ಸದಸ್ಯ:Savitha D Shetty/sandbox
ನನ್ನ ಅಚ್ಛು ಮೆಚ್ಛಿನ ಶಾಲಾ ಜೀವನ
ಪ್ರತಿಯೊಬ್ಬ ವಿಧ್ಯಾರ್ಥಿಯು ತನ್ನ ಶಾಲಾ ಜೀವನವನ್ನು ಮುಗಿಸಿ ಹೋಗುತ್ತಾನೆ. ಅವರಲ್ಲಿ ಕೆಲವರಿಗೆ ಅದು ಸ್ವರ್ಗವೆನಿಸಬಹುದು,ನರಕವು ಎನಿಸಬಹುದು. ಆದರೆ ನನ್ನ ಜೀವನದಲ್ಲಿ ಆ ನನ್ನ ಶಾಲಾ ಜೀವನವು ಎಂದಿಗೂ ಮರೆಯಲಾಗದಂತಹ ನೆಚ್ಛಿನ ಜೀವನವಾಗಿತ್ತು. ನನ್ನ ಶಾಲೆಯ ಮೈಸೂರ್ ನಗರದ ಹ್ರದಯ ಭಾಗದಲ್ಲಿತ್ತು. ಕರ್ನಾಟಕದಲ್ಲೇ ಪ್ರಸಿದ್ಧವಾದ ಶಾಲೆಯು ಆಗಿತ್ತು. ಶಿಸ್ತು ಸಂಯಮಗಳಿಗೆ ಹೇಳಿ ಮಾಡಿಸಿದ ಆಗಿತ್ತು. ಪ್ರತಿಯೊಬ್ಬರು ನೀಲಿ ಸಮವಸ್ತ್ರವನ್ನು ಧರಿಸಿ, ನಯವಾಗಿ, ನಗುಮುಖದಿಂದ ಶಾಲೆಯ ಕಡೆಗೆ ಮುಖಮಾಡಿ ಬರುತ್ತಿದ್ದರು. ನನ್ನ ಸ್ನೇಹಿತರನ್ನು ಬೆಳಗಿನ ಆ ಮುದ್ದಾದ ನಗುಮುಖದಲ್ಲಿ ನೋಡುವುದರಲ್ಲಿ ಏನು ಉಲ್ಲಾಸ, ಸಂಭ್ರಮ ನನಗೆ. ತರಗತಿಯೊಳಕ್ಕೆ ಬಂದು ಮಾತನಾಡುತ್ತಾ ಕುಳಿತರಂತು ಬೆಲ್ಲು ಹೊಡೆಯುತ್ತಿದ್ದರು ಮುಗಿಯದ ಮಾತಾಗಿತ್ತು. ಆಗೋ, ಇಗೋ ಮಾಡಿ ಶಾಲೆಯ ಪ್ರಾರ್ಥನೆ ಹೋಗುತ್ತಿದ್ದೆವು. ಅಲ್ಲಿ ಕೂಡ ಶಿಸ್ತಿನ ಪರಿಪಾಟ, ನಂತರ ಶಾಲೆಯ ಪ್ರಾರ್ಥನೆ ಮುಗಿಸಿ ತರಗತಿಗೆ ಗುಂಪು ಗುಂಪಾಗಿ ಚಲಿಸುತ್ತಿದ್ದೆವು. ಆಗ ನಮ್ಮ ದಿನಚರಿ ಆರಂಭಗೊಳ್ಳುತಿದ್ದವು. ನನ್ನ ಶಾಲೆಯ ಅಧ್ಯಾಪಕರಂತೂ ಒಬ್ಬರಿಗಿಂತ ಒಬ್ಬರು ಭೋದನೆತಯಲ್ಲಿ ಪ್ರಸಿದ್ಧಿ ಹೊಂದಿದ್ದವರಾಗಿದ್ದರು. ಅವರ ತರಗತಿಯಲ್ಲಿ '೪೫' ನಿಮಿಷಗಳು ಹೇಗೆ ಸಾಗುತ್ತಿದ್ದವೋ ನಾಕಾಣೆ.... ಏಕೆಂದರೆ ಅವರ ತರಗತಿಯಲ್ಲಿ ಸಹ ನಮ್ಮ ಮಾತು ಮುಗಿಯುತ್ತಿರಲಿಲ್ಲ. ಅತ್ತ ಅಧ್ಯಾಪಕರು ಭೋದನೆಯಲ್ಲಿ ತೊಡಗಿದ್ದರೆ. ಇತ್ತ ನಾವು ನಮ್ಮದೆ ಲೋಕದಲ್ಲಿ ತೇಲಾಡುತ್ತಿದ್ದೆವು. ತದ ನಂತರ ಮದ್ಯಾಹ್ನದ ಊಟಕ್ಕೆ ಬೆಲ್ ಹೊಡೆಯುತ್ತಿದ್ದರು. ತರಗತಿಗೆ ತೆರಳಿ ಕುಳಿತುಕೊಂಡು ಸಾಯಂಕಾಲದ ತನಕ ಕಾಲ ಕಳೆಯುತ್ತಿದ್ದೆವು. ಬೆಳ್ಳಗಿನಿಂದ ಅಷ್ಟೇ ಇಷ್ಟೋ ಪಾಠವನ್ನು ಕೇಳಿ ತಕ್ಕ ಮಟ್ಟಿಗೆ ಜ್ಞಾನ ಸಂಪಾದನೆ ಮಾಡಿಕೊಂಡು ಬೇಸರದ ಮುಖದಲ್ಲಿ ಸ್ನೇಹಿತರನ್ನು, ಶಾಲೆಯನ್ನು ಬಿಟ್ಟು ಹೋಗುತ್ತಿದ್ದೆ. ಪುನಃ ಮರುದಿನ ಅದೇ ಅಚ್ಛುಮೆಚ್ಛಿನ ಬದುಕು, ಮರೆಯಲಾಗದ ಬದುಕು, ಖುಷಿಯನ್ನು ನೀಡುತ್ತಿದ್ದ ಬದುಕು.