ಶ್ರೀವಿದ್ಯಾ.ಎಸ್

ನನ್ನ ಜನನ

ಬದಲಾಯಿಸಿ

ನನ್ನ ಬಗ್ಗೆ ನಾನೇ ಬರೆದುಕೊಳ್ಳಬೇಕೆಂದು ಹೊರಟೆ. ಆದರೆ ಏನು ಬರೆಯುವುದು? ಹೇಗೆ ಬರೆಯುವುದು, ಒಂದೂ ತೋಚದಾಗಿದೆ. ಹಾ....ನನ್ನ ಹೆಸರು ಶ್ರೀವಿದ್ಯಾ.ಎಸ್, ನಾನು ಹುಟಿದ್ದು ದಿನಾಂಕ ೨೫.೦೯.೧೯೯೭ರಂದು ಬೆಂಗಳೂರಿನಲ್ಲಿ ಜನಿಸಿದೆ. ಬೆಂಗಳೂರಿನ ಶ್ರೀನಗರದಲ್ಲಿ ನೆಲೆಸಿರುವೆ. ನನಗೀಗ ಹದಿನೇಳು ತುಂಬಿ ಹದಿನೆಂಟನೇ ವಯಸ್ಸಿಗೆ ಕಾಲಿಟ್ಟಿದ್ದೇನೆ.

ನನ್ನ ಶಾಲಾ ದಿನಗಳು

ಬದಲಾಯಿಸಿ

ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ. ನನ್ನ ತಂದೆ ಶ್ರೀನಿವಾಸ ತಿವಾರಿ, ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದಾರೆ. ತಾಯಿ ಸ್ವರ್ಣ, ಗೃಹಿಣಿ. ನನ್ನ ಶಾಲಾ ಪೂರ್ವ ಶಿಕ್ಷಣವು ನಮ್ಮ ಮನೆಯ ಸಮೀಪದ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಿತು. ನಂತರ ಎನ್.ಅರ್.ಕಾಲೋನಿಯಲ್ಲಿನ ಎ.ಪಿ.ಎಸ್ ನಲ್ಲಿ ನನ್ನ ಶಾಲಾ ಶಿಕ್ಷಣವು ಮುಂದುವರೆಯಿತು. ಕಾರಣ, ನನಗೆ ಅಲ್ಲಿಯೇ ವಿದ್ಯಾಭ್ಯಾಸ ಕೊಡಿಸಬೇಕೆಂದು ನಮ್ಮ ತಂದೆ ತಾಯಿಯವರ ಬಯಕೆಯಾಗಿತ್ತು. ಏಕೆಂದರೆ ಅಲ್ಲಿ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗೆ, ಸಾಂಸ್ಕೃತಿಕ ಕಾರ್ಯ ಕ್ರಮ, ಕ್ರೀಡೆಗಳಿಗೆಲ್ಲಾ ಹೆಚ್ಚಿನ ಒತ್ತು ನೀಡುವುತ್ತಿದ್ದರು. ನಾನು ಆ ಶಾಲೆಯಲ್ಲಿ ಚೆನ್ನಾಗಿ ಓದು ಬರಹ ಕಲಿತೆ, ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕ್ರೀಡೆಗಳಲ್ಲಿ ಭಾಗವಾಹಿಸಿ ಬಹುಮಾನ ಪಡೆದೆ. ಅಲ್ಲಿನ ಸ್ಮರಣ ಸಂಚಿಕೆಯಲ್ಲಿ ಒಮ್ಮೆ ನಾನು ಬಿಡಿಸಿದ ಚಿತ್ರ ಸಹಾ ಆಯ್ಕೆಯಾಗಿ ಪ್ರಕಟವಾಗಿತ್ತು. ಅದು ನನಗೆ ಬಹಳಷ್ಟು ಸಂತೋಷ ಉಂಟು ಮಾಡಿತ್ತು. ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾ ಇತ್ತು. ಅದಕ್ಕೂ ಸೇರಿದ್ದೆ. ಕ್ಯಾಂಪ್ ಮತ್ತು ಟ್ರಿಪ್ ಗಳನ್ನೂ ಸಹಾ ಆಯೋಜಿಸಿದ್ದರು. ಅವೆಲ್ಲಾ ನನಗೆ ತುಂಬಾ ಖುಷಿಕೊಟ್ಟಸಂಗತಿ. ಮುಂದೆ ನಾನು ಸಂಗೀತ ಹಾಗೂ ನೃತ್ಯದಲ್ಲಿ ಆಸಕ್ತಿತೋರಿದೆ. ಆದಕಾರಣ ಶಾಲೆಯಿಂದ ಬಂದನಂತರ ವಾರದಲ್ಲಿ ಎರಡು, ಮೂರು ಬಾರಿ ಸಂಗೀತಾಭ್ಯಾಸಕ್ಕೂ, ನೃತ್ಯಾಭ್ಯಾಸಕ್ಕೂ ಸೇರಿದೆ. ಸಂಗೀತಕ್ಕಿಂತ ನೃತ್ಯದಲ್ಲಿ ಬಹಳ ಆಸಕ್ತಿ ತೋರಿದ್ದೆ. ಬರಬರುತ್ತ ನಮ್ಮನ್ನು ಕೆಲವೊಂದು ಸಾರ್ವಜನಿಕ ನೃತ್ಯ ಪ್ರದರ್ಶನಕ್ಕೂ ತಯಾರಿಗೊಳಿಸಿ ಕರೆದುಕೊಂಡು ಹೋಗುತ್ತಿದ್ದರು. ಅವೆಲ್ಲ ನನಗೆ ಈಗಲೂ ನೆನಪಿದೆ. ಅವುಗಳಲ್ಲಿ "ಹಚ್ಚೇವು ಕನ್ನಡದ ದೀಪ" ನನಗೆ ತುಂಬಾ ಖುಷಿ ಕೊಟ್ಟನೃತ್ಯ. ಈ ವೇಳೆಯಲ್ಲೇ ನಾನೊಂದು ಕೀಬೋರ್ಡ್ ಅನ್ನು, ಕೊಳಲು ಸಹಾ ಕೊಂಡು ಅಭ್ಯಾಸ ಮಾಡುತ್ತಿದ್ದೆ. ಇವುಗಳಿಗೆಲ್ಲಾ ನಮ್ಮ ತಂದೆ ತಾಯಿ ಬಹಳವಾಗಿ ಪ್ರೋತ್ಸಾಹಿಸುತ್ತಿದ್ದರು. ನಂತರನಾನು ಹೈಸ್ಕೂಲ್ ಶಿಕ್ಷಣಕ್ಕೆಂದು ಬಿ.ಹೆಚ್.ಎಸ್ ಪ್ರೌಢಶಾಲೆ ಸೇರಿದೆ. ಅದೊಂದು ಬಹುದೊಡ್ಡ ಶಾಲೆ. ಸಾವಿರಾರು ವಿದ್ಯಾರ್ಥಿಗಳು ಇಪ್ಪತ್ತು, ಮೂವತ್ತು ಶಿಕ್ಷಕರು, ಏಳೆಂಟು ಸೆಕ್ಷನ್ ಗಳು. ಅಲ್ಲಿಯೂ ಸಹಾ ಚೆನ್ನಾಗಿ ಬೋಧಿಸುತ್ತಿದ್ದರು. ನಾನು ಹತ್ತನೇ ತರಗತಿಗೆ ಬಂದಾಗ ನನ್ನ ಜವಾಬ್ದಾರಿ ಹೆಚ್ಚಿತು. ಕಾರಣ ಬೋರ್ಡ ಎಕ್ಸ್ಯಾಂ. ನನ್ನ ಮೊದಲ ಪಬ್ಲಿಕ್ ಪರೀಕ್ಷೆಯದು. ಹಾಗಾಗಿ ಓದಿನಕಡೆ ಹೆಚ್ಚಿನ ಗಮನ ಹರಿಸಬೇಕಿತ್ತು. ಚನ್ನಾಗಿ ಓದಿಕೊಳ್ಳತ್ತಿದ್ದೆ. ಆದರೂ ಸಾಲದೆಂಬಂತೆ ಟ್ಯೂಷನ್ ಸೇರಿದೆ. ಆ ಟ್ಯೂಷನ್ ಬಗ್ಗೆ ನಾನು ಹೇಳಲೇ ಬೇಕು. ಅದು ಕೆ.ಕೆ.ಎನ್ ಟ್ಯೂಷನ್. ನನಗದು ಶಾಲೆಗಿಂತಲೂ ಹೆಚ್ವು. ಬಹಳ ಆಸಕ್ತಿಇಂದ ಕಲಿಸುತ್ತಿದ್ದರು. ಇಗಲೂ ನೆನಸುತ್ತೇನೆ. ಸರಿ, ಎಸ್.ಎಸ್.ಎಲ್.ಸಿ ಪರೀಕ್ಷೆ ಸಮೀಪಿಸಿತು. ಬಹಳ ಭಯ ಜವಾಬ್ದಾರಿಯಿಂದಲೆ ಪರೀಕ್ಷೆಎದುರಿಸಿ ಉತ್ತಮ ಅಂಕಗಳಿಸಿದೆ.

ನನ್ನ ಕಾಲೇಜು ದಿನಗಳು

ಬದಲಾಯಿಸಿ

ಮುಂದೆ ಪಿ.ಯು.ಸಿ ಗೆಂದು ಜೈನ್ ಕಾಲೇಜಿಗೇನೇ ಸೇರಬೇಕೆಂದು ಆಸೆಪಟ್ಟು ಅಲ್ಲಿಯೇ ಸೇರಿದೆ. ಕಾರಣ ನಗರದ ಉತ್ತಮ ಕಾಲೇಜುಗಳ ಪೈಕಿ ಅದೂ ಸಹಾ ಒಂದಾಗಿತ್ತು. ಎ.ಪಿ.ಎಸ್ ಶಾಲೆಯ ಬಹುತೇಕ ಗೆಳತಿಯರು/ಸ್ನೇಹಿತರು ಅಲ್ಲಿಯೇ ಸೇರಿದರು. ನನಗದು ಮತ್ತಷ್ಟು ಸಂತಸ ಉಂಟು ಮಾಡಿತು. ಅಲ್ಲಿ ನಮ್ಮದೇ ಒಂದು ಗುಂಪು. ಅಲ್ಲಿಯೂ ಅಷ್ಟೇ ಚೆನ್ನಾಗಿ ಬೋಧಿಸುತ್ತಿದ್ದರು. ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಹಾ ಬಹಳ ಒತ್ತು ನೀಡುತ್ತಿದ್ದರು. ಅಲ್ಲಿನ ಲ್ಯಾಬ್, ಪ್ರಯೋಗ ಶಾಲೆ, ಗ್ರಂಥಾಲಯಗಳನ್ನು ಮರೆಯಲಾಗದು ಬಹಳ ಚನ್ನಾಗಿದ್ದವು. ಮುಂದೆ ಪಿ.ಯು ನಂತರ ಎಲ್ಲರ ತಂದೆ ತಾಯಿಗಳಂತೆ ನಮ್ಮ ಮನೆಯಲ್ಲಿ ಎಂಜಿನಿಯರಿಂಗ್ ಸೇರಬೇಕೆಂದು ಒತ್ತಾಯಿಸಲೇ ಇಲ್ಲ. (ಆದರೂ ಇರಲೆಂದು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ಬರೆದೆ) ನಂತರ ಬಿ.ಎಸ್.ಸಿ ಮಾಡಿ ಮುಂದೆ ಎಂ.ಎಸ್.ಸಿಗೆ ಸೇರಿ ಶಿಕ್ಷಕ ವೃತ್ತಿಗೆ ಸೇರೋಣವೆನಿಸಿ, ಯಾವ ಕಾಲೇಜು ಸೇರಬೇಕೆಂಬ ಪ್ರಶ್ನೆಬಂದಾಗ, ಕೈಸ್ಟ್ ಕಾಲೇಜಿನ ಬಗ್ಗೆ, ಅದರ ಪ್ರಸಿದ್ಧಿಯ ಬಗ್ಗೆ ಕೇಳಿದ್ದೆ. ಇಂಟರ್ ನೆಟ್ ನಲ್ಲಿ ಅದು ರಾಷ್ಟ್ರ ಮಟ್ಟದಲ್ಲಿ ಟಾಪ್ ಟೆನ್ ನಲ್ಲಿ ಒಂದೆಂದು ತಿಳಿದು ಅದೇ ಕಾಲೇಜು ಸೇರಬೇಕೆಂದು ಮನೆಯಲ್ಲಿ ಪಟ್ಟು ಹಿಡಿದೆ. ಅದರಂತೆ ಆತ್ಮವಿಶ್ವಾಸದಿಂದ ಅರ್ಜಿ ಹಾಕಿ ಸಂದರ್ಶನ ಎದುರಿಸಿದೆ. ಅದೃಷ್ಟ ವಶಾತ್ ನಾನು ಬಯಸಿದಂತೆಯೇ ನನಗೆ ಅವಕಾಶ ದೊರೆಕಿತು. ಕ್ರೈಸ್ಟೈಟ್ ಆದೆ.

ನನ್ನ ಅಜ್ಜಿಯ ಊರು

ಬದಲಾಯಿಸಿ

ಬಾಲ್ಯದಿಂದಲೂ ನನಗೆ ನಮ್ಮ ಅಜ್ಜಿಯ ಮನೆ ಎಂದರೆ ಬಹಳ ಇಷ್ಟ. ಕಾರಣ ಅದುಹಳ್ಳಿ. ಅಲ್ಲಿನ ವಾತಾವರಣ ಬೆಟ್ಟ, ಗುಡ್ಡ, ದನಕರುಗಳು, ಹೂವಿನ ಗಿಡಗಳು, ಅಜ್ಜಿಮಾಡುವ ತಿಂಡಿತಿನಿಸು ನನಗೆ ಬಹಳ ಪ್ರಿಯ. ಶಾಲಾ ಕಾಲೇಜಿಗೆ ರಜೆಬಂದಾಗೆಲ್ಲ ಅಲ್ಲಿಗೆ ಹೋಗುತ್ತಿರುತ್ತೇನೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Srividya Srinivasa