ಸದಸ್ಯ:Suhaas M/ಆ್ಯಡಂಸ್ಮಿತ್
ಅರ್ಥಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾಗಿರುವ ಆ್ಯಡಂಸ್ಮಿತ್ ಒಬ್ಬ ಸ್ಕಾಟಿಷ್ ನೈತಿಕ ತತ್ವಜ್ಞಾನಿ, ರಾಜಕೀಯ ಅರ್ಥಶಾಸ್ತ್ರದ ಪ್ರವರ್ತಕ ಮತ್ತು ಸ್ಕಾಟ್ಲೆಂಡ್ ಜನರ ಜ್ಞಾನೋದಯಕ್ಕೆ ಕಾರಣವಾದ ಪ್ರಮುಖ ವ್ಯಕ್ತಿ. ಇವರು "ದ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್" ಮತ್ತು " ಆ್ಯನ್ ಇನ್ಕೈರಿ ಇನ್ ಟು ದಿ ನೇಚರ್ ಅಂಡ್ ಕಾಸಸ್ ಆಫ್ ವೆಲ್ತ್ ಆಫ್ ನೇಷನ್ಸ್ " ಎಂಬ ಎರಡು ಅತ್ಯುತ್ತಮ ಕೃತಿಗಳಿಗೆ ಪ್ರಸಿದ್ಧರಾಗಿದ್ದಾರೆ. ಎರಡನೆಯ ಕೃತಿ,ಇವರ ಮೇರುಕೃತಿ ಮತ್ತು ಅರ್ಥಶಾಸ್ತ್ರದ ಮೊದಲ ಆಧುನಿಕ ಕೃತಿ,"ವೆಲ್ತ್ ಆಫ್ ನೇಷನ್ಸ್" ಎಂದು ಪರಿಗಣಿಸಲಾಗಿದೆ.