ಸದಸ್ಯ:Soundarya shetty s/sandbox\1
ಗುತ್ತಿನ ಮನೆ ಅನ್ನುವ ಹೆಸರು ವೂರಿನ ಇತಿಹಾಸವನ್ನು ಹೇಳುತ್ತದೆ.ಊರಿನ ಇಲ್ಲವೆ ಗ್ರಾಮದ ಮೊದಲ, ಹೆಸರು ಪಡೆದ ಮನೆಯೆ ಗುತ್ತು. ದಕ್ಷಿಣ ಕನ್ನಡದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿರುವುದು.ದಕ್ಷಿಣ ಕನ್ನಡದಲ್ಲಿ ದೈವಾರಾದನೆಯಿರುವುದರಿಂದ ಗುತ್ತು ಮನೆತನದಲ್ಲಿ ದೈವಗಳ ತೂಗು ಜೋಕಾಲಿ(ತೂಂಕುಜ್ವಾಲು) ಇಲ್ಲವೆ ಮನೆಮಂಚ ಇರುತ್ತದೆ. ಒಂದು ಕಾಲದಲ್ಲಿ ಊರಿನ ನ್ಯಾಯ ಪಂಚಾಯತಿಯನ್ನು ಈ ಮನೆಗಳಲ್ಲೆ ನಡೆಸಲಾಗುತ್ತಿತ್ತು. ಗುತ್ತಿನವನು ಎಂದು ಹೇಳಿದರೆ ಆ ಊರಿನ ನ್ಯಾಯ-ನೀತಿಯನ್ನು ಹೇಳುತ್ತಿದ್ದ ಯಜಮಾನ.ಗುತ್ತುಗಳಲ್ಲಿ ಮುಖ್ಯವಾದುದು ಜೈನ ಮತ್ತೆ ಬಂಟ್ಸ್. ಅದರಲ್ಲಿ ಕೆಲವು ಗುತ್ತಿನ ಹೆಸರುಗಳೆಂದರೆ ಉದ್ಯವರ ಗುತ್ತು,ಕೊಡ್ಲ ಮುಗರ್ ಗುತ್ತು,ಪಾವೂರು ಗುತ್ತು,ಬಡಿಲ ಗುತ್ತು,ಮುಗೆರ್ ಗುತ್ತು ಮುಂತಾದವು.ಈ ಗುತ್ತಿನ ಮನೆತನದವರು ರಾಜರ ಥರ ಬಾಳಿದವರು. ಊರಿನಲ್ಲಿ ಯಾವ ಸಮಸ್ಯೆ ಬಂದರು ಪರಿಹಾರ ಕಲ್ಪಿಸಿ ಕೊಡುತ್ತಿದ್ದರು.
ಗುತ್ತಿನ ಮನೆಯ ರಚನೆ
ಬದಲಾಯಿಸಿಗುತ್ತಿನ ಮನೆಯಲ್ಲಿ ಮುಖ್ಯವಾಗಿ ಒಂದು ಮುಖ ಚಾವಡಿ. ಅ ಚಾವಡಿಯಲ್ಲಿ ಮಣೆ ಮಂಚ ಇಲ್ಲವಅದಲ್ಲಿ ತೂಗುವುಯ್ಯಾಲೆ ಇರುತ್ತದೆ. ಈ ಚಾವಡಿಯಲ್ಇ ವಿಶೇಷ ಕೆತ್ತನೆಯ ರಾಜ ಕಂಬಗಳು ಇದೆ. ಈ ಚಾವಡಿಯಿಂದ ಒಳಗಡೆ ಹೊಗುವಾಗ ವಿಶೇಷ ಕೆತ್ತನೆಯ ಬಾಗಿಲುಗಳು ಹಾಗು ಗುತ್ತಿನ ಮರದ ಕೆತ್ತನೆಗಳು ಮನೆಯ ವಿಶೇಷ ಆಕರ್ಷಣೆ.
ಗುತ್ತಿನ ಮನೆಗಳು ಹಾಗೂ ಭಾಗಗಳು
ಬದಲಾಯಿಸಿಗುತ್ತಿನ ಮನೆ ಬಹಳಷ್ಟು ಸ್ಥಳಗಳಲ್ಲಿ ಇವೆ. ಕೇರಳದ ಹೊಸಂಗಡಿಯ ಬಾಕ್ರಬೈಲ್‍ನಲ್ಲಿ ಸೂರ್ಯೇಶ್ವರ ಮತ್ತು ಗುವೆದಡ್ಪು ಎಂಬ ಗುತ್ತಿನ ಮನೆ ಇದೆ. ಆ ಮನೆಯಲ್ಲಿ ಸುಮಾರು ೧೮ ಕೊಣೆಗಳಿವೆ ಹಾಗು ಆ ಮನೆಯ ಒಳಗೆ ತುಂಬಾ ದೈವಗಳನ್ನು ನಂಬುತ್ತಿದ್ದರು ಎಂಬುವುದಕ್ಕೆ ಸಾಕ್ಷಿಯಾಗಿ ಹಲವಾರು ಸಾಮಾಗ್ರಿಗಳು ದೊರೆತಿವೆ.
ಗುತ್ತಿನ ಮನೆಯಲ್ಲಿ ಆಚರಿಸುವ ಹಬ್ಬಗಳು
ಬದಲಾಯಿಸಿ- ಬಿಸು(ವಿಷು):ಹಿಂದೂ ಸಂಸ್ಕೃತಿ ಪ್ರಕಾರ ಬಿಸು(ಯುಗಾದಿ) ಹಬ್ಬದ ನಂತರವಷ್ಟೆ ಹೊಸ ವರ್ಷ ಆರಂಭ. ಈ ಬಿಸು ಹಬ್ಬವನ್ನು ಸಮಸ್ತ ತುಳುನಾಡು ಬಹಳ ವಿಷೇಶ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಹಾಗೆ ಗುತ್ತುಗಳಲ್ಲು ವಿಶೇಷ ರೀತಿಗಳಲ್ಲಿ ಆಚರಣೆ ಆಗುತ್ತದೆ.
- ಪತ್ತನಾಜೆ: ಈ ಹಬ್ಬಕ್ಕೆ "ಗೆಜ್ಜೆ ಬಿಚ್ಚುವ ಹಬ್ಬ ಎನ್ನುತ್ತಾರೆ. ಈ ಹಬ್ಬ ಆ ಊರಿನ ದೇವಸ್ಥಾನಗಳಲ್ಲಿ ನಡೆಯುತ್ತದೆ.
- ಆಟಿದಗೆಲ್: ಇದು ಆಟಿ ತಿಂಗಳುಗಳಲ್ಲಿ ಬರುವ ಹಬ್ಬ. ಈ ಆಟಿ ತಿಂಗಳಲ್ಲಿ ಗುತ್ತಿನಲ್ಲಿ ತೀರಿಹೋದ ಹಿರಿಯರಿಗೆ ಹದಿನಾರು ಎಲೆ ಹಾಕಿ ಬಡಿಸುವ ಕ್ರಮ ಇದೆ.
- ಇಲ್ಲ್ ದಿಂಜಾವುನ(ಮನೆ ತುಂಬಿಸಿ ಕೊಳ್ಳುವುದು): ಇದು ಸೋನ ತಿಂಗಳಿನಲ್ಲಿ ಸಂಕ್ರಾಂತಿ ಬುರುವ ಮುಂಚೆ ಬರುವ ಹಬ್ಬ. ಈ ಹಬ್ಬ ಬೇರೆ ಬೇರೆ ಗುತ್ತುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಣೆಯಾಗುತ್ತದೆ.
- ದೀಪಾವಳಿ(ಪರ್ಬ): ತುಳುನಾಡಿನಲ್ಲಿ ವಿಶೇಷ ಹಬ್ಬಗಳಲ್ಲಿ ದೀಪಾವಳಿಯು ಒಂದು. ಇದು ಮೂರು ದಿನದ ಹಬ್ಬ ಮೊದಲ ದಿನದ ಹಬ್ಬವನ್ನು "ಮಿಪಿನ
ಗುತ್ತಿನ ಮನೆಯ ದೈವಗಳು
ಬದಲಾಯಿಸಿ- ಪಂಜುರ್ಲಿ
- ಜುಮಾದಿ
- ಕೋಟಿ ಚೆನ್ನಯ್ಯ
- ಬೊಬ್ಬರ್ಯ
ಜಾತ್ರೆಗಳು
ಬದಲಾಯಿಸಿಗುತ್ತಿನ ಮನೆಯಲ್ಲಿ ಸುಮಾರು ೧೫೦ ದೈವಗಳಿಗಿಂತ ಜಾಸ್ತಿ ಇದೆ. ಅದರಲ್ಲಿ ಮುಖ್ಯ ಸ್ಥಾನಪಡೆದವುಗಳು ಪಿಲಿಚಾಮುಂಡಿ,ಮಲರಾಯ ದೈವ,ಕಾಳಿ ಚಾಮುಂಡಿ, ಚಾಮುಂಡೇಶ್ವರಿ. ಜಾತ್ರೆಯ ಸಮಯದಲ್ಲಿ ಗುತ್ತಿನ ಮನೆಯವರು ಮುಂದೆ ನಿಲ್ಲುವುದು ವಾಡಿಕೆ.