ಸದಸ್ಯ:Savithajoshi/ನನ್ನ ಪ್ರಯೋಗಪುಟ

ಭಾರತದ ನೂತನ ಶಿಕ್ಷಣ ನೀತಿ[೧] ಪ್ರಾಥಮಿಕ ಶಿಕ್ಷಣದ ಹಂತದಿಂದ ಮಾಧ್ಯಮಿಕ ಹಂತದವರೆಗೆ ಏಕರೂಪವಾದ ವ್ಯವಸ್ಥೆಯನ್ನು ತರುವುದು ಅಥವಾ ಈ ಹಂತದವರೆಗಿನ ಶಿಕ್ಷಣವನ್ನು ಸಾರ್ವತ್ರಿಕವಾಗಿಸುವುದು ನೂತನ ಶಿಕ್ಷಣನೀತಿಯ ಉದ್ದೇಶವಾಗಿದೆ. ನೂತನ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ೨೦೧೯ರಲ್ಲಿ ಸಿದ್ಧಪಡಿಸಲಾಯಿತು.Draft National Policy on Education 2019 ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಪ್ರತಿಪಾದನೆಗೆ ೨೦೨೦ರ ಜುಲಾಯಿ ತಿಂಗಳಿನಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು.

ನೂತನ ಶಿಕ್ಷಣ ನೀತಿಯ ಗುರಿಗಳು

  • ಹಾಲಿ ಅಸ್ತಿತ್ವದಲ್ಲಿರುವ ೧೦+೨ ಪದ್ಧತಿಯ ಶಿಕ್ಷಣದ ಬದಲಾಗಿ ೫+೩+೩+೪ ಮಾದರಿಯಲ್ಲಿ ಕಲಿಕೆಯ ಪ್ರಕ್ರಿಯೆಯನ್ನು ರೂಪಿಸುವುದು
  • ಎಲ್ಲ ಮಕ್ಕಳಿಗೂ ಏಕರೂಪವಾದ ಸಾರ್ವತ್ರಿಕ ಶಿಕ್ಷಣದ ಲಭ್ಯತೆ
  • ಸ್ಥಳೀಯ ಭಾಷೆ ಮತ್ತು ಕಲಿಕಾ ಮಾಧ್ಯಮಕ್ಕೆ ಬೆಂಬಲ.
  • ಬಹುಶಿಸ್ತೀಯ ಆಯ್ಕೆಯ ಸ್ವಾತಂತ್ರ್ಯವುಳ್ಳ ಸ್ನಾತಕ ಪದವಿ

National Education Policy 2020.==ಪ್ರಾಥಮಿಕ ಹಂತ==

ಪ್ರಾಥಮಿಕ ಶಿಕ್ಷಣ ಬದಲಾಯಿಸಿ

  • ಪ್ರಾಥಮಿಕ ಹಂತದಲ್ಲಿ ಅಕ್ಷರ ಕಲಿಕೆ ಮತ್ತು ಸಂಖ್ಯಾಂಶಗಳ ಕಲಿಕೆಗೆ ಹೆಚ್ಚು ಒತ್ತು ನೀಡುವುದು.
  • ಮಕ್ಕಳಲ್ಲಿ ಓದುವ ಅಭ್ಯಾಸವನ್ನು ರೂಢಿಸಲು ಗ್ರಂಥಾಲಯಗಳಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳ ಲಭ್ಯತೆ,ಶಾಲೆ ಮತ್ತು ಶಾಲೆಯ ಹೊರಗೆ ಗ್ರಂಥಾಲಯಗಳ ಸ್ಥಾಪನೆಗೆ ಆದ್ಯತೆ.
  • ಅರ್ಧಕ್ಕೇ ಶಾಲೆ ಬಿಡುವವರ ಪ್ರಮಾಣವನ್ನು ತಗ್ಗಿಸಿ,ಎಲ್ಲ ಹಂತಗಳ ಶಿಕ್ಷಣವು ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಿಕೆ.
  • ಅನಿವಾರ್ಯ ಕಾರಣಗಳಿಂದಾಗಿ ಶಾಲಾ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರಿಗೆ ರಾಷ್ಟೀಯ ಮುಕ್ತ ಶಾಲೆ ಮತ್ತು ರಾಜ್ಯಗಳ ಮುಕ್ತ ಶಾಲೆಗಳ ಬಲವರ್ಧನೆ.

ಉನ್ನತ ಶಿಕ್ಷಣ ಬದಲಾಯಿಸಿ

  • ಉತ್ತಮ ಗುಣಮಟ್ಟದ ಕಾಲೇಜುಗಳು, ವಿಶ್ಹವಿದ್ಯಾಲಯಗಳ ಸ್ಥಾಪನೆ.
  • ಬಹುಶಿಸ್ತೀಯ ಮತ್ತು ಸಮಗ್ರ ರೂಪದ ಅಧ್ಯಯನಕ್ಕೆ ಅವಕಾಶ.
  • ಉತ್ಸುಕತೆಯುಳ್ಳ,ಸಮರ್ಥರಾದ, ಗುರಿಸಾಧಕ ಅಧ್ಯಾಪಕರ ನೇಮಕಾತಿ.
  • ನಿರ್ಲಕ್ಷ್ಯಕ್ಕೊಳಗಾಗಿರುವ ವೃತ್ತಿಶಿಕ್ಷಣದ ಪುನಃಶ್ಚೇತನ
  • ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆಯ ಮೂಲಕ ಸಂಶೋಧನೆಗೆ ಆದ್ಯತೆ ನೀಡುವುದು.

=ಇತರ ಪ್ರಮುಖ ಅಂಶಗಳು ಬದಲಾಯಿಸಿ

  1. ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವಿಕೆ
  2. ವಯಸ್ಕರ ಶಿಕ್ಷಣ
  3. ಭಾರತೀಯ ಭಾಷೆಗಳು,ಕಲೆ ಮತ್ತು ಸಂಸ್ಕೃತಿಯ ಪ್ರವರ್ತನೆ
  4. ತಂತ್ರಜ್ಞಾನದ ಬಳಕೆ ಮತ್ತು ಅಳವಡಿಕೆ