[]ವ್ಯವಹಾರ ಸಂಯೋಜನೆ ವ್ಯವಹಾರಿಕ ಸಂಸ್ಥೆಗಳಲ್ಲಿ ಇತ್ತೀಚಿಗೆ ಎರಡು ಪ್ರಮುಖ ಬದಲಾವನೆಗಳಾಗಿವೆ.ಇವುಗಳಿಂದಾಗಿ ಸಣ್ಣ ಉದ್ದಿಮೆಗಳು ಬೃಹದಾಕಾರವಾದ ಉದ್ದಿಮೆಗಳಾಗಿ ಪರಿವರ್ತನೆ ಹೊಂದಿರುತ್ತವೆಯಲ್ಲದೇ ಅವುಗಳ ಆಡಳಿತವು ನಿಯಂತ್ರಿತವಾಗಿದೆ.ಮೊದಲನೆಯ ಬದಲಾವನೆ ಎಂದರೆ ಸಂಯುಕ್ತ ಬಂಡವಾಳ ಸಂಸ್ಥೆಗಳ ಉದಯ ಎರಡನೆಯ ಮತ್ತು ಅತೀ ಮಹತ್ವದ ಬದಲಾವಣೆ ಎಂದರೆ ದೇಶದ ತುಂಬೆಲ್ಲ ಒಂದೇ ಬಗೆಯ ನಿಯಮಗಳನ್ನು ಎಲ್ಲ ಉದ್ದಿಮೆಗಳಿಗೂ ಅನ್ವಯಿಸುವಂತೆ ಜಾರಿಯಲ್ಲಿ ತರುವುದು. ಬೇರೆ ಬೇರೆ ಬಗೆಯ ವ್ಯವಹಾರ ಸಂಯೋಜನೆಗಳಿಂದ ಇದು ಸಾದ್ಯವಾಗಿದೆ. ವ್ಯಾಪಾರ,ವಾಣಿಜ್ಯ ಮತ್ತು ಉದ್ದಿಮೆಗಳಲ್ಲಿ ವ್ಯವಹಾರಸ್ಥರು ಯಾವಗಲೂ ಹೆಚ್ಚಿನ ಲಾಭವನ್ನು ಮಾಡಿಕೊಳ್ಳಲು ಉತ್ಸುಕರಾಗಿರುತ್ತಾರೆ. ವ್ಯಾಪಾರವನ್ನು ಸಂಘಟಿಸುವುದು-

ಸಾಮಾನ್ಯವಾಗಿ ಒಂದು ವ್ಯಾಪಾರ ಹೇಗೆ ಸಂಘಟಿತವಾಗುತ್ತದೆಂಬುದರ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು:

Business Model Canvas

ವ್ಯಾಪಾರದ ಗಾತ್ರ ಮತ್ತು ವ್ಯಾಪ್ತಿ, ಮತ್ತು ಅದರ ಅಪೇಕ್ಷಿತ ನಿರ್ವಹಣೆ ಮತ್ತು ಒಡೆತನ. ಸಾಮಾನ್ಯವಾಗಿ ಒಂದು ಚಿಕ್ಕ ಉದ್ಯಮ ಹೆಚ್ಚು ಹೊಂದಾಣಿಕೆ ಉಳ್ಳದ್ದಾಗಿರುತ್ತದೆ, ಹಾಗೆ ದೊಡ್ಡ ಉದ್ಯಮಗಳು, ಅಥವಾ ವಿಸ್ತಾರವಾದ ಒಡೆತನ ಅಥವಾ ಹೆಚ್ಚು ವಿಧ್ಯುಕ್ತ ರಚನೆಗಳುಳ್ಳವು ,ಸಾಮಾನ್ಯವಾಗಿ ಪಾಲುದಾರಿಕೆಗಳಾಗಿ ಅಥವಾ (ಹೆಚ್ಚು ಸಾಮಾನ್ಯವಾಗಿ) ನಿಗಮವಾಗಿ ಸಂಘಟಿತವಾಗುವ ಪ್ರವೃತ್ತಿ ಹೊಂದಿರುತ್ತವೆ. ಜೊತೆಗೆ ಒಂದು ಬಂಡವಾಳ ಪತ್ರದ ಪೇಟೆಯಲ್ಲಿ ಹಣ ಸಂಗ್ರಹಿಸುವ ಅಥವಾ ವಿಶಾಲ ವ್ಯಾಪ್ತಿಯ ಜನರಿಂದ ಸ್ವಾಮಿತ್ವಪಡೆಯುವ ಅಪೇಕ್ಷೆಯುಳ್ಳ ಒಂದು ವ್ಯಾಪಾರ ಅನೇಕಸಲ ಒಂದು ನಿರ್ದಿಷ್ಟ ಕಾನೂನುಬದ್ಧ ಸ್ವರೂಪವನ್ನು ಅಳವಡಿಸಿಕೊಳ್ಳುವುದು ಆವಶ್ಯಕವಾಗುತ್ತದೆ. ಕ್ಷೇತ್ರ ಮತ್ತು ದೇಶ. ಖಾಸಗಿ ಲಾಭ ಗಳಿಸುವ ವ್ಯಾಪಾರಗಳು ಸರಕಾರಿ ಒಡೆತನದ ಸಂಸ್ಥೆಗಳಿಗಿಂತ ಭಿನ್ನವಾಗಿವೆ. ಕೆಲವು ದೇಶಗಳಲ್ಲಿ, ನಿರ್ದಿಷ್ಟ ವ್ಯಾಪಾರಗಳು ಕಾನೂನುಬದ್ಧವಾಗಿ ನಿರ್ದಿಷ್ಟ ರೀತಿಗಳಲ್ಲಿ ಸಂಘಟಿತವಾಗಬೇಕಾಗಿ ನಿರ್ಬಂಧಿತವಾಗಿರುತ್ತವೆ.[[File:Relationship of Information Models to the DoD Technical Reference Model.jpg|thumb|Relationship of Information Models to the DoD Technical Reference Model]ಪರಿಮಿತ ಹೊಣೆಗಾರಿಕೆ. ನಿಗಮಗಳು, ಪರಿಮಿತ ಹೊಣೆಗಾರಿಕೆ ಪಾಲುದಾರಿಕೆಗಳು, ಮತ್ತು ಇತರ ನಿರ್ದಿಷ್ಟ ಪ್ರಕಾರದ ವ್ಯಾಪಾರ ಸಂಸ್ಥೆಗಳು ವ್ಯಾಪಾರವನ್ನು ನಿರ್ದಿಷ್ಟ ಕಾನೂನು ರಕ್ಷಣೆಗಳುಳ್ಳ ಒಂದು ಪ್ರತ್ಯೇಕ ಕಾನೂನು ಘಟಕವಾಗಿ ವ್ಯಾಪಾರ ಮಾಡುವುದರ ಮೂಲಕ ತಮ್ಮ ಮಾಲೀಕರನ್ನು ವ್ಯಾಪಾರ ವೈಫಲ್ಯದಿಂದ ರಕ್ಷಿಸುತ್ತವೆ. ತದ್ವಿರುದ್ಧವಾಗಿ, ಅಸಂಘಟಿತ ವ್ಯಾಪಾರಗಳು ಅಥವಾ ಸ್ವಂತವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಸಾಮಾನ್ಯವಾಗಿ ಅಷ್ಟು ರಕ್ಷಿತವಾಗಿರುವುದಿಲ್ಲ.ತೆರಿಗೆ ಅನುಕೂಲಗಳು. ಭಿನ್ನ ರಚನೆಗಳನ್ನು ತೆರಿಗೆ ಕಾನೂನಿನಲ್ಲಿ ಭಿನ್ನವಾಗಿ ಕಾಣಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಅನುಕೂಲಗಳನ್ನು ಹೊಂದಿರಬಹುದು. ಪ್ರಕಟಣೆ ಮತ್ತು ಅನುವರ್ತನೆ ಅಗತ್ಯಗಳು. ವಿಭಿನ್ನ ವ್ಯಾಪಾರ ರಚನೆಗಳು ಹೆಚ್ಚು ಅಥವಾ ಕಡಿಮೆ ಮಾಹಿತಿಯನ್ನು ಸಾರ್ವಜನಿಕ ಮಾಡುವುದು ಆವಶ್ಯಕವಿರಬಹುದು (ಅಥವಾ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡುವುದು), ಮತ್ತು ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುವರ್ತಿಸುವಂತೆ ನಿರ್ಬಂಧಿತವಾಗಿರಬಹುದು.ಹಲವು ವ್ಯಾಪಾರಗಳು ಒಂದು ನಿಗಮ, ಪರಿಮಿತ ಪಾಲುದಾರಿಕೆ ಅಥವಾ ಪರಿಮಿತ ಹೊಣೆಗಾರಿಕೆ ಕಂಪನಿಗಳಂತಹ ಒಂದು ಪ್ರತ್ಯೇಕ ಘಟಕದ ಮೂಲಕ ಕಾರ್ಯ ನಿರ್ವಹಿಸುತ್ತವೆ. ಬಹುತೇಕ ಕಾನೂನುವ್ಯಾಪ್ತಿಗಳು ಸಂಬಂಧಿತ ವಿದೇಶಾಂಗ ಮಂತ್ರಿ ಅಥವಾ ಸಮಾನ ವ್ಯಕ್ತಿಗಳಿಗೆ ನಿರ್ದಿಷ್ಟ ಸನ್ನದು ಕಾಗದ ಪತ್ರಗಳನ್ನು ದಾಖಲು ಮಾಡಿ ಮತ್ತು ಇತರ ಅಸ್ತಿತ್ವದಲ್ಲಿರುವ ನಿರ್ದಿಷ್ಟ ಬಾಧ್ಯತೆಗಳನ್ನು ನೆರವೇರಿಸಿ ಅಂತಹ ಒಂದು ಘಟಕವನ್ನು ಸಂಘಟಿಸಲು ಜನರಿಗೆ ಅವಕಾಶ ನೀಡುತ್ತವೆ.ಷೇರುದಾರರು, ಪರಿಮಿತ ಪಾಲುದಾರರು, ಅಥವಾ ಸದಸ್ಯರ ಸಂಬಂಧಗಳು ಮತ್ತು ಕಾನೂನು ಹಕ್ಕುಗಳು ಭಾಗಶಃ ಸನ್ನದು ಕಾಗದ ಪತ್ರಗಳಿಂದ ಮತ್ತು ಭಾಗಶಃ ಘಟಕ ಸಂಘಟಿತವಾಗಿರುವ ಕಾನೂನುವ್ಯಾಪ್ತಿಯ ಕಾನೂನಿನಿಂದ ನಿರ್ಣಯಿಸಲ್ಪಡುತ್ತವೆ. ಸಾಮಾನ್ಯ ವಾಗಿ ಹೇಳುವುದಾದರೆ, ಒಂದು ನಿಗಮದಲ್ಲಿನ ಷೇರುದಾರರು, ಪರಿಮಿತ ಪಾಲುದಾರಿಕೆಯಲ್ಲಿನ ಪರಿಮಿತ ಪಾಲುದಾರರು, ಮತ್ತು ಪರಿಮಿತ ಹೊಣೆಗಾರಿಕೆ ಕಂಪನಿಯಲ್ಲಿನ ಸದಸ್ಯರು, ಕಾನೂನುಬದ್ಧವಾಗಿ ಒಂದು ಪ್ರತ್ಯೇಕ "ವ್ಯಕ್ತಿ"ಯೆಂದು ಕಾಣಲಾಗುವ ಘಟಕದ ಸಾಲಗಳು ಮತ್ತು ಬಾಧ್ಯತೆಗಳ ವೈಯಕ್ತಿಕ ಹೊಣೆಗಾರಿಕೆಯಿಂದ ರಕ್ಷಿತರಾಗಿರುತ್ತಾರೆ.ಇದರ ಅರ್ಥ, ದುರ್ವರ್ತನೆ ಇಲ್ಲದಿದ್ದರೆ ಮತ್ತು ವ್ಯಾಪಾರ ಸಫಲವಾಗದಿದ್ದರೆ, ಮಾಲೀಕನ ಸ್ವಂತ ಸ್ವತ್ತುಗಳು ಕಾನೂನಿನಲ್ಲಿ ಬಲವಾಗಿ ರಕ್ಷಿತವಾಗಿರುತ್ತವೆ. ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದು ವ್ಯಾಪಾರಕ್ಕೆ ಒಟ್ಟಾಗಿ ಒಡೆಯರಾಗಿದ್ದರೂ ಒಂದು ಹೆಚ್ಚು ವಿಶಿಷ್ಟ ಸ್ವರೂಪದ ಸಾಧನ ವನ್ನು ಸಂಘಟಿಸುವಲ್ಲಿ ವಿಫಲರಾದಾಗ, ಆ ವ್ಯಾಪಾರವನ್ನು ಸಾಮಾನ್ಯ ಪಾಲುದಾರಿಕೆಯೆಂದು ಕಾಣಲಾಗುವುದು. ಪಾಲುದಾರಿಕೆಯ ನಿಬಂಧನೆಗಳು, ನಿರ್ಮಿತವಾಗಿದ್ದರೆ ಒಂದು ಪಾಲುದಾರಿಕೆ ಒಡಂಬಡಿಕೆಯಿಂದ ಭಾಗಶಃ, ಮತ್ತು ಪಾಲುದಾರಿಕೆ ನೆಲೆಗೊಂಡ ಕಾನೂನುವ್ಯಾಪ್ತಿಯ ಶಾಸನದಿಂದ ಭಾಗಶಃ ನಿರ್ಣಯಿಸಲಾಗಿರುತ್ತವೆ.ಒಂದು ಪಾಲುದಾರಿಕೆ ನಿರ್ಮಿಸಲು ಯಾವುದೇ ಕಾಗದಪತ್ರ ಅಥವಾ ಕಡತ ದಾಖಲಿಸುವುದು ಆವಶ್ಯಕವಾಗಿರುವುದಿಲ್ಲ ಮತ್ತು ಒಂದು ಒಡಂಬಡಿಕೆಯಿಲ್ಲದೆ, ಪಾಲುದಾರರ ಸಂಬಂಧಗಳು ಮತ್ತು ಕಾನೂನು ಹಕ್ಕುಗಳು ಪಾಲುದಾರಿಕೆ ನೆಲೆಗೊಂಡ ಕಾನೂನುವ್ಯಾಪ್ತಿಯ ಶಾಸನದಿಂದ ಸಂಪೂರ್ಣವಾಗಿ ನಿರ್ಣಯಿಸಲಾಗುತ್ತವೆ. ಅವನು ಅಥವಾ ಅವಳು ನೇರವಾಗಿ ಅಥವಾ ಒಂದು ಸಾಂಪ್ರದಾಯಿಕ ಸಂಘಟಿತ ವಸ್ತುವಿನ ಮೂಲಕ ಒಂದು ವ್ಯಾಪಾರವನ್ನು ಹೊಂದಿದ ಮತ್ತು ನಡೆಸುವ ಒಬ್ಬ ಏಕೈಕ ವ್ಯಕ್ತಿ ಸಾಮಾನ್ಯವಾಗಿ ಏಕಮಾತ್ರ ಮಾಲೀಕ ಎಂದು ಪರಿಚಿತವಾಗಿರುತ್ತಾನೆ/ಳೆ. ಒಂದು ವ್ಯಾಪಾರವನ್ನು ಹೇಗೆ ನಿರ್ವಹಿಸಬೇಕೆಂದು ನಿರ್ಧರಿಸಲು ಪರಿಗಣಿಸಬೇಕಾದ ಕೆಲವು ಸಂಗತ ಅಂಶಗಳು:ಪಾಲುದಾರಿಕೆಯಲ್ಲಿನ ಸಾಮಾನ್ಯ ಪಾಲುದಾರರು (ಪರಿಮಿತ ಹೊಣೆಗಾರಿಕೆಯ ಪಾಲುದಾರಿಕೆಗಿಂತ ಬೇರೆಯದಾದ), ಜೊತೆಗೆ ಒಂದು ಪ್ರತ್ಯೇಕ ಕಾನೂನು ವಸ್ತುವನ್ನು ನಿರ್ಮಿಸದೆ ವೈಯಕ್ತಿಕವಾಗಿ ಒಂದು ವ್ಯಾಪಾರವನ್ನು ಹೊಂದಿದ ಮತ್ತು ನಿರ್ವಹಿಸುವ ಯಾರಾದರೂ, ವ್ಯಾಪಾರದ ಸಾಲಗಳು ಮತ್ತು ಬಾಧ್ಯತೆಗಳಿಗೆ ವೈಯಕ್ತಿಕವಾಗಿ ಹೊಣೆಯಾಗಿರುತ್ತಾರೆ.ಸಾಮಾನ್ಯವಾಗಿ, ನಿಗಮಗಳು "ವಾಸ್ತವ" ವ್ಯಕ್ತಿಗಳಂತೆ ತೆರಿಗೆ ಸಲ್ಲಿಸುವುದು ಅಗತ್ಯವಿರುತ್ತದೆ. ಕೆಲವು ತೆರಿಗೆ ವ್ಯವಸ್ಥೆಗಳಲ್ಲಿ, ಇದು ಹಾಗೆ ಕರೆಯಲಾಗುವ ಇಮ್ಮಡಿ ಕರಭಾರವನ್ನು ಪ್ರಾರಂಭಮಾಡಬಹುದು, ಏಕೆಂದರೆ ನಿಗಮ ಮೊದಲು ಲಾಭದ ಮೇಲೆ ತೆರಿಗೆ ಸಲ್ಲಿಸುತ್ತದೆ, ಮತ್ತು ಆಮೇಲೆ ನಿಗಮ ಅದರ ಮಾಲೀಕರಿಗೆ ಅದರ ಲಾಭಗಳನ್ನು ವಿತರಿಸುವಾಗ, ತಮ್ಮ ವೈಯಕ್ತಿಕ ತೆರಿಗೆ ಜಮಾ ಖರ್ಚು ವಿವರಗಳನ್ನು ತೀರಿಸುವಾಗ ವ್ಯಕ್ತಿಗಳು ತಮ್ಮ ಆದಾಯದಲ್ಲಿ ಲಾಭಾಂಶಗಳನ್ನು ಸೇರಿಸಬೇಕಾಗುತ್ತದೆ, ಮತ್ತು ಈ ಘಳಿಗೆಯಲ್ಲಿ ಎರಡನೇಯ ಸ್ತರದ ಆದಾಯ ತೆರಿಗೆ ವಿಧಿಸಲಾಗುತ್ತದೆ.ಬಹುತೇಕ ದೇಶಗಳಲ್ಲಿ, ಸಣ್ಣ ನಿಗಮಗಳನ್ನು ದೊಡ್ಡದವುಗಳಿಗಿಂತ ಭಿನ್ನವಾಗಿ ಕಾಣುವ ಶಾಸನಗಳಿವೆ. ಅವು ನಿರ್ದಿಷ್ಟ ಕಾನೂನು ದಾಖಲೆ ಅಗತ್ಯಗಳು ಅಥವಾ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ಹೊಂದಿರಬಹುದು, ವಿಶಿಷ್ಟ ಕ್ಷೇತ್ರಗಳಲ್ಲಿ ಸರಳಗೊಳಿಸಿದ ವಿಧಾನಗಳನ್ನು ಹೊಂದಿರಬಹುದು, ಮತ್ತು ಸರಳಗೊಳಿಸಿದ, ಅನುಕೂಲಕರ, ಅಥವಾ ಸ್ವಲ್ಪ ಭಿನ್ನ ತೆರಿಗೆ ವರ್ತನೆಗೆ ಒಳಪಡಬಹುದು. "ಸಾರ್ವಜನಿಕವಾಗು"ವುದಕ್ಕೆ (ಕೆಲವು ಸಲ ಪ್ರಾಥಮಿಕ ಸಾರ್ವಜನಿಕ ಅರ್ಪಣೆ "ಇನಿಷಿಯಲ್ ಪಬ್ಲಿಕ್ ಆಫ಼ರಿಂಗ್" ಎಂದು ಕರೆಯಲಾಗುವ) -- ಅಂದರೆ ಪ್ರಮುಖವಾಗಿ ವ್ಯಾಪಾರದ ಒಂದು ಭಾಗವನ್ನು ವಿಸ್ತಾರವಾದ ವ್ಯಾಪ್ತಿಯ ಹೂಡಿಕೆದಾರರಿಗೆ ಅಥವಾ ಸಾಮಾನ್ಯವಾಗಿ ಸಾರ್ವಜನಿಕರಿಗೆ ಮಾಲೀಕರಾಗಲು ನೀಡುವುದು -- ಒಂದು ಪ್ರತ್ಯೇಕ ಸಂಸ್ಥೆಯನ್ನು ಸಂಘಟಿಸಲೇಬೇಕು, ಮತ್ತು ಸಾಧಾರಣವಾಗಿ ಅದು ಒಂದು ಬಿಗಿಯಾದ ವರ್ಗದ ಕಾನೂನುಗಳು ಮತ್ತು ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗುತ್ತದೆ.ಬಹುತೇಕ ಸಾರ್ವಜನಿಕ ಸಂಸ್ಥೆಗಳು ಷೇರುಗಳನ್ನು ವಿಕ್ರಯಿಸಿದ ನಿಗಮಗಳಾಗಿವೆ, ಆದರೆ ಹೆಚ್ಚುತ್ತಿರುವ ಏಕಾಂಶಗಳನ್ನು (ಯೂನಿಟ್) ವಿಕ್ರಯಿಸುವ ಸಾರ್ವಜನಿಕ ಪರಿಮಿತ ಹೊಣೆಗಾರಿಕೆ ಕಂಪನಿಗಳು, ಮತ್ತು ಇತರ ಹೆಚ್ಚು ವಿನೂತನ ಸಂಸ್ಥೆಗಳು (ಉದಾ, ಅಮೇರಿಕಾದಲ್ಲಿ ಸ್ಥಿರಾಸ್ತಿ ಹಣಹೂಡಿಕೆ ನ್ಯಾಸ "ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್", ಬ್ರಿಟನ್‌ನಲ್ಲಿ ಏಕಾಂಶ ನ್ಯಾಸಗಳು "ಯೂನಿಟ್ ಟ್ರಸ್ಟ್") ಕೂಡ ಇವೆ. ಆದರೆ, ಒಂದು ಸಾಮಾನ್ಯ ಪಾಲುದಾರಿಕೆಯನ್ನು "ಸಾರ್ವಜನಿಕ" ಮಾಡುವಂತಿಲ್ಲ.ಸಮರ್ಥ ಮತ್ತು ಪರಿಣಾಮಕಾರಿ ವ್ಯಾಪಾರದ ಕ್ರಿಯೆಯ ಅಧ್ಯಯನ ನಿರ್ವಹಣೆಯೆಂದು ಕರೆಯಲಾಗುತ್ತದೆ. ಹಣಕಾಸು ನಿರ್ವಹಣೆ, ವ್ಯಾಪಾರ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಕೌಶಲಯುತ ನಿರ್ವಹಣೆ, ಉತ್ಪಾದನಾ ನಿರ್ವಹಣೆ, ಸೇವಾ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ನಿರ್ವಹಣೆ, ಮತ್ತು ವ್ಯಾಪಾರ ಪ್ರಜ್ಞೆ ನಿರ್ವಹಣೆಯ ಪ್ರಮುಖ ವಿಭಾಗಗಳು. ವರ್ಗೀಕರಣಗಳು.ಹಲವು ಪ್ರಕಾರಗಳ ವ್ಯಾಪಾರಗಳಿವೆ ಹಾಗಾಗಿ ವ್ಯಾಪಾರಗಳನ್ನು ಹಲವು ರೀತಿಯಿಂದ ವರ್ಗೀಕರಿಸಲಾಗುತ್ತದೆ. ಒಂದು ಅತಿ ಸಾಮಾನ್ಯ ರೀತಿ ಒಂದು ವ್ಯಾಪಾರದ ಪ್ರಾಥಮಿಕ ಲಾಭದಾಯಕ ಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತದೆ: ಉತ್ಪಾದಕರು ಕಚ್ಚಾಸಾಮಗ್ರಿ ಅಥವಾ ಅಂಗ ಭಾಗಗಳಿಂದ ಉತ್ಪನ್ನಗಳನ್ನು ತಯಾರಿಸುತ್ತಾರೆ ಮತ್ತು ಆಮೇಲೆ ಲಾಭಕ್ಕೆ ಮಾರುತ್ತಾರೆ. ಕಾರು ಅಥವಾ ಕೊಳವೆಗಳಂತಹ ಭೌತಿಕ ಸರಕುಗಳನ್ನು ಉತ್ಪಾದಿಸುವ ಕಂಪನಿಗಳನ್ನು ಉತ್ಪಾದಕರೆಂದು ಪರಿಗಣಿಸಲಾಗುತ್ತದೆ.ಸೇವಾ ಉದ್ಯಮಗಳು ಸ್ಪರ್ಶಾತೀತ ಸರಕು ಅಥವಾ ಸೇವೆಗಳನ್ನು ನೀಡುತ್ತವೆ ಮತ್ತು ವಿಶಿಷ್ಟವಾಗಿ ಸರ್ಕಾರ, ಇತರ ವ್ಯಾಪಾರಗಳು ಅಥವಾ ಗ್ರಾಹಕರಿಗೆ ಒದಗಿಸಲಾದ ದುಡಿಮೆ ಅಥವಾ ಇತರ ಸೇವಗಳಿಗೆ ಶುಲ್ಕವಿಧಿಸಿ ಲಾಭವನ್ನು ಗಳಿಸುತ್ತವೆ. ಗೃಹ ಸಿಂಗಾರಕರು, ಸಲಹಾ ವ್ಯಾಪಾರಸಂಸ್ಥೆಗಳು, ಉಪಾಹಾರ ಗೃಹಗಳು ಮತ್ತು ಮನೋರಂಜಕರಂತಹ ಸಂಸ್ಥೆಗಳು ಸೇವಾ ಉದ್ಯಮಗಳಾಗಿವೆ. ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರು ಉತ್ಪಾದಕರಿಂದ ತಯಾರಿಸಲಾದ ಸರಕುಗಳನ್ನು ತರಿಸಿ ಉದ್ದೇಶಿತ ಗ್ರಾಹಕನಿಗೆ ಕೊಟ್ಟು ಮಧ್ಯವರ್ತಿಗಳಾಗಿ ಕಾರ್ಯಮಾಡುತ್ತಾರೆ ಮತ್ತು ತಾವು ಒದಗಿಸುವ ಮಾರಾಟ ಮತ್ತು ವಿತರಣಾ ಸೇವೆಗಳಿಂದ ಲಾಭ ಗಳಿಸುತ್ತಾರೆ. ಬಹುತೇಕ ಎಲ್ಲ ಗ್ರಾಹಕ-ಉದ್ದೇಶಿತ ಅಂಗಡಿಗಳು ಮತ್ತು ಕ್ಯಾಟಲಾಗು ಕಂಪನಿಗಳು ವಿತರಕರು ಅಥವಾ ಚಿಲ್ಲರೆ ವ್ಯಾಪಾರಿಗಳಾಗಿವೆ. ವಿತರಣಾ ಅಧಿಕಾರ (ಫ಼್ರ್ಯಾಂಚಾಯ್ಜ಼ಿಂಗ್) ನೋಡಿ ಕೃಷಿ ಮತ್ತು ಗಣಿಗಾರಿಕೆ ವ್ಯಾಪಾರಗಳು ಗಿಡ ಅಥವಾ ಖನಿಜಗಳಂತಹ ಕಚ್ಚಾವಸ್ತುಗಳ ಉತ್ಪಾದನೆಗೆ ಸಂಬಂಧಿಸಿವೆ.ಆರ್ಥಿಕ ವ್ಯಾಪಾರಗಳು, ಬಂಡವಾಳ ಹೂಡಿಕೆ ಮತ್ತು ನಿರ್ವಹಣೆ ಮೂಲಕ ಲಾಭ ಗಳಿಸುವ ಬ್ಯಾಂಕು ಮತ್ತು ಇತರ ಕಂಪನಿಗಳನ್ನು ಒಳಗೊಂಡಿವೆ.ಮಾಹಿತಿ ವ್ಯಾಪಾರಗಳು ಮುಖ್ಯವಾಗಿ ಬೌದ್ಧಿಕ ಆಸ್ತಿಯ ಮರುಮಾರಾಟದಿಂದ ಲಾಭ ಗಳಿಸುತ್ತವೆ ಮತ್ತು ಚಲನಚಿತ್ರ ನಿರ್ಮಾಣಶಾಲೆಗಳು, ಪ್ರಕಾಶಕರು ಮತ್ತು ಒಟ್ಟಾರೆ ವ್ಯವಹಾರಗಳ ತಂತ್ರಾಂಶ (ಸಾಫ಼್ಟ್‌ವೇರ್) ಕಂಪನಿಗಳನ್ನು ಒಳಗೊಂಡಿವೆ.ಸೌಲಭ್ಯಗಳು ಶಾಖ, ವಿದ್ಯುಚ್ಛಕ್ತಿ ಅಥವಾ ಚರಂಡಿ ನಿರ್ವಹಣೆಯಂತಹ ಸಾರ್ವಜನಿಕ ಸೇವೆಗಳನ್ನು ಉತ್ಪಾದಿಸುತ್ತವೆ, ಮತ್ತು ಸಾಮಾನ್ಯವಾಗಿ ಸರ್ಕಾರ ಇವುಗಳನ್ನು ಬಾಡಿಗೆಗೆ ಪಡೆದಿರುತ್ತದೆ.ಸ್ಥಿರಾಸ್ತಿ ವ್ಯಾಪಾರಗಳು ಜಮೀನು, ಮನೆ ಮತ್ತು ಕಟ್ಟಡಗಳನ್ನು ಮಾರುವುದು, ಬಾಡಿಗೆ ಕೊಡುವುದು ಮತ್ತು ಅಭಿವೃದ್ಧಿಗೊಳಿಸುವುದರಿಂದ ಲಾಭವನ್ನು ಗಳಿಸುತ್ತವೆ.ಸಾರಿಗೆ ವ್ಯಾಪಾರಗಳು ಸರಕು ಮತ್ತು ಜನರನ್ನು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ತಲುಪಿಸುತ್ತವೆ ಮತ್ತು ಸಾರಿಗೆ ವೆಚ್ಚಗಳಿಂದ ಲಾಭವನ್ನು ಗಳಿಸುತ್ತವೆವ್ಯಾಪಾರಗಳ ಇತರ ಹಲವು ವಿಭಾಗ ಮತ್ತು ಉಪವಿಭಾಗಗಳಿವೆ. ಉತ್ತರ ಅಮೇರಿಕಾ ಉದ್ಯಮ ವರ್ಗೀಕರಣ ವ್ಯವಸ್ಥೆ (ನಾರ್ತ್ ಅಮೇರಿಕಾ ಇಂಡಸ್ಟ್ರಿ ಕ್ಲಾಸಿಫ಼ಿಕೇಷನ್ ಸಿಸ್ಟಮ್) ಅಥವಾ ಎನ್ಎಆಯ್‌ಸಿಎಸ್, ಉತ್ತರ ಅಮೇರಿಕಾದ ವ್ಯಾಪಾರ ಪ್ರಕಾರಗಳ ವಿಶ್ವಾಸಾರ್ಹ ಪಟ್ಟಿಯೆಂದು ಪರಿಗಣಿಸಲಾಗುತ್ತದೆ. ಎನ್ಎಸಿಇ, ಇದಕ್ಕೆ ಸಮಾನವಾದ ಐರೋಪ್ಯ ಒಕ್ಕೂಟದ (ಯೂರಪಿಯನ್ ಯೂನಿಯನ್) ಪಟ್ಟಿ. ಒಡೆತನದ ಮೂಲಭೂತ ಪ್ರಕಾರಗಳು.- ವ್ಯಾಪಾರ ಒಡೆತನದ ಪ್ರಕಾರಗಳು ಆಡಳಿತ ವ್ಯಾಪ್ತಿ ಬದಲಾದಂತೆ ಬದಲಾಗುತ್ತವಾದರೂ, ಹಲವು ಸಾಮಾನ್ಯ ಪ್ರಕಾರಗಳಿವೆ:ಏಕಮಾತ್ರ ಒಡೆತನ: ಏಕಮಾತ್ರ ಒಡೆತನ ಒಬ್ಬನೇ ವ್ಯಕ್ತಿಯಿಂದ ಹೊಂದಲ್ಪಟ್ಟ ವ್ಯಾಪಾರ. ಮಾಲೀಕ ತಾನೇ ಸ್ವಂತವಾಗಿ ನಿರ್ವಹಿಸಬಹುದು ಅಥವಾ ಇತರರನ್ನು ನೇಮಿಸಿಕೊಳ್ಳಬಹುದು. ಮಾಲೀಕ ವ್ಯಾಪಾರ ತಂದುಕೊಂಡ ಸಾಲಗಳ ಸಂಪೂರ್ಣ ಮತ್ತು ಅಪರಿಮಿತ ವೈಯಕ್ತಿಕ ಹೊಣೆಗಾರಿಕೆ ಹೊಂದಿರುತ್ತಾನೆ. ಪಾಲುದಾರಿಕೆ: ಪಾಲುದಾರಿಕೆ, ಎರಡು ಅಥವಾ ಹೆಚ್ಚು ವ್ಯಕ್ತಿಗಳು ಲಾಭ ಮಾಡುವ ಸಾಮಾನ್ಯ ಧ್ಯೇಯಕ್ಕಾಗಿ ಕೆಲಸ ನಿರ್ವಹಿಸುವ ಒಂದು ವ್ಯಾಪಾರದ ಪ್ರಕಾರ. ಪ್ರತಿ ಪಾಲುದಾರ ಪಾಲುದಾರಿಕೆ ತಂದುಕೊಂಡ ಸಾಲಗಳ ಸಂಪೂರ್ಣ ಮತ್ತು ಅಪರಿಮಿತ ವೈಯಕ್ತಿಕ ಹೊಣೆಗಾರಿಕೆ ಹೊಂದಿರುತ್ತಾನೆ. ಪಾಲುದಾರಿಕೆಗಳ ಮೂರು ವಿಶಿಷ್ಟ ವರ್ಗೀಕರಣಗಳಿವೆ: ಸಾಮಾನ್ಯ ಪಾಲುದಾರಿಕೆ, ಪರಿಮಿತ ಪಾಲುದಾರಿಕೆ, ಮತ್ತು ಪರಿಮಿತ ಹೊಣೆಗಾರಿಕೆಯ ಪಾಲುದಾರಿಕೆ. ನಿಗಮ: ವ್ಯಾಪಾರ ನಿಗಮ, ತನ್ನ ಸದಸ್ಯರಿಗಿಂತ ಬೇರೆಯಾದ ಪ್ರತ್ಯೇಕ ಕಾನೂನುಬದ್ಧ ವ್ಯಕ್ತಿತ್ವ ಹೊಂದಿದ ಒಂದು ಲಾಭದ ದೃಷ್ಟಿಯುಳ್ಳ ಪರಿಮಿತ ಹೊಣೆಗಾರಿಕೆಯ ವಸ್ತು. ಒಂದು ನಿಗಮ ಅನೇಕ ಷೇರುದಾರರಿಂದ ಸ್ವಾಮಿತ್ವಪಡೆದಿರುತ್ತದೆ ಮತ್ತು ವ್ಯಾಪಾರದ ನಿರ್ವಾಹಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಒಂದು ನಿರ್ದೇಶಕ ಮಂಡಲಿಯಿಂದ ಪಾರುಪತ್ಯ ಮಾಡಲ್ಪಡುತ್ತದೆ. ಸಹಕಾರಿ: "ಸಹಕಾರಿ ಉದ್ಯಮ"ವೆಂದೂ ಅನೇಕ ಸಲ ಕರೆಯಲಾಗುವ, ಸಹಕಾರ ಸಂಸ್ಥೆ ಲಾಭದ ದೃಷ್ಟಿಯುಳ್ಳ ಪರಿಮಿತ ಹೊಣೆಗಾರಿಕೆಯ ವಸ್ತು ಮತ್ತು ಷೇರುದಾರರ ಬದಲು ಸದಸ್ಯರು ನಿರ್ಣಯಿಸುವ ಅಧಿಕಾರ ಹಂಚಿಕೊಳ್ಳುವುದರಿಂದ ಇದು ನಿಗಮಕ್ಕಿಂತ ಬೇರೆ ಯಾಗಿದೆ. ಸಹಕಾರ ಸಂಸ್ಥೆಗಳನ್ನು ವಿಶಿಷ್ಟವಾಗಿ ಗ್ರಾಹಕ ಸಹಕಾರ ಸಂಸ್ಥೆ ಮತ್ತು ಕಾರ್ಮಿಕ ಸಹಕಾರ ಸಂಸ್ಥೆ ಎಂದು ವರ್ಗೀಕರಿಸಲಾಗುತ್ತದೆ. ಆರ್ಥಿಕ ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಸಹಕಾರ ಸಂಸ್ಥೆಗಳು ಆಧಾರವಾಗಿವೆ. ಪ್ರತಿ ದೇಶದ ಕಾನೂನುಬದ್ಧವಾಗಿ ಮಾನ್ಯಮಾಡಿದ ವ್ಯಾಪಾರ ಪ್ರಕಾರಗಳ ಪಟ್ಟಿಗಾಗಿ ವ್ಯಾಪಾರ ತತ್ತ್ವಗಳ ಪ್ರಕಾರಗಳು ನೋಡಿ. ಉಲ್ಲೇಖಗಳು []

ನಿಮ್ಮ ಲೇಖನವು ಸರಳ ರೀತಿಯಲ್ಲಿ ನಮಗೆ ತಿಳಿಯುತಿಲ್ಲ.

  1. https://en.wikipedia.org/wiki/Business
  2. http://search.snapdo.com/?st=ad&q=business+combination