ಸದಸ್ಯ:Saniyar708/ನನ್ನ ಪ್ರಯೋಗಪುಟ6

ವೇಣೂರು ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದಾಗಿದೆ.

ಈ ಬಸದಿಯ ಎದುರುಗಡೆ ಕರಿಗಲ್ಲಿನಿಂದ ನಿರ್ಮಿತವಾದ ಒಂದು ಸುಂದರ ಮಾನಸ್ತಂಭವಿದೆ. ಇದು ಸುಮಾರು ೩೫ ಅಡಿ ಎತ್ತರವಿದೆ. ಜಿಲ್ಲೆಯಲ್ಲಿ ಎತ್ತರದ ದೃಷ್ಠಿಯಿಂದ ೨ನೇ ಸ್ಥಾನವನ್ನು ಪಡೆದಿದೆ ಎಂದು ಹೇಳಲಾಗುತ್ತದೆ. ಅಷ್ಟಪಟ್ಟಿ ಪೀಠದ ಮೇಲಿರುವ ಮೂರು ಹಂತಗಳ ವೇದಿಕ ಮೇಲೆ ಇದು ನಿಂತುಕೊಂಡಿದೆ. ಸ್ತಂಭವು ೫ ಅಂಕಣಗಳನ್ನು ಹೊಂದಿದೆ. ಇದರ ಅತ್ಯಂತ ಕೆಳ ಅಂಕಣದ ನಾಲ್ಕು ಮೈಗಳಲ್ಲಿ ಪದ್ಮಾಸನ ರೂಢರಾದ ೨೪ ತೀರ್ಥಂರರ ಮೂರ್ತಿಗಳನ್ನು ತೋರಿಸಲಾಗಿದೆ. ಅದಕ್ಕಿಂತ ಮೇಲಿನ ಅಂಕಣದಲ್ಲಿ ನೃತ್ಯಗಾತಿಯರ, ಕಲಶಗಳ ಮತ್ತು ನಿಂತ ಭಂಗಿಯಲ್ಲಿರುವ ನಾಲ್ಕು ತೀರ್ಥಂಕರರ ಆಕೃತಿಗಳಿವೆ. ಮಾನಸ್ತಂಭದ ತುದಿಯಲ್ಲಿರುವ ಬೋದಿಗೆಯಂತಹ ರಚನೆ ಮೇಲೆ ಒಂದು ಮಂಟಪ, ಈ ಮಂಟಪ ಉತ್ತರ ದಿಕ್ಕಿನಲ್ಲಿ ಸಿಂಹದ ಕೆಳಗೆ ಎರಡೂ ಕಲಶದ ಕೆತ್ತನೆಯಿದೆ.ಮಾನಸ್ತಂಭದಿಂದ ಪಶ್ಚಿಮಕ್ಕೆ ೨೦ ಅಡಿ ಅಂತರದಲ್ಲಿ ಮುಖ ಮಂಟಪ ಮತ್ತು ಬಸದಿಯ ಪ್ರವೇಶ ದ್ವಾರಗಳಿವೆ, ಈ ಮುಖ ಮಂಟಪದಲ್ಲಿ ನೆಲ ಮಾಳಿಗೆ, ಮಧ್ಯಮ ಮಾಳಿಗೆ ಮತ್ತು ಮೇಲಿನ ಮಾಳಿಗೆ ಎಂಬ ಮೂರು ಅಂತಸ್ತುಗಳಿವೆ. ಈ ಬಸದಿಯ ಗೋಡೆ ಮತ್ತು ಮಾಡು ಎಲ್ಲಾ ಕಗ್ಗಲಿನಿಂದ ಮಾಡಲ್ಪಟ್ಟಿದ್ದರಿಂದ ಇದನ್ನು ಕಲ್ಲು ಬಸದಿಯೆಂದು ಕರೆಯುತ್ತಾರೆ. ಇದು ವೇಣೂರಿನ ಎಲ್ಲಾ ಬಸದಿಯ ಪೈಕಿ ಎತ್ತರವಾದ ಸ್ಥಳದಲ್ಲಿದೆ.[]

ಮಂಟಪ ವಿಶೇಷತೆ

ಬದಲಾಯಿಸಿ

ಬಸದಿಯ ಒಳ ಪ್ರವೇಶಿಸುತ್ತಲೇ ಸಮವಸರಣ ಮಂಟಪವಿದೆ. ಆ ಮಂಟಪದಲ್ಲಿ ವಿವಿಧ ರೀತಿಯ ಕೆತ್ತನೆಗಳಿಂದ ಕೂಡಿದ ೪ ಕಂಬಗಳು ಮಂಟಪದ ಛಾವಣಿಯ ಒಳ ಭಾಗದಲ್ಲಿ ವಿವಿಧ ರೀತಿಯ ಕುಸುರಿ ಕೆತ್ತನೆಗಳಿವೆ. ಇಂದಿನ ಕಾಲದಲ್ಲಿ ರಾಜರು ತಾವೂ ಸಂಗ್ರಹಿಸಿದ ಧನವನ್ನು ಈ ಮಂಟಪದ ಕೆಳಭಾಗದಲ್ಲಿರುವ ನೆಲ ಮಾಳಿಗೆಯಲ್ಲಿ ಸಂರಕ್ಷಿಸಿ ಇಡುತ್ತಿದ್ದರು. ಬಸದಿಯ ಬಲ ಭಾಗದ ಮೊದಲ ಕಂಬದಲ್ಲಿ ಗರುಡ ಯಕ್ಷನ ಆಕೃತಿಯಿದೆ. ಎರಡನೇ ಕಂಬದಲ್ಲಿ ಆನೆಯ ಚಿತ್ರವಿದೆ. ಇಲ್ಲಿಂದ ಮುಂದಕ್ಕೆ ಹೋದಾಗ ಅಭಿಷೇಕ ಮಂಟಪವಿದ್ದು, ಮಾಳಿಗೆಗೆ ಹೋಗುವ ಮೆಟ್ಟಿಲುಗಳಿವೆ. ಶ್ರೀ ಶಾಂತಿನಾಥ ಬಸದಿಯ ಗರ್ಭಗೃಹವೂ ಮಂಟಪದೊಳಗೆ ೨೧ ತೀರ್ಥಂಕರರ ಮೂರ್ತಿಗಳಿದ್ದು, ಇಲ್ಲಿಯೇ ೧೬ನೇ ತೀರ್ಥಂಕರಾದ ಭಗವಾನ್ ಶ್ರೀ ಶಾಂತಿನಾಥ ಮೂಲ ಸ್ವಾಮಿಯ ವಿಗ್ರಹವೂ ಇದೆ. ಈ ಮೂಲ ಸ್ವಾಮಿಯ ವಿಗ್ರಹವೂ ಪೂರ್ವಾಭಿ ಮುಖವಾಗಿ ಪ್ರತಿಷ್ಠಿತಾಪಿತವಾಗಿದ್ದು, ಕರಿಶಿಲೆಯಿಂದ ಮಾಡಲ್ಪಟ್ಟಿದೆ. ೫ ಅಡಿ ಎತ್ತರವಿದ್ದು, ಅಶೋಕ ವೃಕ್ಷ, ಪುಷ್ಟ ವೃಷ್ಟಿ, ದಿವ್ಯದ್ವನಿ, ಚಾಮರ, ಸಿಂಹಪೀಠ, ಪ್ರಭ ಮಂಡಲ, ದುಂಧುಭಿ ಮತ್ತು ಮುಕ್ಕೊಡೆ ಎಂಬ ಅಷ್ಟ ಮಹಾಪ್ರಾತಿಹರ‍್ಯಗಳಿಂದ ಶೋಭಿತವಾಗಿದೆ. ಸ್ವಾಮಿಯ ಮುಖದಿಂದ ನಗು ಮಿನುಗುವಂತಿದೆ. ಇದು ಅಂದಿನ ಕಾಲದ ಶಿಲ್ಪಕಲಾ ನೈಪುಣ್ಯವನ್ನು ಪ್ರದರ್ಶಿಸುತ್ತದೆ. ಈ ಮೂರ್ತಿ ಅಕ್ಕ ಪಕ್ಕಗಳಲ್ಲಿ ಗರುಡ ಮತ್ತು ಮಹಾಮಾನಸಿ ಯಕ್ಷ ಯಕ್ಷಿಯರ ಸುಂದರ ಮೂರ್ತಿಗಳಿವೆ. ಪೂಜಾ ಮಂಟಪದಲ್ಲಿ ನೇಮಿನಾಥ ತೀರ್ಥಂಕರಿಗೆ ಕೂಷ್ಮಾಂಡಿನಿ ಮತ್ತು ಸರ್ವಾಹ್ಣ- ಯಕ್ಷ ಯಕ್ಷಿಯರು ಅವರ ಪೈಕಿ ಧರ್ಮಚಕ್ರವನ್ನು ಹಿಡಿದುಕೊಂಡ ಸರ್ವಾಹ್ಣ ಯಕ್ಞನು ತೀರ್ಥಂಕರರನ್ನು ನೋಡಲು ಬರುವ ನಮಗೆ ಸ್ವಾಗತ ಕೋರುವಂತೆ ಕಾಣುತ್ತದೆ. ಇದು ಬಹು ಸುಂದರವಾದ ಮೂರ್ತಿ.

ಪೊಜೆಯ ವಿಶೇಷತೆ

ಬದಲಾಯಿಸಿ

ಈ ಪೂಜಾ ಮಂಟಪದ ಸುತ್ತಲು ತೀರ್ಥಂಕರರ ಮೂರ್ತಿಗಳಿವೆ. ಬ್ರಹ್ಮ ಯಕ್ಷನ ವಿಗ್ರಹವು ಪೂಜಾ ಪಂಟಪದ ಕೆಳಗೆಯಿದ್ದು, ಕುದುರೆ ಮೇಲೆ ಕುಳಿತುಕೊಂಡಿದೆ. ಎಡ ಕೈಯಲ್ಲಿ ಕುದುರೆ ಲಗಾಮು ಬಲದ ಕೈಯಲ್ಲಿ ಖಡ್ಗವನ್ನು ಹಿಡಿದು ವೀರ ಭಂಗಿಯಲ್ಲಿರುವುದು ಕಂಡುಬರುತ್ತದೆ. ಇದು ನುಣುಪಾದ ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದೆ. ಅದರ ಪಕ್ಕದಲ್ಲಿ ಬಾಹುಬಲಿಯ ಮೂರ್ತಿಯೂ ಜೊತೆಯಲ್ಲಿ ಶಾಂತಿನಾಥ ಮೂರ್ತಿಯೂ ಇದೆ. ಇವರ ಪಕ್ಕದಲ್ಲಿ ದೇವಾ ದೇವಿಯರು ಚಾಮರವನ್ನು ಹಿಡಿದುಕೊಂಡು ನಿಂತಿದ್ದಾರೆ. ಇದರ ಬಳಿಯಲ್ಲಿ ಶ್ರೀ ಚಂದ್ರಪ್ರಭ ಎಂಬ ೮ನೇ ತೀರ್ಥಂಕರರ ವಿಗ್ರಹವಿದೆ. ಇದರ ಎರಡೂ ಬದಿಗೆ ವಿಜಯ ಯಕ್ಷ ಮತ್ತು ಜ್ವಾಲಾ ಮಾಲಿನಿ ಯಕ್ಷಿಯರ ವಿಗ್ರಹವಿದೆ. ಇಲ್ಲಿ ಶ್ರೀ ನೇಮಿನಾಥ ತೀರ್ಥಂಕರರು ಮತ್ತು ನಾಲ್ಕು ಕೈಗಳನ್ನು ಹೊಂದಿ ಆನೆಯ ಮೇಲೆ ಕುಳಿತುಕೊಂಡಿರುವ ಸವಾಹ್ಣ ಯಕ್ಷ ಮೂರ್ತಿಗಳಿವೆ. ಈ ಬಸದಿಯು ಚಾಕಾಕಾರವಾಗಿದೆ. ಬಸದಿಯ ಸುತ್ತಲು ೨೪ ಕಂಬಗಳಿವೆ. ಈ ಬಸದಿಗೆ ತಾಗಿ ೨ ಶಿಲಾ ಲೇಖಗಳಿವೆ. ಈ ಶಿಲಾ ಲೇಖಗಳಲ್ಲಿ ೩ ಅಂತಸ್ತಿನ ಮುಕ್ಕೋಡೆ ಮತ್ತು ಎರಡೂ ಬದಿಯಲ್ಲಿ ಸೂರ್ಯ ಚಂದ್ರನ ರಚನವಿದೆ. ಇವುಗಳ ಪೈಕಿ ಒಂದು ಶಾಸನವೂ ಶಾಲಿವಾಹನ ಶಕ ೧೪೧೧ನೇಯ ಸೌಮ್ಯ ಸಂವತ್ಸರಕ್ಕೆ ಸಂಬಂಧಿಸಿದ್ದು. ವೇಣೂರಿನ ಈ ರಾಜ್ಯವನ್ನು ಪೂಂಜಳಿಕೆ ರಾಜ್ಯವೆಂದು ಕರೆದಿದೆ. ಈ ಹೇಳಿಕೆಯು ಮುಂದಿನ ಹಲವಾರು ಸಂಶೋಧನೆಗಳಿಗೆ ಮಾರ್ಗವನ್ನು ತೋರಿಸಿಕೊಟ್ಟಿತ್ತು. ಇನ್ನೊಂದು ಶಾಸನವೂ ಶಾಲಿವಾಹನ ಶ.ಕ ೧೪೫೭ನೇ ಹೇವಿಳಂಬಿ ಸಂವತ್ಸರದಾಗಿದ್ದು, ಈ ಜಿನಾಲಯದ ಬಳಿಯಲ್ಲಿರುವ ಚವ್ವೀಸ ತೀರ್ಥಂಕರರ ಬಸದಿಯಲ್ಲಿ ೨೪ ತೀರ್ಥಂಕರರ ಶಿಲಾ ಮೂರ್ತಿಯನ್ನು ಪ್ರತಿಷ್ಟಾಪಿಸಿರುವುದರ ಬಗ್ಗೆ ತಿಳಿಸುತ್ತದೆ.

ಹಿನ್ನಲೆ

ಬದಲಾಯಿಸಿ

ಪ್ರಾಕಾರದ ೪ ಮೂಲೆಗಳಲ್ಲಿ ಅಲಂಕಾರಕ್ಕಾಗಿ ನಾಲ್ಕು ಚಿಕ್ಕ ಮಂಟಪಗಳನ್ನು ನಿರ್ಮಿಸಲಾಗಿದೆ. ಬಸದಿಯ ಸುತ್ತಲೂ ೮ ದಿಕ್ಪಾಲಕರ ಶಿಲಾ ಕಂಡಗಳಿವೆ. ಬಸದಿಯ ಈಶಾನ್ಯ ದಿಕ್ಕಿನಲ್ಲಿ ಕ್ಷೇತ್ರ ಪಾಲನ ಸನ್ನಿದಿಯಿದೆ. ಇದನ್ನು ಈ ಕ್ಷೇತ್ರದ ರಕ್ಷಣೆಗೋಸ್ಕರ ಮತ್ತು ಪೂಜೆಯ ನಂತರ ಹೂವನ್ನು ವಿಸರ್ಜನೆ ಮಾಡಲು ಸ್ಥಾಪನೆ ಮಾಡಲಾಗಿದೆ ಎನ್ನುತ್ತಾರೆ. ಇಲ್ಲಿ ೫ ಹೆಡೆಯ ನಾಗನ ಮೂರ್ತಿ ಮತ್ತು ತ್ರಿಶೂಲಗಳಿವೆ. ಇದರಲ್ಲಿ ೭ ಹೆಡೆಯ ೧ ಸರ್ಪ ಮೂರ್ತಿ ಮತ್ತು ೧ ನಾಗನ ಕೆತ್ತನೆ ಶಿಲೆಯಿದೆ. ಅಲ್ಲಿ ಗುಂಡು ಆಕಾರದ ಕಲ್ಲುಗಳಿವೆ.ವೇಣೂರು ಪಟ್ಟಣವನ್ನು ಪ್ರವೇಶಿಸುವಾಗಲೇ ಬಹಳ ಎತ್ತರದಲ್ಲಿ ಕಾಣುವ ಈ ಜೀನಾಲಯವೂ ಸಹಜವಾಗಿ ತಮ್ಮ ಮನ್ನವನ್ಜು ಆಕರ್ಶಿಸುತ್ತದೆ. ಸುಂದರ ಮಾನಸ್ತಂಭವೂ ನಮ್ಮನ್ನು ತಮ್ಮ ಸಮೀಪಕ್ಕೆ ಕರೆಯುತ್ತದೆ. ಪ್ರವೇಶಿಸಿದೊಡನೇ ನಮ್ಮ ಎದುರಿಗೆ ವಿರಾಜ ಮಾನಗಾರಿರುವ ಶ್ರೀ ಶಾಂತಿ ಸ್ವರಸ್ವಾಮ್ಯ ಮನಹರ ಬಿಂಬವೂ ನಮಗೆ ಆನಂದವನ್ನು ನೀಯುತ್ತದೆ. ಶ್ರೀ ಶಾಂತಿಸ್ವರ ಸ್ವಾಮೀಯ ಮನೋಹರ ಬಿಂವೂ ನಮಗೆ ಆನಂದವನ್ನು ನೀಯುತ್ತದೆ. ಬಳಿಯಲ್ಲಿರುವ ಜೀನಾಬಿಂಬಗಳು ನಮ್ಮನ್ನು ಆದ್ಯಾತ್ಮಿಕ ಲೋಕ್ಕಕೆ ಕರೆದೊಯ್ಯದಲ್ಲದೇ ವಿಶ್ವ ಧರ್ಮವಾದ ಜೈನ ಧರ್ಮದ ಘನತೆಯನ್ನು ಸಾರಿ ಹೇಳುತ್ತದೆ. ಈ ಜೀನಾಲಯದ ಅಧ್ಯಯನಕ್ಕೆ ಹೋದ ನನ್ನನ್ನು ಆನಂದಗೊಳಿಸುವುದಲ್ಲದೇ ನನ್ನ ಇತರನ್ನು ಇಲ್ಲಿಗೆ ಕರೆದೊಯ್ಯುವಂತೆ ಮಾಡಿದವು. ಇದರಿಂದ ಅವರು ಸಂತೋಷಗೊಂಡರು.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೨೧.