ಆಕಾಶ

ಆಗಸ ಹರಡಿದೆ ಭೂಮಿಗೆ ಹಂದರ ನೋಡಲ್ಲಿ ನಗುತಿಹನು ತುಂಬಿದ ಚಂದಿರ ಬಾನಲ್ಲಿ ಮಿನುಗುತಿಹುದು ಸಹಸ್ರಾರು ಚುಕ್ಕಿಗಳು ಚಿಲಿಪಿಲಿ ಹಾಡುತಿಹುದು ನೂರಾರು ಹಕ್ಕಿಗಳು ಮುಗಿಲೆತ್ತರ ನಿಂತಿಹುದು ಸಾಲು ಸಾಲು ಅಲುಗಾಡದೆ ನಿಂತು ನೋಡುತಿದೆ ಗುಡ್ಡ ಬೆಟ್ಟಗಳು ಬೆಳ್ಳಿಯ ಕಿರಣಗಳನ್ನು ಹರಡಿ ಮೇಲಕ್ಕೇರುವನು ನೇಸರ ಕಡಲ ತೀರದಲ್ಲಿ ಮುಳುಗುವುದನ್ನು ಕಂಡಿರಾ?