ಸದಸ್ಯ:Shreya kshatriya
ಹುಟ್ಟಿನ ಗುಟ್ಟು
ಬದಲಾಯಿಸಿನನ್ನ ಹೆಸರು ಶ್ರೇಯಾ.ಎಸ್. ನಾನು ಮೊದಲು ಅತ್ತದ್ದು ೧೯೯೭ ಮೇ ೨೭ರಂದು. ನನ್ನ ತಂದೆ ತಾಯಿಗೆ ಎಲ್ಲಿಲ್ಲದ ಸಂತೋಷ,ಕೆಂಪು ತೊಂಡೆಹಣ್ಣಿನಂತಹ ಮುಖವನ್ನು ನೋಡಿದ ಅಪ್ಪನ ಮುಖದಲ್ಲಿ ಏನೋ ಮಂದಹಾಸ. ನಾನು ಹುಟ್ಟಿದ್ದು ಬೆಂಗಳೂರಿನ ಗಂಗೇನಹಳ್ಳಿಯಲ್ಲಿ. ನನ್ನ ತಂದೆ ಎಸ್.ಆರ್.ರಾಜು, ತಾಯಿ ಕುಮಾರಿ. ನಾನು ಹುಟ್ಟಿದಾಗ ಮನೆಯಲ್ಲಿ ಕಡು ಬಡತನ ಒಂದು ಹೊತ್ತು ಊಟಕ್ಕೂ ಕಷ್ಟ. ನನಗೆ ಒಂದು ವರುಷ ಇರುವಾಗ ಅನೇಕಲ್ಲಿನಲ್ಲಿ ನೆರೆಯೂರಿದೆವು.ನನ್ನ ತಂದೆ ಕೇಬಲ್ ಆಪರೇಟರ್ ಮತ್ತು ತಾಯಿ ಮನೆಯನ್ನು ನೋಡಿಕೊಳ್ಳುತ್ತಾರೆ .
ಶಾಲೆಯ ಬದುಕು
ಬದಲಾಯಿಸಿನಾನು ಆನೇಕಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಿಕೆಜಿ ನಿಂದ ಹತ್ತನೇ ತರಗತಿಯವರೆಗೂ ಅಲ್ಲಿಯೇ ಓದಿದ್ದು. ಬಹುಶಃ ಅದರಿಂದಲೇ ನಾನು ಶಾಲೆಯಲ್ಲಿ ಚಿರಪರಿಚಿತನಾಗಿದ್ದೆ ಎಂದೆನಿಸುತ್ತೆ. ನನ್ನ ಮನೆಯ ಬಳಿ ನನ್ನ ವಯಸ್ಸಿನ ಮಕ್ಕಳ್ಳು ಯಾರು ಇರಲಲ್ಲ ಆದರಿಂದ ನನಗಿಂತ ೭-೮ ವರುಷ ದೊಡ್ಡವರ ಜೊತೆ ಆಟವಾಡುತ್ತಿದ್ದೆ. ಎಲ್ಲರಿಗಿಂತ ಕಿರಿಯವಳಾದರಿಂದ ತಪ್ಪನ್ನು ಅವರು ಮಾಡಿ ನನ್ನನ್ನು ದೂಷಿಸುತ್ತಿದ್ದರು. ನಾನು ಅಳುತ್ತ ಮನೆಗೆ ಬಂದು ಅಮ್ಮನ ಬಳಿ ಚಾಡಿ ಹೇಳುತ್ತಿದ್ದೆ. ನಂತರ ಅಮ್ಮ ಅವರನ್ನು ನನ್ನ ಸಮಾಧನಕ್ಕಾಗಿ ಬೈಯುತ್ತಿದ್ದರು. ನಾನು ಶಾಲೆಯಲ್ಲಿ ಎಲ್ಲದರಲ್ಲೂ ಮೊದಲು. ತುಂಬ ತರಲೆ ಅಂದರೆ ನಾನು ಶುದ್ದ ತರಲೆ. ನನ್ನ ಶಾಲಾ ದಿನಗಳಲ್ಲಿ ಇಷ್ಟವಾದ ಶಿಕ್ಷಕರೆಂದರೆ ಶ್ರೀಮತಿ ಶಮಾ, ವೇದ ಮತ್ತು ರಾಜ್ ಗೋಪಾಲ್ ರವರು. ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ. ನಾನು ತ್ರೋಬಾಲ್ ಆಟಗಾರತಿ.ನನಗೆ ಕ್ರಿಕೆಟ್ ಎಂದರೆ ಇಷ್ಟ, ರಾಹುಲ್ ದ್ರಾವಿಡ್ ಮತ್ತು ಎಬಿ.ಡಿವಿಲಿಯರ್ಸ. ಫುಟ್ಬಾಲ್ ಎಂದರೆ ತುಂಬ ತುಂಬ ಇಷ್ಡ.ಅದರಲ್ಲೂ ಕ್ರಿಸ್ಟಿಯಾನೋ ರೊನಾಲ್ಡೋ ಎಂದರೆ ಪ್ರಾಣ. ಹತ್ತನೇ ತರಗತಿಯಲ್ಲಿ ನಾನು ಶಾಲೆಗೆ ಮೂರನೇ ಟಾಪರ್. ಶಾಲೆಯ ಕೊನೆಯ ದಿನ ಇನ್ನು ಕಣ್ಖು ಮುಂದೆನೆ ಇದೆ. ಆದಿನಗಳು ಜೀವನದಲ್ಲಿ ಮರೆಯಲು ಸಾಧ್ಯವೆಯಿಲ್ಲ. ಆದರೆ ೧೦ನೇ ತರಗತಿಯಲ್ಲಿ ಕೆಲವು ಕಹಿ ಘಟನೆಗಳು ನಡೆದವು.
ಕಾಲೇಜು ಕ್ಯಾಂಪಸ್ಸು
ಬದಲಾಯಿಸಿನಾನು ಪಿ.ಯು ಓದಿದ್ದು ಶಿರಿಡಿ ಸಾಯಿ ಪದವಿ ಪೂರವ ಕಾಲೇಜಿನಲ್ಲಿ. ಇಂದಿಗೂ ಆ ಕಾಲೇಜನ್ನೂ ನಿಂದಿಸುತ್ತೆನೆ.ನಾನು ಪಿ.ಸಿ.ಎಂ.ಬಿ ಯನ್ನು ಆಯ್ಕೆ ಮಾಡಿಕೊಂಡಿದ್ದೆ. ತರಗತಿಯಲ್ಲಿ ನಾವು ೪೭ ಮಂದಿ ಇದ್ದೆವು. ನನ್ನದು ರೊಡಿಯ ಸ್ವಭಾವ. ಎಲ್ಲರ ಜೊತೆ ಬೇಗ ಬೆರೆಯುತ್ತಿದ್ದೆ ಆದ್ದರಿಂದ ತರಗತಿಯಲ್ಲಿದ್ದ ಎಲ್ಲಾ ಗುಂಪುಗಳಲ್ಲೂ ನಾನು ಇರುತ್ತಿದ್ದೆ. ಬೇರೆ ಬೇರೆ ತರಗತಿಯವರ ಜೊತೆಗೂ ಒಳ್ಳೆಯ ಸಂಪರಕ ಹೊಂದಿದ್ದೆ. ಎಲ್ಲರೂ ನನ್ನ ಸ್ನೇಹಿತರೇ ಆದರೇ ೩ ಜನ ತುಂಬ ಹತ್ತಿರವಾಗಿದ್ದೆವು. ಈಗಲೂ ಹಾಗೆಯೆ ಇದ್ದೇವೆ. ನನ್ನ ಕನ್ನಡ ಶಿಕ್ಷಕರ ಜೊತೆ ಯಾವಾಗಲು ಮಾತಿನ ಸಂವಾದ ನಡೆಯುತ್ತಿತ್ತು ಆದರೆ ಅದು ತಮಾಷೆಯ ಸಂವಾದವಾಗಿರುತ್ತಿತ್ತು. ಅದಕ್ಕೆ ಸರ್ ನನನ್ನು ದುಶ್ಮನ್ ಎಂದು ಕರೆಯುತ್ತಿದ್ದರು. ಅಲ್ಬಿಯ ಪರ್ವೀನ್,ಮೆಘ,ಚಾಂದಿನಿ ನನ್ನ ಜೀವನದಲ್ಲಿ ಸಿಕ್ಕ ಕಾಣಿಕೆಗಳು.
ಸ್ನೇಹಿತ
ಬದಲಾಯಿಸಿಸೋಹಿಲ್,ನನ್ನ ಸ್ನೇಹಿತ.ನಾವು ೧೪ ವರುಷದಿಂದ ಸ್ನೇಹಿತರು.ನಾನು ಅವನನ್ನು ಕಣ್ಣು ತೆರೆಸಿದ ದೇವರೆಂದರು ತಪ್ಪಾಗದು. ನನ್ನ ಜೀವನದ ಅತ್ಯಂತ ಪ್ರಮುಖ ಡಿಸಿಶನ್ ನನ್ನು ಅವನನ್ನು ಕೇಳಿಯೇ ತೆಗೆದಿಕೊಂಡಿರುವುದು. ದುಡ್ಡಿನ ಬೆಲೆಯನ್ನು ತಿಳಿಸಿಕೊಟ್ಟವನು.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Shreya kshatriya |