ಸದಸ್ಯ:Sharath alloy/sandbox
ರಾಣಿ ಲಕ್ಷ್ಮೀಬಾಯಿಯವರು ೧೯ ನವೆಂಬರ್ ೧೮೨೯ರಲ್ಲಿ ಕಾಶಿ (ವಾರಣಾಸಿ)ಯಲ್ಲಿ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಅವರ ನಿಜವಾದ ಹೆಸರಾಗಿದ್ದು ಅವರನ್ನು ಮನು ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅವರ ತಾಯಿ ಲಕ್ಷ್ಮೀಬಾಯಿ ೪ ವರ್ಷದವರಾಗಿರುವಾಗ ಮರಣಹೋಂದಿದರು. ಅವರ ಶಿಕ್ಷಣ ಮನೆಯಲ್ಲಿ ನಡೆಯಿತು. ತಂದೆ ಮೊರೋಪಂತ್ ತಂಬೆಯವರು ಪೆಶ್ವೆಯವರ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಹಾಗು ಮುಂದೆ ಲಕ್ಷ್ಮೀಬಾಯಿಯವರಿಗೆ ೧೩ ವರ್ಷದವರಾಗಿರುವಾಗ ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರ ಆಸ್ಥಾನದಲ್ಲಿ ಸೇರಿದರು. ಮುಂದೆ ಲಕ್ಷ್ಮೀಬಾಯಿಯವರಿಗೆ ೧೪ ವರ್ಷವಾದಾಗ ಮಹಾರಾಜ ರಾಜ ಬಾಲಗಂಗಾಧರ ರಾವ್ಅವರನ್ನು ಮದುವೆಯಾದರು[೧] ಹಾಗು ಅವರ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು. ಲಕ್ಷ್ಮೀಬಾಯಿ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆ ಯನ್ನು ತನ್ನ ಸ್ವಂತಿಕೆಯಿಂದ ಕಲಿತರು ಹಾಗು ಆಸ್ಥಾನದ ತನ್ನ ಸ್ತ್ರೀಮಿತ್ರರನ್ನು ಸೇರಿಸಿ ಚಿಕ್ಕ ಸೈನ್ಯವನ್ನು ಕಟ್ಟಿದರು[೨]. ೧೮೫೧ರಲ್ಲಿ ಲಕ್ಷ್ಮೀಬಾಯಿಯವರು ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ೪ ತಿಂಗಳಿರುವಾಗ ಮರಣವಪ್ಪಿತು[೩]. ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ಅವರನ್ನು ದತ್ತು ಪಡೆದರು. ಆದರೆ ತನ್ನ ಮಗನ ಸಾವಿನ ದುಃಖದಿಂದ ಹೊರಬರಲಾರದ ಮಹಾರಾಜ ರಾಜ ಬಾಲಗಂಗಾಧರ ರಾವ್ ೨೧, ನವೆಂಬರ್ ೧೮೫೩ ರಲ್ಲಿ ಹೃದಯಾಘಾತದಿಂದ ಸಾವಿಗೀಡಾದರು. ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿಅಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಲಾರ್ಡ್ ಡಾಲ್‌ಹೌಸಿಯು ದಾಮೋದರ ರಾವ್ ಅವರಿಗೆ ರಾಜಾಭಿಶೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್‌ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ ರುಪಾಯಿ ೬೦,೦೦೦ ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೊಟೆಯನ್ನು ಬಿಟ್ಟು ಹೊಗಲು ಆಜ್ಞೆ ಮಾಡಿದನು. ೧೮೫೭ರ ಮಹಾದಂಗೆ[ಬದಲಾಯಿಸಿ] ಝಾನ್ಸಿಯಲ್ಲಿ ಇದೆಲ್ಲಾ ನಡೆಯುತ್ತಿರುವಾಗ ಮೇ ೧೦, ೧೮೫೭ರಲ್ಲಿ ಮೀರತ್ನಲ್ಲಿ ಸಿಪಾಯಿ ಬಂಡಾಯ ಶುರುವಾಯಿತು. ಇದು ಬ್ರಿಟೀಷ್ ಸಾಮ್ರಾಜ್ಯದ ವಿರುದ್ದದ ದಂಗೆಯ ಪ್ರಥಮ ಅದ್ಯಾಯ ಎನ್ನಲಾಗುತ್ತದೆ. ಸಿಪಾಯಿಗಳ ಮನದಲ್ಲಿ ಅವರು ಉಪಯೋಗಿಸುವ ತೋಪಿಗೆ ದನದ ಅಥವಾ ಹಂದಿಯ ಕೊಬ್ಬನ್ನು ಸವರಿದ್ದಾರೆಯೆಂದು ತಿಳಿದು ಅದೇ ದಂಗೆಗೆ ಮುಖ್ಯಕಾರಣವಾಯಿತು. ಮುಸ್ಲಿಮರಿಗೆ ಹಂದಿ ನಿಷೇಧವಾಗಿದ್ದರಿಂದ ಹಾಗೂ ಹಿಂದೂಗಳಿಗೆ ದನ ಪವಿತ್ರವಾದುದರಿಂದ ಸೈನಿಕರು ದಂಗೆಯೆದ್ದರು. ದಂಗೆಯಲ್ಲಿ ಬಹಳಸ್ಟು ಬ್ರಿಟಿಷ್ ಸೈನಿಕರು ಹಾಗೂ ಅಧಿಕಾರಿಗಳು ಸಾವಿಗೀಡಾದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಈ ದಂಗೆಯನ್ನು ಆದಸ್ಟು ಬೇಗ ನಿಲ್ಲಿಸಲು ತಯಾರಿ ನಡೆಸಿದರು. ೧೮೫೭ರಲ್ಲಿ ಪ್ರಥಮ ಸ್ವಾತಂತ್ರ ಸಂಗ್ರಾಮ ಪ್ರಾರಂಭವಾಯಿತು ಹಾಗೂ ಭಾರತದ ಆದ್ಯಂತವಾಗಿ ಹರಡಿತು. ಇದೇ ಸಮಯದಲ್ಲಿ ಬ್ರಿಟಿಷರಿಗೆ ದೇಶದ ಇತರೆ ಪ್ರದೇಶಗಳಬಗ್ಗೆ ಹೆಚ್ಚು ಜಾಗರೂಕರಾಗಬೇಕಾದ್ದರಿಂದಾಗಿ ಝಾನ್ಸಿಯನ್ನು ರಾಣಿ ಲಕ್ಷ್ಮೀಬಾಯಿಯವರ ಆಳ್ವಿಕೆಗೆ ಬಿಟ್ಟರು. ಇದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ಶ್ರೇಷ್ಠತೆಯು ರುಜುವಾತಾಯಿತು. ರಾಣಿ ಲಕ್ಷ್ಮೀಬಾಯಿಯವರ ನಾಯಕತ್ವದಲ್ಲಿ ಝಾನ್ಸಿಯಲ್ಲಿ ಶಾಂತಿ ಹಾಗು ನೆಮ್ಮದಿ ನೆಲೆಸಿ ಅವರೊಬ್ಬ ಉತ್ತಮ ನಾಯಕಿ ಎಂದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಸಹಿತ ಝಾನ್ಸಿಯ ಪ್ರಜೆಗಳ ಮನದಲ್ಲಿ ನೆಲೆಸಿದರು. ಈ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯವರು ಬ್ರಿಟಿಷರಿಗೆ ವಿರುದ್ದವಾಗಿ ಹೋಗುವ ಯೋಚನೆಯಲ್ಲಿ ಇರಲಿಲ್ಲ, ಆದರೆ ಸರ್ ಹುಘ್ ರೋಸ್ ಅವರ ನೇತ್ರತ್ವದ ಸೈನ್ಯ ಝಾನ್ಸಿಯನ್ನು ೨೮ ಮಾರ್ಚ ೧೮೫೮ರಂದು ಮುತ್ತಿಗೆಹಾಕ್ಕಿದ್ದರಿಂದ ರಾಣಿ ಲಕ್ಷ್ಮೀಬಾಯಿಯವರ ಬ್ರಿಟಿಷರ ಬಗೆಗಿನ ನಿಲುವು ಬದಲಾಯಿತು. ರಾಣಿ ಲಕ್ಷ್ಮೀಬಾಯಿ ಹಾಗೂ ಅವರ ನಿಷ್ಠಾವಂತ ಸೈನಿಕರು ಶರಣಾಗಲು ಒಪ್ಪಲಿಲ್ಲ. ೨ ವಾರಗಳ ವರೆಗೆ ಉಗ್ರ ಹೊರಾಟ ನಡೆಸಿದರು. ಝಾನ್ಸಿಯ ಸ್ತ್ರೀಸೈನಿಕರು ಕೂಡಾ ಯುದ್ಧಸಾಮಗ್ರಿ ಹಾಗೂ ಸೇನಾನಿಗಳಿಗೆ ಭೋಜನದ ವ್ಯವಸ್ತೆ ಮಾಡುತ್ತಿದ್ದರು. ರಾಣಿ ಲಕ್ಷ್ಮೀಬಾಯಿ ಸ್ವತಃ ಸೈನಿಕರ ನಡುವಿನ್ನಲ್ಲಿ ಓಡಾಡಿಕೊಂದು ಅವರನ್ನು ಹುರಿದುಂಬಿಸಿ ಬಹಳ ದಿಟ್ಟತನದಿಂದ ಹೋರಾಡಿದಳು. ೨೦,೦೦೦ ಜನರ ಸೇನೆಯನ್ನು ದಂಗೆಕೋರ ತಾತ್ಯಾ ಟೊಪಿ ಮುಖಂಡನಾಗಿ ಯುದ್ದ ಮಾಡಿ ರಾಣಿ ಲಕ್ಷ್ಮೀಬಾಯಿ ಹಾಗೂ ಝಾನ್ಸಿಯ ಸ್ವತಂತ್ರವಾಗಲು ಸಹಾಯ ಮಾಡಿದ. ಆದರೆ ಕೇವಲ ೧೫೪೦ರ ಸಂಖ್ಯೆಯಲ್ಲಿದ್ದ ಬ್ರಿಟಿಷ್ ಸೈನಿಕರು ೩೧, ಮಾರ್ಚ್ ನಂದು ಆಕ್ರಮಣ ಮಾಡಿದಾಗ ಅಸ್ಟೇನು ಅನುಭವಿ ಅಲ್ಲದ ಝಾನ್ಸಿಯ ಸೈನಿಕರಿಂದ ೩ದಿನಗಳಿಂದ ಜಾಸ್ತಿ ಹೊರಾಟ ನಡೆಸಲಗಲಿಲ್ಲ, ಹಾಗೂ ಬ್ರಿಟಿಷ್ ಸೈನಿಕರು ಝಾನ್ಸಿ ನಗರವನ್ನು ಮುತ್ತಿಗೆ ಹಾಕಿದರು. ಅದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿ ಕೋಟೆಯ ಗೊಡೆಯನ್ನು ರಾತ್ರಿಯಲ್ಲಿ ತನ್ನ ಕೆಲವು ಮಹಿಳಾ ಸೈನಿಕರು ಹಾಗೂ ರಕ್ಷಕರ ಜೊತೆಗೆ ಸೇರಿ ತಪ್ಪಿಸಿಕೊಂಡಳು[೪] . ತನ್ನ ಮಗ ದಾಮೋದರ ರಾವ್ ಜೊತೆಗೆ ಸೇರಿ ಕಲ್ಪಿ ಯೆಂಬಲ್ಲಿ ತಲೆಮರೆಸಿ ಕೊಂಡಳು. ಹಾಗೂ ಅಲ್ಲಿಯೇ ತಾತ್ಯಾ ಟೊಪಿ ಹಾಗೂ ಇತರ ದಂಗೆಕೋರರ ಜೊತೆಗೆ ತನ್ನ ಸೈನ್ಯವನ್ನು ಸೇರಿಸಿದಳು. ರಾಣಿ ಹಾಗೂ ತಾತ್ಯಾ ಟೊಪಿ ಗ್ವಾಲಿಯರ್ಗೆ ಹೋಗಿ ಅಲ್ಲಿನ ಮಹಾರಾಜನ ಸೈನಿಕರನ್ನು ಇವರ ದಂಗೆಕೋರರ ಗುಂಪು ಸೋಲಿಸಿತು. ನಂತರ ಅವರು ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೋಂಡರು. ಆದರೆ ಯುದ್ದದ ೨ನೆಯ ದಿನ ಅಂದರೆ ೧೮, ಜೂನ್ ೧೮೫೮ ರಂದು ರಾಣಿ ಲಕ್ಷ್ಮೀಬಾಯಿ ಸಾವನ್ನಪ್ಪಿದರು. ಬ್ರಿಟಿಷರು ೩ದಿನಗಳ ನಂತರ ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೋಂಡರು. ಸರ್ ಹುಘ್ ರೋಸ್ ತಮ್ಮ ಯುದ್ದದ ಟಿಪ್ಪಣಿಯಲ್ಲಿ ರಾಣಿಯನ್ನು "ಅತೀ ಸುಂದರಿ, ದೃಢನಿಷ್ಠೆ ಹಾಗು ಅತೀ ಬುದ್ದಿವಂತೆ" ಹಾಗೂ "ಅಪಾಯಕಾರಿ ದಂಗೆಕೋರ ನಾಯಕಿ" ಎಂದು ವರ್ಣಿಸಿದ್ದಾನೆ[೫]. ರಾಣಿಯ ತಂದೆ ಮೊರೋಪಂತ್ ತಂಬೆಯವರನ್ನು ಝಾನ್ಸಿಯ ಸೋಲಿನ ಕೆಲವೇ ದಿನಗಳನಂತರ ಸೆರೆಹಿಡಿಯಲಾಯಿತು ಹಾಗೂ ಗಲ್ಲಿಗೇರಿಸಲಾಯಿತು. ಗೌರವ[ಬದಲಾಯಿಸಿ]