ಡಿ.ಸಿ ಡೈನಮೊ

ಡಿ.ಸಿ ಡೈನಮೋದಲ್ಲಿ ಯಾವಾಗಲೂ ಪ್ರೇರಿತ ವಿದ್ಯುತ್ ಪ್ರವಾಹವು ಒಂದೇ ದಿಕ್ಕಿನಲ್ಲಿ ಪ್ರವಹಿಸುತ್ತಿರುತ್ತದೆ. ಈ ಉದ್ದೇಶಕ್ಕಾಗಿ ಎ.ಸಿ ಡೈನಮೋದಲ್ಲಿಯ ಜಾರು ಉಂಗುರಗಳನ್ನು ಅನುಕೂಲಕ್ಕೋಸ್ಕರ ಪರಿವರ್ತಿಸಲಾಗಿದೆ. ಎರಡು ಸೀಳಿದ ಉಂಗುರಗಳನ್ನು ಬಳಸುತ್ತೇವೆ.

ಬಿ೧, ಬಿ೨ ಕುಂಚಗಳು ಸೀಳು ಉಂಗುರಗಳ ಎರಡು ಭಾಗಗಳ ಸಂಪರ್ಕ ಹೊಂದಿರುತ್ತದೆ. ಸುರುಳಿಯ ಮೊದಲ ಅರ್ಧ ಸುತ್ತಿನಲ್ಲಿ ಸೀಳು ಉಂಗುರ ಎಸ್೧, ಕುಂಚ ಬಿ೧ ದೊಂದಿಗೆ ಸಂಪರ್ಕವನ್ನು ಮತ್ತು ಸೀಳು ಉಂಗುರ ಎಸ್೨, ಕುಂಚ ಬಿ೨ ದೊಂದಿಗೆ ಸಂಪರ್ಕ ಹೊಂದುತ್ತವೆ. ಮುಂದಿನ ಅರ್ಧ ಸುತ್ತಿನಲ್ಲಿ ಎಸ್ ೧, ಬಿ೨ ದೊಂದಿಗೆ ಹಾಗೂ ಎಸ್೨ ಬಿ೧ ದೊಂದಿಗೆ ಸಂಪರ್ಕ ಹೊಂದುತ್ತವೆ. ದಿಕ್ಪರಿವರ್ತಕದ ಈ ಕ್ರಿಯೆಯು ಹೊರಮಂಡಲದ ಜೋಡಣೆಯನ್ನು ವಿಲೋಮಗೊಳಿಸುತ್ತದೆ ಕಾರಣ ವಿದ್ಯುತ್ ಪ್ರವಾಹದ ದಿಕ್ಕು ಬದಲಾವಣೆಯಾಗದೇ ಒಂದೇ ದಿಕ್ಕಿನಲ್ಲಿ ಪ್ರವಹಿಸುತ್ತದೆ. ಮೊದಲ ಅರ್ಧ ಸುತ್ತಿನಲ್ಲಿ ವಿದ್ಯುತ್ ಸುರುಳಿಯಲ್ಲಿ ಎಬಿಸಿಡಿ ದಿಕ್ಕಿನಲ್ಲಿ ಮತ್ತು ಹೊರಮಂಡಲದಲ್ಲಿ ಬಿ೨, ಎಲ್ ಬಿ೧ ದಿಕ್ಕಿನಲ್ಲಿ ಪ್ರವಹಿಸುತ್ತದೆ. ಆದರೆ ವಿದ್ಯುತ್ತಿನ ಪ್ರಮಾಣವು ಸ್ಥಿರವಾಗಿರುವುದಿಲ್ಲ. ಶೂನ್ಯದಿಂದ ಪ್ರಾರಂಭವಾಗಿ ಗರಿಷ್ಟ ಮಟ್ಟ ತಲುಪಿ ಮತ್ತೆ ಶೂನ್ಯವಾಗುತ್ತದೆ. ಆವರ್ತನೆ ಅದೇ ದಿಕ್ಕಿನಲ್ಲಿ ಪುನರಾವರ್ತನೆಗೊಳ್ಳುತ್ತದೆ.


ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನಕ್ಕೆ ಮೋಟಾರ್ ಎನ್ನುತ್ತಾರೆ. ಡಿ.ಸಿ ಡೈನಮೊದಲ್ಲಿ ಲ್ಯಾಂಪಿನ ಬದಲಾಗಿ ನಿರ್ದಿಷ್ಟ ಮೋಲ್ಟೇಜಿನ ನೇರ ವಿದ್ಯುತ್ ಆಕರವನ್ನಿರಿಸಿದರೆ ಸುರುಳಿಯು ತಿರುಗಲು ಪ್ರಾರಂಭಿಸುತ್ತದೆ.

ಕಾಂತ ಕ್ಷೇತ್ರದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ವಾಹಕವನ್ನಿರಿಸಿದರೆ ಅದು ಯಾಂತ್ರಿಕ ಬಲವನ್ನು ಗಳಿಸುತ್ತದೆ. ಎಂಬ ತತ್ವದ ಆಧಾರದ ಮೇಲೆ ಮೋಟಾರ್ ಕಾರ್ಯನಿರ್ವಹಿಸುತ್ತದೆ. ಈ ತತ್ವಕ್ಕೆ ಮೋಟಾರ್ ನಿಯಮ ಎನ್ನುತ್ತಾರೆ. ಮಕ್ಕಳ ಆಟಿಕೆಗಳಲ್ಲಿ ಡಿ.ಸಿ ಮೋಟಾರನ್ನು ಬಳಸುತ್ತಾರೆ.

ಫ್ಯಾನ್, ಮಿಕ್ಸರ್, ಗ್ರೈಂಡರ್, ವಾಶಿಂಗ್ ಮಶಿನ್ ಮುಂತಾದ ವಿದ್ಯುತ್ ಉಪಕರಣಗಳು ಪರ್ಯಾಯ ವಿದ್ಯುತ್ತಿನ ಆಕರದ ಸಹಾಯದಿಂದ ಕಾರ್ಯ ನಿರ್ವಹಿಸುತ್ತವೆ. ಎ.ಸಿ ಮೋಟಾರ್ ವಿದ್ಯುತ್ ಕಾಂತವುಳ್ಳದ್ದು ಮತ್ತು ವಿದ್ಯುತ್ ಪ್ರವಾಹ ಹಾಗೂ ಕಾಂತ ಕ್ಷೇತ್ರಗಳ ದಿಕ್ಕನ್ನು ಏಕಕಾಲಕ್ಕೆ, ಆರ್ಮೇಚರಿನ ಪ್ರತಿ ಅರ್ಧಸುತ್ತಿಗೊಮ್ಮೆ ತಿರುಗಿಸಲು ದಿಕ್ಪರಿವರ್ತಕಗಳನ್ನು ಬಳಸುತ್ತಾರೆ.