ಲೋಹವನ್ನು ತಟ್ಟಿದಾಗ ನಾದವನ್ನು ಉತ್ಪತ್ತಿ ಮಾಡುವ ವಾದ್ಯಗಳು ಘನವಾದ್ಯವೆನ್ನುತ್ತಾರೆ. ತಾಳಂ,ಘಟ್ಟಂ, ಗೆಜ್ಜೆ ಈ ಘನ ವಾದ್ಯಕ್ಕೆ ಸೇರುತ್ತವೆ. ಈ ವಾದ್ಯಗಳ ಹೊರತು ಘಟಂ ಅಂದರೆ ಮಣ್ಣಿನಿಂದ ಮಾಡಿರುವ ತಾಳವಾದ್ಯ ಪಿಂಗಾಣಿಯಲ್ಲಿ ಮಾಡಿದ ವಿವಿಧ ಅಳತೆಯ ಪಾತ್ರೆಗೆ ನೀರನ್ನು ತುಂಬಿ ನುಡಿಸಿದಾಗ ನಾದ ಉತ್ಪತ್ತಿ ಮಾಡುತ್ತದೆ ಈ ವಾದ್ಯದ ಹೆಸರು ಜಲತರಂಗ್.
ಈ ಎಲ್ಲಾ ವಾದ್ಯಗಳು ಭಾರತೀಯ ವಾದ್ಯಗಳಾಗಿದ್ದು ಪಿಟೀಲು ಮಾತ್ರ ಪಾಶ್ಚಿಮಾತ್ಯ ವಾದ್ಯವಾಗಿದೆ. ಪಿಟೀಲ ಅನ್ನು ಸುಮಾರು 1837 ನಮ್ಮ ಸಂಗೀತ ಹೊಂದಿಸಿ ಬಳಕೆ ಪ್ರಾರಂಭಿಸಲಾಯಿತು. ಕಳೆದ 50-60 ವರ್ಷಗಳಿಂದ ಇದರ ಬಳಕೆ ಅತ್ಯಧಿಕವಾಗಿ ಎಲ್ಲೆಲ್ಲೂ ಕಾಣುತ್ತೇವೆ.
ವಾದ್ಯಗಳು ಯಾವ ಗುಂಪಿಗೆ ಸೇರಿದೆ ಎಂದು ತಿಳಿದಂತೆ ವಾದ್ಯಗಳನ್ನು ಯಾವ ರೀತಿಯಾಗಿ ರೂಪಿಸಲಾಗಿದೆ ಎಂದು ತಿಳಿಯುವುದು ಅವಶ್ಯಕ.
ತಂಬೂರಿ ಹೆಚ್ಚಿನ ಪಾಲು ವೀಣೆಯಂತೆ ಇರುವ ಒಂದು ವಾದ್ಯ ಅಡಿಯಲ್ಲಿ ದೊಡ್ಡದಾದ ಒಂದು ಬುರುಡೆ. ಬುರುಡೆಯನ್ನು ಹಲಸಿನ ಮರದಿಂದ ಅಥವಾ ಕರಿಮರದಿಂದ ಮಾಡಲಾಗುತ್ತದೆ. ಅಡಿಯಿಂದ ಸ್ವಲ್ಪ ಮೇಲೆ ಸೇತುವೆ ರೀತಿ ಇರುವ ಸಣ್ಣ ಕುದುರೆ ಇರುತ್ತದೆ. ಇದು ಬುರುಡೆಯ ಸುಮಾರು ಮಧ್ಯಭಾಗಕಿದ್ದು ಇದನ್ನು ಮರದಿಂದ ಅಥವಾ ದಂತದಿಂದ ಮಾಡಿರುತ್ತಾರೆ. ಬುರುಡೆಯ ನಾಗಪಾಶಕ್ಕೆ ನಾಲ್ಕು ತಂತಿಗಳನ್ನು ಬಿಗಿದು, ಅದು ಕುದುರೆಯ ಮೇಲೆ ಹಾಯ್ದು ತಂಬೂರಿಯ ಇನ್ನೊಂದು ತುದಿಯಲ್ಲಿರುವ ಬಿರುಡೆಗಳಿಗೆ ಕಟ್ಟಲಾಗುತ್ತದೆ. ಬೀರಡೆಯನ್ನು ತಿರುಗಿಸುವುದರ ಮೂಲಕ ಶ್ರುತಿ ಮಾಡಲಾಗುವುದು. ತಂತಿಗಳು ಬಿಗಿಯಾದಾಗ ಸ್ವರವು ಹೆಚ್ಚಿ ಸಾಡಿಲವಾದಾಗ ಕಡಿಮೆಯಾಗುತ್ತದೆ. ನಾದವನ್ನು ಹೆಚ್ಚಿಸಲು ಕುದುರೆ ಮತ್ತು ತಂತಿಗಳ ಮಧ್ಯೆ ರೇಷ್ಮೆದಾರವನ್ನು ಸೇರಿಸುವುದು ವಾಡಿಕೆ. ನಾಗಪಾಶ ಮತ್ತು ಕುದುರೆಯ ಮಧ್ಯಕ್ಕೆ ಪ್ರತಿ ತಂತಿಗೂ ಒಂದು ಮಣಿಯನ್ನು ಪೋಣಿಸಲಾಗುತ್ತದೆ ಇದು ಶ್ರುತಿಯ ಸೂಕ್ಷ್ಮ ವ್ಯತ್ಯಾಸಗಳನ್ನು ಸರಿಪಡಿಸಲು ಸಹಾಯಕ.
ತಂಬೂರಿಯಲ್ಲಿರುವ ನಾಲ್ಕು ತಂತಿಗಳನ್ನು ಒಂದು ಹಿತ್ತಾಳೆ ಮೂರು ಉಕ್ಕಿನ ತಂತಿಗಳನ್ನು ಕಟ್ಟಲಾಗುತ್ತದೆ. ತಂಬೂರಿಯ ನಾಲ್ಕು ತಂತಿಗಳನ್ನು ಕ್ರಮವಾಗಿ ಪಂಚಮಸಾರಿಣಿ, ಅನುಸಾರಿಣಿ ಮತ್ತು ಮಂದ್ರವೆಂದು ಕರೆಯಲಾಗಿದೆ. ಪಂಚಮ ತಂತಿಯು ಮಂದ್ರಸ್ಥಾಯಿ ಪಂಚಮವನ್ನು ಸಾರಿಣಿ ಹಾಗೂ ಅನುಸಾರಣಿ ತಂತಿಗಳು ಮಧ್ಯಸ್ಥಾಯಿ ಷಡ್ಜವನ್ನೂ, ನುಡಿಯುತ್ತವೆ .
ಬುರುಡೆಯಿಂದ ಮೇಲಕ್ಕೆ ಉದ್ದವಾಗಿ ಹೋಗುವ ಆಕಾರಕ್ಕೆ ದಂಡಿಯೆನ್ನುತ್ತಾರೆ. ಸಾಧಾರಣವಾಗಿ ತಂಬೂರಿಯ ಬುರುಡೆಯನ್ನು ತೊಡೆಯ ಮೇಲೆ ಇರಿಸಿ ನೆಟ್ಟಗೆ ನಿಲ್ಲಿಸಿಕೊಂಡು ದಂಡಿಯ ಮಧ್ಯ ಭಾಗದಲ್ಲಿ ಬರುವ ನಾಲ್ಕು ತಂತಿಗಳನ್ನು ಒಂದಾದ ನಂತರ ಒಂದರಂತೆ ಸಮಾನ ಕಾಲದಲ್ಲಿ ಮತ್ತೆ ಮತ್ತೆ ಕೈಯ ತೋರು ಬೆರಳಲ್ಲಿ ಮೊದಲ ತಂತಿಯನ್ನು ಮೀಟಿ ತದನಂತರ ಮಧ್ಯಬೆರಳಿನಲ್ಲಿ ಉಳಿದ ಮೂರು ತಂತಿಗಳನ್ನು ಮೀಟಬೇಕು ಆಗ ಉಂಟಾಗುವ ನಾದವೇ ಸಂತೋಷವನ್ನು ತರುತ್ತದೆ.