ಸದಸ್ಯ:Satish.Kammar/ನನ್ನ ಪ್ರಯೋಗಪುಟ1

ಎಕ್ಕ(ಮಂದಾರ)

ಬದಲಾಯಿಸಿ

ಸಂ: ಅರ್ಕ, ಮಂದಾರ

ಹಿಂ: ಮದಾರ್, ಆಕ್

ಮ: ರೂಯೀ

ಗು: ಅಕಾಡೋ

ತೆ: ಜಿಲ್ಲೇಡು

ತ: ಏರ್ಕಂ

ವರ್ಣನೆ

ಬದಲಾಯಿಸಿ

ಇದರಲ್ಲಿ ಬಿಳಿ ಮತ್ತು ಕೆಂಪು ಬೇದಗಳಿವೆ. ಬಿಳಿಎಕ್ಕ ಮೂಲಿಕಾ ಚಕಿತ್ಸೆಯಲ್ಲಿ ಉತ್ತಮವಾದುದು.ಅಗಲವಾದ ಎಲೆಗಳು ಗೊಂಚಲು ಹೂಗಳಿರುವುವು. ಕಾಂಡದ ಮೇಲೆ ಬೂದು ಬಣ್ಣವಿರುವುದು ಹೆಚ್ಚು ಕಂಟಿಗಳಿರುವ ಪೊದೆ. ಬಲಿತಾಗ ಪುಟ್ಟ ಗಿಡವಾಗುವುದು. ಕಾಂಡ ಹಸಿರಾಗಿರುವುದು, ಕಾಯಿ ಬೀಜವಾದಾಗ ಬಿರಿಯುವುದು.ಬೀಜಗಳಿಗೆ ಪುಕ್ಕಗಳಿಂದ ಬೀಜಗಳು ಗಾಳಿಯಲ್ಲಿ ತೇಲಿ ಬೀಜ ಪ್ರಸಾರಣೆ ಮಾಡುವುವು.ಇದರ ಎಲೆ ಅಥವಾ ದಂಟನ್ನು ಮುರಿದಾಗ ಬಿಳಿ ಹಾಲು ಬರುವುದು. ರಥಸಪ್ತಮಿ ದಿವಸ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಎಚ್ಚರಿಕೆ: ಪ್ರಮಾಣ ಮೀರಿ ಬೇರಿನತೊಗಟೆಯನ್ನು ಸೇವಿಸಿದರೆ ಹೊಟ್ಟೆಯಲ್ಲಿಉರಿಯುತ್ತ ವಾಂತಿಯಾಗುವುದು.

ವಾಯು ನೋವಿಗೆ

ಬದಲಾಯಿಸಿ

ಒಣಗಿದ ಶುಂಠಿಯನ್ನು ಶುದ್ದವಾದತಣ್ಣೀರಿನಲ್ಲಿತೇದುಎಕ್ಕದ ಹಸಿರೆಲೆಯ ಮೇಲೆ ಸವರಿಎಲೆಯನ್ನು ಸ್ವಲ್ಪ ಬಿಸಿಮಾಡಿ ನೋವಿರುವಜಾಗದಲ್ಲಿಅಚಿಟಿಸುವುದು.ಅಥವಾ ಎಳ್ಳೆಣ್ಣೆಯ ಹಣ್ಣೆಲೆಗಳಿಗೆ ಸ್ವಲ್ಪ ಬಿಸಿ ಮಾಡಿ ಬ್ಯಾಂಡೇಜಿನಂತೆಕಟ್ಟುವುದು.ಅಥವಾ ಬಲಿತ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸಿ ತಟ್ಟುವದು.

ಹಲ್ಲು ನೋವು

ಬದಲಾಯಿಸಿ

ಎಕ್ಕದಗಿಡದತುದಿಯಲ್ಲಿರುವಒಂದುಚಿಗುರೆಲೆಯನ್ನು ಬಜ್ಜಿಕೆಂಡದ ಮೇಲೆ ಹಾಕುವುದು ಪರಂಗಿಎಲೆಯ ಕೊಳವೆಯ ಮುಖಾಂತರ ಹೊಗೆಯನ್ನು ಸ್ವಲ್ಪ ಸ್ವಲ್ಪ ಸೇದುವುದು. --ಕಿವಿ ನೋವಿನಲ್ಲಿ== ಹಿಂಗನ್ನುತಣ್ಣೀರಿನಲ್ಲಿತೇದುಒಂದುಎಕ್ಕದ ಹಸಿರೆಲೆ ಮೇಲೆ ಸವರುವುದುಇದರ ಮೇಲೆ ಸ್ವಲ್ಪತುಪ್ಪವನ್ನು ಲೇಪಿಸುವುದು ನಂತರಎಲೆಯನ್ನು ಬಿಸಿಮಾಡಿ, ರಸವನ್ನು ಹಿಂಡಿ, ನೋವಿರುವ ಕಿವಿಗೆ ನಾಲ್ಕೈದು ಹನಿ ಬಿಡುವುದು.

ಕೆಮ್ಮುದಮ್ಮು

ಬದಲಾಯಿಸಿ

ಚೆನ್ನಾಗಿ ಬಲಿತಎಕ್ಕದ ಬೇರನ್ನು ನೀರಿನಲ್ಲಿತೇದು ಸ್ವಲ್ಪ ಶುದ್ಧಜೇನು ಸೇರಿಸಿ ನೆಕ್ಕುವುದು.

ಉದರ ಶೂಲೆ

ಬದಲಾಯಿಸಿ

ಚೆನ್ನಾಗಿ ಹಣ್ಣಾಗಿ ಕೆಳಗೆ ಬಿದ್ದಿರುವಎಕ್ಕದ ಎಲೆಗಳನ್ನು ತಂದುಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಸುಟ್ಟು ಬೂದಿ ಮಾಡುವುದು.ಒಂದೆರಡುಚಿಟಿಕೆ ಬೂದಿಯನ್ನುಜೇನು ಸಮೇತ ಸೇವಿಸುವುದು. ಅಥವಾ ಬಳೀ ಎಕ್ಕದ ಮೊಗ್ಗು ಸ್ವಲ್ಪಉಪ್ಪು ಮತ್ತು ನಾಲ್ಕೈದು ಕಾಳು ಮೆಣಸು ಸೇರಿಸಿ ತಣ್ಣೀರಿನಲ್ಲಿ ನಯವಾಗಿಅರೆದುಕಡಲೆಗಾತ್ರ ಗುಳಿಗೆ ಮಾಡಿ ನೆರಳಿನಲ್ಲಿ ಒಣಗಿಸುವುದು, ಒಂದೆರಡು ಬಾರಿ ಸೇವಿಸುವುದು.

ಜಲೋದರಕ್ಕೆ( ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು)

ಬದಲಾಯಿಸಿ

50 ಗ್ರಾಂ ಬಿಳಿ ಎಕ್ಕದ ಹಸಿರೆಲೆಗಳನ್ನು 10 ಗ್ರಾ ಅರಸಿನದ ಕೊಂಬಿನೊಂದಿಗೆ ಕಲ್ಲತ್ತಿನಲ್ಲಿಚೆನ್ನಾಗಿಅರೆದುಕಡಲೇಗಾತ್ರ ಮಾತ್ರೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು.ಪ್ರತಿ ನಿತ್ಯಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು. ಹೀಗೆ 7 ದಿವಸ. ಎಚ್ಚರಿಕೆ: ತಜ್ಞರ ಮೇಲ್ವಿಚಾರಣೆಯಲ್ಲಿಚಿಕಿತ್ಸೆ ಒಳ್ಳೆಯದು

ಇಸುಬು (ರಿಂಗ್ ವರ್ಮ್)

ಬದಲಾಯಿಸಿ

ಇಸಬಿನ ಸ್ಥಳವನ್ನು ಬಟ್ಟೆಯಿಂದಚೆನ್ನಾಗಿಉಜ್ಜಿಅದರ ಮೇಲೆ ಒಂದುತೊಟ್ಟುಎಕ್ಕದ ಹಾಲನ್ನು ಹಾಕುವುದು. ಮೊದಲು ಮೊದಲುಉರಿಕಾಣಬಹುದು.

ಬಿಳಿ ತೊನ್ನುರೋಗಕ್ಕೆ

ಬದಲಾಯಿಸಿ

ಬಲಿತ ಅರಿಶಿನ ಕೊಂಬು ಮತ್ತು ಬಲಿತಎಕ್ಕದ ಬೇರನ್ನುತಣ್ಣೀರಿನಲ್ಲಿತೇದುತೊನ್ನಿರುವ ಸ್ಥಳದಲ್ಲಿ ಹಚ್ಚುವುದು. ಶರೀರದ ಸ್ವಲ್ಪ ಭಾಗದಲ್ಲಿ ಪ್ರಥಮವಾಗಿ ಲೇಪಿಸುವುದು. ಗುಣಕಂಡ ಮೇಲೆ ಚಿಕಿತ್ಸೆಯನ್ನು ಮುಂದುವರಿಸುವುದು.

ಕಾಲಾರಾ ಬೇನೆಯಲ್ಲಿ

ಬದಲಾಯಿಸಿ

ಎಕ್ಕದ ಬೇರಿನತೊಗಟೆ ಮತ್ತುಮೆಣಸಿನ ಕಾಳು ಸಮತೂಕ ನುಣ್ಣಗೆಚೂರ್ಣಮಾಡಿ, ಹಸಿರು ಶುಂಠಿರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸುವುದು.ಪ್ರತಿಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು.

ಚೇಳಿನ ವಿಷಕ್ಕೆ

ಬದಲಾಯಿಸಿ

ಹಿಂಗನ್ನುಎಕ್ಕದ ಹಾಲಿನಲ್ಲಿತೇದು ಚೇಳು ಕುಟುಕಿರುವಜಾಗದಲ್ಲಿ ಹಚ್ಚುವುದು.

ಉದರ ಬೇನೆ, ಅಜೀರ್ಣದಲ್ಲಿ

ಬದಲಾಯಿಸಿ

ಇನ್ನೊ ಬಿರಿಯದಿರುವ 20 ಮೊಗ್ಗುಗಳನ್ನು ತಂದು ಶುಂಠಿ ,ಓಮದ ಕಾಳು ಮತ್ತುಕರಿಯ ಲವಣವನ್ನು ಸಮಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿಅರೆದುಕಡಲೆಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ದಿವಸಕ್ಕೆ ಎರಡು ಸಾರಿಒಂದೊಂದು ಮಾತ್ರೆಯನ್ನು ಸೇವಿಸಿ ನೀರುಕುಡಿಯುವುದು.

ವಾಯು ನೋವುಗಳಿಗೆ

ಬದಲಾಯಿಸಿ

ಎಕ್ಕದಎಲೆಯರಸ 20 ಗ್ರಾಂ, ಬೊಂತೆ ಕಳ್ಳಿ ರಸ 20ಗ್ರಾಂ, ಲಕ್ಕಿ ಎಲೆ ರಸ, 20 ಗ್ರಾಂ, ಉಮ್ಮತ್ತಿ ಎಲೆ ರಸ 20 ಗ್ರಾಂ, ಹಸುವಿನ ಹಾಲು 60ಮಿ, ಲಿ. ಎಳ್ಳಣ್ಣೆ 120 ಗ್ರಾಂ ಸೇರಿಸಿ ಕಾಯಿಸುವಾಗ, ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿಎರಡೆರಡುಟೀ ಚಮಚ ಹಾಕಿ ಇಳಿಸುವಾಗ 20 ಗ್ರಾಂಆರತಿಕರ್ಪೂರ ಹಾಕುವುದು. ತಣ್ಣಗಾದ ಮೇಲೆ ಕೀಲು, ಕಾಲು ನೋವುಗಳಿಗೆ ಹಚ್ಚುವುದು.

ಉಲ್ಲೇಖ

ಬದಲಾಯಿಸಿ
  • ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್,ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್.ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು.