Sathyarvidupalapati

Joined ೧೮ ಜೂನ್ ೨೦೧೫
ಸತ್ಯ ವಿಡುಪಲಪಾಟಿ.ಆರ್
ಜನನ
ದೇವರಾಜ್

೧೫-೦೧-೧೯೯೭
ಹಿರಿಯೂರು(ಚಿತ್ರದುರ್ಗ)
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಸತ್ಯ
ವಿದ್ಯಾರ್ಹತೆಬಿ.ಕಾಂ
ಉದ್ಯೋಗವಿದ್ಯಾರ್ಥಿ

ಪರಿಚಯ: ಬದಲಾಯಿಸಿ

ಹೆಸರು: ಸತ್ಯ ವಿಡುಪಲಪಾಟಿ.ಆರ್ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವನಾಗಿದ್ದು, ದಿನಾಂಕ ೧೫/೦೧/೧೯೯೭ ರಂದು ಜನಿಸಿದ್ದೇನೆ. ತಂದೆಯವರು ಶ್ರೀ ರಮೇಶ್.ವಿ.ಎಸ್ ಮತ್ತು ತಾಯಿಯವರು ಶ್ರೀಮತಿ ಶುಭ ರಮೇಶ್. ಒಬ್ಬ ಸಹೋದರನಿದ್ದು ಅವನ ಹೆಸರು ವಿಕಾಸ್ ವಿಡುಪಲಪಾಟಿ.ಆರ್ ಹಿಂದೂ ಧರ್ಮಕ್ಕೆ ಸೇರಿದವನಾದ ನಾನು ಆರ್ಯ ವೈಶ್ಯ ಕುಲದವನು.ನನ್ನ ಮಾತೃಭಾಷೆ ಕನ್ನಡ. ಹಿಂದಿ,ಇಂಗ್ಲೀಷ್ ಮತ್ತು ತೆಲುಗು ಭಾಷೆಗಳನ್ನೂ ಮಾತನಾಡಬಲ್ಲೆನು.

ವಿದ್ಯಾಭ್ಯಾಸ: ಬದಲಾಯಿಸಿ

ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಹಿರಿಯೂರಿನಲ್ಲೇ ಸಂಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ಅಸಂಷನ್ ಆಂಗ್ಲ ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡಿ ೧೦ನೇ ತರಗತಿ(ಎಸ್.ಎಸ್.ಎಲ್.ಸಿ)ಯಲ್ಲಿ ಶೇ.೯೪ ಅಂಕ ಗಳಿಸಿದ್ದು ರೆಡ್ ಕ್ರಾಸ್ ಸಂಸ್ಥೆ, ಆರ್ಯ ವೈಶ್ಯ ಮಂಡಳಿ ಮುಂತಾದ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಂತರ ಚಿತ್ರದುರ್ಗದ ಡಾನ್ ಬಾಸ್ಕೊ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಸಂಪೂರ್ಣಗೊಳಿಸಿ ೧೨ನೇ ತರಗತಿ(ಪಿ.ಯು.ಸಿ)ಯಲ್ಲಿ ಶೇ.೯೩ ಅಂಕ ಗಳಿಸಿದ್ದು ಅನೇಕ ಸಂಸ್ಥೆಗಳಿಂದ ಸನ್ಮಾನಿಸಲಾಗಿದೆ. ಪ್ರಸಕ್ತವಾಗಿ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಮ್ ಪದವಿ ವ್ಯಾಸಂಗಮಾಡುತ್ತಿದ್ದೇನೆ.

ನಮ್ಮ ಕುಟುಂಬವು ಮಧ್ಯಮ ವರ್ಗದ್ದಾಗಿದ್ದು, ನಮ್ಮ ಓದಿಗಾಗಿ ನಮ್ಮ ತಂದೆ ತಾಯಿಯವರು ಹಗಲು-ರಾತ್ರಿ ಎನ್ನದೆ ದುಡಿದು ನಮಗೆ ವಿಧ್ಯಾಭ್ಯಾಸ ನೀಡುತ್ತಿದ್ದಾರೆ. ಅವರು ಯಾವಾಗಲೂ ತಮ್ಮ ಸುಖಕ್ಕಿಂತಲೂ ನಮ್ಮ ಸುಖವನ್ನೇ ಬಯಸುತ್ತಾರೆ. ಯಾವ ತಂದೆ ತಾಯಿಯಾದರೂ ಅಷ್ಟೆ. ನನ್ನ ಜೀವನದ ಮುಖ್ಯ ಗುರಿಯೆಂದರೆ ನಮ್ಮನ್ನು ಸುಖವಾಗಿಟ್ಟ ನಮ್ಮ ತಂದೆ ತಾಯಿಯರನ್ನು ನಾವು ಬೆಳೆದು ಒಂದು ನೆಲೆಕಂಡ ನಂತರ ಅವರನ್ನು ಚೆನ್ನಾಗಿ, ಸುಖವಾಗಿ ನೋಡಿಕೊಳ್ಳಬೇಕು. ನಾನು ಮುಂದೆ ಒಬ್ಬ ದೊಡ್ಡ ಐ.ಎ.ಎಸ್ ಅಧಿಕಾರಿಯಾಗಿ ಜನರಿಗೆ,ಸಮಾಜಕ್ಕೆ ಒಳ್ಳೆಯದನ್ನು ಮಾಡಿ, ಜನರಿಗೆ ಸಹಾಯ ಮಾಡಬೇಕೆಂದಿದ್ದೇನೆ. ನಮ್ಮ ತಂದೆ ತಾಯಿಯವರಿಗೆ ಕೀರ್ತಿ ತಂದು ಅವರು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡಬೇಕೆನ್ನುವುದು ನನ್ನ ಆಸೆ. ನಮಗೆ ಜೀವನದಲ್ಲಿ ಎಷ್ಟೋ ಕಷ್ಟಗಳು ಬಂದರೂ ನಮಗೆ ನಮ್ಮವರೆನ್ನುವರು ಸಹಾಯ ಮಾಡಲಿಲ್ಲ. ಅಂಥವರ ಮುಂದೆ ನಮ್ಮ ತಂದೆ ತಾಯಿಯರು ತಲೆ ಎತ್ತಿ ನಡೆಯವಂತೆ ಮಾಡಬೇಕೆನ್ನುವುದು ನನ್ನ ಜೀವನದ ಗುರಿ.

ಸಾಧನೆ: ಬದಲಾಯಿಸಿ

ನನ್ನ ಇದುವರೆಗಿನ ಸಾಧನೆಗಳೆಂದರೆ ೫ನೇ ತರಗತಿಯಲ್ಲಿ ಪುಟಾಣಿ ಗಣಿತ ಎನ್ನುವ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಗಳಿಸಿದ್ದೇನೆ.ಚಿಂತನ ಮಂತನ ಮತ್ತು ಗಣಿತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದೇನೆ. ಪಿ.ಯು ವ್ಯಾಸಂಗ ಮಾಡುವಾಗ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಗಳಿಸಿದ್ದೇನೆ.

ಹವ್ಯಾಸ: ಬದಲಾಯಿಸಿ

ನನ್ನ ಹವ್ಯಾಸಗಳು ಎಂದರೆ ಕಥೆ ಕಾದಂಬರಿಗಳನ್ನು ಓದುವುದು ಮತ್ತು ಸುಮಧುರ ಹಾಡುಗಳನ್ನು ಕೇಳುವುದು. ನನಗೆ ಚಿಕ್ಕವನಿಂದಲೂ ಓದುವುದೆಂದರೆ ಬಹಳ ಇಷ್ಟ. ಆದ್ದರಿಂದ ಸಣ್ಣ ಸಣ್ಣ ಕಥೆಗಳನ್ನು ಓದುತ್ತಿದ್ದೆ. ನಂತರ ಅದು ಓಂದು ಹವ್ಯಾಸವಾಗಿ ಪರಿವರ್ತನೆಗೊಂಡು ಈಗ ದೊಡ್ಡ ದೊಡ್ಡ ಸಾಹಿತ್ಯ,ಪದ್ಯಗಳು, ಕಥೆ-ಕಾದಂಬರಿಗಳನ್ನು ಓದುತ್ತೇನೆ. ನನಗೆ ಹಾಡುಗಳನ್ನು ಕೇಳುವುದೆಂದರೆ ಬಹಳ ಇಷ್ಟ. ಅದರಲ್ಲೂ ಹಳೆಯ ಸುಮಧುರ ಗೀತೆಗಳು,ಜಾನಪದಗಳು, ಭಾವಗೀತೆಗಳನ್ನು ಕೇಳುವುದೆಂದರೆ ಬಹಳ ಇಷ್ಟ.ನನ್ನ ಅಚ್ಚು ಮೆಚ್ಚಿನ ಗಾಯಕರೆಂದರೆ ಸಿ.ಅಶ್ವತ್. ಅವರು ಹಾಡಿರುವ " ದುಡ್ಡು ಕೊಟ್ಟರೆ ಬೇಕ್ಕಾದ್ದು ಸಿಗುತೈತೆ ಈ ಜಗದಲಿ.." ಮತ್ತು " ಡಿ.ವಿ.ಜಿ ರವರ ನಿ ಹೀಂಗ ನೋಡಬ್ಯಾಡ ನನ್ನ.." ಮುಂತಾದ ಹಾಡುಗಳು ನನ್ನ ಮನಸ್ಸಿಗೆ ಬಹಳ ಹತ್ತಿರವಾದವು.

 This user is a member of WikiProject Education in India



ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sathyarvidupalapati