ಸದಸ್ಯ:Shresta harihar/ನನ್ನ ಪ್ರಯೋಗಪುಟ

ಬೆಟ್ಟದಪುರ ಬದಲಾಯಿಸಿ

            ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಇದು ಪಕ್ಕದ ಕೊಡಗು ಜಿಲ್ಲೆಗೆ ತೀರ ಹತ್ತಿರ.ಹೆಸರು ಎರಡು ಕನ್ನಡ ಪದಗಳು "ಬೆಟ್ಟ" ಮತ್ತು "ಪುರ" ಪಡೆಯಲಾಗಿದೆ. ಬೆಟ್ಟ "ಹಿಲ್" ಪುರ ಎಂದರೆ "ಪಟ್ಟಣ" ಅರ್ಥ. ಜನಸಂಖ್ಯೆ ಅತ್ಯಂತ ಗೌಡ ಸಮುದಾಯದಿಂದ ಜನತ ವ್ಯಾಪಕವಾಗಿದೆ. ಇಲ್ಲಿ ಅತ್ಯಧಿಕವಾಗಿ ಹಾಗು ಮುಖ್ಯವಾಗಿ ಬೆಳೆಯುವುದು ತಂಬಾಕು. ಇಲ್ಲಿ ಬೆಳೆಯುವ ತಂಬಾಕನ್ನು ವ್ಯಾಪಕವಾಗಿ ವಿದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇದು ಭಾರತದ ಅತ್ಯುತ್ತಮ ಗುಣಮಟ್ಟದ ತಂಬಾಕು ಕೃಷಿಗೆ ಹೆಸರುವಾಸಿಯಾಗಿದೆ. ಈ ಊರಿನ ವಿಶೇಷತೆಯೆಂದರೆ, ’ಸಂಕೇತಿ ಬ್ರಾಹ್ಮಣರು,’ ಸುಮಾರು ೬೦೦ ವರ್ಷಗಳ ಹಿಂದೆ, ತಮಿಳುನಾಡಿನಿಂದ ಬಂದವರು ಮೊಟ್ಟಮೊದಲನೆಯದಾಗಿ ಇಲ್ಲಿಯೇ ನೆಲೆಸಿದರು. ಕನ್ನಡ ಭಾಷೆಯಲ್ಲಿ ಬೆಟ್ಟದ ಹತ್ತಿರವಿರುವ ನಗರವೆಂದರ್ಥ. ಊರಿನ ಪಕ್ಕದಲ್ಲಿರುವ ಬೆಟ್ಟದ ಮೇಲೆ, ಪುರಾತನ ’ಶ್ರೀ. ಸಿಡ್ಲು ಮಲ್ಲಿಕಾರ್ಜುನಸ್ವಾಮಿ,’ ದೇವಸ್ಥಾನವಿದೆ. ಪಶ್ಚಿಮಘಟ್ಟಗಳ ಬೆಟ್ಟಶ್ರೇಣಿಗಳ ಸಾಲಿಗೆ ಸೇರ್ಪಡೆಯಾಗಿರುವ ಸಿಡ್ಲುಬೆಟ್ಟವು ಮಲ್ಲಿಕಾರ್ಜುನ ನೆಲೆ ನಿಂತ ಭವ್ಯ ತಾಣವಾಗಿದೆ. ಇಲ್ಲಿನ ಮಲ್ಲಿಕಾರ್ಜುನಸ್ವಾಮಿ ಸುತ್ತಮುತ್ತಲಿನ ಜನರ ಆರಾಧ್ಯದೈವನಾಗಿದ್ದಾನೆ. ಕೊಡಗು ಮತ್ತು ಮೈಸೂರಿಗೆ ಗಡಿಭಾಗದಲ್ಲಿರುವ ಈ ಬೆಟ್ಟವು ನಿಸರ್ಗ ಸೌಂದರ್ಯದ ಗಣಿಯಾಗಿದೆ. ಈ ದೇವಸ್ಥಾನವು ಪಿರಿಯಾಪಟ್ಟಣದಿಂದ ೧೬ ಕಿ.ಮೀ. ದೂರದಲ್ಲಿದೆ.ಮೈಸೂರು ಮತ್ತು ಹುಣಸೂರಿನಿಂದ ಬಸ್ಸಿನ ಸೌಕರ್ಯವಿದೆ. ಬೆಟ್ಟದಪುರವು ೪೪೦೦ ಅಡಿ ಎತ್ತರ ವಿರುವುದರಿಂದ ಸುತ್ತಲು ಪ್ರಕೃತಿ ಸೌಂದರ್ಯವನ್ನು ಹೊಂದಿ ಆಕರ್ಶಣಿಯವಾದ ದೇವಾಲಯದ ತಾಣವಾಗಿದೆ. ಅನೇಕ ಬಾರಿ  ಮಳೆಯ ಸಿಡಿಲಿನ ಹೊಡೆತದಿಂದ ದೇವಾಲಯಕ್ಕೆ 'ಸಿಡ್ಲು ಮಲ್ಲಿಕಾರ್ಜುನ ಸ್ವಾಮಿ' ಎಂದು  ಹೆಸರು ಬಂದಿದೆ 
 
bettadapura temple tower

ಹಿನ್ನೆಲೆ ಬದಲಾಯಿಸಿ

             ಈ ದೇವಾಲಯದ ಇತಿಹಾಸವನ್ನು ಗಮನಿಸಿದಾಗ ಬೆಟ್ಟದಪುರಕ್ಕೆ ಹಿಂದೆ ಸಿಂಗಪಟ್ಟಣ ಎಂದು ಕರೆಯುತಿದ್ದರು. ಈ ಪಟ್ಟಣವು ಚೋಳರ ರಾಜಧಾನಿಯು ಆಗಿತ್ತು. ಚೋಳರ ಅರಸರಲ್ಲಿ ಒಬ್ಬನಾದ ಪೆರೆಯರಾಜ ಎಂಬವನ ಹೆಸರಿನಿಂದ ಬೆಟ್ಟದಪುರ ಎಂಬ ಹೆಸರು ಬಂದಿರುವ ಬಗ್ಗೆ ಇತಿಹಾಸ ತಿಳಿಸುತ್ತದೆ. ಈ ದೇವಾಲಯವನ್ನು ಪಾಳೇಗಾರ ರಾಜನಾದ ಗಂಗಾರಾಜನ ಸ್ಥಾಪಿಸಿದನು ಎಂದು ಹೇಳಲಾಗಿದೆ. ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿಯು ಚೋಳರ ಆರಾದ್ಯದೈವವಾಗಿತ್ತು.
             ಚೆಂಗಾಳ್ವಾ ಪ್ರಭಾವಿತ ಅರಸನಾಗಿದ್ದು, ಬೆಟ್ಟದಪುರವನ್ನು ಅಭಿವೃದ್ಧಿಪಡಿಸುವುದು ಆತನ ಸಹೋದರರ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ಸದರಿ ಕಂದಾಯ ಜಾಗವನ್ನು ನಜುಂಡ ಅರಸರಿಂದ ಹನ್ನೆರಡು ಸಾವಿರ ಪಗಾರವನ್ನು ನೀಡಿ ಖರೀದಿಸುತ್ತಾರೆ. ೧೬೪೫ಲ್ಲಿ ಮೈಸೂರು ಸಂಸ್ಥಾನದ ಆಧೀನಕ್ಕೆ ಒಳಪಡಿಸಲಾಯಿತು. ಆನಂತರ ಜಹಾಂಗೀರ್ ನ್ನು ಟಿಪ್ಪು ಸುಲ್ತಾನ್ ನ ಆದೇಶದ ಮೇರೆಗೆ ಬೆಟ್ಟದಪುರದಲ್ಲಿ ಆಡಳಿತ ನಡೆಸುತ್ತಿದ್ದನು.
             ಈ ದೇವಾಲಯವು ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿಕೊಂಡು ಆವೃತ್ತವಾಗಿದೆ ದೇವಾಲಯದ ಮುಖ್ಯದ್ವಾರದಿಂದ ಆರಂಭಗೊಂಡು ಎರಡು ಕಡೆಯಲ್ಲಿ ಆಮೆ ಮತ್ತು ಸರ್ಪದ ಆಕರ್ಶಕ ಕೆತ್ತನೆಗಳನ್ನು ಕಾಣುತ್ತೇವೆ ಹತ್ತಿರದಲ್ಲೇ ಸಿಹಿ ನೀರಿನ ಕಲ್ಯಾಣಿಯು ಇದೆ. ಪ್ರತಿ ವರ್ಷವು ದೇವಾಲಯದಲ್ಲಿ ಗಿರಿಜ ಕಲ್ಯಾಣ ಉತ್ಸವವು ವಿಜೃಂಭಣೆಇಂದ ನಡೆಯುವುದು, ಜಾತ್ರೆಯ ಸಂದರ್ಭದಲ್ಲಿ ಸಾವಿರರು ದನಗಳ ಜಾತ್ರೆ ನಡೆವುದು ಬೆಟ್ಟದ ಪುರವು ಕೇವಲ ದೈವಿಕತಾಣವಲ್ಲದೆ ೩೬೦೦ ಮೆಟ್ಟಲುಗಳನ್ನು ಹತ್ತುತ್ತ ಪ್ರಕೃತಿಯನ್ನು ಆರಾಧಿಸುತ್ತ ಸಾಗುವುದೆ ಒಂದು ರೋಮಾಂಚನ. ಚಾರಣ ಪ್ರಿಯರಿಗು ಸಹಾ ಅಚ್ಚುಮೆಚ್ಚಿನ ಸ್ಥಳವಾಗಿದೆ.
             ಬೆಟ್ಟದಪುರದ ಸ್ವಾತಂತ್ರ ಲೀಲಾಖ್ಯ ಮಠವು ಬೆಟ್ಟದ ಪುರದಲ್ಲಿಯೇ ಇದ್ದು ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗಳ ತಪಸ್ಸನ್ನು ಮಾಡಿದ ಪುಣ್ಯ ಭೂಮಿ ಎಂದು ಪ್ರಸಿದ್ಧಿಯಾಗಿದೆ. ಮಹಾಮಹಿಮೆಗಳನ್ನು ಬೋಧಿಸಿ ಭಕ್ತರಿಗೆ ಅನೇಕ ಸಲಹೆಗಳನ್ನು ಕೊಡುತ್ತಲಿದ್ದ ಸ್ವಾಮಿಗಳಿಗೆ ಲೀಲಾಖ್ಯದ ಬುಡಕಟ್ಟಿನವರು ಎಂಬ ಪ್ರತೀತಿಯೂ ಉಂಟು.
              ಸಿಡ್ಲು ಮಲ್ಲಿಕಾರ್ಜುನನಿಗೆ ಟಿಬೆಟಿಯನ್ನರೇ ಭಕ್ತರು ಮೈಸೂರು ಸುಂದರ ನಿಸರ್ಗ ರಮಣೀಯ, ಹಸಿರ ಹಚ್ಚಡದ ಬೆಟ್ಟದ ಮೇಲೆ ನೆಲೆ ನಿಂತಿರುವ ಶ್ರೀ ಸಿಡ್ಲುಮಲ್ಲಿಕಾರ್ಜುನ ದೇಗುಲ ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನಡೆಗೆ ಸೆಳೆಯುವ ಸುಂದರ ತಾಣವಾಗಿದೆ. 

ಬುದ್ಧಪೂರ್ಣಿಮೆ ವಿಶೇಷ ಬದಲಾಯಿಸಿ

             ಬುದ್ಧಪೂರ್ಣಿಮೆ ವಿಶೇಷ: ಬೆಟ್ಟವನ್ನು ಹತ್ತುವಾಗ ಅಲ್ಲಿನ ಸುಂದರ ದೃಶ್ಯಗಳನ್ನು ಸವಿಯುತ್ತಾ ಹತ್ತುತ್ತಿದ್ದರೆ ಮೆಟ್ಟಿಲೇರುವ ದಣಿವೇ ಗೊತ್ತಾಗುವುದಿಲ್ಲ. ಬಹಳಷ್ಟು ಜನ ಬೆಟ್ಟವನ್ನೇರಲೆಂದೇ ಬರುತ್ತಾರೆ. ಅದರಲ್ಲೂ ಹತ್ತಿರದ ಟಿಬೆಟಿಯನ್ನರಂತು ಇಲ್ಲಿಗೆ ಲಗ್ಗೆಯಿಡುತ್ತಿರುತ್ತಾರೆ. ಬುದ್ಧಪೂರ್ಣಿಮೆಯ ಸಮಯದಲ್ಲಂತು ಸಾವಿರಾರು ಸಂಖ್ಯೆಯಲ್ಲಿರುವ ಟಿಬೆಟಿಯನ್ನರು 'ಸಿಡ್ಲು ಮಲ್ಲಿಕಾರ್ಜುನ' ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ಥಳೀಯರಲ್ಲದೆ ಕರ್ನಟಕ ಮತ್ತು ಇತರೆ ರಾಜ್ಯದ ಪ್ರವಾಸಿಗರು ಬೆಟ್ಟದಪುರಕ್ಕೆ ಬಂದು ಬೆಟ್ಟವನ್ನೇರಿ ಅಲ್ಲಿಂದ ಕಾಣುವ ಪ್ರಕೃತಿಯ ಸುಂದರ ದೃಶ್ಯಗಳನ್ನು ಸವಿದು ತೆರಳುತ್ತಾರೆ. ಬೆಟ್ಟವನ್ನೇರಿ ನಿಂತು ನೋಡಿದಾಗ ಕಾಣಸಿಗುವ ಸುಂದರ ದೃಶ್ಯಗಳು ಮನಮೋಹಕವಾಗಿರುತ್ತದೆ. ಒಂದೆಡೆ ಮಲೆನಾಡು ಮತ್ತೊಂದೆಡೆ ಅರೆಮಲೆನಾಡು. ಇದೆರಡರ ಸುಂದರ ದೃಶ್ಯಗಳ ಸಮ್ಮಿಲನ ಕಣ್ಣಿಗೆ ರಾಚುತ್ತದೆ. ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು.. ದೂರದಲ್ಲಿ ಹಸಿರನ್ನೊದ್ದು ಮಲಗಿರುವ ಬೆಟ್ಟಶ್ರೇಣಿಗಳು.. ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಮರಗಿಡಗಳು.. ಆಗಾಗ್ಗೆ ಬೀಸಿ ಬರುವ ತಂಪಾದ ಗಾಳಿ.. ಒಂದು ಕ್ಷಣ ತಮ್ಮೆಲ್ಲ ಜಂಜಾಟವನ್ನು ಮರೆಸಿ ಮೈಮನಸ್ಸನ್ನು ಉಲ್ಲಾಸಗೊಳಿಸಿಬಿಡುತ್ತದೆ. ಬೆಟ್ಟದಪುರ ಎನ್ನುವುದೇ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾದ ಊರು. ಇಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ನೆಲೆ ನಿಂತ ಬೆಟ್ಟವು ಮೈಸೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಎತ್ತರದ ಬೆಟ್ಟ ಎಂದು ಹೇಳಲಾಗಿದೆ. ಹೀಗಾಗಿಯೇ ದೇವರ ದರ್ಶನಕ್ಕೆಂದು ಒಂದಷ್ಟು ಮಂದಿ ಬಂದರೆ ಮತ್ತೊಂದಷ್ಟು ಮಂದಿ ಚಾರಣ ಮಾಡಲು ಬರುತ್ತಾರೆ.
              ಕಬಿನಿ ಜಲಾಶಯವು ಬೆಟ್ಟದಪುರಕ್ಕೆ ಹೊಂದಿಕೊಂಡಂತಿದೆ  ಹಲವು ಹಳ್ಳಿ ದೇವಾಲಯಗಳನ್ನು ಕಬಿನಿ ಜಲಾಶಯವು ತನ್ನ ಒಡಲಲ್ಲಿ ಬಚ್ಚಿಟ್ಟಿರುವ ವಿಚಾರ ಎಷ್ಟೊ ಜನರಿಗೆ ತಿಳಿದಿರುವುದಿಲ್ಲ. ಜಲಾಶಯವು ನಿರ್ಮಾಣ ವಾದಾಗಲು ಹತ್ತಾರು ಹಳ್ಳಿ ಹಾಗು ದೇಗುಲಗಳು ಮುಳಿಗಿವೆ ಕೆಲವೊಮ್ಮೆ ನೀರು ಖಾಲಿ ಆದಾಗ ಮುಳುಗಿದ ದೇಗುಲಗಳು ಕಾಣಸಿಕೊಳ್ಳುತ್ತವೆ. ಆದರೆ ಬೆಟ್ಟದಪುರ 'ಸಿಡ್ಲು ಮಲ್ಲಿಕಾರ್ಜುನ' ದೇವಾಲಯವು ಕಬಿನಿ ಜಲಾಶಯವು ಮುಳುಗುವುದಿಲ್ಲ ಏಕೆಂದರೆ ಅದು ೪೪೦೦ ಅಡಿ ಯತ್ತರವಿರುವ ಬೆಟ್ಟದ ಮೇಲೆ ಇದೆ. ಕರ್ನಾಟಕದಲ್ಲಿರುವ ಬೆಟ್ಟದಪುರವು ದೈವಿಕ ತಾಣವು ಹೌದು ಮತ್ತು ಚಾರಣ ಪ್ರಿಯರನ್ನು ಕೈ ಬೀಸಿ ಕರೆಯುವ ತಾಣವು ಹೌದು.


ಉಲ್ಲೆಖ ಬದಲಾಯಿಸಿ

http://kannada.oneindia.com/news/mysore/tibetans-are-devotees-sidlu-mallikarjuna-temple-bettadapura-105804.html [೧] [೨]

  1. http://www.thelightbaggage.com/2013/06/bettadapura-village-with-rich-history.html
  2. ಇದು ಕರ್ನಾಟಕ- ಎ ಎ ಶಂಕರನಾರಾಯಣ ರಾವ್