ಸದಸ್ಯ:Sangeetha.1310273/sandbox
ಹಣದ ಬೇಡಿಕೆ,ಹಣದ ಪೂರೈಕೆ ಮತ್ತು ಹಣದ ಸಿದ್ಧಾಂತಗಳು
ಹಣದ ಬೇಡಿಕೆ ಮತ್ತು ಪೂರೈಕೆ ಅತಿ ಮುಖ್ಯವಾದ ಎರೆಡು ಸಂಗತಿಗಳು. ಅನೇಕ ಉದ್ದೇಶಗಳಿಗಾಗಿ ಹಣವು ಬೇಡಿಕೆಯಲ್ಲಿರುತ್ತದೆ, ಅಂದರೆ ಅವಶ್ಯಕವಾಗಿರುತ್ತದೆ. ಅಂತಯೇ ವಿವಿಧ ಮೂಲಗಳಿಂದ ಹಣವು ಪೂರೈಕೆಯಾಗಿತ್ತದೆ. ಬೆರೆ ರೀತಿಯಲ್ಲಿ ಹೆಳುವುದಾದರೆ, ಯಾವುದೇ ಒಂದು ದೆಶದಲ್ಲಿ ಹಣದ ಬೇಡಿಕೆಯನ್ನು ನಿರ್ಧರಿಸುವ ವಿಭಿನ್ನ ಅಂಶಗಳು ಹಾಗೂ ಹಣದ ಪೂರೈಕೆಯಲ್ಲಿ ಭಾಗಿಯಾಗುವ ವಿವಿಧ ಮೂಲಗಳನ್ನು ಅಭ್ಯಸಿಸುವುದು ಅವಶ್ಯಕವಾಗಿರುತ್ತದೆ. ಈ ಸಂಗತಿಗಳ ಅಧ್ಯಯನವು ಹಣ ಸಂಬಂಧಿ ವ್ಯವಸ್ತೆಯ ಕಾರ್ಯಚರಣೆಯನ್ನು ಕುರಿತಂತೆ ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ.
ಹಣದ ಬೇಡಿಕೆ: ಸರಳವಾಗಿ ಹೇಳುವುದಾದರೆ ಹಣದ ಬೇಡಿಕೆ ಎಂದರೆ. ಜನರು ತಮ್ಮ ಬಳಿ ಇಟ್ಟುಕೊಳ್ಳಲು ಬಯಸುವ ನಗದು ಹಣದ ಪ್ರಾಮಾಣ ಎಂದರ್ಥ. ಇದನ್ನು ‘ದ್ರವ್ಯದೊಲವು’ ಎಂತಲೂ ಕರೆಯಲಾಗುತ್ತದೆ. ಹಣಕ್ಕೆ ಬೇಡಿಕೆಯು ಅದರ ಎರಡು ಮುಖ್ಯ ಕಾರ್ಯಗಳ ಕಾರಣದಿಂದ ಉದ್ಬವಿಸುತ್ತದೆ. ಅವುಗಳು ಎಂದರೆ .
(೧) ಹಣವು ವಿನಿಮಯದ ಮಾಧ್ಯಮವಾಗಿ ಕಾರ್ಯ ಮಾಡುವುದರಿಂದ, ಮತ್ತು (೨) ಹಣವು ಮೌಲ್ಯ ಸಂಗ್ರಹದ ಸಾಧನವಾಗಿರುವುದರಿಂದ. ಹಣವು ವಿನಿಮಯದ ಸಾಧನವಾಗಿ ಕೆಲಸ ಮಾಡುವುದರಿಂದ ಇತರ ಸರಕುಗಳನ್ನು ಖರೀದಿಸಲು ಹಣವು ಅತ್ಯಗತ್ಯವಾಗಿ ಬೇಕಾಗಿರುತ್ತದೆ.
ಅಲ್ಲದೆ ಮೌಲ್ಯವು ನಾಶವಾಗದಂತೆ ಸಂಪತ್ತನ್ನು ಹಣದ ರೂಪದಲ್ಲಿ ಶೇಖರಿಸಿಡಬಹುದಾಗಿರುವುದರಿಂದ ಹಣಕ್ಕೆ ಬೇಡಿಕೆ ಇದೆ.
ಸೈದ್ಧಾಂತಿಕವಾಗಿ ನೋಡಿದಾಗ ಹಣದ ಬೇಡಿಕೆಯನ್ನು ಕುರಿತಂತೆ ಮೂರು ನಿರೂಪಣೆಗಳಿವೆ. ಅವುಗಳು ಯಾವುವೆಂದರೆ:
((೧) ಸಾಂಪ್ರದಾಯಿಕ ಸಿದ್ಧಾಂತ, (೨) ಕೇನ್ಸ್ ನ ಸಿದ್ಧಾಂತ, ಮತ್ತು (೩) ಆಧುನಿಕ ಸಿದ್ಧಾಂತ.
ಇರ್ವಿಂಗ್ ಫಿಷರನ ಸಮೀಕರಣ ಮತ್ತು ಕೇಂಬ್ರಿಜ್ ನಿರೂಪಣೆಗಳನೊಳಗೊಂಡ ಸಾಂಪ್ರದಯಿಕೆ ಸಿದ್ಧಾಂತದ ಪ್ರಕಾರ ಹಣದ ಬೇಡಿಕೆಯು ರಾಷ್ಟೀಯ ಆದಾಯದ ಮಟ್ಟಕ್ಕೆ ಸಮನಾಗಿರುತ್ತದೆ. ಅಂದರೆ ವಾರ್ಷಿಕ ರಾಷ್ಟೀಯ ಉತ್ಪನವು ಹಣದ ಬೇಡಿಕೆಯ ಗಾತ್ರವನ್ನು ನಿರ್ಧಿರಿಸುತ್ತದೆ. ಜಿ ಎಂ ಕೆನ್ಸನ ಅಭಿಪ್ರಾಯದಲ್ಲಿ ಮೂರು ಉದೇಶಗಳ ಈಡೇರಿಕೆಯ ಕಾರಣದಿಂದ ಹಣಕಕ್ಕೆ ಬೇಡಿಕೆ ಬರುತದೆ. ಈ ಉದೆಶಗಳೆಂದರೆ ವ್ಯವಹಾರದ ಉದೇಶ, ಮುಂಜಾಗರೂಕತೆಯ ಉದೇಶ ಮತ್ತು ಸಟ್ಟಾ ವ್ಯಾಪಾರದ ಉದೇಶ ಒಟ್ಟು ಹಣದ ಬೇಡಿಕೆಯು ಈ ಮೂರು ಉದೇಶಗಳಿಂದ ಪ್ರಭವಗೊಳ್ಳುತ್ತದೆ. ಅಧುನಿಕ ಸಿದ್ಧಾಂತವು ಮಿಲ್ಟನ್ ಪ್ರೀಡಮನನಿಂದ ಪರ್ಯಾಲೋಚನೆ ಗೊಂಡಿದೆ. ಈ ಸಿದ್ಧಾಂತದ ಪ್ರಕಾರ, ಹಣದ ಬೇಡಿಕೆಯು ಬೆಲೆಯ ಮಟ್ಟ, ಆದಾಯ, ಹಣ ದುಬ್ಬರದ ದರ, ಸಂಪತ್ತು ಮತ್ತು ಆಸ್ತಿಗಳ ಮೇಲೆ ದೊರೆಯುವ ಪ್ರತಿಫಲ, ಮಾನವೇತರ ಬಂಡವಳಕ್ಕೆ ಮಾನವ ಬಂಡವಾಳದ ಅನುಪಾತ ಮೊದಲಾದ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಹಣವು ವಿನಿಮಯದ ಮಾಧ್ಯಮವಾಗಿ ಕಾರ್ಯ ನಿರ್ವಹಿಸುವ ಕಾರಣದಿಂದ ಅದಕ್ಕೆ ಬೇಡಿಕೆ ಇದೆ. ಅಂದರೆ ಸರಕುಗಳನ್ನು ಮತ್ತು ಸೇವೆಗಳನ್ನು ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ. ಒಂದು ನಿರ್ಧಿಷ್ಠ ಅವಧಿಯಲ್ಲಿ ಹಣದ ಬೇಡಿಕೆಯು ಅ ಅವಧಿಯಲ್ಲಿ ಲಭ್ಯವಿದ್ದ ಸರಕುಗಳ ಮತ್ತು ಸೇವೆಗಳ ಪ್ರಮಾಣದಿಂದ ನಿರ್ಧರಿಸಲ್ಪಡುತ್ತದೆ ಅಂದರೆ ಯಾವುದೊಂದು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣವು ಸರಕುಗಳನ್ನು ಮತ್ತು ಸೇವೆಯನ್ನು ಖರೀದಿಸಲು ಬಳಸಲ್ಪಡುವುದರಿಂದ ಜನರು ಕೊಂಡುಕೊಳ್ಳುವ ಸರಕುಗಳ ಮತ್ತು ಸೇವೆಗಳ ಒಟ್ಟು ಗಾತ್ರಕ್ಕೆ ಚಲಾವಣೆಯಲ್ಲಿರುವ ಒಟ್ಟು ಹಣವು ಸಮವಾಗಿರುತ್ತದೆ ದೇಶದಲ್ಲಿ ಒಂದು ನಿರ್ದಿಷ್ಠ ಅವಧಿಯಲ್ಲಿ ಲಭ್ಯವಿರುವ ಸರಕು ಮತ್ತು ಸೇವೆಗಳ ಪ್ರಮಾಣವನ್ನು T ಎಂತಲೂ ಮತ್ತು ಅವುಗಲ ಸರಾ ಸರಿ ಬೆಲೆಯನ್ನು P ಎಂತಲೂ ಪರಿಗಣಿಸಿದರೆ, ಆಗ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವು PT
ಆಗುತ್ತದೆ.ಇದೇ ಹಣದ ಬೇಡಿಕೆಯಾಗಿದೆ.
ಇದನ್ನು ಕೆಳಗಿನ ಸೂತ್ರದ ಮೂಲಕ ವ್ಯಕ್ತಪಡಿಸಬಹುದು.
MD=PT ಈ ಸೂತ್ರದಲ್ಲಿ, MD ಎಂದರೆ ಹಣದ ಬೇಡಿಕೆ. PT ಎಂದರೆ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯ. ಹಣದ ಬೇಡಿಕೆಯು ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದಲ್ಲಿ ಲಭ್ಯವಿರುವ ಸರಕುಗಳ ಮತ್ತು ಸೇವೆಗಳ ಮೌಲ್ಯಕ್ಕೆ ಸಮನಾಗಿರುತ್ತದೆ ಎಂಬುದು ಇದರರ್ಥ. ಉದಾರಣೆಗೆ, ಲಭ್ಯವಿರುವ ಸರಕುಗಳ ಮತ್ತು ಸೇವೆಗಳ
ಪ್ರಮಾಣವು (T) 50.000 ಘಟಕಗಳು ಮತ್ತು ಒಂದು ಘಟಕದ ಸರಾಸರಿ ಬೆಲೆ ( P ) 10 ಎಂದು ಭಾವಿಸಿಕೊಂಡರೆ.ಆಗ ಹಣದ. ಬೇಡಿಕೆಯು ಕೆಳಗಿನಂತೆ ಇರುತ್ತದೆ. PT=MD 10*50000=500000 ಅ ಪ್ರಕಾರ ಹಣದ ಬೇಡಿಕೆಯು ರೂ, 5,00,000 ಅಗಿರುತ್ತದೆ
ಹಣದ ಬೇಡಿಕೆಯನ್ನು ನಿರ್ಧರಿಸುವ ಸಂಗತಿಗಳು ಹಣದ ಬೇಡಿಕೆಯನ್ನು ನಿರ್ಧರಿಸುವ ಪ್ರಮುಖ 1) ರಾಷ್ಟೀಯ ಉತ್ಪನ್ನದ ಮಟ್ಟ: ರಾಷ್ಟೀಯ ಉತ್ಪನ್ನದ ಮಟ್ಟವು ಹಣದ ಬೇಡಿಕೆಯನ್ನು ನಿರ್ಧರಿಸುವ ಮುಖ್ಯ ಅಂಶಗಳಲ್ಲೊಂದು. ರಾಷ್ಟೀಯ ಉತ್ಪನ್ನದ ಹೆಚ್ಚಳದೊಡನೆ ಸರಕುಗಳ ಮತ್ತು ಸೇವೆಗಳ ಖರೀದಿಗೆ ಹಣದ ಅವಶ್ಯಕತೆ ರುದ್ಧಿಸುತ್ತದೆ. ಹಣವು ವಿನಿಮಯದ ಸಾಧನವಾಗಿ ಕೆಲಸ ಮಾಡುವುದರಿಂದ ಉತ್ಪನ್ನದ ಏರಿಕೆಯೊಡನೆ ಅಧಿಕ ಗಾತ್ರದ ಹಣವು ಅವಶ್ಯಕವಾಗುವುದು ಸ್ವಾಭಾವಿಕವೇ ಆಗಿದೆ. ಇದ್ದಕ್ಕೆ ವಿರುದ್ಧವಾಗಿ ಸರಕುಗಳ ಮತ್ತು ಸೇವೆಗಳ ಪ್ರಮಾಣ ಹಾಗೂ ರಾಷ್ಟೀಯ ಆದಾಯದ ಮಟ್ಟ ಕಡಿಮೆ ಇರುವಾಗ ಹಣದ ಬೇಡಿಕೆಯು ಸಹಜವಾಗಿ ತಗ್ಗಿದ ಮಟ್ಟದಲ್ಲಿರುತ್ತದೆ.
ಭಾರತದಂತಹ ಅಭಿರುದ್ದಿ ಶೀಲ ಅರ್ಥವ್ಯವಸ್ಥೆಯೊಂದರಲ್ಲಿ ರಾಷ್ಟೀಯ ಆದಾಯವು ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಉದಾರಣೆಗೆ, 1950- 51ರಲ್ಲಿ ಪ್ರಸ್ತುತ ಬೆಲೆಗಳಲ್ಲಿ ಕೇವಲ 8939 ಕೋಟಿ ರೂಪಾಯಿಗಳಿದ್ದ ಒಟ್ಟು ರಾಷ್ಟೀಯ ಉತ್ಪನ್ನವು 2008-09 ದಲ್ಲಿ 43,26,684 ಕೋಟಿ ರೂಪಾಯಿಗಳ ಅಗಾಧ ಮೊತ್ತಕ್ಕೆ ಹೆಚ್ಚಿದೆ. ಆ ಪ್ರಕಾರ ಹಣದ ಬೇಡಿಕೆಯ ಹೆಚ್ಚಳವನ್ನು ಊಹಿಸುವುದು ಸುಲಭ.
2) ಅರ್ಥವ್ಯವಸ್ಥೆಯ ನಾಣ್ಯೀಕರಣ: ಅರ್ಥ ವ್ಯವಸ್ಥೆಯ ನಾಣ್ಯೀಕರಣವು ಹಣದ ಬೇಡಿಕೆಯ ಮೇಲೆ ಪ್ರಭಾವ ಬೀರುತ್ತದೆ. ನಾಣ್ಯೀಕರಣವು ವ್ಯವಹಾರಗಳಲ್ಲಿ ಅಂದರೆ ಕೊಳ್ಳುವಿಕೆ ಮತ್ತು ಮಾರುವಿಕೆಯಲ್ಲಿ ಹಣದ ಬಳಕೆಯ ಪ್ರಮಾಣವನ್ನು ಸೂಚಿಸುತ್ತದ. ಅರ್ಥವ್ಯವಸ್ಥೆಯು ಪೂರ್ಣವಾಗಿ ನಾಣ್ಯೀಕರಣಗೊಂಡಿದೆ ಎಂದರೆ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಹಣವೇ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ ಮತ್ತು ಸಾಟಿ ಪದ್ಧತಿ ಅಸ್ತಿತ್ವದಲ್ಲಿಲ್ಲ ಎಂದು ಅರ್ಥ.
ನಾಣ್ಯೀಕರಣದ ಪ್ರಮಾಣವು ಅಧಿಕವಾಗಿದ್ದರೆ ಸರಕುಗಳ ಖರೀದಿಗೆ ಮತ್ತು ಮಾರಟಕ್ಕೆ ಜಾಸ್ತಿ ಮೊತ್ತದ ಹಣವು ಅಗತ್ಯವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ನಾಣ್ಯೀಕರಣದ ಪ್ರಮಾಣವು ಕಡಿಮೆ ಇದ್ದರೆ ಹಣದ ಬೇಡಿಕೆಯು ಸ್ವಾಭಾವಿಕವಾಗಿ ಕೆಳಮಟ್ಟದಲ್ಲಿರುತ್ತದೆ. ಏಕೆಂದರೆ ಅತಂಹ ಸಂದರ್ಭದಲ್ಲಿ ಸರಕುಗಳ ಖರೀದಿಗೆ ಮತ್ತು ಮಾರಾಟಕ್ಕೆ ಹೆಚ್ಚಿನ ಮೊತ್ತದ ಹಣವು ಅವಶ್ಯಕವಾಗಿರುವುದಿಲ್ಲ.
3) ಬೆಲೆಯ ಮಟ್ಟ:
ಬೆಲೆಯ ಮಟ್ಟವು ಹಣದ ಬೇಡಿಕೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲೊಂದು. ಬೆಲೆಯ ಮಟ್ಟದ ಏರಿಕೆಯೊಡನೆ ಹಣದ ಮೌಲ್ಯವು ಕುಸಿಯುವುದರಿಂದ ಹಿಂದಿನಷ್ಟೇ ಪ್ರಮಾಣದ ಸರಕುಗಳನ್ನು ಖರೀದಿಸಲು ಹಾಗೂ ಅನುಭೋಗವನ್ನು ಯಥಾಸ್ಥಿತಿಯಲ್ಲಿಡಲು ಅಧಿಕ ಗಾತ್ರದ ಹಣದ ಅವಶ್ಯಕತೆ ಉದ್ಭವಿಸುತ್ತದೆ.
4) ಹಣದುಬ್ಬರದ ನಿರೀಕ್ಷಿತ ದರ:
ಹಣದುಬ್ಬರದ ನಿರೀಕ್ಷಿತ ದರವು ಹಣದ ಬೇಡಿಕೆಯನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಎರಡೂ ವಿಧಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ, ನಿರಂತರವಾಗಿ ಬೆಲೆಗಳು ಏರುತ್ತಿರುವಂತಹ ಸನ್ನಿವೇಶದಲ್ಲಿ ಸ್ಜನರು ಇನ್ನೂ ಹೆಚ್ಚಿನ ದರದ ಹಣದುಬ್ಬರವನ್ನು ನಿರೀಕ್ಷಿಸಿಕೊಂಡು ಕುಸಿಯುತ್ತಿರುವ ಹಣದ ಮೌಲ್ಯಕ್ಕೆ ಸುರಕ್ಷತೆಯಾಗಿ ಅಧಿಕ ಮೊತ್ತದ ಹಣವನ್ನು ಸಂಗ್ರಹಿಸಲು ಬಯಸುತ್ತಾರೆ.