ಸದಸ್ಯ:Shwetha MP/ನನ್ನ ಪ್ರಯೋಗಪುಟ1

ಪುಸ್ತಕ ಮಾಹಿತಿ

ಬದಲಾಯಿಸಿ

ಇದು ವಾರಿಸ್ ಡೇರಿಸ್ ಳ ಆತ್ಮ ಕಥನ. ಇದನ್ನು ವಾರಿಸ್ ಡೇರಿಸ್ ಳು ಬರೆದಿದ್ದು ಕನ್ನಡಕ್ಕೆ ಡಾಕ್ಟರಿಯನ್ ಜಗದೀಶ್ ಕೊಪ್ಪಅನುವಾದಿಸಿದ್ದಾರೆ. ಇದರ ಶೀರ್ಷಿಕೆ ಮರುಭೂಮಿಯ ಹೂ.

ವಾರಿಸ್ ಡೇರಿಸ್ ಬಗ್ಗೆ

ಬದಲಾಯಿಸಿ

ವಾರಿಸ್ ಡೇರಿಸ್ ಮೂಲತಹ ಆಫ್ರಿಕಾ ಖಂಡದ ಸೋಮಾಲಿಯಾ ದೇಶದವರು. ಪ್ರಾರಂಭದ ದಿನಗಳಲ್ಲಿ ಇವರು ಕುರಿ ಒಂಟೆ ಕಾಯುವ ಕೆಲಸ ,ಮಾಡುತ್ತಿದ್ದರು. ನಂತರ ರೂಪದರ್ಶಿಯಾಗಿ ಹಲವಾರು ವರ್ಷಗಳ ಕಾಲ ಮಿಂಚಿದರು. ೧೯೯೦ರ ದಶಕದಲ್ಲಿ ಪ್ರಸಿದ್ದ ಸೌಂದರ್ಯ ವರ್ದಕ ಉತ್ಪನ್ನಗಳ ಜಗತ್ತಿನ ಜಾಹಿರಾತು ಲೋಕದಲ್ಲಿ ದುಡಿದರು. ಬಹು ರಾಷ್ಟ್ರೀಯ ಕಂಪನಿಯಾದ ರೆವಲಾನ್ ಸಂಸ್ಥೆ ಇವರನ್ನು ಅನೇಕ ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ ರೂಪದರ್ಶಿಯನ್ನಾಗಿ ನೇಮಕ ಮಾಡಿಕೊಂಡಿತ್ತು. ಬಿಬಿಸಿ ಚಾನೆಲ್ ಇವರ ಬದುಕನ್ನು ಕುರಿತು ನೊಮೆಡ್ ಇನ್ ನ್ಯೂಯಾರ್ಕ್ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿದೆ. ಈಕೆ ಆತ್ಮ ಕಥನವನ್ನು ಆಧಾರವಾಗಿಟ್ಟುಕೊಂಡು ಡೆಸರ್ಟ್ ಫ್ಲವರ್ ಹೆಸರಿನಲ್ಲಿ ಚಿತ್ರವೊಂದು ಹಾಲಿವುಡ್ ನಲ್ಲಿ ನಿರ್ಮಾಣವಾಯಿತು. ಆಫ್ರಿಕಾದ ಬಡ ರಾಷ್ಟ್ರಗಳ ಆಚರಣೆಯಲ್ಲಿರುವ ಹೆಣ್ಣುಮಕ್ಕಳ ಯೋನಿ ವಿಚ್ಚೇದನ ಕ್ರಿಯೆಯ ವಿರುದ್ಧ ಹಾಗೂ ಆಫ್ರಿಕಾದ ಹೆಣ್ಣುಮಕ್ಕಳ ಶಿಕ್ಷಣದ ಕಾರ್ಯಕ್ರಮಕ್ಕಾಗಿ ವಿಶ್ವ ಸಂಸ್ಥೆ ಈಕೆಯನ್ನು ತನ್ನ ರಾಯಬಾರಿಯನ್ನಾಗಿ ನೇಮಕ ಮಾಡಿಕೊಂಡಿತು.

ಮರುಭೂಮಿಯ ಹೂ

ಬದಲಾಯಿಸಿ

ವಾರಿಸ್ ಡೇರಿಸ್ ಳ ಈ ಆತ್ಮ ಕಥೆ ಜಗತ್ತಿನ ೮೫ ಭಾಷೆಗಳಲ್ಲಿ ಪ್ರಕಟಗೊಂಡಿವೆ. ಅತ್ಯಂತ ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಇದು ಒಂದಾಗಿದೆ. ಕನ್ನಡದಲ್ಲಿ ಈ ಪುಸ್ತಕ ೨೦೧೩ ರಲ್ಲಿ ಮುದ್ರಣಗೊಂಡಿತು.

ಅನುವಾದಕರ ಬಗ್ಗೆ

ಬದಲಾಯಿಸಿ

ಇದನ್ನು ಡಾ.ಜಗದೀಶ್ ಕೊಪ್ಪರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಲಿನ ಕೊಪ್ಪ ಗ್ರಾಮದವರು. ಇವರಿಗೆ ವಿವಿಧ ಕೃತಿಗಳಿಗಾಗಿ ಹಲವಾರು ಪ್ರಶಸ್ತಿಗಳು ಬಂದಿವೆ. ಇವರು ಇಂಗ್ಲಿಷ್ ನಲ್ಲಿದ್ದ ಡೆಸರ್ಟ್ ಫ್ಲವರ್ ಆತ್ಮ ಕಥನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪ್ರಕಾಶನ ಸಂಸ್ಥೆ

ಬದಲಾಯಿಸಿ

ಈ ಪುಸ್ತಕವನ್ನು ಮನೋಹರ ಗ್ರಂಥಮಾಲ ಪ್ರಕಾಶನ ಸಂಸ್ಥ, ಲಕ್ಷ್ಮಿ ಭವನ ಸುಭಾಸ್ ರಸ್ಥೆ ಧಾರವಾಡ ಇವರು ಪ್ರಕಟಿಸಿದ್ದಾರೆ. ಇದು ೨೦೧೩ ರಿಂದೀಚೆಗೆ ಮೂರು ಬಾರಿ ಮರು ಮುದ್ರಣಗೊಂಡಿದೆ. ಇದಕ್ಕೆ ಕುವೆಂಪು ಭಾಷಾ ಪ್ರಾಧಿಕಾರ ಪ್ರಶಸ್ತಿ ಸಂದಿದೆ.

ಲಿಂಕ್ ಗಳು

ಬದಲಾಯಿಸಿ

ಪ್ರಕಾಶನ ಸಂಸ್ಥೆಯ ವಿಳಾಸ-www.granthamala.com