ಸದಸ್ಯ:Sridevi122/ನನ್ನ ಪ್ರಯೋಗಪುಟ
ಅರಸನ ಉಡುಗರೆ ರೈತನೊಬ್ಬನ ತೋಟದಲ್ಲಿದ್ದ ಸೇಬು ಮರದಲ್ಲಿಒಂದೇ ಒಂದು ಹಣ್ಣು ಬೆಳೆಯಿತು. ಆತ ಅದನ್ನು ಕೊಯ್ದು ಇದನ್ನು ತನಗೆ ಅತ್ಯಂತ ಪ್ರೀತಿಪಾತ್ರರಾದ ಯಾರಿಗಾದರೂ ಉಡುಗೊರೆಯಾಗಿ ಕೊಡಬೇಕು ಎಂದು ಯೋಚಿಸಿ ಪ್ರಜೆಗಳ ಕ್ಷೇಮಕ್ಕಾಗಿ ಹಗಲಿರುಳೂ ಚಿಂತಿಸುವ ಅರಸನಿಗೆ ಒಪ್ಪಿಸಲು ನರ‍್ಧರಿಸಿ ಅರಸನ ಸಭೆಗೆ ಹೋದ. ಅಲ್ಲಿಆತ ಸೇಬನ್ನು ಅರಸನ ಮುಂದಿರಿಸಿ 'ದೊರೆಯೇ, ಇದು ಬಹು ವಿಶೇಷವಾಗಿದೆ. ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನ್ನ ತೋಟದಲ್ಲಿಬೆಳೆದಿದೆ ಎಂದು ಭಾವಿಸಿದ್ದೇನೆ. ಅಮೂಲ್ಯವಾದ ಹಣ್ಣನ್ನು ನನಗೆ ಪ್ರೀತಿಪಾತ್ರರಾದವರಿಗಷ್ಟೇ ಕೊಡಬೇಕು ಎಂದು ನರ‍್ಧರಿಸಿ ತಮಗೆ ಇದನ್ನು ಉಡುಗೊರೆಯಾಗಿ ನೀಡಬೇಕೆಂದು ತಂದಿದ್ದೇನೆ. ಸ್ವೀಕರಿಸಿ' ಎಂದು ನಿವೇದಿಸಿದ.
ಶ್ರೀ