ಪ್ರಮೋದ ಕೆ.ಸುವರ್ಣ

ಪ್ರಮೋದ ಕೆ.ಸುವರ್ಣ ತುಳುನಾಡಿನ ಪ್ರಸಿದ್ದ ಕವಯಿತ್ರಿ.ಬಾಲ್ಯದಿಂದಲೇ ತಮ್ಮ ತಂದೆಯವರ ಪ್ರೋತ್ಸಾಹದಿಂದ ಸಾಹಿತ್ಯ ಹಾಗೂ ಭಜನೆಯಲ್ಲಿ ಆಸಕ್ತಿ ಹೊಂದಿ ಅವರ ಎದುರಿಗೆ ಭಜನೆಗಳನ್ನು ರಚಿಸಿ ಹಾಡಿ ಶಹಬ್ಬಾಸ್ ಅನ್ನಿಸಿಕೊಳ್ಳೊತ್ತಿದ್ದರು.

೧೯೩೫ ಸಪ್ಟೆಂಬರ್ ೧೫ರಂದು ಕಳವಾರು ನಾರಾಯಣ ಬಾಬು ಹಾಗೂ ರಾಧಾಬಾಯಿಯವರ ನಾಲ್ಕನೇ ಪುತ್ರಿಯಾಗಿ ಮಂಗಳೂರಿನ ಅತ್ತಾವರದಲ್ಲಿ ಜನಿಸಿದ ಪ್ರಮೋದರವರು ಆಧುನಿಕ ತುಳು ಕಾವ್ಯಗಳ ಪರಂಪರೆಗೆ ಹೊಸ ಹಾದಿಯನ್ನು ತೋರಿಸಿಕೊಟ್ಟವರು.

ಏಳನೇ ತರಗತಿಯಲ್ಲಿರುವಾಗಲೇ ಪ್ರಪ್ರಥಮವಾಗಿ 'ಸಿಕ್ಕಿಹಾಕಿಕೊಂಡಳಾ ತಾಯಿ ಬಲೆಯೊಳಗೆ'ಎಂಬ ಸಣ್ಣಕತೆಯನ್ನು ಬರೆದು ಅದು ಪತ್ರಿಕೆಯಲ್ಲಿ ಪ್ರಕಟವಾದಾಗ ಅತೀವ ಸಂತಸಗೊಂಡ ಪ್ರಮೋದರವರು ವಿದ್ಯಾಭ್ಯಾಸದ ಜೊತೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು.ಮುಂದೆ ಎಸ್.ಎಸ್.ಎಲ್.ಸಿಯಲ್ಲಿ ಇರುವಾಗಲೇ '