ನನ್ನ ಹೆಸರು ಶೊಭಾ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕಿಯಾಗಿ ಕೆಲಸ ಮಾದುತ್ತೇನೆ. ಓದುವುದು ನನ್ನ ಮೆಚ್ಚಿನ ಹವ್ಯಾಸ. ಎಲ್ಲ ಭಾಶೆಯ ಪುಸ್ತಕಗಳನ್ನು ಓದುವುದು ನನಗೆ ಇಷ್ಟ. ನನ್ನ ಸೇವಾವಧಿಯಲ್ಲಿ ಅನೇಕ ಕನ್ನಡ ಮತ್ತು ಆ೦ಗ್ಲ ಭಾಷೆಯ ಪುಸ್ತಕಗಳನ್ನು ನಾನು ಓದಿದ್ದೇನೆ. ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಆರಂಭಿಸಿದ ಹವ್ಯಾಸ ಕಾಲಕ್ರಮೇಣ ಒಂದು ಚಟದಂತೆ ನನ್ನನ್ನು ಅಂಟಿಕೊಂಡಿತು. ಪ್ರತಿದಿನವೂ ಕೆಲವು ಪುಟಗಳನ್ನು ಓದದಿದ್ದರೆ ಏನನ್ನೊ ಕಳೆದುಕೊಂಡಂತೆ ಆ ದಿನ ಬಹಳ ನೀರಸವಾದಂತೆ ಎನಿಸುತ್ತದೆ.

ಉತ್ತಮ ಪುಸ್ತಕಗಳನ್ನು ಓದುವುದರಿಂದ ನನ್ನ] ದಿನಛರಿಯಲ್ಲಿ ಬಹಳಷ್ಟು ಬದಲಾವಣೆಗಳು ನನ್ನ ಗಮನಕ್ಕೆ ಬಂದಿವೆ. ವ್ಯರ್ಥ ಮಾತುಕಥೆಯಲ್ಲಿ ಕಳೆಯುವ ಸಮಯ ಈಗ ಓದುವಿಕೆಗೆ ಮೀಸಲಾಗಿದೆ. ನನಗೇ ಅರಿವಿಲ್ಲದಂತೆ ನನ್ನ ಮನಸ್ಸು ಪುಸ್ತಕದ ಬಗ್ಗೆ ಚಿಂತಿಸುತ್ತದೆ . ನಿನ್ನೆ ಆರಂಭಿಸಿದ ಪುಸ್ತಕದ ಮುಂದಿನ ಭಾಗ ಓದುವುದು ಯಾವಾಗ ಮತ್ತು ಹೇಗೆ ಸಮಯ ಹೊಂದಿಸುವುದು ಎಂಬ ಚಿಂತೆ. ಆ ಪುಸ್ತಕವನ್ನು ಯಾವಾಗ ಪೂರ್ತಿಗೊಳಿಸುವುದು ಎಂಬ ಆಲೋಚನೆ. ಹೀಗೆ ದಿನದ ಸ್ವಲ್ಪ ಸಮಯವನ್ನು ಸಮಯ ಪುಸ್ತಕಗಳೊಂದಿಗೆ ಕಳೆಯುವ ಅವಕಾಶವನ್ನು ನಾನು ಹೇಗಾದರೂ ಹೊಂದಿಸಿಕೊಳ್ಳುತ್ತೇನೆ. ಕಥೆ, ಕಾದಂಬರಿ, ವೈಚಾರಿಕ ಲೇಖನಗಳು, ನಾಟಕಗಳು, ಪ್ರವಾಸೀ ಕಥನ, ಕವನ ಸಂಕಲನ ಹೀಗೆ ಯಾವುದೇ ಸಾಹಿತ್ಯ ಪ್ರಕಾರವಾದರೂ ಸರಿ.ಕನ್ನಡದಲ್ಲಿ ಕುವೆಂಪು, ಶಿವರಾಮ ಕಾರಂತ, ಮಾಸ್ತಿಯವರ ಸಣ್ಣ ಕಥೆಗಳು, ತೇಜಸ್ವಿಯವರ ಪರಿಸರದ ಬಗ್ಗೆ ಬರೆದ ಪುಸ್ತಕಗಳು, ಯಶವಂತ ಚಿತ್ತಲರ ಪುರುಷೋತ್ತಮ, ತ್ರಿವೇಣಿ, ಎಂ.ಕೆ.ಇಂದಿರರವರ ಕಾದಂಬರಿಗಳು, ಇಂಗ್ಲಿಷಿನಲ್ಲಿ ವಿಲಿಯಂ ಶೆಕ್ಸ್ಪಿಯರ್, ಮಿಲ್ತೊನ್, ಕೆನನ್ ಡೊಯಲ್, ಜೇನ್ ಆಸ್ಟೀನ್, ಆರುಂಧತಿ ರಾಯ್, ರೊಬಿನ್ ಸಿಂಗ್ ನಾನು ಮೆಚ್ಛಿದ ಬರಹಗಾರರು. ಇಷ್ಟೇ ಅಲ್ಲದೇ ಉದಯೋನ್ಮುಖ ಸಾಹಿತಿಗಳ ಬರಹಗಳನ್ನೂ ಓದುತ್ತೇನೆ. ಪತ್ರಿಕೆಗಳಲ್ಲಿ ಬರುವ ಕಥೆ, ದಾರಾವಹಿಗಳು,ಸಣ್ಣ ಕಥೆ, ಕವನ ಯಾವುದಾದರೂ ಆಗಬಹುದು. ಹೀಗೆ ಬಿಡುವಿನ ವೇಳೆ ಸದುಪಯೋಗವಾಗುವುದರೊಂದಿಗೆ ಅನಗತ್ಯ ಮಾತು, ಹರಟೆ, ಗಲಾಟೆ, ತಪ್ಪು ತಿಳುವಳಿಕೆ ಇಂಥವುಗಳಿಗೆ ಯಾವುದೇ ಅವಕಾಶವಿಲ್ಲ. ನನ್ನದೇ ಆದ ಪುಸ್ತಕ ಲೋಕದಲ್ಲಿ ವಿಶ್ರಮಿಸುವಾಗ ಬೇರೆ ಜಂಜಾಟಗಳು ಲೆಕ್ಕಕ್ಕಿಲ್ಲ.





ಮಾಧವಿ ಭಂಡಾರಿ ಒಬ್ಬ ಹಳ್ಳಿಗಾದಡಿನಲ್ಲಿ ಅಶಿಕ್ಷಿತ ತಂದೆ ತಾಯಂದಿರಿಗೆ ಜನಿಸಿದ ಹಿಂದುಳಿದ ವರ್ಗಕ್ಕೆ ಸೇರಿದ ಹೆಣ್ಣು ಮಗಳು. ಅತ್ಯಂತ ಕಷ್ಟಕಕರ ಪರಿಸ್ಥಿತಿಯಲ್ಲಿಯೂ ಅಚಲವಾದ ವಿಶ್ವಾಸದಿಂದ ಉನ್ನತ ಶಿಕ್ಶಣಾವನ್ನು ಪದೆದು ಲೇಖಕಿಯಾಗಿ,ಅಭಿನೇತ್ರಿಯಾಗಿ , ಉತ್ತಮ ವಾಗ್ಮಿಯಾಗಿ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ. ಮೂಲತಃ ಉತ್ತರ ಕನ್ನದವರಾಗಿದ್ದ್ರರೂ ಪ್ರಸ್ತುತ ಉಡುಪಿಯ ಪೂರ್ಣಪ್ರಜ್ನ ಕಾಲೇಜಿನಲ್ಲಿ ಹಿಂದಿ ಉಪಾನ್ಯಾಸಕಿಯಾಗಿ ಸೇರಿಕೊಂಡ ಮೇಲೆ ಉಡುಪಿಯವರೇ ಎನ್ನುವಷ್ಟು ಪ್ರಖ್ಯಾತರಾಗಿದ್ದಾರೆ.

ಜನನ,ಜೀವನ:

  • ೧೯೫೫ ರ ಮೇ ೧ ರಂದು ಉತ್ತರ ಕನ್ನ್ನಡ ಧಾರೇಶ್ವರದಲ್ಲಿ ಜನಿಸಿದ ಮಾಧವಿ ಭಂಡಾರಿಯವರ ಆರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ ಹಾಗೂ ಮಾಧ್ಯಮಿಕ ಶಿಕ್ಶಣ ಮುಂಬಯಿಯಲ್ಲಿ ನಡೆಯಿತು. ೧೯೭೬ಎಅಲ್ಲಿ ಕುಮಟಾದ ಎ.ವಿ.ಬಾಳಿಗಾ ಕಾಲೇಜಿನಲ್ಲಿ ಹಿಂದಿ ಮೇಜರ್ ನೊಂದಿಗೆ ಪದವಿ ಪಡೆದು ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದುಕೊಂಡರು.ಪ್ರಸ್ತುತ ಉಡುಪಿಯ ಪೂರ್ಣಪ್ರಜ್ನ ಕಾಲೇಜಿನಲ್ಲಿ ಹಿಂದಿ ಉಪಾನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಬರವಣಿಗೆಯೊಂದಿಗೆ ಅಭಿನಯ ಕಲೆಯಲ್ಲಿಯೂ ಆಸಕ್ತಿ ಹೊಂದಿರುವ ಇವರು ತೀರ್ಪು,ಗುಡ್ಡದ ಭೂತ, ಅಬೋಲಿನಾ, ಓ ನನ್ನ ಬೆಳಕೆ ಮುಂತಾದ ದಾರವಾಹಿಗಳಲ್ಲಿ ನಟಿಸಿ ಹೆಸರಾಗಿದ್ದಾರೆ.