ಸದಸ್ಯ:Sinchita s/ನನ್ನ ಪ್ರಯೋಗಪುಟ

ಪೀಟಿಕೆ

ಬದಲಾಯಿಸಿ

"ದಿ ಸತ್ಯಂ ಸ್ಕಾಂಡಲ್" ೨೦೦೯ ರಲ್ಲಿ ನಡೆದ ಭಾರತದ ಅತಿ ದೊಡ್ದ ಹಗರಣ ಎನಿಸಿಕೊಂಡಿತ್ತು."ಸತ್ಯಂ ಕಂಪ್ಯೂಟರ್ ಸರ್ವಿಸಸ್" ಕಂಪನಿಯ ಅಧ್ಯಕ್ಶರಾದ ರಾಮಲಿಂಗ ರಾಜುರವರು ೭ನೇ ಜನವತರಿ ೨೦೦೯ ರಲ್ಲಿ ರಾಜನಾಮೆಯನ್ನು ಕೊಟ್ಟು ತಾವು ತಮ್ಮ ಸಹೊದರನೊಂದಿಗೆ ಮಾಡಿದ ವಂಚನೆಯನ್ನು ಒಪ್ಪಿಕೊಂಡರು.ಇವರು ಸತ್ಯಂ ಕಂಪ್ಯೂಟರ್ ಸರ್ವಿಸಸ್ ಕಂಪನಿಯ ಖಾತೆಗಳನ್ನು ೧.೪೭ ಬಿಲ್ಲಿಯನ್ ಡಾಲರ್ಸ್ ಅಶ್ಟು ಹಣವನ್ನು ಮಾರ್ಪಡಿಸಿದ್ದರು. ಸತ್ಯಂ ಕಂಪ್ಯೂಟರ್ ಸರ್ವಿಸಸ್ ಭಾರತದ ೪ನೆ ಅತಿ ದೊಡ್ಡ ಐ.ಟಿ ಕಂಪನಿ ಎನಿಸಿಕೊಂಡಿತು.

ರಾಮಲಿಂಗ ರಾಜು

ಬದಲಾಯಿಸಿ

ರಾಮಲಿಂಗ ರಾಜು ಅವರು ೧೬ನೇ ಸೆಪ್ಟೆಂಬರ್ ೧೯೫೪ರಂದು ಗೋದಾವರಿ ಜಿಲ್ಲೆಯ ಭೀಮಾವರಂ ಗ್ರಾಮದಲ್ಲಿ ಜನಿಸಿದರು.ಇವರು ಆಂದ್ರ ಲಾಯಲ ಕಾಲೇಜಿನಲ್ಲೆ ಬಿ.ಕಾಂ ಮಾಡಿ ನಂತರ ಓಹಿಯೋ ಯೂನಿವರ್ಸಿಟಿಯಲ್ಲಿ ಎಂ.ಬಿ.ಏ ಮಾಡಿದ್ದರೆ.ಇವರು ೧೯೭೬ರಲ್ಲಿ ಮದುವೆಯಾದರು.ಇವರ ಪತ್ನಿಯ ಹೆಸರು ನಂದಿನಿ.ಇವರಿಗೆ ಇಬ್ಬರು ಮಕ್ಕಳು.

ವೃತ್ತಿ

ಬದಲಾಯಿಸಿ

ಇವರು ಹತ್ತಿ ನೂಲುವ ಗಿರಣಿಯನ್ನು "ಶ್ರೀ ಸತ್ಯಂ ಸ್ಪಿನ್ನಿಂಗ್" ಎಂಬ ವ್ಯಾಪಾರವನ್ನು ಆರಂಭಿಸಿದರು.ಈ ವ್ಯಾಪಾರ ಯಶಸ್ಸನ್ನು ಕಾಣದಿದ್ದುದರಿಂದ ಇವರು ವಸತಿ ವ್ಯಾಪಾರಕ್ಕೆ ತೆರೆಳಿ "ಮಯ್ತಾಸ್ ಇನ್ಫ಼್ರ ಲಿಮಿಟೆಡ್" ಎಂಬ ನಿರ್ಮಾಣ ಕಂಪನಿಯನ್ನು ಆರಂಭಿಸಿದರು. ಇವರ ಹೆಸರನ್ನು ತಿರುವುಮುರುವಾಗಿ ಓದಿದರೆ "ಮಯ್ತಾಸ್" ಆಗುತ್ತದೆ. ಇದೇ ಹೆಸರನ್ನು ಇವರು ಆ ಕಂಪನಿಯ ಹೆಸರಾಗಿ ನೇಮಿಸಿದರು. ಈ ಕಂಪನಿಯನ್ನು ಇವರು ತಮ್ಮ ಸಹೋದರನಾದ ಡ್.ವಿ.ಎಸ್.ರಾಜು ಅವರೊಂದಿಗೆ ಸೇರಿ ಬಹಳ ಎತ್ತರಕ್ಕೆ ಕೊಂಡೊಯ್ದರು. ೧೯೯೧ರಲ್ಲಿ ಸತ್ಯಂ ಕಂಪನಿಯನ್ನು ಫ಼ಾರ್ಚೂನ್ ೫೦೦ ಕ್ಲ್ಯ್ಂಟ್ ರಲ್ಲಿ ನೇಮಿಸಿದರು. ೧೯೯೨ರಲ್ಲಿ ಕಂಪನಿಯು ತನ್ನ ಶೇರುಗಳನ್ನು ಶೇರುಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಿದರು.೧೯೯೯ರಲ್ಲಿ ಸತ್ಯಂ ಇನ್ಫೋ ವೇಯನ್ನು ಕಂಡುಹಿಡಿದರು.೨೦೦೧ ರಲ್ಲಿ ವಿಶ್ವದ ಮೊದಲನೇಯ ಐ.ಎಸ್.ಓ ೯೦೦೦:೨೦೦೧ ಪ್ರಮಾಣಿತ ಪತ್ರ ಪಡೆದ ಐ.ಟಿ ಕಂಪನಿಯಾಗಿತು.ಸತ್ಯಂ ಕಂಪ್ಯೂಟರ್ ಸರ್ವಿಸಸ್ ಕಂಪನನಿಗೆ ಗೋಲ್ಡನ್ ಪೀಕಾಕ್ ಅವಾರ್ಡ್ ಗೆದ್ದಿತು.

ಲೆಕ್ಕಪತ್ರದ ಹಗರಣ

ಬದಲಾಯಿಸಿ

ಜನವರಿ ೭, ೨೦೦೯ರಲ್ಲಿ ರಾಮಲಿಂಗ ರಾಜುರವರು ಅದೃಶ್ಯರಾದರು. ಇವರು ಬರೆದ ಪತ್ರದಲ್ಲಿ, ಕಂಪನಿಯ ಹೆಸರಿನಲ್ಲಿ ಮಾಡಿದ ಎಲ್ಲಾ ತಪ್ಪುಗಳನ್ನು ಒಪ್ಪಿಕ್ಕೂಂಡಿದರು.ಇವರು ಕಂಪನಿಯ ಖಾತೆಯನ್ನು ಸಾವಿರಾರು ಕೋಟಿ ರೂಪಾಯಿಗಳಶ್ಟು ಕಲಬೆರಕೆ ಮಾಡಿದ್ದರು.ಈ ಸಮಯದಲ್ಲಿ "ಸತ್ಯಂ ಕಂಪ್ಯೂಟರ್ ಸರ್ವಿಸಸ್" ಹೈದ್ರಾಬಾದಿನಲ್ಲಿ ಕೇಂದ್ರ ಕಾರ್ಯ ಸ್ಥಾನವನ್ನು ಪಡೆದುಕೊಂಡಿತ್ತು.ನ್ಯೂ ಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಒಂದು ಕಂಪನಿಯಾಗಿ ನೇಮಕವಾಗಿತ್ತು. ಈ ಕಂಪನಿಯಲ್ಲಿ ನಲ್ವತ್ತ ಐದು ಸಾವಿರಕ್ಕೂ ಹೆಚ್ಚು ನೌಕರರಿದ್ದು ೨ ಬಿಲ್ಲಿಯನ್ ಡಾಲರ್ ಅಶ್ಟು ಆದಾಯವನ್ನು ಪಡೆದಿತ್ತು.ಕೆಲವು ದಿನಗಳ ನಂತರ ರಾಮಲಿಂಗ ರಾಜುರವರು ಶರಣಾದರು.ಕಂಪನಿಯ ಒಂದು ಶೇರಿನ ಬೆಲೆ ೧೦೦ ರೂಪಾಯಿಗಳಿಂದ ಕೇವಲ ೫ ರೂಪಾಯಿಗಳ ಬೆಲೆಗೆ ಬಿದ್ದವು.ಕಂಪನಿಯ ಲಾಭವು ದೀರ್ಘಕಾಲ ಹೆಚ್ಚಿಸುತ್ತಲೇ ಇತ್ತು.ಎಲ್ಲಾ ಲಾಭವೂ ಎ‍ಕ್ಸ್ಪೋರ್ಟ್ಸ್ ನಿಂದ ಬರುತ್ತಿದ್ದುದರಿಂದ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿತ್ತು.ಇದರಿಂದ ಕಂಪನಿಯ ಶೇರುಗಳ ಬೆಲೆ ಮೀಲೆ ಏರುತ್ತಲೇಇತ್ತು.ಕಂಪನಿಯ ಹೆಚ್ಚು ಶೇರುಗಳನ್ನು ಇವರ ಕುಟುಂಬವೆ ಹೊಂದಿದರು.ಇದರಿಂದ ಇವರ ಬಳಿ ಇದ್ದ ಶೇರುಗಳ ಬೆಲೆಯೂ ಹೆಚ್ಚಿದರಿಂದ ಇವರೂ ಹೆಚ್ಚು ಹಣ ಸಂಪಾದಿಸಿದರು.೨೦೦೮ರ ಕೊನೆಯಲ್ಲಿ ಕಂಪನಿಯು ೫೦೦೦ ಕೋಟಿ ರೂಪಾಯಿಗಳ ನಗದು ಮೀಸಲುಗಳನ್ನು ಹೊಂದಿದ್ದವು.ಆದರೆ ವಾಸ್ತವದಲ್ಲಿ ಕಂಪನಿಯ ಸಾಲವನ್ನು ತೀರಿಸಲು ನೂರು ಕೋಟಿಯೂ ಇರಲಿಲ್ಲ.ಇವರು ನಡೆಸಿದ ಮಯ್ತಾಸ್ ಕಂಪನಿಯನ್ನು ಸತ್ಯಂ ಕಂಪನಿಯು ಖರೀದಿಸಿತು ಎಂದು ಹೇಳಿ ಇದ್ದ ನಕಲಿ ಹಣವನ್ನು ಉಪಯೋಗಿಸಿದರು.ಮಯ್ತಾಸ್ ಕಂಪನಿಯು ಇವರ ಮಗ ತೇಜಸ್ ನಡೆಸುತಿದ್ದರು.ಮಯ್ತಾಸ್ ಕಂಪನಿಯು ಇವರದೇ ಆದುದರಿಂದ ಹಣವು ಇವರ ಬಳಿಯೇ ಬಂದಿತು. ಆದರೆ ನಿಜವಾದ ಪ್ರಶ್ನೆ ಏನೆಂದರೆ ರಾಮಲಿಂಗ ರಾಜು ಅವರು ಇಶ್ಟು ವರ್ಶಗಳ ಕಾಲ ಈ ಹಗರಣವನ್ನು ಹೇಗೆ ನಡೆಸಿದರು? ಸತ್ಯಂ ಕಂಪ್ಯೂಟರ್ ಸರ್ವಿಸಸ್ ಕಂಪನಿಯ ಲೆಕ್ಕಪರಿಶೋಧಕರು ಪಿ.ಡಬಲ್ಯೂ.ಸಿ ನವರು ಮಾಡುತಿದ್ದರು.ಆದರೆ ಇವರು ಹೆಚ್ಚಿನ ಹಣವನ್ನು ಕುರಿತು ಯಾವ ಪ್ರಶ್ನೆಯನ್ನೂ ಮಾಡಲಿಲ್ಲ.ಇವರು ಕಂಪನಿಯಲ್ಲಿ ೧.೧ ಬಿಲ್ಲಿಯನ್ ಡಾಲರ್ಸ್ ನಗದು ಹಿಡಿದಿದ್ದರು ಎಂದು ಹೇಳಿದರು ಆದರೆ ವಾಸ್ತವದಲ್ಲಿ ಇವರ ಬಳಿ ಕೇವಲ ೭೮ ಮಿಲ್ಲಿಯನ್ ಡಾಲರ್ಸ ಇದ್ದವು.ಈ ಹಗರಣವನ್ನು ತಾರ್ಕಿಕವಾಗಿ ವಿವರಿಸಲು ಸಾಧ್ಯವಿಲ್ಲ.ಏಕೆಂದರೆ ಹೆಚ್ಚು ನಗದು ಮೀಸಲುಗಳನ್ನು ಹೊಂದಿದ್ದ ಕಂಪನಿಯು ತನ್ನ ಸಾಲಗಳನ್ನು ಏಕೆ ತೀರಿಸಲಿಲ್ಲ?. ಜನರು ರಾಜು ಅವರನ್ನು ಬಹಳ ನಂಬಿದ್ದರು.ಇವರ ಬಗ್ಗೆ ಮೀಡಿಯ್ಯಾದವರು "ಯಾವ ತಪ್ಪೂ ಮಾಡದ ವ್ಯಕ್ತಿ ಎಂದು ನೇಮಿಸಿದ್ದರು". ಜನರು ಇವರನ್ನು ಇಶ್ಟು ನಂಬಿದ್ದರಿಂದ ಇವರ ಮೇಲೆ ಯಾವ ಸಂದೇಹವೂ ಇರಲಿಲ್ಲ.

ನ್ಯಾಯಾಲಯದ ಪ್ರಕ್ರಿಯೆಗಳು

ಬದಲಾಯಿಸಿ

ಈ ಪ್ರಕರಣದ ನ್ಯಾಯಾಧೀಶರು ಬಿ.ವಿ.ಎಲ್.ಎನ್.ಚಕ್ರವರ್ತಿ.ಈ ಪ್ರಕರಣದಲ್ಲಿ ೨೧೬ ಸಾಕ್ಶಿಗಳನ್ನು ಪ್ರಶ್ನಿಸಲಾಗಿತ್ತು.ಸಾವಿರಾರು ದಾಖಲೆಗಳನ್ನು ಸಲ್ಲಿಸಲು ಆದೇಶಿಸಲಾಗಿತ್ತು.೨೦೦೯ರಲ್ಲಿ ಹೈದ್ರಾಬಾದಿನ ಸ್ಪೆಶಲ್ ಕೊರ್ಟ್ ಈ ಹಗರಣದಲ್ಲಿ ಒಳಗಾಗಿದ್ದ ೧೦ ಜನರನ್ನು ಶಿಕ್ಶಿಸಿದರು.ರಾಮಲಿಂಗ ರಾಜು ಅವರಿಗೆ ಏಳು ವರ್ಶಗಳ ಜೈಲು ಶಿಕ್ಶೆ ನೀಡಲಾಗಿತ್ತು.ಇವರಿಗೆ ೫ ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿತ್ತು.ಇವರನ್ನು ವಿವಿಧ ಸೆಕ್ಶನ್ಗಳಡಿಯಲ್ಲಿ ಆರೋಪಿಸಲಾಗಿತ್ತು.ಇವರನ್ನು ಐ.ಪಿ.ಸಿ ಸೆಕ್ಶನ್ ೧೨೦ಬಿ(ಅಪರಾಧ ಸಂಚು) ಸೆಕ್ಶನ್ ೪೦೯(ವಿಶ್ವಾಸದ ಉಲ್ಲಂಘನೆ) ಸೆಕ್ಶನ್ ೪೨೦(ವಂಚನೆ) ಸೆಕ್ಶನ್ ೪೬೭(ಬೆಲೆಬಾಳುವ ಭದ್ರತಾ ನಕಲು) ಸೆಕ್ಶನ್ ೪೬೮(ವಂಚನೆ ಖೊಟಾ) ಸೆಕ್ಶನ್ ೪೭೧(ನಕಲಿ ದಾಖಲೆಗಳ ಬಳಕೆ) ಮತ್ತು ಸೆಕ್ಶನ್ ೪೭೭-ಏ(ಖಾತೆಯ ವಂಚನೆ). ಈಗ ರಾಮಲಿಂಗ ರಾಜುರವರು ಜೈಲಿನಲ್ಲಿದ್ದರೆ.ಇವರನ್ನು ಬಿಟ್ಟು ಬೇರೆ ಆರೋಪಿಗಳು ಯಾರೆಂದರೆ, ಜಿ.ರಾಮಕ್ರಿಶ್ಣ, ಡಿ.ವೆಂಕಟಪತಿರಾಜು,ಶ್ರೀಶೈಲಂ ಚೇಟ್ಕುರು, ಪ್ರಭಾಕರ ಗುಪ್ತಾ, ಟೆಲ್ಲೂರಿ ಶ್ರೀನಿವಾಸ್ ಮತ್ತು ಎಸ್.ಗೋಪಾಲಕ್ರಿಶ್ಣನ್. ಇವರನ್ನೂ ನ್ಯಾಯಾಲಯ ೫೦೦೦೦ ರೂಪಾಯಿಗಳ ದಂಡ ವಿಧಿಸಲಾಗಿತ್ತು.೧೩ನೇ ಏಪ್ರಿಲ್ ೨೦೦೯ರಲ್ಲಿ ೪೬% ಶೇರುಗಳನ್ನು ಮಹಿಂದ್ರ ಮತ್ತು ಮಹಿಂದ್ರ ಕಂಪನಿಯ ಟೆಖ್ ಮಹಿಂದ್ರ ಕಂಪನಿಯು ಸಾರ್ವಜನಿಕ ಹರಾಜಿನಲ್ಲಿ ಖರೀದಿಸಿತು. ಈ ಕಂಪನಿಯನ್ನು "ಮಹಿಂದ್ರ ಸತ್ಯಂ" ಎಂದು ಮರುನಾಮಕರಣ ಮಾಡಲಾಗಿತು.ಈ ಹಗರಣವನ್ನು ಭಾರತದ ಅತಿ ದೊಡ್ಡ ಹಗರಣವಾಗಿದ್ದು ಇದು ಇಡೀ ದೇಶವನ್ನು ಅಲಾಡಿಸುವ ಬಲ ಹೊಂದಿತ್ತು.ಸಮಾನ್ಯವಾಗಿ ಇಂಥಹ ಹಗರಣಗಳು ನಡೆದಾಗ ಕಂಪನಿಗಳನ್ನು ಮುಚ್ಚಿಬಿಡಲಾಗುತ್ತದೆ. ಆದರೆ ಸತ್ಯಂ ಕಂಪನಿಯು ಮುಂದುವರೆಯಿತು.

ಉಲ್ಲೇಖಗಳು

ಬದಲಾಯಿಸಿ

[] []

  1. https://en.wikipedia.org/wiki/Byrraju_Ramalinga_Raju
  2. http://timesofindia.indiatimes.com/business/india-business/Satyams-Ramalinga-Raju-9-others-get-bail-sentences-suspended-by-court/articleshow/47235993.cms