ಸದಸ್ಯ:Sathya 1310158/sandbox
ಪರಿಚಯ
ಬ್ಯಾಂಕಿಂಗ್ ವ್ಯವಸ್ಥೆ ಅವಲಂಬಿಸಿರುವುದೇ ಬ್ಯಾಂಕ್-ಗ್ರಾಹಕರ ಇಳ್ಳೇ ಸಂಬಂಧವನ್ನು. ದೇಶದಲ್ಲಿ ಆರ್ಥಿಕ ವ್ಯವಸ್ಥೆ ಬದಲಾಗುತ್ತ ನಡೆದಂತೆ ಬ್ಯಾಂಕಿಂಗ್ ಕ್ಶೇತ್ರವೂ ಕೂಡ ತನ್ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದೆ. ಸರ್ಕಾರವು ಮುಕ್ತ ಆರ್ಥಿಕ ನೀತಿಯನ್ನು ಜಾರಿಯಲ್ಲಿ ತಂದಾಗ, ಬ್ಯಾಂಕುಗಳೂ ಅದರ ಜೊತೆ ಹೆಜ್ಜೆಹಾಕಲು ಸನ್ನದ್ಧತೆಗಳನ್ನು ಮಾಡಿಕೊಳ್ಳ ಬೇಕಾಯಿತು.
ಗ್ರಾಹಕನ ಸೇವೆಯ ಗುಣಮಟ್ಟವನ್ನು ಎತ್ತರಿಸಲು, ೧೯೯೦-೧೯೯೨ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ಶ್ರೀ ಎಂ. ಎನ್. ಗೋಯ್ ಪೊರಿಯಾ ಅವರ ನೇತ್ರತ್ವದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯವು ಒಂದು ಸಮಿತಿಯನ್ನು ನಿಯಮಿಸಿತು. ಈ ಸಮಿತಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತ್ವರಿತವಾಗಿ ಅನುಷ್ಟಾನಗೊಳಿಸಲು ಬರುವಂತಹ ಹಲವು ಸಲಹೆಗಳನ್ನಿತ್ತು, ಅವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿತು.
೧)ಬ್ಯಾಂಕುಗಳೇ ನೇರವಾಗಿ ಅನುಷ್ಟಾನಕ್ಕೆ ತರಬೇಕಾದ ಸಲಹೆಗಳು. ೨)ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ ಪೂರ್ವಾನುಮತಿ ಪಡೆದು ಅನುಷಬೇಕಾದ ಸಲಹೆಗಳು. ೩)ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡು ಅನುಷ್ಟಾನ್ಗೊಳಿಸಬೇಕಾದ ಸಲಹೆಗಳು. ೪)ಬ್ಯಾಂಕು ಆಡಳಿತವು ತನ್ನ ಕಾರ್ಮಿಕ ಸಂಘಗಳೊಡನೆ ಸಮಾಲೋಚಿಸಿ ನಂತರ ತರಬೇಕಾದ ಸುಧಾರಣೆಗಳು.
ಮೊದಲನೇ ಸಲಹೆಯಂತೆ ಬ್ಯಾಂಕುಗಳು ಗ್ರಾಹಕರಿಗೆ ತ್ವರಿತವಾಗಿ ಸೇವೆಗಳನ್ನು ಸಲ್ಲಿಸಲು ತಾನೇ ತನ್ನ ಆಡಳಿತ ಯಂತ್ರವನ್ನು ಚುರುಕುಗೊಳಿಸುವುದು. ಭಾರತೀಯ ಸ್ಟೇಟ್ ಬ್ಯಾಂಕ್, ಗ್ರಾಹಕರ ಹಕ್ಕು ಬಾಧ್ಯತೆಗಳೇನು, ಬ್ಯಾಂಕು ಅವುಗಳಿಗೆ ಹೇಗೆ ಸ್ಪಂದಿಸಬೇಕು ಅನ್ನುವ ವಿವರಗಳಿರುವ ಪುಸ್ತಕವನ್ನು ಮುದ್ರಿಸಿ ಗ್ರಾಹಕರಿಗೆ ಹಂಚಿದ್ದಾರೆ. ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಪರಿಗ್ನಾನವನ್ನು ಮಾಡಿಕೊಡುವುದು. ಇನ್ನೊಂದು ಕಡೆ ಸಿಬ್ಬಂದಿ ಎಚ್ಚೆತ್ತು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವುದು.
ನೋಟು ಎಣಿಸುವ ಯಂತ್ರ :
ನಗರ ಪ್ರದೇಶದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವುದರಿಂದ, ಹಣವನ್ನು ಪಡೆಯಲು ಕೌಂಟರಿನ ಹತ್ತಿರ ನಿಂತು ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಬ್ಯಾಂಕ್ ಸಿಬ್ಬಂದಿಯ ಸಮಯಶ್ರಮಗಳನ್ನು ಉಳಿಸಲು ಹಣವನ್ನು ಎಣೆಸಿ ಕೊಡುವ ಯಂತ್ರವನ್ನು ಇಟ್ಟಿರುತ್ತಾರೆ. ಬ್ಯಾಂಕ್ ಸಿಬ್ಬಂದಿಯ ಉಪಯೋಗಕ್ಕಾಗಿ ಇರುವ ಯಂತ್ರಗಳಲ್ಲದೆ ಗ್ರಾಹಕರಿಗೇ ಪ್ರತ್ಯೇಕವಾದ ಯಂತ್ರಗಳನ್ನು ಇಡಲಾಗಿರುತ್ತದೆ. ಇದರಿಂದ ಹಣ ಎಣಿಸಲು ಗ್ರಾಹಕರಿಗೆ ಅನುಕೂಲವಾಗುತ್ತದೆ.
ವಿದ್ಯುನ್ಮಾನ ಹಣ ರವಾನೆ :
ಕ್ಷಿಪ್ರವಾಗಿ ಹಣವನ್ನು ಊರಿಂದ ಊರಿಗೆ ವರ್ಗಾಯಿಸಬೇಕಾದರೆ ಈ ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಹಣವನ್ನು ವರ್ಗಾಯಿಸಬಹುದು. ಇದಕ್ಕೆ "ELECTRONIC REMITTANCE" ಎಂದು ಕರೆಯುತ್ತಾರೆ. ಹಾಗೆಯೇ, ಗ್ರಾಹಕರ ವಿದ್ಯುತ್ ಬಿಲ್, ನೀರಿನ ಬಿಲ್, ಟೆಲಿಫೋನ್ ಬಿಲ್, ಮನೆ ಕಂದಾಯ ಮುಂತಾದುವನ್ನು ಪಾವತಿ ಮಾಡಲು ವಿದ್ಯುನ್ಮಾನ ಪಾವತಿ ವ್ಯವಸ್ಥೆಯಿಂದ ತೀರಾ ಸುಲಭವಾಗಿದೆ.
ಸ್ಮಾರ್ಟ್ ಕಾರ್ಡ್
ಈ ಸ್ಮಾರ್ಟ್ ಕಾರ್ಡ್ ಪ್ಲಾಸ್ಟಿಕ್ ಕಾರ್ಡಿನಂತೆ ಇರುತ್ತದೆ. ಈ ಕಾರ್ಡನ್ನು ಹೊಂದಬೇಕಾದರೆ ಗ್ರಾಹಕನು ಬ್ಯಾಂಕಿನಲ್ಲಿ 'ಸ್ಮಾರ್ಟ್ ಖಾತೆ'ಯನ್ನು ತೆರೆಯಬೇಕಾಗುವದು. ಈ ಕಾರ್ಡಿನಲ್ಲಿ ಗ್ರಾಹಕನು ಈ ಖಾತೆಗೆ ಎಷ್ಟು ಹಣವನ್ನು ಕಟ್ಟಿದ್ದಾನೆ ಅನ್ನುವ ವಿವರಗಳು ಇರುತ್ತಾನೆ. ಈ ಕಾರ್ಡನ್ನು ಪಡೆದವನು ಆ ಬ್ಯಾಂಕಿನ ಯಾವುದೀ ಶಾಖೆಗೆ ಹೋಗಿ ಬ್ಯಾಂಕಿನವರು ಗ್ರಾಹಕನಿಗೆ ಕೊಟ್ಟಿರುವ ಗುಪ್ತ ಸಂಕೇತದಿಂದ ತನ್ನ ಖಾತೆಯಲ್ಲಿ ಜಮಾ ಇರುವಷ್ಟು ಹಣವನ್ನು ಪಡೆಯಬಹುದು. ಇಂತಹ ವಿಶೇಷ ಸೇವೆ ಸಲ್ಲಿಸುವ ಬ್ಯಾಂಕ್ ಶಾಖೆಗಳನ್ನು ಕ್ರತಕ ಉಪಗ್ರಹದ ಮೂಲಕ ಸಂಪರ್ಕಿಸಲಾಗಿರುತ್ತದೆ.ಇದರಿಂದ ಖಾತೆದಾರರು ಸ್ಮಾರ್ಟ್ ಕಾರ್ಡನ್ನು ಬಳಸಿಕೊಂಡು, ತನ್ನ ಖಾತಾ ಬ್ಯಾಂಕಿನ ಯಾವುದೇ ಶಾಖೆಯಿಂದ, ಯಾವಾಗ ಬೇಕಾದರೂ ತನ್ನ ಹಣವನ್ನು ಪಡೆಯಬಹುದು. ಒಂದು ಪಕ್ಷ ಕಾರ್ಡ್ ಕಳೆದುಹೋದರೆ, ಮೂಲ ಖಾತೆಯಲ್ಲಿ ಹಣವು ಭದ್ರವಾಗಿರುತ್ತದೆ. ಆ ಶಾಖೆಯ ಮೂಲಕ ಅವನು ತನ್ನ ಖಾತೆಯ ವಿವರಗಳನ್ನು ಪಡೆಯಬಹುದು. ಸ್ಮಾರ್ಟ್ ಕಾರ್ಡುಗಳನ್ನು ಕ್ರೆಡಿಟ್ ಕಾರ್ಡುಗಳಂತೆಯೂ ಹಣ ಪಾವತಿ ಮಾಡಲು ಬಳಸಬಹುದು. ಕ್ರೆಡಿಟ್ ಕಾರ್ಡುಗಳಲ್ಲಿ ಕಾರ್ಡುಧಾರಕನಿಗೆ ಉದ್ದರಿ ಮಿತಿ ಇರುತ್ತದೆ. ಸ್ಮಾರ್ಟ್ ಕಾರ್ಡುಗಳ ಮೂಲಕ ಪಡೆಯುವ ಹಣಕ್ಕೆ ಕಾರ್ಡುದಾರನು ಬ್ಯಾಂಕಿನಲ್ಲಿಟ್ಟ ಟೇವಣಿಯು ಆಧಾರವಾಗಿರುತ್ತದೆ.
ಸ್ವಯಂಚಾಲಿತ ಶರಾಫ್ ಯಂತ್ರ (ಎ.ಟಿ.ಎಂ)
ಗ್ರಾಹಕರಿಗೆ ಇದೊಂದು ವರದಾನ. ಈ ಯಂತ್ರವಿದ್ದರೆ, ಯಾವುದೇ ಒಂದು ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿರಲಿ, ಅಲ್ಲಿಂದ ಅದೇ ದಿವಸ ಮತ್ತು ತನಗೆ ಬೇಕಾದ ಸಮಯದಲ್ಲಿ ತನ್ನ ಬ್ಯಾಂಕಿಂಗ್ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಈ ಯಂತ್ರದ ಮೂಲಕ ಗ್ರಾಹಕನು ಹಣವನ್ನು ಪಡೆಯಬಹುದು. ಇದಕ್ಕಾಗಿ ಅವನು ಕೌಂಟರಿನಲ್ಲಿ ಚೆಕ್ಕನ್ನಿತ್ತು ಸರದಿಯ ಪಾಳಿಯಲ್ಲಿ ನಿಲ್ಲಬೇಕಾಗಿಲ್ಲ. ಈ ಯಂತ್ರ ಬಳಕೆಯ ಲಭ್ಯವಿರುವ ಗ್ರಾಹಕರಿಗೆ ಒಂದೊಂದು ಗುಪ್ತಸಂಕೇತ ಕೊಟ್ಟಿರುತ್ತಾರೆ. ಇದರ ಮೂಲಕ ವ್ಯವಹಾರವು ಗೋಪ್ಯವಾಗಿ ನಡೆಯುತ್ತದೆ. ಈ ರೀತಿಯ ಯಂತ್ರಗಳ ನಡುವೆ ಕ್ರತಕ ಉಪಗ್ರಹಗಳನ್ನು ಬಳಸಿ ಸಂಪರ್ಕ ಕಲ್ಪಿಸಲಾಗಿರುತ್ತದೆ. ಯಾವುದೇ ಊರಿಗೆ ಹೋದರೆ, ನೀವು ಅಲ್ಲಿ ನಿಮ್ಮ ಮೂಲ ಖಾತೆಯೊಂದಿಗೆ ವ್ಯವಹರಿಸಬಹುದು. ಈಗ ಬಹುತೇಕ ಎಲ್ಲ ಪ್ರಮುಖ ಬ್ಯಾಂಕುಗಳು ದೇಶಾದ್ಯಂತ ತಮ್ಮ ಎ.ಟಿ.ಎಂ ಜಾಲವನ್ನು ಸ್ಥಾಪಿಸಿವೆ. ೧೫,೦೦೦ಕ್ಕೂ ಹೆಚ್ಚು ಸಂಖ್ಯೆಯ ಎ.ಟಿ.ಎಂ. ಜಾಲವನ್ನು ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಚೂಣಿಯಲ್ಲಿದೆ. ಹಲವು ಬ್ಯಾಂಕುಗಳು ಒಟ್ಟುಗೂಡಿ ಎ.ಟಿ.ಎಂ ಜಾಲಗಳನ್ನು ನಿರ್ಮಿಸಿ ಕೊಂಡಿವೆ.
ವಿಶ್ವವ್ಯಾಪಿ ಅಂತರಬ್ಯಾಂಕ್ ಹಣಕಾಸು ದೂರಸಂಪರ್ಕ ಸಂಸ್ಥೆ
ವಿದೇಶೀ ವ್ಯಾಪಾರದಲ್ಲಿ ತೊಡಗಿದ ವ್ಯಾಪಾರಸ್ಥರು ತಮ್ಮ ನಿತ್ಯದ ಹಣಕಾಸು ವಹಿವಾಟುಗಳಿಗೆ ತಂತ್ರಗ್ನಾನದ ಲಾಭವನ್ನು ಪಡೆಯಬಹುದು. ವಿದೇಶದಲ್ಲಿ ನೆಲಸಿರುವ ವ್ಯವಹಾರಸ್ಥರ ಮಾಹಿತಿಯನ್ನು ಕುಳಿತಲ್ಲೇ ಪಡೆಯಬಹುದು. ತ್ವರಿತವಾಗಿ ವಿದೇಶದಿಂದ ಹಣವನ್ನು ತರಿಸಿಕೊಳ್ಳಬಹುದು ಅಥವಾ ವಿದೇಶಕ್ಕೆ ಕಳಿಸಬಹುದು. ಈ ಸಂಸ್ಥೆಯ ಸದಸ್ಯತ್ವ ಪಡೆದ ಬ್ಯಾಂಕುಗಳು ಮಾತ್ರ ಈ ವಿಶೇಷ ತಂತ್ರಗ್ನಾನದ ಉಪಯೋಗ ಪಡೆಯಬಹುದು. ವಿದೇಶೀ ಬ್ಯಾಂಕುಗಳು ಒಡ್ಡುವ ಸವಾಲನ್ನು ದೇಶೀಯ ಬ್ಯಾಂಕುಗಳು ಈ ತಂತ್ರಗ್ನಾನದಿಂದ ಸಹಜವಾಗಿ ಎದುರಿಸಬಹುದು. ಈ ತಂತ್ರಗ್ನಾನವನ್ನು ಅನೇಕ ಪರಿಣತ ಬ್ಯಾಂಕ್ ಶಾಖೆಗಳು ಬಳಸಿಕೊಂಡು ಹಣ ರವಾನೆಯನ್ನು ತ್ವರಿತವಾಗಿ ಮಾಡುತ್ತಿವೆ. ಅಂತರಾಷ್ಟ್ರೀಯ ವ್ಯವಹಾರದಲ್ಲಿ ದಕ್ಷತೆ ಸಾಧಿಸಲು ಈ ತಂತ್ರಗ್ನಾನದ ಬಳಕೆಯಿಂದ ತುಂಬ ನೆರವಾಗಿದೆ. ಅಂತರ ಬ್ಯಾಂಕ್ ಹಣ ರವಾನೆಯನ್ನು ಸುರಕ್ಷಿತವಾಗಿ ಮಾಡುವುದಲ್ಲದೆ ತುರ್ತಾಗಿ ಮತ್ತು ಗೋಪ್ಯವಾಗಿ ಸಂದೇಶಗಳನ್ನು ನೀಡುವುದಕ್ಕೂ ಇದು ಸಹಾಯಕವಾಗಿದೆ.
ವಿದ್ಯುನ್ಮಾನ ಸಮನ್ವಯ
ಬ್ಯಾಂಕುಗಳು ತಮ್ಮ ಶಾಖೆಗಳ ನಡುವಿನ ಅಥವಾ ಇತರ ಬ್ಯಾಂಕುಗಳ ನಡುವಿನ ಲಕ್ಷಾಂತರ ವಹಿವಾಟುಗಳನ್ನು ಸುಲಭವಾಗಿ ತಾಳೆ ಮಾಡಲು ಈ ತಂತ್ರಗ್ನಾನವನ್ನು ಬಳಸಲಾಗುತ್ತದೆ. ಈ ಮೊದಲು ವಹಿವಾಟುಗಳ ತಾಳೆ ಕಾರ್ಯ ವಿಳಂಬವಾಗುತ್ತಿದ್ದು. ಅನೇಕ ನಮೂದುಗಳು ತಾಳೆಯಾಗದೆ ಉಳಿಯುತ್ತಿದ್ದವು. ದೀರ್ಘಕಾಲ ತಾಳೆಯಾಗದ ವಹಿವಾಟುಗಳಿಂದ ವಂಚನೆ ಪ್ರಕರಣಗಳ ಸಾಧ್ಯತೆಯೂ ಹೆಚ್ಚಾಗಿರುತ್ತಿತ್ತು. ವಿದ್ಯುನ್ಮಾನ ಸಮನ್ವಯದಿಂದ ಇಂಥ ವಂಚನೆ ಪ್ರಕರಣಗಳು ಗಣನೀಯವಾಗಿ ತಗ್ಗಿದೆ.