ಸದಸ್ಯ:Suhas m r/sandbox
ಜೀವ ವಿಮೆ
ಜೀವ ವಿಮೆ ಅಂದರೆ ವಿಮೆ ಮಾಡಿದ ವ್ಯಕ್ತಿಯ ಸಾವಿನಿಂದ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧದ ಸಂರಕ್ಷಣಾ ಅಥವಾ ಆರ್ಥಿಕ ಭದ್ರತೆ ನೀಡುತ್ತದೆ ಮತ್ತು ಯಾವುದೇ ಆಕಸ್ಮಿಕ ಘಟನೆಗಳ ಪರಿಣಾಮದೊಂದಿಗೆ ನಿಖರವಾಗಿ ವ್ಯವಹರಿಸುವಂತೆ ಮಾಡುತ್ತದೆ. ಜೀವ ವಿಮೆಯು ವ್ಯಕ್ತಿಯ ಕುಟುಂಬಕ್ಕೆ ಅಥವಾ ನಿಯುಕ್ತರಾದ ಇತರೆ ಫಲಾನುಭವಿಗಳಿಗೆ ಆರ್ಥಿಕ ಅನುಕೂಲಗಳನ್ನೂ ಅಥವಾ ವಿಮೆದಾರರಿಗೆ ವಿಶಿಷ್ಟ ವರಮಾನದ ನೆರವನ್ನೂ ನೀಡುವುದು. ವ್ಯಕ್ತಿಯ ಕುಟುಂಬಕ್ಕೆ ಸಂಸ್ಕಾರ, ಅಂತ್ಯಕ್ರಿಯೆ ಹಾಗೂ ಇತರ ಅಂತಿಮ ಖರ್ಚುಗಳಿಗೆ ಆದಾಯ ಒದಗಿಸಬಹುದು. ಜೀವವಿಮೆ ವಿಮೆ ಮಾಡಿದ ವ್ಯಕ್ತಿಯ ಹಾಗೂ ಅವರ ಕುಟುಂಬಕ್ಕೆ ಒಳಗೊಂಡಿರುವ ಎಲ್ಲಾ ಅಪಾಯಗಳ ವಿರುದ್ಧ ರಕ್ಷಣೆಯನ್ನು ನೀಡುವುದರ ಜೊತೆಗೆ, ಅದಕ್ಕಿಂತಲೂ ಹೆಚ್ಚಾಗಿ ಹೂಡಿಕೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಅವಕಾಶವನ್ನು ನೀಡುತ್ತದೆ.ಪರಿಗಣಿಸಲ್ಪಟ್ಟಿರುವ ದೀರ್ಘ ಅವಧಿಯ ಹೂಡಿಕೆಯಾಗಿರುವ ಹಣ ವಿಮೆದಾರನ ಭವಿಷ್ಯದ ಖರ್ಚಿಗೆ ಅಥವ ನಿವೃತ್ತಿಯ ನಂತರದ ದಿನಗಳಿಗೆ ದೊರೆಯಲಿದೆ.
ಜೀವ ವಿಮೆ ಪರಿಹಾರ ಬೇಡಿಕೆಗಳು
ಜೀವ ವಿಮೆ ಪರಿಹಾರ ಬೇಡಿಕೆಗಳು ಮತ್ತು ನಷ್ಟ ನಿರ್ವಹಣೆಯು ವಿಮೆಯ ವಾಸ್ತವ ಉಪಯುಕ್ತತೆಯಾಗಿದೆ. ವಿಮೆ ಪರಿಹಾರ ಬೇಡಿಕೆಗಳನ್ನು ವಿಮೆದಾರರು ನೇರವಾಗಿ ವಿಮೆಗಾರರೊಂದಿಗೆ ಅಥವಾ ದಲಾಲರ/ಮಧ್ಯವರ್ತಿಗಳ ಮೂಲಕವಾದರೂ ಸಲ್ಲಿಸಬಹುದು. ವಿಮೆಗಾರ ಈ ಬೇಡಿಕೆಯನ್ನು ತನ್ನದೇ ಆದ ನಿಗದಿತ ಅರ್ಜಿಯಲ್ಲಿ ಸಲ್ಲಿಸಲೆಂದು ನಿರೀಕ್ಷಿಸಬಹುದು ಅಥವಾ ACORD ರಚಿಸಿರುವ ಪ್ರಮಾಣಿತ ಉದ್ದಿಮೆಯ ನಮೂನೆಯ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಸಹ ಸ್ವೀಕರಿಸಬಹುದು.
ಜೀವ ವಿಮೆ ಉದ್ದಿಮೆಗಳ ಪರಿಹಾರ ಬೇಡಿಕೆಯ ಇಲಾಖೆಗಳು, ದಾಖಲಾ ನಿರ್ವಹಣಾ ಸಿಬ್ಬಂದಿ ಮತ್ತು ದತ್ತಾಂಶ ಸಂಗ್ರಹಣಕಾರರನ್ನು ಜೀವ ವಿಮೆ ಪರಿಹಾರ ಬೇಡಿಕೆಗಳ ಇತ್ಯರ್ಥಕ್ಕಾಗಿ ನೇಮಿಸಿರುತ್ತವೆ. ತೀವ್ರತೆಯ ಪ್ರಕಾರ ಒಳಬರುವ ಪರಿಹಾರ ಬೇಡಿಕೆಗಳನ್ನು ವಿಂಗಿಡಸಲಾಗಿ, ಅವುಗಳನ್ನು ಸಂಸ್ಕರಿಸಲು ಹೊಂದಿಕೆದಾರರಿಗೆ ವಹಿಸಲಾಗುತ್ತದೆ. ಇವರ ಚುಕಾವಣಾ ಅಧಿಕಾರವು ಅವರ ಜ್ಞಾನ ಮತ್ತು ಅನುಭವಗಳನ್ನು ಅವಲಂಬಿಸಿದೆ.
ಜಾಗತಿಕ ಜೀವ ವಿಮಾ ಉದ್ಯಮ
ಜಾಗತಿಕ ವಿಮೆಕಂತುಗಳು ೨೦೦೭ರಲ್ಲಿ 11%ರಷ್ಟು ಅಭಿವೃದ್ಧಿ ಹೊಂದಿ (ಅಥವಾ ನೈಜ ಮಟ್ಟದಲ್ಲಿ ೩.೩%) $೪.೧ ಲಕ್ಷಕೋಟಿಯಷ್ಟು ಅಭಿವೃದ್ಧಿ ಹೊಂದಿತು. ಭಾರೀ-ಆರ್ಥಿಕ ವಾತಾವರಣವು ೨೦೦೭ರಲ್ಲಿ ನಿಧಾನಗತಿಯ ಬೆಳವಣಿಗೆ ಮತ್ತು ಏರುತ್ತಿರುವ ಹಣದುಬ್ಬರದಿಂದ ಚಿತ್ರಿತವಾಗಿತ್ತು. ಆ ವರ್ಷ ಜೀವವಿಮೆಯಲ್ಲಿ ಲಾಭದಾಯಕತೆಯು ಸುಧಾರಿಸಿತಾದೆ. ಜೀವವಿಮೆಕಂತುಗಳು ೧೨.೬% ಅಭಿವೃದ್ಧಿ ಕಂಡು, ಜಪಾನ್ ಮತ್ತು ಭೂಖಂಡೀಯ ಯುರೋಪ್ ಹೊರತುಪಡಿಸಿ, ಮುಂದುವರೆದ ಆರ್ಥಿಕತೆಗಳಲ್ಲಿ ತ್ವರಿತ ಅಭಿವೃದ್ಧಿಯನ್ನು ಕಂಡಿತು. ವಿಮೆ ಕಂತು ಆದಾಯಕ್ಕೆ ಸಂಬಂಧಿಸಿದ ೨೦೦೮ರ ಅಂಕಿ-ಅಂಶಗಳು ಇನ್ನೂ ಲಭ್ಯವಿಲ್ಲ, ಆದರೆ ಜೀವ ವಿಮಾ ಕ್ಷೇತ್ರವು ಹೊಸ ಉದ್ಯಮದಲ್ಲಿ ನಿಧಾನಪ್ರಗತಿ ಮತ್ತು ಹೂಡಿಕೆಯ ಆದಾಯದಲ್ಲಿ ಇಳಿತವನ್ನು ಅನುಭವಿಸುವ ಸಾಧ್ಯತೆಯಿದೆ.
ಪೋಸ್ಟ್ ಆಫೀಸ್ನಲ್ಲಿ ವಿಮೆ ಪಾಲಿಸಿ
ಅಂಚೆ ಇಲಾಖೆಗೆ ಮರುಚೈತನ್ಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲ್ಲ ಪೋಸ್ಟ್ ಆಫೀಸ್ಗಳ ಮೂಲಕ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡುವ ನಿರ್ಧಾರ ಮಾಡಿದೆ. ಅಲ್ಲದೆ ಹೆಣ್ಣು ಮಕ್ಕಳಿಗೆಂದೇ ವಿಶೇಷ ೧೦ ಲಕ್ಷ ರೂ. ವರೆಗಿನ ವಿಮೆ ಪಾಲಿಸಿಯನ್ನೂ ಈ ವೇಳೆ ಪರಿಚಯಿಸಲಾಗೀದೆ. ಗ್ರಾಮೀಣ ಪ್ರದೇಶದಲ್ಲಿ ಅಂಚೆಯಣ್ಣಂದಿರನ್ನು ಹಣಕಾಸು ಸಲಹಾ ಸಂಪನ್ಮೂಲ ವ್ಯಕ್ತಿಯನ್ನಾಗಿಸುವ ಯೋಜನೆಯನ್ನೂ ರೂಪಿಸಲಾಗಿದೆ. ಇದಕ್ಕಾಗಿ ಪೋಸ್ಟ್ಮೆನ್ಗಳಿಗೆ ಶೀಘ್ರದಲ್ಲೇ ತರಬೇತಿ ನೀಡಲು ನಿರ್ಧರಿಸಲಾಗಿದೆ. ಸದ್ಯ ಅಂಚೆ ಇಲಾಖೆ ವಿಮೆ ಸೌಲಭ್ಯವನ್ನು ನೀಡುತ್ತಿದ್ದು, ಅಂಚೆ ಸಿಬ್ಬಂದಿ ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳಿಗಷ್ಟೇ ಈ ಸೌಲಭ್ಯ ದೊರೆಯುತ್ತಿದೆ. ಈ ವಹಿವಾಟನ್ನು ವಿಸ್ತರಿಸಿ ಎಲ್ಲ ಅಂಚೆ ಕಚೇರಿಗಳಲ್ಲೂ ಗ್ರಾಹಕರಿಗೆ ವಿಮೆ ಸೌಲಭ್ಯ ನೀಡಲು ಯೋಜನೆ ರೂಪಿಸಲಾಗಿದೆ. ೩ ಕೋಟಿ ವಿಮೆ ಮಾರಾಟ ಗುರಿ: ಜೀವ ವಿಮೆ ಹೊರತಾದ ಇತರ ವಿಮೆಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಇತರ ವಿಮೆ ಕಂಪನಿಗಳ ಜತೆ ಅಂಚೆ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ. ವಿಮೆ ಕ್ಷೇತ್ರದಲ್ಲಿ ಅಂಚೆ ಇಲಾಖೆ ೫೬ ಸಾವಿರ ಕೋಟಿ ರೂ. ನಿಧಿಯನ್ನು ಹೊಂದಿದೆ. ಸದ್ಯ ಪೋಸ್ಟಲ್ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆಯನ್ನು ನೀಡಲಾಗುತ್ತಿದೆ. ಯೋಜನೆಯನ್ನು ವಿಸ್ತರಿಸುವ ಮೂಲಕ ೩ ಕೋಟಿ ವಿಮೆಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ.
- ಜಯದೇವ ಪ್ರಸಾದ ಮೊಳೆಯಾರ
ಕೆಳಗಿನ ಅಂಶಗಳನ್ನು ನೀವು ಜೀವ ವಿಮಾ ಮೌಲ್ಯವನ್ನು ಪ್ರಮಾಣವನ್ನು ನಿರ್ಧರಿಸುತ್ತವೆ:
ಇತರ ಆದಾಯಗಳ ನಿಮ್ಮ ಮೂಲಗಳು ನೀವು ಅವಲಂಬಿತರು ಸಂಖ್ಯೆ ನೀವು ಬಹುಶಃ ಇತರರು ಕಾರಣದಿಂದ ಮಾಡಲಾಗುತ್ತದೆ ಸಾಲಗಳನ್ನು ಪ್ರಮಾಣವನ್ನು ನೀವು ವಾಸಿಸುವ ಜೀವನ ರೀತಿಯ (ನೀವು ಎದುರಿಸುವುದು) ಆರೋಗ್ಯ ವಿಷಯದಲ್ಲಿ, ಕೆಲಸ, ಚಾಲನೆ, ವಸತಿ ಪ್ರದೇಶದಲ್ಲಿ,ಇತ್ಯಾದಿ.
'ಜೀವ ವಿಮೆಯ ವಿವಿದ ಪಾಲಿಸಿಗಳು'
ಪಾಲಿಸಿ ವಿಧವು ಹಲವರು ಅಂಶಗಳ ಆಧಾರದ ಮೇಲೆ ಹೊಂದುತ್ತದೆ ಅಂದರೆ ವಿಮೆದಾರನ ಉದ್ದೇಶಗಳು,ಆದಾಯ,ಆಸ್ತಿ ಹಾಗೂ ಅವಲಂಬಿತ ವ್ಯಕ್ತಿಗಳ ಸಂಖ್ಯೆ ಮತ್ತು ಕುಟುಂಬದ ಖರ್ಚುಗಳು ಒಳಗೊಂಡಿರುತ್ತದೆ.ಜೀವ ವಿಮೆಯ ಪಾಲಿಸಿಗಳು ವಿಶಾಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು
೧.ಎಂಡೋಮೆಂಟ್ ಪಾಲಿಸಿ ೨.ಹೋಲ್ ಲೈಫ್ ಪಾಲಿಸಿ ೩.ಪೆನ್ಶನ್ ಪಾಲಿಸಿ
೧.ಎಂಡೋಮೆಂಟ್ ಪಾಲಿಸಿ ಎಂಡೋಮೆಂಟ್ ಪಾಲಿಸಿ ವಿಮೆ ಮಾಡಿದವನನ್ನು ಸೀಮಿತ ಅವಧಿಯವರೆಗೆ ರಕ್ಷಿಸುತ್ತದೆ. ನಿವೃತ್ತನಾಗುವವರೆಗೆ ವಿಮೆ ಮಾಡಿದ ವ್ಯಕ್ತಿಯು ಸ್ವಯಂ ಆಗಿ ಆರಿಸಲ್ಪಪಟ್ಟಿರುತ್ತಾನೆ.
ಉದಾಹರಣೆಗೆ. ಅವನು 25 ವರ್ಷದವನಾಗಿದ್ದು,ಅವನು ೬೦ ರ ಪ್ರಾಯವನ್ನು ತಲುಪುವವರೆಗೆ, ೩೫ ವರ್ಷಗಳ ವಿಮೆಗೆ ಅವನು ಸ್ವಯಂ ಆಗಿ ಆಯ್ಕೆಮಾಡಿಕೊಳ್ಳಬಹುದು.
೨.ಹೋಲ್ ಲೈಫ್ ಪಾಲಿಸಿ ಹೋಲ್ ಲೈಫ್ ಪಾಲಿಸಿ ಮಾಡಿಸಿದವವರು ಯಾವಾಗ ಬೇಕಾದರೂ ಸಂಭವಿಸುವ ಮರಣದ ಅಪಾಯದಿಂದ ರಕ್ಷಿಸುತ್ತದೆ. ಇದರರ್ಥ ಹೋಲ್ ಲೈಫ್ ಪಾಲಿಸಿ ಅಡಿಯಲ್ಲಿ ಯಾವುದೇ ನಿರ್ದಿಷ್ಟ ಅವಧಿಯಿಲ್ಲ. ಜೀವನ ಪರ್ಯಂತವಿರುವ ಪಾಲಿಸಿಗಳು ವಿಮೆ ಮಾಡಿದ ವ್ಯಕ್ತಿಯ ಮರಣದವರೆಗೆ ಪಾಲಿಸಿ ಒದಗಿಸುತ್ತವೆ.ವಿಮೆ ಮಾಡಿದ ವ್ಯಕ್ತಿಯ ಮರಣದ ಮೇಲೆ,ಒಟ್ಟು ಹಣವನ್ನು ಮತ್ತು ಬೋನಸ್‌ನ್ನು ಪಡೆದುಕೊಳ್ಳ ಬಹುದು ಹೋಲ್ ಲೈಫ್ ಪಾಲಿಸಿ ಸಾಧಾರಣವಾಗಿ ಉಳಿದಿರುವ ಲಾಭಗಳನ್ನು ನೀಡುವುದಿಲ್ಲ, ಪಾಲಿಸಿಗೆ ನಿರ್ಣಾಯಕ ಅವಧಿ ಇಲ್ಲದಿರುವವರೆಗೆ.
೩.ಪೆನ್ಶನ್ ಪಾಲಿಸಿ ಪೆನ್ಶನ್ ಪಾಲಿಸಿಗಳು ವಿಮೆ ಮಾಡಿಸಿದವನಿಗೆ ಅಥವಾ ಅವನ ಇತರ ಫಲಾನುಭವಿಗಳಿಗೆ ನಿಯಮಿತ ಪಾಲಿಸಿ ಹಣವನ್ನು ಒಂದು ನಿರ್ದಿಷ್ಟ ಅವಧಿಯನ್ನು ಒದಗಿಸುತ್ತದೆ. ಪೆನ್ಶನ್ ಮೊಬಲಗನ್ನು ಅವನು ಅಥವಾ ಅವಳು ಯಾವಾಗ ಮತ್ತು ಹೇಗೆ ಪಡೆಯಬಹುದೆಂದು ಆರಿಸುವ ಆಯ್ಕೆಯನ್ನು ವಿಮೆದಾರನಿಗೆ ಮಾಡಿಸುವಂತ ಅಧಿಕಾರ ಹೊಂದಿರುತ್ತನೆ.
ಭಾರತೀಯ ಪ್ರಮುಖ ಜೀವವಿಮೆ ಸಂಸ್ಥೆಗಳು
೧.ಭಾರತೀಯ ಜೀವ ವಿಮಾ ನಿಗಮ
೨.ಬಜಾಜ್ ಅಲೈನ್ಸ್ ಜೀವವಿಮಾ
೩.ಕೋಟಕ್ ಜೀವವಿಮಾ
೪.ಮ್ಯಾಕ್ಸ್ ಜೀವ ವಿಮಾ
೫.ರಿಲಯನ್ಸ್ ಜೀವ ವಿಮಾ
೬.ಐಡಿಬಿಐ ಫೆಡರಲ್ ಜೀವ ವಿಮಾ
೭.ಎಚ್ಡಿಎಫ್ಸಿ ಸ್ಟ್ಯಾಂಡರ್ಡ್ ಜೀವ ವಿಮಾ
ನಿಮ್ಮ ಬರಹವು ಅರ್ಥ ಪುರ್ಣವಾಗಿದೆ.