ಸದಸ್ಯ:Savitha priyadarshini v/ನನ್ನ ಪ್ರಯೋಗಪುಟ

ನ್ಯೂಯಾರ್ಕ್ ಷೇರು ವಿನಿಮಯ
ಸಂಸ್ಥೆಯ ಪ್ರಕಾರಷೇರು ವಿನಿಮಯ
ಸ್ಥಾಪನೆಮೇ 17, 1792; 84960 ದಿನ ಗಳ ಹಿಂದೆ (1792-೦೫-17)
ನಿಷ್ಕ್ರಿಯಜೂನ್ನಿಂದ ಅಕ್ಟೋಬರ್ ೧೯೧೪
ಪ್ರಮುಖ ವ್ಯಕ್ತಿ(ಗಳು)ಜೆಫ್ರಿ ಸ್ಪ್ರೆಚರ್ ಅಧ್ಯಕ್ಷರು
ಮಾಲೀಕ(ರು)ಇಂಟರ್ಕಾಂಟಿನೆಂಟಲ್ ಎಕ್ಸ್ಚೇಂಜ್
ಜಾಲತಾಣnyse.com

ನ್ಯೂಯಾರ್ಕ್ ಷೇರು ವಿನಿಮಯ,೧೧ ವಾಲ್ ಸ್ಟ್ರೀಟ್, ಕೆಳ ಮ್ಯಾನ್ಹ್ಯಾಟನ್ ನ್ಯೂಯಾರ್ಕ್ ನಗರದಲ್ಲಿರುವ ಒಂದು ಅಮೆರಿಕನ್ ಷೇರು ವಿನಿಮಯ ಕೇಂದ್ರವಾಗಿದೆ.ಜೂನ್ ೨೦೧೬ ರ ವೇಳೆಗೆ $ ೧೯.೩ ಟ್ರಿಲಿಯನ್ ಮಾರುಕಟ್ಟೆ ಬಂಡವಾಳದಿಂದ ಇದು ವಿಶ್ವದ ದೊಡ್ಡ ಷೇರು ವಿನಿಮಯ ಕೇಂದ್ರವಾಗಿದೆ.[] ೨೦೧೩ ರಲ್ಲಿ ಇದರ ಸರಾಸರಿ ದೈನಂದಿನ ವ್ಯಾಪಾರದ ಮೌಲ್ಯವು $ ೧೬೯ ಶತಕೋಟಿಯಾಗಿತ್ತು.ಇದನ್ನು ಎನ್‌‌ವೈಎಸ್ಇ ಎಂದು ಸಂಕ್ಷೇಪಿಸಲಾಗಿದೆ.ಇದನು "ದಿ ಬಿಗ್ ಬೋರ್ಡ್" ಎಂಬ ಅಡ್ಡ ಹೆಸರಿನಿಂದ ಸಹ ಕರೆಯುತ್ತರೆ. ಎನ್‌‌ವೈಎಸ್ಇ ವ್ಯಾಪಾರ ನೆಲವು ೧೧ ವಾಲ್ ಸ್ಟ್ರೀಟ್ ನಲ್ಲಿ ನೆಲಸಿದೆ ಮತ್ತು ವ್ಯಾಪಾರವನ್ನು ಸುಲಭಗೊಳಿಸಲು ೨೧ ಕೊಠಡಿಗಳೊಂದಿಗೆ ಇದನ್ನು ಸಂಯೋಜಿಸಲಾಗಿದೆ.ಇದರ ಮುಖ್ಯ ಕಟ್ಟಡ ಮತ್ತು ೧೧ ವಾಲ್ ಸ್ಟ್ರೀಟ್ ಕಟ್ಟಡವನ್ನು ೧೯೭೮ ರಲ್ಲಿ ರಾಷ್ಟ್ರೀಯ ಐತಿಹಾಸಿಕ ಹೆಗ್ಗುರುತುಗಳಾಗಿ ನಿಯೋಜಿಸಲಾಯಿತು[] .ಎನ್‌‌ವೈಎಸ್ಇ ಇಂಟರ್ಕಾಂಟಿನೆಂಟಲ್ ಎಕ್ಸ್ಚೇಂಜ್, ಒಂದು ಅಮೆರಿಕನ್ ಕಂಪನಿಯ ಒಡೆತನದಲ್ಲಿದೆ.ಹಿಂದೆ, ಇದು ಯುರೋನೆಕ್ಸ್ಟ್ ಜೊತೆ ವಿಲೀನಗೊಳಿಸಿ ರೂಪುಗೊಂಡ ಎನ್‌‌ವೈಎಸ್ಇ ಯುರೋನೆಕ್ಸ್ಟ್ ಭಾಗವಾಗಿದೆ. ಎನ್‌‌ವೈಎಸ್ಇ ಮತ್ತು ಯುರೋನೆಕ್ಸ್ಟ್ ಈಗ ಇಂಟರ್ಕಾಂಟಿನೆಂಟಲ್ ಎಕ್ಸ್ಚೇಂಜಿನ ವಿಭಾಗಗಳಾಗಿ ಕಾರ್ಯ ನಿರ್ವಹಿಸುತಿವೆ.ಎನ್‌‌ವೈಎಸ್ಇಯು ಹಲವಾರು ಕರ್ತವ್ಯದ ವಂಚನೆ ಅಥವಾ ಉಲ್ಲಂಘನೆಯ ಮೊಕದ್ದಮೆಗಳ ವಿಷಯವಾಗಿದೆ.

ಇತಿಹಾಸ

ಬದಲಾಯಿಸಿ
 
೧೮೮೨ ರಲ್ಲಿ,೧೦-೧೨ ಬ್ರಾಡ್ ಸ್ಟ್ರೀಟಿನ ಸ್ಟಾಕ್ ಎಕ್ಸ್ಚೇಂಜ್.

ಪರಸ್ಪರ ನೇರವಾಗೀ ವ್ಯವಹರಿಸುವ ದಲ್ಲಾಳಿಗಳ ನಡುವೆ ನಡೆಯುವ ಭದ್ರತಾಪತ್ರಗಳ ವ್ಯಾಪಾರದಲ್ಲಿ ಅತ್ಯಂತ ಹಳೆಯ ದಾಖಲಿತ ಸಂಸ್ಥೆಯು ನ್ಯೂಯಾರ್ಕ್ನ ಬಟನ್ ವುಡ್ ಒಪ್ಪಂದಕ್ಕೆ ಪತ್ತೆಹಚ್ಚಲಾಗಿದೆ.ಹಿಂದೆ ಭದ್ರತಾ ಪತ್ರಗಳು ವಿನಿಮಯ ಮಧ್ಯಸ್ತನಾಗಿ ವರ್ತಿಸುವ ಹರಾಜುಗಾರರ ಮೂಲಕ ನಡೆಯುತ್ತಿದ್ದವು. ಆರಂಭದ ವ್ಯಾಪಾರವು ಹೆಚ್ಚಾಗಿ ಸರ್ಕಾರಿ ಭದ್ರತಾ ಪತ್ರಗಳು,ಕ್ರಾಂತಿಕಾರಿ ಯುದ್ಧದ ವಾರ್ ಬಾಂಡುಗಳು ಮತ್ತು ಫಸ್ಟ್ ಬ್ಯಾಂಕ್ ಅಫ್ ಯುನೈಟೆಡ್ ಸ್ಟೇಟ್ಸಿನ ಭದ್ರತಾ ಪತ್ರಗಳಾಗಿದ್ದವು. ೧೮೧೭ ರಲ್ಲಿ ಬಟನ್ ವುಡ್ ಒಪ್ಪಂದದಡಿ ನ್ಯೂಯಾರ್ಕ್ ಶೇರು ದಲ್ಲಾಳಿಗಳಿಗೆ ಹೊಸ ಸುಧಾರಣೆಗಳನು ಮಾಡಳಾಯಿತ್ತು.ನ್ಯೂಯಾರ್ಕ್ ಷೇರು ಮತ್ತು ವಿನಿಮಯ ಮಂಡಳಿ ಎಂದು ಮರು ರೂಪಿಸಿದ ನಂತರ ಬ್ರೋಕರ್ ಸಂಸ್ಥೆಯು ಭದ್ರತಾಪತ್ರಗಳ ವ್ಯಾಪಾರಕಾಗಿ ಪ್ರತ್ಯೇಕವಾಗಿ ಜಾಗವನ್ನು ಬಾಡಿಗೆ ತೆಗೆದುಕೊಳ್ಳಲು ಆರಂಭಿಸಿದರು.. ೧೮೧೭ ಮತ್ತು ೧೮೬೫ ನಡುವೆ ಹಲವಾರು ಸ್ಥಳಗಳು ಬಳಸಲಾಗುತ್ತಿತ್ತು ಅದನಂತರ ಪ್ರಸ್ತುತ ಸ್ಥಳವನ್ನು ಆಯ್ಕೆ ಮಾಡಲಾಯಿತು.

ಅಂತರ್ಯುದ್ಧವು ನ್ಯೂಯಾರ್ಕಿನಲ್ಲಿ ಭದ್ರತಾಪತ್ರಗಳ ಊಹಾತ್ಮಕ ವ್ಯಾಪಾರವನ್ನು ಉತ್ತೇಜಿಸಿತ್ತು.. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಭದ್ರತಾಪತ್ರಗಳ ವ್ಯಾಪಾರವು ಕ್ಷಿಪ್ರ ಬೆಳವಣಿಗೆಯನ್ನು ಕಂಡಿತು.೧೯೩೦ ರಲ್ಲಿ ಸಂಭವಿಸಿದ ಆರ್ಥಿಕ ಕುಸಿತದ ಮೂಲವಾದ ಪ್ರಮುಖ ಸ್ಟಾಕ್ ಮಾರ್ಕೆಟ್ ಕ್ರ್ಯಾಶ್ ನಂತರ ಭದ್ರತಾಪತ್ರಗಳ ವ್ಯಾಪಾರದಲ್ಲಿ ಸರ್ಕಾರದ ನಿಯಂತ್ರಣದ ಅಗತ್ಯವನ್ನು ಪರಿಗಣಿಸಲಾಯಿತು. ಎನ್‌‌ವೈಎಸ್ಇ ಹೆಚ್ಚುವರಿಯಾಗಿ ಸಾರ್ವಜನಿಕ ವಹಿವಾಟು ನಡೆಸುವ ಕಂಪನಿಯೆಂದು ಗುರುತಿಸಗೊಲಳ್ಳುವ ಉದ್ದೇಶದಿಂದ ಒಂದು ವ್ಯವಹಾರದಲ್ಲಿ, ಏಪ್ರಿಲ್ ೨೧,೨೦೦೫ ರಂದು ಪ್ರತಿಸ್ಪರ್ಧಿ ಆರ್ಚಿಪೆಲಾಗೋನ ಜೋತೆ ವಿಲೀನಗೊಳ್ಳಲು ಬಗೆಗಿನ ಯೋಜನೆಗಳನ್ನು ಪ್ರಕಟಿಸಿತು.ಎನ್‌‌ವೈಎಸ್ಇಯ ಆಡಳಿತ ಮಂಡಳಿಯು ಡಿಸೆಂಬರ್ ೬,೨೦೦೫ ರಂದು ಪ್ರತಿಸ್ಪರ್ಧಿ ಆರ್ಚಿಪೆಲಾಗೋನ ಜೋತೆ ವಿಲೀನಗೊಳ್ಳಲು, ಮತ್ತು ಎನ್‌‌ವೈಎಸ್ಇಯನ್ನು ಒಂದು ಲಾಭದ ಮತ್ತು ಸಾರ್ವಜನಿಕ ಕಂಪನಿಯನ್ನಾಗಿ ಮಾಡಲು ತಮ್ಮ ಮತವನ್ನು ನೀಡಿತು.ಇದು ಮಾರ್ಚ್ ೮,೨೦೦೬ ರಂದು ಎನ್‌‌ವೈಎಸ್ಇ ಗ್ರೂಪ್ ಎಂಬ ಹೆಸರಿನಲ್ಲಿ ವ್ಯಾಪಾರವನು ಆರಂಭಿಸಿತು.ವಾಲ್ ಸ್ಟ್ರೀಟ್ ಅಂತರರಾಷ್ಟ್ರೀಯ ಹಣಕಾಸಿನ ಚಟುವಟಿಕೆಗಳಿಗೆ ಪ್ರಮುಖ ಹಣ ಕೇಂದ್ರವಾಗಿ ಮತ್ತು ಸಗಟು ಹಣಕಾಸಿನ ಸೇವೆಗಳ ವರ್ತನೆಗೆ ಅಗ್ರಗಣ್ಯ ಅಮೇರಿಕಾದ ಸ್ಥಳವಾಗಿದೆ.ವಾಲ್ ಸ್ಟ್ರೀಟಿನ ಪ್ರಧಾನ ಕ್ಷೇತ್ರಗಳೆಂದದರೆ ಬಂಡವಾಳ ಉದ್ಯಮವು, ವಾಣಿಜ್ಯ ಬ್ಯಾಂಕ್ಯಿಂಗ್, ಆಸ್ತಿ ನಿರ್ವಹಣೆ, ಮತ್ತು ವಿಮೆ.

ಪ್ರಮುಖ ವ್ಯಕ್ತಿಗಳು

ಬದಲಾಯಿಸಿ

ಎನ್‌‌ವೈಎಸ್ಇ ಯುರೋನೆಕ್ಸ್ಟ್ ಕೇಂದ್ರವನು ಐ.ಸಿ.ಇ ೨೦೧೩ರಲ್ಲಿ ಸ್ವಾಧೀನಗೊಳಿಸುವ ಮೊದಲು, ಮಾರ್ಷ್ ಕಾರ್ಟರ್,ಎನ್‌‌ವೈಎಸ್ಇಯ ಅಧ್ಯಕ್ಷರಗಿ ಮತ್ತು ಡಂಕನ್ ನಿಡೆರಯುರ್ ಸಿ.ಇ.ಒ ಆಗಿ ಕಾರ್ಯನಿರ್ವಹಿಸುತ್ತಿದ್ದರು . ಪ್ರಸ್ತುತ ಜೆಫ್ರಿ ಸ್ಪ್ರೆಚರ್ ಅಧ್ಯಕ್ಷರಗಿದಾರೆ[].

ಗಮನಾರ್ಹ ಘಟನೆಗಳು

ಬದಲಾಯಿಸಿ

ಮೊದಲನೇ ಮಹಾಯುದ್ಧ (ಜುಲೈ ೩೧,೧೯೧೪) ಆರಂಭದ ನಂತರ ವಿನಿಮಯ ಮುಚ್ಚಲ್ಪಟ್ಟಿತ್ತು, ಆದರೆ ಆ ವರ್ಷದ ನವೆಂಬರ್ ೨೮ ರಂದು ಅದು ಭಾಗಶಃವಾಗಿ ಪುನಃ ತೆರೆಯಲಾಯಿತು ಮತ್ತು ಸಂಪೂರ್ಣವಾಗಿ ಸ್ಟಾಕ್ ವ್ಯಾಪಾರ ಪುನಃ ಡಿಸೆಂಬರ್ ಮಧ್ಯದಲ್ಲಿ ಶುರುವಯಿತ್ತು.ಸೆಪ್ಟೆಂಬರ್ ೧೬, ೧೯೨೦ ರಂದು, ಎನ್‌‌ವೈಎಸ್ಇಯ ಕಟ್ಟಡದ ಹೊರಗೆ ವಾಲ್ ಸ್ಟ್ರೀಟ್ನಲ್ಲಿ ಸ್ಫೋಟಿಸಿದ ಬಾಂಬ್, ೩೩ ಜನರ ಸಾವಿಗೆ ಮತ್ತು ೪೦೦ ಕ್ಕೂ ಹೆಚ್ಚು ಜನರ ಗಾಯಕ್ಕೆ ಕರಣವಾಯಿತ್ತು.ಅದರ ದುಷ್ಕರ್ಮಿಗಳು ಸಿಗಲಿಲ್ಲ.ಎನ್‌‌ವೈಎಸ್ಇ ಕಟ್ಟಡ , ಜೆಪಿ ಮೋರ್ಗಾನ್ ಕಟ್ಟಡ ಮತ್ತು ಹತ್ತಿರದ ಕೆಲವು ಕಟ್ಟಡಗಳು,ಇನ್ನೂ ಆ ಬಾಂಬ್ ಉಂಟುಮಾಡಿದ ಗುರುತುಗಳನ್ನು ಹೊಂದಿವೆ.ಅಕ್ಟೋಬರ್ ೨೪,೧೯೨೯ ರ ವಿನಿಮಯ ಕುಸಿತ ಮತ್ತು ಅಕ್ಟೋಬರ್೨೯ ರಂದು ಆರಂಭವಾದ ಗಾಬರಿಯಾ ಮಾರಾಟ , ಸಾಮಾನ್ಯವಾಗಿ ಗ್ರೇಟ್ ಡಿಪ್ರೆಶನಿಗೆ ಕರಣವೆಂದು ಆರೋಪಿಸಿಳ್ಳಾಗಿದೆ.


ಹೂಡಿಕೆದಾರರ ವಿಶ್ವಾಸವನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ,ನ್ಯೂಯಾರ್ಕ್ ಷೇರು ವಿನಿಮಯ ,ಅಕ್ಟೋಬರ್ ೩೧, ೧೯೩೮ ರಂದು ಹೂಡಿಕೆದಾರರ ರಕ್ಷಣೆಯನ್ನು ನವೀಕರಿಸುಲು ಒಂದು ಹದಿನೈದು ಅಂಶಗಳ ಕಾರ್ಯಕ್ರಮವನ್ನು ಅನಾವರಣಗೊಳಿಸಿತ್ತು.ಅಕ್ಟೋಬರ್ ೧,೧೯೩೪ ರಂದು,ಒಂದು ಅಧ್ಯಕ್ಷ ಮತ್ತು ಮೂವತ್ತು ಮೂರು ಸದಸ್ಯರೊಂದಿಗೆ ನ್ಯೂಯಾರ್ಕ್ ಷೇರು ವಿನಿಮಯವನ್ನು ರಾಷ್ಟ್ರೀಯ ಭದ್ರತಾ ಪತ್ರಗಳ ವಿನಿಮಯವೆಂದು ಅಮೇರಿಕಾದ ಸೆಕ್ಯುರಿಟೀಸ್ ಮತ್ತು ವಿನಿಮಯ ಕಮಿಷನಿನ ಕೆಳಗೆ ನೋಂದಾಯಿಸಲಾಯಿತ್ತು.ಅಕ್ಟೋಬರ್ ೧೯,೧೯೮೭ ರಂದು, ಡೌ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್(ಡಿಜೆಐಎ) ೫೦೮ ಅಂಕಗಳನ್ನು ಕಳೆದುಕೊಂಡಿತು, ಒಂದೇ ದಿನದಲ್ಲಿ ೨೨.೬% ನಷ್ಟದೊಂದಿಗೆ ವಿನಿಮಯ ಅನುಭವಿಸಿದ ಎರಡನೇ ದೊಡ್ಡ ಏಕದಿನ ಡ್ರಾಪ್ ಆಗಿತ್ತು.

ವ್ಯಾಪಾರ

ಬದಲಾಯಿಸಿ

ನ್ಯೂಯಾರ್ಕ್ ಷೇರು ವಿನಿಮಯ (ಕೆಲವೊಮ್ಮೆ "ಬಿಗ್ ಬೋರ್ಡ್" ಎಂದು ಕರೆಯಲಾಗುತ್ತದೆ) ಸಾರ್ವಜನಿಕ ವಹಿವಾಟಿಗೆ ನೋಂದಾಯಿತ ಕಂಪನಿಗಳು ಷೇರುಗಳನ್ನು ವ್ಯಾಪಾರ ಮಾಡುವಲ್ಲಿನ ವ್ಯವಸ್ತೆಯನ್ನು ಒದಗಿಸುತ್ತದೆ. ಮುಂಚಿತವಾಗಿ ವಿನಿಮಯ ಘೋಷಿಸಿದ ರಜಾದಿನಗಳು ಹೊರತುಪಡಿಸಿ,ಸೋಮವಾರದಿಂದ ಶುಕ್ರವಾರದವರೆಗೆ ಬೆಳ್ಳಗೆ ೯:೩೦ ರಿಂದ ಸಂಜೆ ೪:೦೦ ಗಂಟೆಯವೆರಗ್ಗೆ ಎನ್ವೈಎಸ್ಇ ತೆರೆದಿರುತ್ತದೆ.

ಎನ್‌‌ವೈಎಸ್ಇ ವ್ಯಾಪಾರಿಗಳು ಹೂಡಿಕೆದಾರರ ಪರವಾಗಿ ಸ್ಟಾಕ್ ವಹಿವಾಟುಗಳನ್ನು ಕಾರ್ಯಗತಗೊಳಿಸಬಹುದು ,ಅಲ್ಲಿ ನಿರಂತರ ಹರಾಜು ರೂಪವು ಅನಿವಾರ್ಯವಾಗುತ್ತದೆ. ಜನವರಿ ೨೪,೨೦೦೭ ರಿಂದ, ಎಲ್ಲಾ ಎನ್‌‌ವೈಎಸ್ಇ ಷೇರುಗಳು ಅದರ ವಿದ್ಯುನ್ಮಾನ ಹೈಬ್ರಿಡ್ ಮಾರುಕಟ್ಟೆ ಮೂಲಕ ಮಾರಾಟ ಮಾಡಬಹುದಾಗಿದೆ.

 
ಕ್ರಿಸ್ಮಸ್ ಸಮಯದಲ್ಲಿ,ಎನ್.ವೈ.ಎಸ್.ಸಿ(ಡಿಸೆಂಬರ್ ೨೦೦೮)

ಎನ್‌‌ವೈಎಸ್ಇ ಕಾಂಪೋಸಿಟ್ ಇಂಡೆಕ್ಸ್

ಬದಲಾಯಿಸಿ

೧೯೬೦ ರ ಮಧ್ಯಭಾಗದಲ್ಲಿ, ಎನ್.ವೈ.ಎಸ್.ಸಿ ಕಾಂಪೋಸಿಟ್ ಸೂಚ್ಯಂಕವನ್ನು ,೧೯೬೫ ವಾರ್ಷಿಕ ನಿಕಟ ಸಮಾನವಾಗಿ ೫೦ ಅಂಕಗಳ ಬೇಸ್ ಮೌಲ್ಯದೊಂದಿಗೆ, ಸ್ಥಾಪಿಸಲಾಯಿತು.. ೧೯೬೦ ರ ಮಧ್ಯಭಾಗದಲ್ಲಿ, ಎನ್‌‌ವೈಎಸ್ಇ ಕಾಂಪೋಸಿಟ್ ಇಂಡೆಕ್ಸನ್ನು,೧೯೬೫ ವಾರ್ಷಿಕ ನಿಕಟ ಸಮಾನವಾಗಿ ೫೦ ಅಂಕಗಳ ಬೇಸ್ ಮೌಲ್ಯದೊಂದಿಗೆ, ಸ್ಥಾಪಿಸಲಾಯಿತು. ಡೌ ಜೋನ್ಸ್ ಇಂಡಸ್ಟ್ರಿಯಲ್ ಆವರೇಜಿಗೆ ಸೇರಿರುವ ಕೇವಲ ೩೦ ಸ್ಟಾಕುಗಳ ಬದಲಾಗಿ ವಿನಿಮಯ ವ್ಯಾಪಾರ ಎಲ್ಲಾ ಸ್ಟಾಕ್ ಮೌಲ್ಯವನ್ನು ಪ್ರತಿಬಿಂಬಿಸಲು ಇದನ್ನು ಕೈಗೊಳ್ಳಲಾಯಿತು. ೨೦೧೬ರಲ್ಲಿ ಡೊನಾಲ್ಡ್ ಜೆ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಡಿ ಜೆಚ ಐ ಎ ತನ್ನ ಸಾರ್ವಕಾಲಿಕ ಹೆಚ್ಚಿನ ಅಂಕವಾದ ಪಡೇದುಕೋಂಡೀತ್ತು

೨೦೧೬ ರಲ್ಲಿ,ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಡಿಜೆಐಎ ಸಾರ್ವಕಾಲಿಕ ಹೆಚ್ಚಿನ ೧೮,೮೭೩.೬ ಮಟವನ್ನು ಮುಟ್ಟಿತು.

ವಿಲೀನ, ಸ್ವಾಧೀನ, ಮತ್ತು ನಿಯಂತ್ರಣ

ಬದಲಾಯಿಸಿ

ಫೆಬ್ರವರಿ ೧೫,೨೦೧೧ ರಂದು, ಎನ್.ವೈ.ಎಸ್.ಸಿ ಮತ್ತು ಡಾಯ್ಚಿ ಬೋರ್ಸ್ಗೆ ಹೊಸ ಕಂಪನಿಯನು ರೂಪಿಸಲು ಸೇರ್ಪಡೆಗೊಂಡಿರುವುದಾಗಿ ಘೋಷಿಸಿತು .ಹೊಸ ಘಟಕದಲ್ಲಿ ಡಾಯ್ಚಿ ಬೋರ್ಸ್ ಷೇರುದಾರರು ೬೦% ಮಾಲೀಕತ್ವವನು ಹೊಂದಿರುತ್ತರೆ, ಮತ್ತು ಎನ್‌‌ವೈಎಸ್ಇ ಯುರೋನೆಕ್ಸ್ಟ್ ಷೇರುದಾರರು ೪೦% ಹೊಂದಿರುತ್ತಾರೆ. ಫೆಬ್ರವರಿ ೧,೨೦೧೨ ರಂದು, ಯುರೋಪ್ಯನ್ ಕಮಿಷನ್ ಜೋಕ್ವಿನ್ ಅಲ್ಮುನಿಯ ಡಾಯ್ಚಿ ಬೋರ್ಸ್ ಜೊತೆ, ಎನ್‌‌ವೈಎಸ್ಇ ವಿಲೀನವನು ನಿರ್ಬಂಧಿಸಿದರು[]. ಅವರು ಡಾಯ್ಚಿ ಬೋರ್ಸ್ ಮತ್ತು ಎನ್.ವೈ.ಎಸ್.ಸಿಯ ವಿಲೀನ ಯುರೋಪಿಯನ್ ಆರ್ಥಿಕ ಉತ್ಪನ್ನಗಳೈಗೆ ವಿಶ್ವಾದ್ಯಂತ ಒಂದು ಹತ್ತಿರದ ಏಕಸ್ವಾಮ್ಯಕ್ಕೆ ಕಾರಣವಾಗುವುದು" ಎಂದು ಹೇಳಿದರು.ಫೆಬ್ರವರಿ ೨,೨೦೧೨ರಂದು,ಎನ್‌‌ವೈಎಸ್ಇ ಯುರೋನೆಕ್ಸ್ಟ್ ಮತ್ತು ಡಾಯ್ಚಿ ಬೋರ್ಸ್ಗೆ ವಿಲೀನ ನಿಲ್ಲಿಸಲು ಒಪ್ಪಿಕೊಂಡರು.[] .

ಏಪ್ರಿಲ್ ೨೦೧೧ ರಲ್ಲಿ, ಇಂಟರ್ಕಾಂಟಿನೆಂಟಲ್ ಎಕ್ಸ್ಚೇಂಜ್, ಅಮೆರಿಕಾದ ಒಂದು ಮುಮ್ಮಾರಿಕೆಗಳ ವಿನಿಮಯದ ಮತ್ತು ನ್ಸ್‌ಡ್ಯಕ್ ಓ‌‌.ಏಮ್.ಎಕ್ಸ್ ಗ್ರೂಪ್ ಒಟ್ಟಿಗೆ ಸುಮಾರು US $ ೧೧,೦೦೦,೦೦೦,೦೦೦ಗೆ ಎನ್.ವೈ.ಎಸ್.ಸಿ ಯುರೋನೆಕ್ಸ್ಟ್ ಅನು ಖರೀದಿಸಲು ಅಪೇಕ್ಷಿಸಿ ಪ್ರಸ್ತಾವನೆಯನ್ನು ಮಾಡಿದರು. ಎನ್‌‌ವೈಎಸ್ಇ ಯುರೋನೆಕ್ಸ್ಟ್ ಎರಡು ಬಾರಿ ಈ ಪ್ರಸ್ತಾಪವನ್ನು ತಿರಸ್ಕರಿಸಿದರು, ಆದರ ನಂತರ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಈ ಒಪ್ಪಂದ ನಿರ್ಬಂಧಿಸುವ ಉದ್ದೇಶವನ್ನು ಸೂಚಿಸಿದ್ದರು. ಅದರಿಂದ ಒಪ್ಪಂದವನು ಅಂತಿಮವಾಗಿ ಅಂತ್ಯಗೊಳಿಸಲಾಯಿತ್ತು.

ಒಪನಿಂಗ್ ಬೆಲ್ ಮತ್ತುಕ್ಲೊಸಿಂಗ್ ಬೆಲ್

ಬದಲಾಯಿಸಿ

ಪ್ರತಿ ವ್ಯಾಪಾರ ದಿನದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಘಂಟೆಗಳ ಮಿಡಿಯುವ ಮೂಲಕ ದಿನದ ಪ್ರಾರಂಭ ಮತ್ತು ಮುಕ್ತಾಯವನ್ನು ಗುರುತಿಸಲಾಗುವುದು. 'ಒಪನಿಂಗ್ ಬೆಲ್' ದಿನದ ವಹಿವಾಟಿನ ಆರಂಭದವನು ಗುರುತಿಸಲು ಬೆಳ್ಳಗೆ ೯:೩೦ ಮಿಡಿಯಲಾಗುವುದು,ಮತ್ತು ಸಂಜೆ ೪:೦೦ ಗಂಟೆಗೆ 'ಕ್ಲೊಸಿಂಗ್ ಬೆಲ್'ನೊಂದಿಗೆ ದಿನ ವ್ಯಾಪಾರ ನಿಲ್ಲುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "NYSE Group Shares Outstanding and Market Capitalization of Companies Listed, 2016".
  2. National Park Service, National Historic Landmarks Survey, New York, Retrieved May 31, 2007.
  3. "Intercontinental Exchange – Board of Directors".
  4. "Intercontinental Exchange – Board of Directors".
  5. NYSE Euronext and Deutsche Boerse Terminate Business Combination Agreement (press release), NYSE Euronext, February 2, 2012