ಸದಸ್ಯ:Shwetha MP/ನನ್ನ ಪ್ರಯೋಗಪುಟ

ಸೌಂದರ್ಯ ವರ್ದಕರು

ಬದಲಾಯಿಸಿ

ಒಬ್ಬ ಸೌಂದರ್ಯ ವರ್ದಕಿಯ ಕಾರ್ಯ ಎಂದರೆ, ಮೇಕ್ ಅಪ್ ಅಥವಾ ಅಂದದಲ್ಲಿ ಅಂದವನ್ನು ಹೆಚ್ಚಿಸುವುದು ಎಂದೇ ಹೇಳಬಹುದು. ಯಾವುದೇ ಒಂದು ಖಾಲಿ ಜಾಗದಲ್ಲಿ ಕೆಲವು ಬಣ್ಣ ಬಣ್ಣದ ಹೂ ಗಳನ್ನು ಇಟ್ಟರೆ ಹೇಗೆ ಆ ಜಾಗದ ಅಂದ ಹೆಚ್ಚಾಗುವುದೋ ಹಾಗೆ ಒಂದು ಮುಖಕ್ಕೆ ಅಲಂಕಾರವನ್ನು ಮಾಡಿದಾಗ ಸೌಂದರ್ಯ ಹೆಚ್ಚಾಗುವುದು. ಸೌಂದರ್ಯ ವರ್ದಕಿ ಮೊದಲು ಅಲಂಕಾರ ಮಾಡುವ ಮುನ್ನ ಆ ಮುಖಕ್ಕೆ ಯಾವ ಅಲಂಕಾರ ಹೋಲಿಕೆ ಆಗುತ್ತದೆಯೋ ಎಂಬುದನ್ನು ಮೊದಲು ನಿರ್ಧರಿಸಿ ನಂತರ ಗ್ರಾಹಕರಿಗೆ ಯಾವ ಅಭಿರುಚಿ ಇದೆ ಎಂಬುದನ್ನು ತಿಳಿದು ನಂತರ ಅಲಂಕಾರ ಮಾಡಬೇಕು.

ವಿಧಗಳು

ಬದಲಾಯಿಸಿ

ಮದುವೆ ಅಲಂಕಾರ

ಬದಲಾಯಿಸಿ
 
ಮದುಮಗಳ ಅಲಂಕಾರ

ಇಲ್ಲಿ ಎಲ್ಲರೂ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಏಕೆಂದರೆ, ಇದು ಅಪರೂಪಕ್ಕೆ ಮಾಡುವ ಅಲಂಕಾರವಾಗಿರುತ್ತದೆ. ಮತ್ತು ಫೋಟೋ ಹಾಗೂ ವೀಡಿಯೋಗಳಿಗಾಗಿ ಅಲಂಕಾರಕ್ಕೆ ಮುಖ್ಯ ಪಾತ್ರ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಬ್ಬ ಸೌಂದರ್ಯ ವರ್ದಕಿ ಅಲಂಕಾರವನ್ನು ಮಾಡಬೇಕಾಗುತ್ತದೆ. ಇದರಲ್ಲಿ ಕೇಶಾಲಂಕಾರ ಮುಖ್ಯ ಪಾತ್ರ ವಹಿಸುತ್ತದೆ. ಮೊದಲಿಗೆ ಮುಖವನ್ನು ಲೋಶನ್ ಹಚ್ಚಿ ಸ್ವಚ್ಚಗೊಳಿಸಬೇಕು. ನಂತರ ಫೌಂಡೇಶನ್ ಹಚ್ಚಿ ನಂತರ ಫೇಸ್ ಪೌಡರ್ ಹಚ್ಚಬೇಕು. ಹಚ್ಚುವಾಗ ಕೈ ಬಣ್ಣಕ್ಕೆ ಹೋಲುವ ಹಾಗಿರಬೇಕು ಏಕೆಂದರೆ ಫೋಟೋಗಳಲ್ಲಿ ವ್ಯತ್ಯಾಸವಾಗಿ ಕಾಣುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಹೈ ಶಾಡೋಸ್, ಕಾಜಲ್, ಹೈಲ್ಯಾಶ್, ಮಸ್ಕರಾ, ಲಿಪ್ಸ್ ಟಿಕ್, ಲಿಪ್ ಲೈನರ್ ಹೀಗೆ ಕ್ರಮಬದ್ದವಾಗಿ ಹಚ್ಚಬೇಕು. ಎಲ್ಲವೂ ಒಂದಕ್ಕೊಂದು ಹೋಲುವ ಹಾಗೆ ಇರಬೇಕು ಹಾಗೂ ಗ್ರಾಹಕರಿಗೆ ಚರ್ಮಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಿ ಮಾಡಬೇಕಾಗುತ್ತದೆ. []

ಮಕ್ಕಳ ಅಲಂಕಾರ

ಬದಲಾಯಿಸಿ

ಮಕ್ಕಳ ಚರ್ಮ ಬಹಳ ಮೃದು ಹಾಗೂ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಅಲಂಕಾರ ಮಾಡಬೇಕಾಗುತ್ತದೆ. ಹಾಗೂ ಸೌಂದರ್ಯ ವರ್ದಕ ವಸ್ತುಗಳನ್ನು ಹೆಚ್ಚಾಗಿ ಪ್ರಯೋಗ ಮಾಡಬಾರದು. ಹೇರ್ ಕಟ್ ಮಾಡುವಾಗ ಮಕ್ಕಳು ಗಾಬರಿಗೊಳ್ಳುವುದರಿಂದ ಅವರನ್ನು ಮೃದು ಮಾತುಗಳನ್ನಾಡಿ ತಮ್ಮ ಹಿಡಿತದಲ್ಲಿಟ್ಟುಕೊಂಡು ಮಾಡಬೇಕಾಗುತ್ತದೆ. ಹೆಚ್ಚಾಗಿ ಚುಚ್ಚುವ ಉಡುಪುಗಳನ್ನು ತೊಡಿಸಬಾರದು.

ಮುನ್ನೆಚ್ಚರಿಕೆಗಳು

ಬದಲಾಯಿಸಿ

ಗ್ರಾಹಕರಿಗೆ ಇಷ್ಟವಾಗುವ ಅಲಂಕಾವನ್ನು ಮಾಡಬೇಕಾಗುತ್ತದೆ. ಅವರ ಚರ್ಮದ ಸೂಕ್ಷತೆಯ ಜ್ಞಾನ ಇರಬೇಕು. ಯಾವುದೇ ಅಲರ್ಜಿ ಆಗುವ ಚರ್ಮದ ಮೇಲೆ ಮೇಕಪ್ ಗಳನ್ನು ಒಂದು ವೇಳೆ ಮಾಡಿದರೂ ಎಚ್ಚರ ವಹಿಸಬೇಕು. ಗ್ರಾಹಕರೊಂದಿಗೆ ಗೆಳೆತನದಿಂದ ವರ್ತಿಸಬೇಕಾಗುತ್ತದೆ. ಅವರ ಮನಸ್ತಿತಿಯನ್ನು ತಿಳಿದುಕೊಂಡು ಅವರೊಂದಿಗೆ ಸಂಭಾಷಣೆಯನ್ನು ಮಾಡಬೇಕು. ಯಾವುದೇ ಅಲಂಕಾರ ಅಥವಾ ಬ್ಲೀಚ್, ಫೇಷಿಯಲ್, ಮೆನಿಕ್ಯೂರ್-ಪೆಡಿಕ್ಯೂರ್, ವ್ಯಾಕ್ಸಿಂಗ್ ಮುಂತಾದವು. ಎಲ್ಲವನ್ನೂ ಸಹ ಎಚ್ಚರಿಕೆಯಿಂದ ಮಾಡಬೇಕಾಗಿತ್ತು. ಎಲ್ಲವನ್ನೂ ಕ್ರಮಬದ್ದವಾಗಿ ಮಾಡಬೇಕು ಹಾಗೂ ನಂತರ ಕೆಲವು ನಿಯಮಗಳಿರುತ್ತವೆ ಅವುಗಳ ಬಗ್ಗೆ ತಿಳಿ ಹೇಳಬೆಕು. ಎಲ್ಲಾ ಸಲಕರಣೆಗಳನ್ನು ಸ್ವಚ್ಚವಾಗಿಟ್ಟುಕೊಂಡಿರಬೇಕು. ಯಾವುದೇ ಕಾರಣಕ್ಕೂ ಹಾಳಾಗದಂತೆ ಎಚ್ಚರಿಕೆ ವಹಿಸಬೆಕಅಗುತ್ತದೆ.

ಉಪಯೋಗಳು

ಬದಲಾಯಿಸಿ

ಅಲಂಕಾರದಿಂದ ಸುಂದರವಾಗಿ ಕಾಣುತ್ತಾರೆ. ಆರೋಗ್ಯವಾದ ಚರ್ಮವನ್ನು ಹೊಂದುತ್ತಾರೆ. ಆಯಾಸದಿಂದಿರುವವರು ರಿಲ್ಯಾಕ್ಸ್ ಆಗುತ್ತಾರೆ.

  1. ಪ್ರಜಾವಾಣಿ, ೨೮ ಜನವರಿ ೨೦೧೭