ಆಗ ಹನುಮಂತನು ಬಂದು ಆಗಲೇ ಲಿಂಗ ಪ್ರತಿಷ್ಟಾಪನೆಗೊಂಡಿರುವುದನ್ನು ಕಂಡು ಬಹಳ ಕೋಪಗೊಳ್ಳುತ್ತಾನೆ. ಆ ಕೋಪದಲ್ಲಿ ಅವನು ತನ್ನ ವಜ್ರ ಮುಷ್ಠಿಯಿಂದ ಲಿಂಗದ ಮೇಲೆ ಹೊಡೆಯುತ್ತಾನೆ. ಆ ಹೊಡೆತಕ್ಕೆ ಶಿವ ಲಿಂಗದ ಮೇಲ್ಭಗವು ಸೀಳಿಕೊಂಡು ಅಲ್ಲಿಂದ ಗಂಗೆ ಉತ್ಪತ್ತಿಯಾಗಲು ಆರಂಭಿಸುತ್ತಾಳೆ. ಹನುಮಂತನು ಆಗ ಮೂರ್ಛೆ ಬೀಳುತ್ತಾನೆ. ಆಗ ಅಲ್ಲಿದ್ದ ಅಗಸ್ತ್ಯ ಋಷಿಗಳು ತಮ್ಮ ಕಮಂಡಲದಲ್ಲಿ ಇದ್ದಂತಹ ನೀರನ್ನು ಮಂತ್ರೋಪದೇಶದೊಂದಿಗೆ ಹನುಮಂತನ ಮೇಲೆ ಹಾಕುತ್ತಾರೆ. ಹನುಮಂತನು ಕಾಶಿಯಿಂದ ತಂದಿದ್ದಂತಹ ಲಿಂಗವನ್ನು ಊರಿನ ಮಧ್ಯದಲ್ಲಿ ಪ್ರತಿಷ್ಟಾಪನೆ ಮಾಡುತ್ತಾರೆ, ಲಿಂಗಕ್ಕೆ ಹನುಮಂತೇಶ್ವರ ಎಂದು ಹೆಸರಿಸುತ್ತಾರೆ. ಊರಿನ ಎಲ್ಲಾ ದೇವರುಗಳ ದರ್ಶನ ಪಡೆದು ಕೊನೆಗೆ ಹನುಮಂತೇಶ್ವರನ ದರ್ಶನ ಮಾಡದಿದ್ದರೆ ಫಲ ದೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಈ ಅಗಸ್ತ್ಯೇಶ್ವರನ ದೇವಾಲಯದಲ್ಲಿ ಪೂರ್ಣಮಂಗಳ ಕಾಮಾಕ್ಷಿ ಅಮ್ಮನವರ ಸನ್ನಿಧಾನವನ್ನು ಸಹ ನಾವು ಕಾಣಬಹುದು. ಅಮ್ಮನವರ ಬಳಿ ಹರಕೆ ಹೊತ್ತು ವಸ್ತ್ರಗಳನ್ನು ದಾನವಾಗಿ ನೀಡಿದರೆ ಹರಕೆ ಪೂರೈಸುವುದು ಎಂಬ ನಂಬಿಕೆ ಇದೆ.

ಇತರೆ ದೇವಾಲಯಗಳು

ಬದಲಾಯಿಸಿ

ಈ ದೇವಸ್ತಾನದಲ್ಲಿ ಅಗಸ್ತ್ಯೇಶ್ವರ ಸ್ವಾಮಿ ಹಾಗು ಪೋರ್ಣಮಂಗಳ ಕಾಮಾಕ್ಷಿ ಅಮ್ಮನವರ ವಿಗ್ರಹಗಳಲ್ಲದೆ ಹಲವಾರು ವಿವಿಧ ದೇವರುಗಳ ವಿಗ್ರಹಗಳನ್ನು ಸಹ ಕೆತ್ತನೆ ಮಾಡಲಾಗಿದೆ. ಅಗಸ್ತ್ಯೇಶ್ವರ ದೇವಾಲಯದಲ್ಲಿ ನಾಲ್ಕು ಲಿಂಗಗಳಿವೆ, ಕಂಬಗಳ ಮೇಲೆ ದೇವರುಗಳ ವಿಗ್ರಹಗಳ ಕೆತ್ತನೆ ಮಾಡಲಾಗಿದೆ. ಈ ದೇವಾಲಯದಲ್ಲಿ ಕೆತ್ತಲಾಗಿರುವ ದೇವರುಗಳು ಸುಬ್ರಮಣ್ಯೇಶ್ವರ, ಗಣಪತಿ, ದಕ್ಶಿಣಾಮೂರ್ತಿ, ಬಲಮುರಿ ವಿನಾಯಕ, ಚಾಮುಂಡೇಶ್ವರಿ, ನಾರಾಯಣ, ಚೌಡೇಶ್ವರಿ, ಚಂಡಿಕೇಶ್ವರ, ಕಾಮಾಕ್ಷಿ ಅಮ್ಮನವರ ಪಕ್ಕದಲ್ಲಿರುವ ಸೋಮೇಶ್ವರ ಹಾಗು ದೇವಾಲಯದ ಮುಂದೆ ಇರುವ ಬಸವಣ್ಣ. ಇಲ್ಲಿ ಕಾಲಭೈರವ, ಮಾರ್ಕಂಡೇಶ್ವರ ಹಾಗು ಮೇಲ್ಭಾಗದಲ್ಲಿ ಅಷ್ಠದಿಕ್ಪಾಲಕರ ಅಂದರೆ ನವಗ್ರಹಗಳ ಕೆತ್ತನೆಯನ್ನು ಸಹ ಕಾಣಬಹುದು. ದೇವಾಲಯದ ಮುಂದೆ ದೊಡ್ಡ ಗರುಡಗಂಭ ಸಹ ಇದೆ. ಸಂಗಮದ ಒಂದು ಕೊನೆಯಲ್ಲಿ ಅಗಸ್ತ್ಯೇಶ್ವರ ದೇವಾಲಯವಿದ್ದರೆ, ಮತ್ತೊಂದೆಡೆ ಆನಂದೇಶ್ವರ ದೇವಾಲಯವನ್ನು ನಾವು ಕಾಣಬಹುದು. ಇದು ಆನಂದ ಋಷಿಗಳಾ ಸಮಾಧಿಯಾಗಿದೆ. ಈ ಆನಂದ ಮಹರ್ಷಿಗಳು ಹೈದರ್ ಅಲಿ ಒಮ್ಮೆ ಈ ಸ್ಥಳದಲ್ಲಿ ಸಂಚರಿಸುತ್ತಿದ್ದಾಗ ಅವನ ಬಳಿ ನೀನು ದೊರೆ ಆಗುತ್ತೀಯ ಎಂದು ಹೇಳಿದ್ದರು. ಸಂಗಮದ ದಕ್ಷಿಣಕ್ಕೆ ಭಿಕ್ಷುಕೇಶ್ವರ ದೇವಾಲಯವಿದೆ. ಈ ದೇವಾಲಯ ನದಿಯ ದಡದಲ್ಲೇ ಇದೆ. ಈ ದೇವಾಲಯದ ಎದುರಿಗೆ ನದಿಯಲ್ಲೆ ಕಂಭವೊಂದಿದೆ, ಅದರ ಮೇಲೆ ಬಸವಣ್ಣನನ್ನು ಕಾಣಬಹುದು. ಸಂಗಮದ ಮತ್ತೊಂದು ಕೊನೆಯಲ್ಲಿ ಅಂದರೆ ನರಸೀಪುರದ ಊರಿನಲ್ಲಿ ಗುಂಜ ನರಸಿಂಹ ಸ್ವಾಮಿಯ ದೇವಾಲಯವಿದೆ. ಇದು ಸಹ ತ್ರಿವೇಣಿ ಸಂಗಮದ ಬಳಿ ಇರುವ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ತ್ರಿವೇಣಿ ಸ್ಂಗಮ ಎಷ್ಟು ಪುಣ್ಯ ಸ್ಥಳವೆಂದರೆ ಈ ಸಂಗಮದ ಸುತ್ತಲೂ ದೇವಾಲಯಗಳನ್ನು ಕಾಣಬಹುದು. ಗುಂಜ ನರಸಿಂಹ ಸ್ವಾಮಿ ದೇವಾಲಯದಿಂದ ಅರ್ಧ ಕಿಲೋಮೀಟರ್ನಷ್ಟು ದೂರದಲ್ಲಿ ಮೂಲಸ್ತಾನೇಶ್ವರ ದೇವಾಲಯವಿದೆ. ಇಲ್ಲಿ ಇರುವ ಅಮ್ಮನವರ ಹೆಸರು ಶಿವಕಾಮ ಸುಂದರಿ. ಅಗಸ್ತ್ಯೇಶ್ವರ ದೇವಾಲಯದ ಬಳಿ ಶಂಕರ ಮಠವನ್ನು ಕಾಣಬಹುದು. ಈ ಮಠವನ್ನು ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಇತರೆ ಆಕರ್ಷಣೆಗಳು

ಬದಲಾಯಿಸಿ

ಈ ತ್ರಿವೇಣಿ ಸಂಗಮವು ಕೇವಲ ಮೈಸೂರಿನವರನ್ನು ಅಲ್ಲದೆ ರಾಜ್ಯದ ಮೂಲೆಗಳಿಂದ ಹಾಗು ನೆರೆಯ ರಾಜ್ಯಗಳಿಂದ ಸಹ ಯಾತ್ರಿಗಳನ್ನು ಆಕರ್ಷಿಸುತ್ತಿದೆ. ಈ ಸ್ಥಳ ಕೆವಲ ತೀರ್ಥ ಸ್ಥಳವಾಗದೆ ಇನ್ನಿತರ ಯಾತ್ರಿಗಳನ್ನೂ ಸಹ ತನ್ನೆಡೆಗೆ ಸೆಳೆಯುತ್ತಿದೆ. ನದಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗಲು ಸಹಾಯವಾಗುವಂತೆ ತೆಪ್ಪಗಳು ಸಹ ಇವೆ. ನದಿಯಲ್ಲಿ ಈಜಲು ಬಯಸುವ ಯಾತ್ರಿಗಳು ಸಹ ಇಲ್ಲಿಗೆ ಬರುತ್ತಾರೆ. ಇಲ್ಲಿನ ಸಂಗಮವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಜೊತೆಗೆ ಬೇರೆಯವರನ್ನು ಸಹ ಆಕರ್ಷಿಸುವಷ್ಟು ಪ್ರಸಿದ್ಧವಾಗಿದೆ. ತ್ರಿವೇಣಿ ಸಂಗಮಕ್ಕೆ ಹೊಂದುಕೊಂಡಂತೆ ಸ್ವಲ್ಪ ದೂರದಲ್ಲಿ ಗರ್ಗೇಶ್ವರಿ ಎಂಬ ಊರಿದೆ. ಇಲ್ಲಿ ಬಹಳ ಪ್ರಸಿದ್ಧವಾದ ಗಣೇಶನ ವಿಗ್ರಹವೊಂದಿದೆ. ಇಲ್ಲಿರುವ ವುಗ್ರಹಗಳನ್ನು ಗರ್ಗ ಋಷಿಗಳು ಪ್ರತಿಷ್ಠಾಪಿಸಿದ್ದಾರೆ ಎಂದು ಪುರಾಣ ತಿಳಿಸುತ್ತದೆ. ಈ ಗಣೇಶನ ಮೇಲೆ ಹರಕೆ ಹೊತ್ತರೆ ಅದು ನೆರವೇರುತ್ತದೋ ಇಲ್ಲವೋ ಎಂದು ತಿಳಿಸುತ್ತದೆ. ಇಲ್ಲಿ ಪ್ರತಿ ವರ್ಷವು ರಥೋತ್ಸವ ನಡೆಯುತ್ತದೆ. ನಂಜನಗೂಡಿನಲ್ಲ್ಲಿ ರಥೊತ್ಸವ ನಡೆಯುವ ದಿನದಂದೇ ಇಲ್ಲಿಯೂ ರಥೋತ್ಸವ ನಡೆಯುತ್ತದೆ. ಅಂದು ಅಗಸ್ತ್ಯೇಶ್ವರ ಸ್ವಾಮಿ ಹಾಗು ಪೂರ್ಣಮಂಗಳ ಕಾಮಾಕ್ಷಿ ಅಮ್ಮನವರ ಉತ್ಸವ ಮೂರ್ತಿಗಳನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ, ಪೂಜಾನಂತರ ರಥದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ತ್ರಿವೇಣಿ ಸಂಗಮವನ್ನು ನೋಡಬೇಕಾದರೆ ಬೆಂಗಳೂರಿನಿಂದ ಬಸ್ ವ್ಯವಸ್ಥೆ ಇದೆ. ಮೈಸೂರಿನಿಂದ ಸಹ ಹಲವಾರು ಬಸ್ಗಳಿವೆ. --Smitha venkatesh (talk) ೧೮:೧೨, ೨೯ ಜನವರಿ ೨೦೧೪ (UTC)