ಹೆಪಟೈಟಿಸ್ ಬಿ

ಬದಲಾಯಿಸಿ

ಇತ್ತೀಚಿನ ದಶಕಗಳಲ್ಲಿ ಮಾನವ ಸಮಾಜವನ್ನು ಬೆದರಿಕೆಗೆ ಒಡ್ಡಿರುವ ಭಯಾನಕ ವೈರಸ್ ರೋಗ ಎಂದರೆ ಹೆಪಟೈಟಿಸ್ ಬಿ. ಹೆಪಟೈಟಿಸ್ ಎನ್ನುವುದು ಪಿತ್ತಕೋಶಕ್ಕೆ ಸೋಂಕುತಗುಲಿರುವ ಸ್ಥಿತಿಯನ್ನು ತೋರಿಸುತ್ತದೆ. ಪಿತ್ತಕೋಶವು ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ. ಇದರ ಪ್ರಮುಖ ಕೆಲಸ ಪಚನವಾದ ಆಹಾರವನ್ನು ಚಯಾಪಚಯ ಕ್ರಿಯೆಗೆ ಒಳಪಡಿಸುವುದು.ಒಳಗೆ ಪ್ರವೇಶಪಡೆದ ಸೂಕ್ಷ್ಮ ಜೀವಿಗಳಿಂದ, ವಿಷಯುಕ್ತ ಆಹಾರ ಕಣಗಳಿಂದ, ರಾಸಾಯನಿಕಗಳಿಂದ ಮತ್ತು ಆಲ್ಕೋಹಾಲ್ ನಿಂದ ಅಲ್ಲಿರುವ ಜೀವಕೋಶಗಳು ಹಾನಿಗೆ ಒಳಗಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಕೆಂಪು ರಕ್ತಕಣಗಳಲ್ಲಿರುವ ಬೈಲಿರೂಬಿನ್ ಎಂಬ ದ್ರವ್ಯವು ಬಿಡುಗಡೆಯಾಗುತ್ತದೆ. ಈ ದ್ರವವು ಪಿತ್ತಕೋಶದಲ್ಲಿಯೇ ವಿಭಜನೆಗೆ ಒಳಪಡುತ್ತದೆ. ಪಿತ್ತಕೋಶದ ಜೀವಕೋಶಗಳು ಹಾನಿಗೊಳಪಟ್ಟ ರಕ್ತವನ್ನು ಸೇರತೊಡಗುತ್ತದೆ. ಇದರಿಂದಾಗಿ ಚೃಮದ, ಕಣ್ಣಿನ ಹಾಗೂ ಮೂತ್ರದ ಬಣ್ಣ ಹಳದಿಗೆ ತಿರುಗುತ್ತದೆ. ಈ ಸ್ಥಿತಿಗೆ ಕಾಮಾಲೆ ಎಂದು ಹೆಸರು. ಇದಕ್ಕೆ ಐದಾರು ಬಗೆಯ ವೈರಸ್ಗಳು ಕಾರಣವಾಗುತ್ತವೆ.

ಹೆಪಟೈಟಿಸ್ ಹರಡುವ ಬಗೆ

ಬದಲಾಯಿಸಿ

ಸಾಮಾನ್ಯವಾಗಿ ಹೆಪಟೈಟಿಸ್ ಕಲುಷಿತ ನೀರು ಹಾಗೂ ಆಹಾರದಿಂದ ಬರುತ್ತದೆ. ಈ ರೀತಿಯ ಸೋಂಕುಗಳಲ್ಲಿ ಹೆಪಟೈಟಿಸ್ ಬಿ ಮಾರಕವಾಗಿದ್ದು ಅದು ಪಿತ್ತಕೋಶದ ಹಾನಿಗೆ ಕಾರಣವಾಗುತ್ತದೆ.ಇದರಿಂದ ಕ್ಯಾನ್ಸರ್ ಸಹ ಬರುವ ಸಾಧ್ಯತೆಯಿದೆ. ಹೆಪಟೈಟಿಸ್ ಬಿ ಸಾಮಾನ್ಯವಾಗಿ ರಕ್ತರಸದ ಮೂಲಕ ಹರಡುತ್ತದೆ. ಸರಿಯಾಗಿ ನಿಷ್ಕ್ರಿಮೀಕರಣಗೊಳಿಸದ ಸಿರಿಂಜ್ಗಳ ಬಳಕೆಯಿಂದ, ಅಸುರಕ್ಷಿತ ಲೈಂಗಿಕ ಸಂಪಕ, ಇತರೆ ಕಾರಣಗಳಿಂದ ಸೋಂಕು ತಗಲುತ್ತದೆ. ಈ ರೋಗವು ಹಸ್ತಲಾಘವದಿಂದ, ಜೊತೆಯಲ್ಲಿ ಆಹಾರ ಸೇವಿಸುವುದರಿಂದ, ಶೌಚಾಲಯಗಳನ್ನು ಹಂಚಿಕೊಂಡು ಬಳಸುವುದರಿಂದ ಹಾಗೂ ಸೊಳ್ಳೆಗಳ ಕಡಿತದಿಂದ ಹರಡುವುದಿಲ್ಲ.

ಹೆಪಟೈಟಿಸ್ ಬಿ ಯ ಲಕ್ಷಣಗಳು

ಬದಲಾಯಿಸಿ

ಮುಖ್ಯ ಲಕ್ಷನಗಳು ಹೀಗಿವೆ:- ೧. ಸಣ್ಣದಾದ ಜ್ವರ ೨. ನೆಗಡಿ ಮತ್ತು ಫ್ಲೂಗೆ ಸಂಬಂಧಿಸಿದ ಲಕ್ಷಣಗಳು ೩. ಕಾಮಾಲೆಯ ಸೂಚನೆಗಳು ೪. ತೀವ್ರ ನಿಶ್ಯಕ್ತಿ ೫. ಹಸಿವಿಲ್ಲದಿರುವುದು, ವಾಂತಿಯಾಗುವುದು

ತಡೆಗಟ್ಟುವ ವಿಧಾನಗಳು

ಬದಲಾಯಿಸಿ

ಇತ್ತೀಚೆಗೆ ಹೆಪಟೈಟಿಸ್ ಬಿ ಯನ್ನು ನಿಯಂತ್ರಿಸುವ ಲಸಿಕೆಗಳನ್ನು ತಯಾರಿಸಲಾಗಿದೆ. ಇವು ದೇಹದಲ್ಲಿ ಪ್ರತಿಕಾಯವನ್ನು ತಯಾರಿಸಲು ಉತ್ತೇಜನ ನೀಡುತ್ತವೆ. ಹೆಪಟೈಟಿಸ್ ಬಿ ಲಸಿಕೆಯನ್ನು ಹುಟ್ಟಿನಿಂದ ೬ ತಿಂಗಳ ಒಳಗೆ ೩ ಬಾರಿ ನೀಡಬೇಕಾಗುತ್ತದೆ. ಇನದನಷ್ಟು ಸುಧಾರಿಸಿದ ಲಸಿಕೆಯನ್ನು ತಯಾರಿಸುವ ದಿಸೆಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಈ ದಿಸೆಯಲ್ಲಿ ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ ಯಶಸ್ವಿ ಸಂಶೋಧನೆಯನ್ನು ನಡೆಸಿದೆ.