ಚಪ್ಪಟೆ ಹುಳುಗಳು

ಈ ವಂಶಸದ ಪ್ರಾಣಿಗಳು ನೀಳವಾದ,ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆವಿಲ್ಲದ ದೇಹರಚನೆಯನ್ನು ಹೊಂದಿರುವ ಪ್ರಾಣಿಗಳಾದುದರಿಂದ ಇವುಗಳನ್ನು ಚಪ್ಪಟೆ ಹುಳುಗಳು(Platyhelminthes)ಎಂದು ಕರೆತಯಲಾಗುತ್ತದೆ. ಚಪ್ಪಟೆ ಹುಳುಗಳಲ್ಲಿ ಕೆಲವು ಸ್ವತಂತ್ರ ಜೀವಿಗಳು. ಇವು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ. ಉದಾ:ಪ್ಲನೇರಿಯಾ

ಇನ್ನುಳಿದ ಚಪ್ಪಟೆಹುಳುಗಳು ಪರಾವಲಂಬಿಗಳು. ಅವು ಕಶೇರುಕ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ.

   ಉದಾ:- ಲಾಡಿಹುಳು ಮತ್ತು ಕಾರಲುಹುಳು.

ದೇಹಭಿತ್ತಿಯು 'ಕ್ಯೂಟಿಕಲ್'ಎಂಬ ಪದರದಿಂದ ಆವೃತ್ತವಾಗಿದೆ. ದೇಹದ ಭಿತ್ತಿಯಲ್ಲಿ ಸ್ನಾಯುಪರದವು ವಿಶಿಷ್ಟವಾಗಿ ಬೆಳೆದಿದೆ. ದೇಹಭಿತ್ತಿಯ ಮತ್ತು ಒಳಗಿನ ಅಂಗಗಳ ನಡುವೆ ಪ್ಯಾರೆಂಕೈಮಾ ಎಂಬ ವಿಶಿಷ್ಟ ಸಂಯೋಜಕ ಅಂಗಾಂಶವಿದೆ. ದೇಹಾಂತರವಕಾಶ ಇರುವುದಿಲ್ಲ. ಆದ್ದರಿಂದ ಇವುಗಳನ್ನು 'ಏಸಿಲೋಮೆಟ್' ಎಂಬ ಗುರುತಿಸಲಾಗುತ್ತದೆ. ಪರಾವಲಂಬಿ ಚಪ್ಪಟೆ ಹುಳುಗಳಲ್ಲಿ 'ಕೊಕ್ಕೆಗಳು', ಮತ್ತು 'ಹೀರು ಬಟ್ಟಲು'ಗಳೆಂಬ ವಿಶಿಷ್ಟ ರಚನೆಗಳಿದ್ದು, ಅವು ಪೋಷಕ ಪ್ರಾಣಿಯ ದೇಹದ ಒಳಗೆ ನೆಲೆಗೊಳ್ಳಲು ಸಹಾಯಕವಾಗಿವೆ.ಹೀರು ಬಟ್ಟಲುಗಳು ಆಹಾರವನ್ನು ಹೀರಿಕೊಳ್ಳಲು ಸಹಾಯಕವಾಗಿದೆ.

ಈ ಜೀವಿಗಳಲ್ಲಿ ಜೀರ್ಣಾಂಗವ್ಯೂಹವು ಪೂರ್ಣಗೊಂಡಿರುವುದಿಲ್ಲ. ಪೋಷಕ ಜೀವಿಯ ಮೇಲೆ ಆಹಾರಕ್ಕಾಗಿ ಅವಲಂಬಿತವಾಗಿರುವುದರಿಂದಲೂ ಮತ್ತು ಜೀರ್ಣವಾಗಿ ದೇಹಗತವಾಗಲು ಸಿದ್ದವಿರುವ ಆಹಾರ ಇವುಗಳಿಗೆ ದೊರಕುವುದರಿಂದ ಜೀರ್ಣಾಂಗವ್ಯೂಹದಲ್ಲಿ ಪಚನಗ್ರಂಥಿಗಳು ಕಂಡುಬರುವುದಿಲ್ಲ.