ಲಾಂಚ್ ಪ್ಯಾಡಿನಲ್ಲಿ ನಿಂತಿರುವ ಪಿ.ಎಸ್.ಎಲ್.ವಿ ಸಿ-೩೫

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV)[೧] ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಐ.ಎಸ್.ಆರ್.ಒ) ವಿನ್ಯಾಸಗೊಳಿಸಿದ ಮತ್ತು ನಿರ್ವಹಿಸುವ ಮಧ್ಯಮ-ಲಿಫ್ಟ್ ಉಡಾವಣಾ ವಾಹನವಾಗಿದೆ. ಭಾರತ ತನ್ನ ರಿಮೋಟ್ ಸೆನ್ಸಿಂಗ್ (ಐ.ಆರ್.ಎಸ್) ಉಪಗ್ರಹಗಳನ್ನು ಸೂರ್ಯ-ಸಮಕಾಲಿಕ ಕಕ್ಷೆಗಳಿಗೆ ಬಿಡುಗಡೆ ಮಾಡುವ ಸಲುವಾಗಿ ಈ ಉಡಾವಣಾ ವಾಹನವನ್ನು ೧೯೯೩ರಲ್ಲಿ ವಿನ್ಯಾಸಗೊಳಿಸಿತು. ಪಿ.ಎಸ್.ಎಲ್.ವಿ ಯ ಆಗಮನದ ಮುನ್ನ ಈ ಸೌಕರ್ಯ ರಷ್ಯಾದಿಂದ ಮಾತ್ರ ವಾಣಿಜ್ಯಿಕವಾಗಿ ಲಭ್ಯವಿತ್ತು.

ಪಿ.ಎಸ್.ಎಲ್.ವಿ ಕೊಂಡೊಯ್ದ ಕೆಲವು ಗಮನರ್ಹ ಉಪಗ್ರಹಗಳೆಂದರೆ ಭಾರತದ ಮೊದಲನೆಯ ಲೂನಾರ್ ಪ್ರೋಬ್ ಆದಂತಹ ಚಂದ್ರಯಾನ-೧, ಭಾರತದ ಪ್ರಥಮ ಅಂತರಗ್ರಹ ಸಂಶೋಧನಾ ಉಪಗ್ರಹವಾದ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ) ಮತ್ತು ಭಾರತದ ಮೊದಲನೆಯ ಬಾಹ್ಯಾಕಾಶ ವೀಕ್ಷಣಾಲಯವಾದ ಆಸ್ಟ್ರೋಸ್ಯಾಟ್.

ಭಾರತೀಯ ಉಪಗ್ರಹಗಳ ಜೊತೆಗೆ, ವಿವಿದ ದೇಶಗಳ ಪೇಲೋಡ್ ಗಳನ್ನು ಕೊಂಡೊಯ್ಯುವಲ್ಲಿ ಪಿ.ಎಸ್.ಎಲ್.ವಿ ಯಶಸ್ವಿಯಾಗಿದೆ. ಇದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ, ೨೦೧೭ರ ಫೆಬ್ರವರಿ ೧೫ರಂದು ಹಾರಿಸಿದ ಪಿ.ಎಸ್.ಎಲ್.ವಿ ಸಿ೩೭ (PSLV C37). ಇದರಲ್ಲಿ ಒಂದೆ ಬಾರಿಗೆ ೧೦೪ ಉಪಗ್ರಹಗಳನ್ನು ಸೂರ್ಯ ಸಮಕಾಲಿಕ ಕಕ್ಷೆಗೆ (sun synchronous orbit) ಕಳುಹಿಸಿ, ದಾಖಲೆ ಮಾಡಿದೆ.

ಪ್ರಗತಿ ಬದಲಾಯಿಸಿ

೬೦೦ ಕೆ.ಜಿ. ತೂಕವನ್ನು ೫೫೦ ಕಿ.ಮೀ. ಸೂರ್ಯ-ಸಮಕಾಲಿಕ ಕಕ್ಷೆಗೆ (Sun Synchronous orbit) ತಲುಪಿಸುವ ಸಾಮರ್ಥ್ಯ ಹೊಂದಿರುವ ವಾಹನವನ್ನು ತಯಾರಿಸಲು ೧೯೭೮ರಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸಂಶೋಧನೆ ಪ್ರಾರಂಭವಾಯಿತು. ೩೫ ಪ್ರಸ್ತಾವಿತ ಸಂರಚನೆಯಗಳಲ್ಲಿ, ನಾಲ್ಕನ್ನು ಆಯ್ಕೆ ಮಾಡಲಾಯಿತು ಮತ್ತು ೧೯೮೦ ರ ವೇಳೆಗೆ, ಒಂದು ಕೋರ್ ಬೂಸ್ಟರ್- ಎಸ್೮೦ (core booster-S80) ನಲ್ಲಿ ಎರಡು ಸ್ಟ್ರಾಪ್-ಆನ್ (strap-ons) ಗಳೊಂದಿಗೆ ೩೦ ಟನ್ ನೋದಕ ಲೋಡ್ - ಎಲ್೩೦ (Propellant load - L30) ಮತ್ತು ಪೆರಿಗೀ-ಅಪೋಗಿ ಸಿಸ್ಟಮ್ (Perigee-Apogee system) ಎಂಬ ಮೇಲ್ಬಾಗದ ಹಂತವನ್ನು ಹೊಂದಿರುವ ಸಂರಚನೆಯನ್ನು ಪರಿಗಣಿಸಲಾಯಿತು.

ಪಿ.ಎಸ್.ಎಲ್.ವಿಯ ಮೊದಲ ಉಡಾವಣೆ ಸೆಪ್ಟೆಂಬರ್ ೨೦, ೧೯೯೩ರಲ್ಲಿ ನಡೆಯಿತು. ಈ ವೇಳೆ, ಮೊದಲ ಮತ್ತು ಎರಡನೆಯ ಹಂತದಲ್ಲಿ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿತು. ಆದರೆ ವರ್ತನೆ ನಿಯಂತ್ರಣ ಸಮಸ್ಯೆಯಿಂದಾಗಿ (attitude problems) ಎರಡನೇ ಮತ್ತು ಮೂರನೇ ಹಂತದ ನಡುವೆ ಸಂಘರ್ಷವಾಯಿತು. ಆದ ಕಾರಣ, ಪೇಲೋಡ್ ಕಕ್ಷೆ ತಲುಪುವಲ್ಲಿ ವಿಫಲಗೊಂಡಿತು. ಇದಾದ ನಂತರ ಪಿ.ಎಸ್.ಎಲ್.ವಿ ತನ್ನ ಎರಡನೇ ಉಡಾವಣೆಯನ್ನು ೧೯೯೪ರಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿತು. ಪೇಲೋಡ್ ತಲುಪಬೇಕಾದ ಕಕ್ಷೆಗಿಂತ ಕೆಳಗೆ ಇಳಿಸಿದ ಕಾರಣದಿಂದ, ೧೯೯೭ರಲ್ಲಿ ನಡೆದ ಪಿ.ಎಸ್.ಎಲ್.ವಿಯ ನಾಲ್ಕನೇ ಉಡಾವಣೆ ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ. ನವೆಂಬರ್ ೨೦೧೪ರ ವೇಳೆಗೆ, ಪಿ.ಎಸ್.ಎಲ್.ವಿ ೩೪ ಯಶಸ್ವಿ ಉಡಾವಣೆಗಳನ್ನು ನಡೆಸಿದೆ. (ಆದರೆ ಲಾಂಚ್-೪೧: ಆಗಸ್ಟ್ ೨೦೧೭ ರಂದು ಹಾರಿಸಿದ ಪಿ.ಎಸ್.ಎಲ್.ವಿ - ಸಿ೩೯ (PSLV - C39) ವಿಫಲಗೊಂಡಿತು).

 
ಮಂಗಳಯಾನವನ್ನು ಕೊಂಡೊಯುತ್ತುರವ ಪಿ.ಎಸ್.ಎಲ್.ವಿ ಸಿ-೨೫

ಭಾರತೀಯ ಹಾಗು ವಿದೇಶಿ ಉಪಗ್ರಹಗಳನ್ನು ಲೊ ಅರ್ಥ್ ಓರ್ಬಿಟ್ (Low Earth Orbit-LEO) ಇಗೆ ಕಳುಹಿಸುವುದರಲ್ಲಿ ಮಹತ್ವದ ಪಾತ್ರವಹಿಸಿದೆ. ಪ್ರತಿ ಆವೃತ್ತಿಯೊಂದಿಗೆ ಒತ್ತಡ, ದಕ್ಷತೆ ಮತ್ತು ತೂಕದ ಕ್ಷೇತ್ರದಲ್ಲಿ ಹಲವಾರು ಬದಲಾವಣೆಯಾಗಿದೆ.

ವಾಹನ ವಿವರ ಬದಲಾಯಿಸಿ

ಪಿ.ಎಸ್.ಎಲ್.ವಿಯಲ್ಲಿ ನಾಲ್ಕು ಹಂತಗಳಲ್ಲಿ ಘನ ನೋದಕ (solid propulsion system) ಮತ್ತು ದ್ರವ ನೋದಕ (liquid propulsion system) ತಂತ್ರಜ್ಞಾನವನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ಮೊದಲನೇಯ ಹಂತದಲ್ಲಿ, ೧೩೮ ಟನ್ ಹೈಡ್ರಾಕ್ಸಿಲ್- ಟರ್ಮಿನೆಟಡ್ ಪಾಲಿಬ್ಯೂಟಡಯೀನ್ - ಬೌಂಡ್ (hydroxyl-terminated polybutadiene-bound) ನೋದಕವನ್ನು ಹೊಂದಿರುವ ಸಾಲಿಡ್ ರಾಕೆಟ್ ಬೂಸ್ಟರ್ (solid rocket booster) ಗಳನ್ನು ಬಳಸಲಾಗುತ್ತದೆ. ಇದರಿಂದ ೪೮೦೦ ಕಿಲೋನ್ಯೂಟನ್ನಿನಷ್ಟು ಒತ್ತಡ ದೊರೆಯುತ್ತದೆ. ೨.೮ ಮಿ ವ್ಯಾಸವುಳ್ಳ ಮೋಟರ್ ಕೇಸ್ ಅನ್ನು ಮರಾಗಿಂಗ್ ಸ್ಟೀಲ್ (maraging steel) ನಿಂದ ಮಾಡಲಾಗಿದ್ದು ಇದರ ತೂಕ ೩೦,೨೦೦ ಕಿಲೋಗ್ರಾಮ್ ಗಳು. ಮೊದಲ ಹಂತದ ಹಾರಾಟದಲ್ಲಿ, ಸೆಕೆಂಡರಿ ಇಂಜೆಕ್ಷನ್ ತ್ರಸ್ಟ್ ವೆಕ್ಟರ್ ನಿಯಂತ್ರಣ ತಂತ್ರಜ್ಞಾನ (Secondary Injection Thrust Vector Control System (SITVC))ದಿಂದ ಪಿಚ್ಚ್ (pitch) ಮತ್ತು ಯಾವ್ (yaw)ಅನ್ನು ನಿಯಂತ್ರಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ, ಅಸಮ್ಮಿತ ಒತ್ತಡ (assymetric thrust) ಪಡೆಯಲು, ಸ್ಟ್ರಾನ್ಷಿಯಂ ಪರ್ ಕ್ಲೋರೇಟ್ ದ್ರಾವಣವನ್ನು ( aqueous solution of strontium perchlorate ) ನಾಜ಼ಲ್ (nozzle)ನ ಮೂಲಕ ಇಂಜೆಕ್ಟ್ (inject) ಮಾಡಲಾಗುತ್ತದೆ. ಈ ದ್ರಾವಣವನ್ನು ಎರಡು ಸಿಲಿಂಡರಾಕಾರದ ಅಲ್ಯೂಮಿನಿಯಂ ಟ್ಯಾಂಕ್ ಗಳಲ್ಲಿ ತುಂಬಿಸಿ ಸಾಲಿಡ್ ರಾಕೆಟ್ ಮೋಟರ್ (solid rocket motor)ಗೆ ಸ್ಟ್ರಾಪ್ ಮಾಡಿ ಸಾರಜನಕದಿಂದ ಒತ್ತಡಕ್ಕೇರಿಸಲಾಗುತ್ತದೆ (pressurized with nitrogen).[೨]

ಉಡಾವಣೆಗಳ ಇತಿಹಾಸ ಬದಲಾಯಿಸಿ

ಪರ್ಯಾಯಗಳು ಉಡಾವಣೆ ಯಶಸ್ಸು ವೈಫಲ್ಯ ಭಾಗಶಃ ವೈಫಲ್ಯ
ಪಿ.ಎಸ್.ಎಲ್.ವಿ-ಜಿ (ಸ್ಟ್ಯಾಂಡರ್ಡ್) ೧೨ ೧೦
ಪಿ.ಎಸ್.ಎಲ್.ವಿ-ಸಿ.ಎ (ಕೋರ್ ಅಲೋನ್-core alone) ೧೩ ೧೩
ಪಿ.ಎಸ್.ಎಲ್.ವಿ-ಎಕ್ಸ್.ಎಲ್ (ಎಕ್ಸ್ಟೆಂಡೆಡ್) ೨೦ ೧೯
ಪಿ.ಎಸ್.ಎಲ್.ವಿ-ಡಿ.ಎಲ್
ನವೆಂಬರ್ ೨೦೧೮ ರ ತನಕ ಒಟ್ಟು ಉಡಾವಣೆಗಳು ೪೬ ೪೩

ಉಲ್ಲೇಖಗಳು ಬದಲಾಯಿಸಿ

  1. https://en.wikipedia.org/wiki/Polar_Satellite_Launch_Vehicle
  2. https://www.isro.gov.in/launchers/pslv