನನ್ನ ವಿದ್ಯಾಕ್ಷೇತ್ರದ ಮಾಹಿತಿ
ಬದಲಾಯಿಸಿನನ್ನ ಹೆಸರು ಸುಜನ .ಸಿ.ನಾನು ಪ್ರಸ್ತುತ ಕ್ರೈಸ್ತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಪ್ರಥಮ ಬಿ ಎಸ್ಸಿ,ಪಿ ಸಿ ಎಮ್ ಅಧ್ಯಯನ ಮಾಡುತ್ತಿದ್ದೇನೆ.ಕ್ರೈಸ್ತ ವಿಶ್ವವಿದ್ಯಾಲಯವು ಎಲ್ಲ ರೀತಿಯ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ.ಇದೇ ಕಾಲೇಜಿನ ಆವರಣದಲ್ಲಿರುವ ಕ್ರೈಸ್ತ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳನ್ನು ಪೂರೈಸಿರುವುದರಿಂದ ,ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ಪದವಿಗೆ ಪ್ರವೇಶ ಪಡೆದಾಗ ನನಗೆ ಅಪರಿಚಿತ ವಾತಾವರಣ ಎನಿಸಲಿಲ್ಲ.ಈಗಾಗಲೆ ಪ್ರಥಮ ಪದವಿಯಲ್ಲಿ ಪ್ರಥಮ ಸೆಮಿಸ್ಟರನ್ನು ಯಾವುದೆ ರೀತಿಯ ಮುಜುಗರ,ತೊಂದರೆ ಇಲ್ಲದೆ ಅಧ್ಯಯನ ಮಾಡಿ ಪರೀಕ್ಶೆಯನ್ನು ಬರೆದಿರುತ್ತೇನೆ ಹಾಗು ಸದರಿ ಪರೀಕ್ಶೆಯ ಫಲಿತಾಂಶವು ಪ್ರಕಟಗೊಂಡಿರುತ್ತದೆ.ನನಗೆ ವಯಕ್ತಿಕವಾಗಿ ನನ್ನ ಪರೀಕ್ಶಾ ಫಲಿತಾಂಶವು ತೃಪ್ತಿದಾಯಕವಲ್ಲದಿದ್ದರು ನನ್ನ ದುಡಿಮೆಗೆ ತಕ್ಕ ಪ್ರತಿಫಲವೆಂದು ಭಾವಿಸುತ್ತೇನೆ.ಏಕೆಂದರೆ ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಅತ್ಯುತ್ತಮವಾದ ವಾತಾವರಣವಿದ್ದು, ನನ್ನ ವಯಕ್ತಿಕ ಅಧ್ಯಯನದ ಮಟ್ಟ ಕಡಿಮೆ ಎನಿಸುತ್ತಿದೆ. ನನಗೆ ಕಲಿಕೆಯ ಅಸಿವು ಹೆಚ್ಚು ಇದ್ದರೂ ಇಲ್ಲಿ ಒದಗಿಸಿರುವ ಎಲ್ಲ ರೀತಿಯ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡಿಲ್ಲವೆಂದು ನನ್ನ ಮನಸ್ಸಿಗೆ ಅನ್ನಿಸುತ್ತಿದೆ.ಆದ ಕಾರಣ ಮುಂದಿನ ಸೆಮಿಸ್ಟರ್ ನಲ್ಲಿ ನನ್ನ ಕಲಿಕೆಯನ್ನು ಕ್ರಮ ಬದ್ದವಾಗಿ ಮಾಡಿ ಇನ್ನೂ ಉತ್ತಮ ಅಂಕಗಳನ್ನು ಗಳಿಸಲು ಶೇಕಡ ನೂರು ಭಾಗ ಪ್ರಯತ್ನಿಸುತ್ತೇನೆ.
ನನ್ನ ಕೌಟುಂಬಿಕ ಹಿನ್ನೆಲೆ
ಬದಲಾಯಿಸಿನನ್ನ ಕೌಟುಂಬಿಕ ಹಿನ್ನೆಲೆಯ ಎರಡು ಮಾತು.ನಾನು ಮೂರನೆಯ ಮಗಳಾಗಿದ್ದು ನನಗೆ ಒಬ್ಬ ಅಕ್ಕ ಹಾಗು ಒಂದು ನಿಮಿಷದಷ್ಟು ಹಿರಿಯನಾದ ಒಬ್ಬ ಅಣ್ಣ ಇದ್ದಾರೆ.ನಮ್ಮ ತಂದೆ ಹಾಗು ತಾಯಿಯವರು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರಾಗಿದ್ದು ಬಡತನದ ಬೇಗೆಯನ್ನು ಅನುಭವಿಸಿದವರಾಗಿದ್ದಾರೆ. ಇಬ್ಬರು ಸಹ ಎಂ ಎ ಪದವಿದರರಾಗಿ ಉತ್ತಮ ಹುದ್ದೆಗಳನ್ನು ಹೊಂದಿರುತ್ತಾರೆ.ಆದ ಕಾರಣ,ಸಾಮಾಜಿಕ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸುತ್ತಿರುವುದು ನನ್ನ ತಿಳುವಳಿಕೆಗೆ ಬಂದಿರುತ್ತದೆ ಹಾಗು ಸದಾ ಸರಳ ಜೀವನವನ್ನು ಮಾಡಲು ಬಯಸುತ್ತಿರುತ್ತಾರೆ.ನನ್ನ ಪೋಷಕರು ಅನಗತ್ಯವಾಗಿ ಹಣವನ್ನು ಖರ್ಚು ಮಾಡದೆ ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡುತ್ತ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಳ್ಳಬೇಕು ಎಂಬ ಗಾದೆ ಮಾತಿಗೆ ತಕ್ಕಂತೆ ಬದುಕಲು ಸದಾ ಬಯಸುತ್ತಾರೆ.ಬಡತನದ ಹಿನ್ನೆಲೆಯಿಂದ ಬಂದವರು ಯಾರೆ ಆಗಿರಲಿ ಸಹಾಯ ಬೇಡಿ ಬಂದಾಗ ಅವರಿಗೆ ತಮ್ಮಿಂದ ಸಾಧ್ಯವಾದ ಎಲ್ಲ ರೀತಿಯ ಸಹಾಯ,ಸಹಕಾರಗಳನ್ನು ನೀಡಬಯಸುತ್ತಾರೆ.ಏಕೆಂದರೆ ಬಡತನದ ನೋವು ಹೇಗಿರುತ್ತದೆ ಎಂಬುದು ಅವರಿಗೆ ಅನುಭವಿಸಿ ಗೊತ್ತಿದೆ.
ನನ್ನ ಹವ್ಯಾಸಗಳು
ಬದಲಾಯಿಸಿನನ್ನ ಹವ್ಯಾಸಗಳೆಂದರೆ ಚಿತ್ರ ಬಿಡಿಸುವುದು,ಆಟವಾಡುವುದು,ಹರಟೆವಡೆಯುವುದು,ಹೊಸ ರೀತಿಯ ಅಡುಗೆಗಳನ್ನು ಮಾಡಲು ಪ್ರಯತ್ನಿಸುವುದು,ಕಾದಂಬರಿ ಓದುವುದು,ಹಳ್ಳಿಗೆ ಹೋದಾಗ ಮಕ್ಕಳೊಂದಿಗೆ ಆಟವಾಡುತ್ತಾ ಖುಶಿಪಡುವುದು ಮುಂತಾದುವು.ನಾನು ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಬಯಸಿದ್ದು ಏಕೆಂದರೆ ನನ್ನ ತಂದೆಯವರು ೧೯೭೭ರಿಂದ ೧೯೮೦ರ ವರೆಗೆ ಇದೇ ಕಾಲೇಜಿನಲ್ಲಿ ಬಿ ಎ ಪದವಿಯನ್ನು ಅಧ್ಯಯನ ಮಾಡಿರುತ್ತಾರೆ.ನನ್ನ ಅಣ್ಣನೊಬ್ಬ ಇದೇ ವಿಶ್ವವಿದ್ಯಾಲಯದಲ್ಲಿ ಬಿ ಎಸ್ಸಿ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದಾನೆ.ಈ ಸಂಸ್ಥೆ ಬೆಂಗಳೂರಿನಲ್ಲಿ ಒಂದು ಪ್ರತಿಷ್ಟಿತ ಸಂಸ್ಥೆಯಾಗಿದೆ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದೆ.ಜೊತೆಗೆ ಸುಸಜ್ಜಿತವಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿದುಬಂದಿರುತ್ತದೆ .ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದ ಮೇಲೆ ನನ್ನ ವಿಶ್ವಾಸಾರ್ಹತೆ ಹೆಚ್ಚತೊಡಗಿದೆ.ಎಲ್ಲರೊಂದಿಗೆ ಬೆರೆತು ಮಾತನಾಡುವುದು ನನಗೆ ನೀರು ಕುಡಿದಂತೆ.
ನಾನು ಹುಟ್ಟಿ ಬೆಳೆದ ಊರಿನ ಕುರಿತು
ಬದಲಾಯಿಸಿಬೆಂಗಳೂರು ನಗರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿದೆ.ಇಡೀ ದೇಶದಲ್ಲಿಯೆ ಸ್ವಚ್ಛವಾಗಿರುವ ರಾಜಧಾನಿಯೆಂದು ಹೆಸರುಗಳಿಸಿದೆ.ಈ ನಗರದಲ್ಲಿ ಮೂಲ ನಿವಾಸಿಗಳ ಸಂಖ್ಯ ಕಡಿಮೆಯಾಗಿದ್ದು ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲೇ ವಾಸಮಾಡುತ್ತಿದ್ದಾರೆ.ಇಲ್ಲಿ ನೂರಾರು ಜಾತಿಗಳವರು ಬದುಕುತ್ತಾ ಇದೊಂದು ಜಾತ್ಯಾತೀತ ನಗರವೆನಿಸಿದೆ.ದೇಶದ ಎಲ್ಲಾ ಜನರನ್ನು ಈ ನಗರ ಸೆಳೆಯಲು ಕಾರಣವೇನೆಂದರೆ ಇಲ್ಲಿ ವಾಸಿಸಲು ಯೋಗ್ಯವಾದ ವಾತಾವರಣವಿರುತ್ತದೆ.ಇಲ್ಲಿನ ಮೂಲನಿವಾಸಿಗಳು ಉದಾರಿಗಳಾಗಿದ್ದು ಎಲ್ಲರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ.ನನ್ನ ಹುಟ್ಟೂರು ನಗರಕ್ಕೆ ಮೂವತ್ತು ಕಿ.ಮೀ.ದೂರವಿದ್ದರು ನಾನು ಬೆಂಗಳೂರಿನ ಕೋರಮಂಗಲದಲ್ಲಿ ಇರುವ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿ ನನ್ನ ಪೋಷಕರೊಂದಿಗೆ ವಾಸಮಾಡುತ್ತಿದ್ದೇನೆ.ನಾನು ವಾಸವಿರುವ ಸ್ಥಳ ಯಾವುದೇ ರೀತಿಯ ತೊಂದರೆಗಳಿಲ್ಲದೆ, ಹೆಚ್ಚುವಾಹನಗಳ ದಟ್ಟಣೆಯಿಲ್ಲದೆ ವಾಸಿಸಲು ಯೋಗ್ಯ ಹಾಗು ಸುರಕ್ಷಿತವಾದ ಸ್ಥಳವಾಗಿದೆ.
ಕ್ರೀಡೆ
ಬದಲಾಯಿಸಿನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿಯಿದೆ.ಅದರಲ್ಲೂ ಬಾಸ್ಕೆಟ್ಭಾಲ್ ಮತ್ತು ಓಟವೆಂದರೆ ಎಲ್ಲಿಲ್ಲದ ಉತ್ಸಾಹ.ಶಾಲಾ ಮಟ್ಟದಲ್ಲಿ ಈ ಎಲ್ಲಾ ಕ್ರೀಡೆಗಳಲ್ಲಿ ಬಾಗವಹಿಸಿದ್ದೇನೆ.ಬಹಳಷ್ಟು ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದೇನೆ.ಎಷ್ಟೋ ಬಾರಿ ನನ್ನಿಂದ ಗೆಲುವನ್ನು ಪಡೆದಿರುವ ಸಂದರ್ಭಗಳಿವೆ.ಕ್ರೀಡೆಗಳಲ್ಲಿ ಭಾಗವಸಿದ ಕಾರಣದಿಂದಾಗಿ ನಾನು ದೈಹಿಕವಾಗಿ ಆರೋಗ್ಯವಾಗಿದ್ದೇನೆ.ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಾನು ವ್ಯಾಯಾಮ ಮಾಡುವ ಅನಿವಾರ್ಯವಿಲ್ಲ.ಈಗಿನ ಜಗತ್ತಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟಕರವಾಗಿದೆ.ಮಾನಸಿಕ ಹಾಗು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಗುರಿಯಾಗಬೇಕು.ಆದುದರಿಂದ ನಾವು ಕಷ್ಟ ಪಟ್ಟು ದೈಹಿಕ ಶ್ರಮವನ್ನು ಬಯಸುವ ಕೆಲಸವನ್ನು ಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ನನ್ನ ಬಾಲ್ಯದ ದಿನಗಳು
ಬದಲಾಯಿಸಿನನ್ನ ಬಾಲ್ಯದ ದಿನಗಳ ಕುರಿತು ಎರಡು ಮಾತು.ನಾನು ಹುಟ್ಟಿದ್ದು ಬೆಂಗಳೂರಿನಲ್ಲಿಯೇ ಆದರೂ ನನ್ನ ಬಾಲ್ಯದ ದಿನಗಳನ್ನು ಕೋಲಾರದಲ್ಲಿ ಕಳೆದಿದ್ದೇನೆ.ನಾನು ಎರಡನೆಯ ತರಗತಿ ಮುಗಿಸುವ ತನಕ ಕೋಲಾರದಲ್ಲಿಯೇ ವಾಸ ಮಾಡುತ್ತಿದ್ದೆವು.ನನ್ನ ಬಾಲ್ಯದಲ್ಲಿ ಮಾಡದಿರುವ ತಲಹರಟೆಯಿಲ್ಲ ಎಂದರೆ ತಪ್ಪಾಗಲಾರದು.ಕಣ್ಣಾಮುಚ್ಚಾಲೆ,ಲಗೋರಿ,ಚಂಡಿನ ಆಟ,ಕುಂಟೆಬಿಲ್ಲೆ,ಅಡಿಗೆ ಮಾಡುವ ಆಟ,ವಾಹನ ಚಾಲನೆ ಮಾಡುವ ಆಟ ಮುಂತಾದ ಹಲವಾರು ಆಟಗಳನ್ನು ಆಡಿದ್ದು ಉಂಟು. ಯಾರೆ ಆಗಲಿ ಸಂತೋಷವಾಗಿ ಬದುಕಬೇಕೆಂದರೆ ಪ್ರತಿಯೊಂದನ್ನು ಸಕಾರಾತ್ಮಕವಾಗಿ ಚಿಂತಿಸುವುದನ್ನು ರೂಡಿಸಿಕೊಳ್ಳಬೇಕು.ಆಗ ಎಲ್ಲರು ಅರೋಗ್ಯಕರವಾಗಿ ಯೋಚಿಸುತ್ತಾ ಒಳ್ಳೆಯ ರೀತಿಯಲ್ಲಿ ಬದುಕಬಹುದು.ಪಠ್ಯ ವಿಷಯಗಳಲ್ಲಿ ಇರುವ ಒಳ್ಳೆಯದನ್ನು ಸ್ವೀಕರಿಸುತ್ತಾ ಸಮಾಜಮುಖಿಯಾಗಿ ಯೋಚಿಸುತ್ತಾ ಜೀವನದ ಪ್ರಯಾಣದಲ್ಲಿ ಅನುಭವ ಗಳಿಸುತ್ತಾ ಸಾಗುವುದು ಪ್ರಸ್ತುತ ಎನಿಸುತ್ತದೆ.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Sujanac1 |