ನನ್ನ ಹೆಸರು ಶಶಾಂಕ. ನಾನು ಹುಟ್ಟುದ್ದು ೭-೨-೧೯೯೭ರಲ್ಲಿ, ನನ್ನ ತಂದೆಯ ಹೆಸರು ನಟರಾಜ್ ತಾಯಿಯ ಹೆಸರು ಗಾಯತ್ರಿ,ನಾನು ಬೆಳೆದದ್ದು ಮಲೆನಾಡಿನಲ್ಲಿ, ನಾನು ೧ನೇ ತರಗತಿಯಿಂದ ೫ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲೆತವನು. ೬ನೇ ತರಗತಿಯಿಂದ ಇಂಗ್ಲೀಷ ಮಾಧ್ಯಮದಲ್ಲಿ ಕಲಿಯುವುದಕ್ಕೆ ಪ್ರಾರಂಭಿಸಿದನು.
ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದುಕೊಂಡದ್ದು ಕೊಣಂದೂರಿನ ನವಜ್ಯೋತಿ ಶಾಲೆಯಲ್ಲಿ. ನನ್ನ ತಂದೆ ನನಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಿದರು.ನನಗೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳು ಲಭಿಸಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ತ್ರತೀಯ ಬಹುಮಾನವನ್ನು ಪಡೆದನು.
ನನ್ನ ಹವ್ಯಾಸಗಳೆಂದರೆ ನ್ಯೂಸ್ ಪೇಪರ ಓದುವುದು, ವಿದೇಶಿ ನಾಣ್ಯಗಳನ್ನು ಸಂಗ್ರಹಿಸುವುದು,ಕಥೆ ಪುಸ್ತಕಗಳನ್ನು ಓದುವುದು. ನಾನು ಪಿ.ಯು.ಸಿ ಮಾಡಿದ್ದು ಮಂಗಳೂರಿನ ಸೇಂಟ್ ಅಲೋಷಿಯಸ ಕಾಲೇಜಿನಲ್ಲಿ, ಈಗ ಪ್ರಸ್ತುತ ಅದೇ ಕಾಲೇಜಿನಲ್ಲಿ ನನ್ನ ಪ್ರಥಮ ಬಿ.ಎ ವ್ಯಾಸಂಗ ಮಾಡುತ್ತಿದ್ದೇನೆ.