ಸದಸ್ಯ:Shrigouri.s.joshi/sandbox
ನಾವೇಕೆ ದೇವಸ್ಥಾನಗಳಿಗೆ ಭೇಟಿ ನೀಡಬೇಕು? ದೇವಾಲಯಗಳ ದರ್ಶನ ಪಡೆಯುವುದರ ಹಿಂದಿರುವ ವೈಜ್ಞಾನಿಕ ಸತ್ಯಗಳು
ನಾವೆಲ್ಲರೂ ಗುಡಿಗಳಿಗೆ, ದೇವಸ್ಥಾನಗಳಿಗೆ ಹೋಗಿಯೇ ಇರುತ್ತೇವೆ. ದೇವಸ್ಥಾನಗಳಿಗೆ ಯಾಕೆ ಭೇಟಿ ನೀಡುತ್ತೀರಿ ಎಂಬ ಪ್ರಶ್ನೆಗೆ ಹಲವಾರು ಉತ್ತರಗಳು ಸಿಗುತ್ತವೆ. ನಮ್ಮಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ತಮ್ಮ ಅದ್ಭುತ ವಾಸ್ತುಶಿಲ್ಪದಿಂದಾಗಿ ಅಥವಾ ಸಂಸ್ಕøತಿ ಸಂಪ್ರದಾಯಗಳಿಂದಾಗಿ ಅವು ನಿತ್ಯವೂ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ.ದೇವಸ್ಥಾನಗಳ ವಾಸ್ತುಶಿಲ್ಪದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆ. ನಮ್ಮ ಬಹುತೇಕ ದೇವಸ್ಥಾನಗಳು ಕಟ್ಟಲ್ಪಟ್ಟಿರುವುದು ವೈಜ್ಞಾನಿಕತೆಯ ಆಧಾರದ ಮೇಲೆ. ವೇದಗಳಲ್ಲಿ ಹೇಳಿರುವ ಪ್ರಕಾರ ದೇವಾಲಯಗಳ ವಾಸ್ತುಶಿಲ್ಪವನ್ನು, ಸಂಪ್ರದಾಯಗಳನ್ನು ವೈಜ್ಞಾನಿಕವಾಗಿ ಹೀಗೆ ವಿವರಿಸಬಹುದು.