ಸದಸ್ಯ:Sandhya T Nayak/ನನ್ನ ಪ್ರಯೋಗಪುಟ2

ವ್ಲಾದಿಮಿರ್ ಹಾಫ್‌ಕಿನ್

ಬದಲಾಯಿಸಿ

ಸೋಂಕು ರೋಗಗಳ ಕಾರಣಗಳು ಮತ್ತು ಲಕ್ಷಣಗಳು

ಬದಲಾಯಿಸಿ

ಕಾ¯ರಾ, ಪ್ಲೇಗ್‌ಗಳಂತಹ ಕಾಯಿಲೆಗಳ ಹೆಸರೆತ್ತಿದರೇ ಮೈ ನಡುಕ ಹುಟ್ಟುವ ಕಾಲವೊಂದಿತ್ತು. ಕುಡಿಯಲು ಸುರಕ್ಷಿತ ನೀರಿನ ನೀರಿನ ಸೌಲಭ್ಯ, ಪರಿಸರ ಸ್ವಚ್ಚತೆಯ ಅಭಾವ, ಭಾರತದಂತಹ ಹೆಚ್ಚು ಜನಬಾಹುಳ್ಯವಿರುವ ರಾಷ್ಟçಗಳಲ್ಲಿ ಈ ಪಿಡುಗುಗಳು ಕಾಣಿಸಿಕೊಂಡಾಗ ಜನ ನೊಣಗಳಂತೆ ಸಾಯುತ್ತಿದ್ದರು. ಈಗಲು ಅಪಾರ ಜನ ಸಮೂದಾಯ ಒಂದೆಡೆ ಸೇರುವ ಸಂತೆ, ಪರಿಷೆ, ಜಾತ್ರೆ, ಮೇಳ ಸೇರುವ ಸಂದರ್ಭಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಿದ್ದರೇ ಕಾ¯ರಾ ಪಿಡುಗು ಅಪಾರ ಜನಸ್ತೋಮವನ್ನು ಬಲಿತೆಗೆದುಕೊಳ್ಳಿತ್ತದೆ. ಫ್ಲೇಗಿನ ಕಥೆ ಇನ್ನೊಂದು ತರಹ. ವಿಪುಲ ಜನದಟ್ಟಣೆ ಇರುವ ಕೊಳೆತುಂಬಿದ ಹಳ್ಳಿಗಾಡುಗಳಲ್ಲಿ ಹಠತ್ತಾಗಿ ಇಲಿಗಳು ಸತ್ತು ಬೀಳಲಾಂಭಿಸಿದAದರೇ, ಫ್ಲೇಗಿನ ಮಹಾಮಾರಿ ಅಲ್ಲಿಗೆ ಬಿಜಯಂಗೈದಳೆAದೇ ಅರ್ಥ. ಇಲಿ ಸಾಯಲಾರಂಭಿಸಿದ ಕೆಲ ದಿನಗಳಲ್ಲೇ ಹಲವರಲ್ಲಿ ಜ್ವರ ಬರುತ್ತದೆ. ಇನ್ನು ಒಂದೆರೆಡು ದಿನಗಳಲ್ಲಿ ಅವರ ಕಂಕುಳು, ಕುತ್ತಿಗೆ, ತೊಡೆ ಸಂದುಗಳಲ್ಲಿ ಗೆಡ್ಡೆಗಳೆದ್ದು ಯಾತನೆಯನ್ನಭವಿಸುತ್ತಾರೆ. ಇನ್ನೇನು ಔಷದೋಪಚಾರ ಶುರುಮಾಡುವಷ್ಟರಲ್ಲೆ ಅವರುಗಳೆಲ್ಲ ಇಲಿಗಳಂತೆ ಸತ್ತು ಬೀಳುವುದು ಸ್ವಾಭಾವಿಕವಾಗಿತ್ತು. ಇಲಿಗಳು ಬೀಳಲಾರಂಭಿಸಿದಾಕ್ಷಣ ಮನೆ ಕಾಳಿ ಮಾಡಿ ಊರಿನ ಹೊರ ವಲಯದಲ್ಲಿ ಬಿಡಾರ ಮಾಡುವುದರಿಂದ ಮಾತ್ರ ಆದಷ್ಟು ಜನರನ್ನು ಬದುಕಿಸಬಹುದಾಗುತ್ತು. ಇಂತಹ ಪ್ರಕರಣಗಳು ಈಗ ಬಹುಪಾಲು ಇತಿಹಾಸದ ಪುಟಗಳನ್ನು ಸೇರಿ ಹೋಗಿವೆ. ಜಾತ್ರೆ, ಪರಿಷೆಗಳ ಸಮಯದಲ್ಲಿ ಕಾಲರಾ ಆದಾಗೆ ಕಾಣಿಸಿಕೊಳ್ಳುವ ವದರಿಗಳು ಇರಬಹುದಾದರು ಫ್ಲೇಗ್ ಹೇಳ ಹೆಸರಿಲ್ಲಂದತಾಗಿದೆ. ನಮ್ಮ ದೇಶದಲ್ಲಿ ಇವುಗಳ ನಿವಾರಣೆಗಾಗಿ ತಮ್ಮ ಜೀವದ ಹಂಗು ತೊರೆದು, ಸಲ್ಲದ ಅವಮಾನಗಳನ್ನೂ ಅನುಭವಿಸಿದ ಮಹಾನುಭಾವ ರಷ್ಯದ ವ್ಲಾದಿಮಿರ್ ಹಾಫ್‌ಕಿನ್ [ ೧೮೬೦-೧೯೩೦].

ವ್ಲಾದಿಮಿರ್ ಜನಿಸಿದ್ದು ಕಪ್ಪು ಸಮುದ್ರದ ದಡದಲ್ಲಿರುವ ಒಡೆಸ್ಸಾ ನಗರದಲ್ಲಿ [೧೮೬೦]. ಬಡ ಯಹೂದ್ಯ ಕುಟುಂಬ ಅವನದ್ದು. ಝಾರ್ ದೊರಗಳ ದಬ್ಬಾಳಿಕೆಯ ಆಡಳಿತದ ಕಾಲವದು. ವಿಧ್ಯಾರ್ಥಿ ದೆಸೆಯಲ್ಲೇ ವ್ಲಾದಿಮಿರ್ ದೊರೆಯ ವಿರುದ್ದದ ಚಳುವಳಿಗಳಲ್ಲಿ ಭಾಗವಹಿಸಿ ಶಾಲೆಗಳಿಂದ ಹೊರಕಾಲ್ಪಡುತ್ತಿದ್ದ. ಆದರೂ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವ ಹಂಬಲದಿAದ ಕಷ್ಟಪಟ್ಟು ತನ್ನ ನೈಸರ್ಗಿಕ ವಿಜ್ಞಾನದಲ್ಲಿ ಪದವೀಧರನಾದ. ಪ್ರಯೋಗ ಹಾಗೂ ಸಾಧನೆಗಳು ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಇದ್ದ ಹಾಫ್‌ಕಿನ್ ಜಿನೀವಾ ವಿಶ್ವ ವಿದ್ಯಾಲಯದಲ್ಲಿ ಲೂಯಿ ಪಾಶ್ಚರ್‌ನ ಶಿಷ್ಯ, ಅವು ಖ್ಯಾತ ಜೀವ ವಿಜ್ಞಾನಿ ಮೆಚ್ನಿಕಾಫ್‌ನ ಮಾರ್ಗದರ್ಶನದಲ್ಲಿ ಕಾರ್ಯನಿರತರಾಗಿದ್ದರು. ಮುಂದೆ ಪ್ಯಾರಿಸ್‌ನಲ್ಲಿ ಲೂಯಿ ಪಾಶ್ಚರ್‌ರ ಪ್ರಯೋಗಾಲಯದಲ್ಲಿ ಜರುತ್ತಿದ್ದ ಅತೀ ಮಹತ್ವದ ಶೋಧನೆಗಳು ಅವರನ್ನು ಅತ್ತ ಆಕರ್ಶಿಸುತ್ತಿದ್ದವು. ತನ್ನ ಮಾರ್ಗದರ್ಶಕ ಮೆಚ್ನಿಕಾಫ್‌ನ ಸಹಾಯದಿಂದ ಪ್ಯಾರಿಸ್‌ನ ಪಾಶ್ಚರ್ ಸಂಸ್ಥೆಯನ್ನು ಸೇರಿಕೊಳ್ಳಲು ಸಾಧ್ಯಾವಾಯಿತು. ಕಾಲರಾ ರೋಗದ ಬಗೆಗೆ ಅವರು ಆಸಕ್ತಿ ವಹಿಸಿ ಪ್ರಯೋಗಳನ್ನು ನಡೆಸುತ್ತಿದ್ದರು. ಅದರ ನಿಯಂತ್ರಣಕ್ಕಾಗಿ ಒಂದು ವ್ಯಾಕ್ಸಿನನ್ನೂ ತಯಾರಿಸಲು ಅವರಿಗೆ ಸಾಧ್ಯಾವಾಯಿತು. ಅದು ಪ್ರಾಣಿ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿದ್ದು ಮಾನವರ ಮೇಲೆ ಪ್ರಯೋಗಕ್ಕೆ ಯಾರೂ ಮುಂದೆ ಬಾರದಿದ್ದರಿಂದ ತಾವೇ ಅದನ್ನು ಚುಚ್ಚಿಸಿಕೊಂಡು ಅದರ ಪರೀಕ್ಷೆಯನ್ನು ಸಾಬೀತುಪಡಿಸಿದರು. ಕಾಲರಾದ ಹಾವಳಿ ಅತಿ ಹೆಚ್ಚಾಗಿರುವ ಉಷ್ಣವಲಯದ ದೇಶವೊಂದರಲ್ಲಿ ಅದನ್ನು ವ್ಯಾಪಕವಾಗಿ ಬಳಸಬೇಕೆಂದು ಅವರ ಅಭಿಲಾಷೆಯಾಗಿತ್ತು. ಭಾರತದಲ್ಲಿ ಹಿಂದೆ ವೈಸ್‌ರಾಯ್ ಆಗಿದ್ದ ಡಫರಿನ್, ಅದಕ್ಕಾಗಿ ಭಾರತಕ್ಕೆ ಹೋಗಲು ಹಾಫ್‌ಕಿನ್‌ರನ್ನು ಪ್ರೋತ್ಸಾಹಿಸಿದರು. ಹಾಫ್‌ಕಿನ್ ೧೮೯೩ರ ಮಾರ್ಚ್ನಲ್ಲಿ ಕಲ್ಕತ್ತ ತಲುಪಿದಾಗ ಕಾಲರಾ ಹಾವಳಿ ವಿಪರೀತವಾಗಿತ್ತು. ಇಲ್ಲಿಗೆ ಬಂದವರೇ ಹಲವು ಅಡೆತಡೆಗಳಿದ್ದರು, ಕೂಡಲೇ ವ್ಯಾಕ್ಸೀನ್ ತಯಾರಿಸಿ, ಕಾರ್ಯಕರ್ತರನ್ನು ತಯಾರು ಮಾಡಿದರು. ಇಲ್ಲಿಯೂ ಜನ ಮುಂದೆ ಬಂದು ವ್ಯಾಕ್ಸಿನ್ ತೆಗೆದುಕೊಳ್ಳು ಹಿಂಜರಿಯುತ್ತಿದ್ದನ್ನು ಕಂಡು ಜನ ಸಮೂದಾಯದ ಎದುರಲ್ಲಿ ತಾವೇ ವ್ಯಾಕ್ಸಿನ್ ಚುಚ್ಚಿಸಿಕೊಂಡರು. ಅದರ ಸುರಕ್ಷತೆ ಮತ್ತು ಅದರಿಂದುಟಾಗುವ ಉಪಕಾರದ ಬಗೆಗೆ ಜನರಲ್ಲಿ ಕಳಕಳಿಯಿಂದ ನಿವೇದಿಸಿಕೊಂಡರು. ಅವರ ಧೈನ್ಯತೆ ಮತ್ತು ಜನರ ಸ್ವಾಸ್ಥö್ಯದ ಬಗೆಗೆ ಅವರಿಗಿದ್ದ ಕಳಕಳಿ ಜನರ ಮನಪರಿವರ್ತನೆ ಮಾಡಿ, ಅವರು ಹೆಚಿನ ಸಂಖ್ಯೆಗಳಲ್ಲಿ ಇನಾಕ್ಯುಲೇಷನ್ ಮಾಡಿಸಿಕೊಂಡರು. ಆಗ ಪಂಜಾಬ್ ಮತ್ತು ವಾಯುವ್ಯ ಸರಗದ್ದಿನ ಪ್ರಾಂತಗಳಲ್ಲಿ ಕಾಲರಾ ಅತ್ಯಂತ ಬಿರುಸಿನಿಂದ ಹರಡುತ್ತಿದ್ದ ಸಮಾಚಾರ ತಿಳಿದು ಹಾಫ್‌ಕಿನ್ ಅಲ್ಲಿಗೂ ದಾವಿಸಿದರು. ಕೆಲವೇ ದಿನಗಳಲ್ಲಿ ಅಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಕಡಿಮೆಯಾದುದಲ್ಲದೇ ಅದರಿಂದ ಸಾಯುತ್ತಿದವರ ಸಂಖ್ಯೆ ಕೆಳಮಟ್ಟಕ್ಕೆ ಇಳಿಯಿತು. ನಂತರದ ವರ್ಷಗಳಲ್ಲಿ ಕಾಲರಾ ವ್ಯಾಕ್ಸಿನೇಷನ್‌ಗೆ ವಿರೋಧವಿಲ್ಲದೆ ಜನ ಅದನ್ನು ಒಪ್ಪಿಕೊಂಡರು. ಲಸಿಕೆ ಯಶಸ್ಸಾದರಿಂದ ಅದಕ್ಕೆ ಬೇಡಿಕೆ ಹೆಚ್ಚಾಯಿತು. ಸರ್ಕಾರದವರು ಪ್ಲೇಗ್ ಸಂಶೋಧನ ಸಂಸ್ಥೆಯನ್ನು ಸ್ಥಾಪಿಸಿ, ಹಾಫ್‌ಕಿನ್‌ರನ್ನು ನಿರ್ದೇಶಕರನ್ನಾಗಿ ನೇಮಿಸಿದರು. ಹಾಫ್‌ಕಿನ್ ನೇತೃತ್ವದಲ್ಲಿ ತಯಾರಾಗುತ್ತಿದ್ದ ಲಸಿಕೆ ಅತ್ಯುತ್ತಮ ಪಲಿತಾಂಶಗಳನ್ನು ನೀಡುತ್ತಿದ್ದರು ಪಂಜಾಬ್‌ನಲ್ಲಿ ಅದನ್ನು ನೀಡಿದ ೧೯ ಜನರಲ್ಲಿ ಧರ್ನುವಾಯು ಉದ್ಭವವಾಗಿ ಸಾವಿಗೀಡಾದರು. ಅದರ ಬಗೆಗೆ ವಿಚಾರಿಸಲು ನೇಮಕವಾಗಿದ್ದ ಸಮೀತಿ ಹಾಫ್‌ಕಿನ್‌ರವರ ವಿವರಣೆರಗಳಿಗೆ ಮನ್ನಣೆ ನೀಡದೆ ಅವರ ಅಜಾಗರೂತೆಯಿಂದಲೇ ದುರಂತವಾಗಿದೆAದು ತೀರ್ಮಾನ ನೀಡಿತ್ತು. ಸರ್ಕಾರವು ನಿರ್ದಾಕ್ಷಣ್ಯವಾಗಿ ಅವರನ್ನು ಕೆಲಸದಿಂದ ವಜಾಮಾಡಿತು. ತಮಗೊಂಟಾದ ಅವಮಾನವನ್ನು ಸಹಿಸಲಾಗದೇ ಹಾಫ್‌ಕಿನ್ ಲಂಡನ್ನಿಗೆ ಹಿಂತಿರುಗಿ ಸ್ವಲ್ಪ ಸಮಯದಲ್ಲೇ ದುರಂತಕ್ಕೆ ಕಾರಣವಾದ ಲಸಿಕೆಯಲ್ಲಿ ಧನುರ್ವಾಯುವಿನ ರೋಗಾಣುಗಳು ಮಿಶ್ರವಾಗಿರುವುದರ ಗುಟ್ಟು ರಟ್ಟಾಯಿತು. ಈ ವಿಷಯ ಸರ್ಕಾರಕ್ಕೆ ಮನದಟ್ಟಾದ ಮೇಲೆ ಹಾಫ್‌ಕಿನ್‌ರಿಗೆ ಮತ್ತೇ ಭಾರತಕ್ಕೆ ಹಿಂದಿರುಗಿ ತಮ್ಮ ಕೆಲಸ ಮುಂದುವರೆಸಬೇಕೆAದು ಕೇಳಿಕೊಂಡಿತ್ತು. ಮೊದಲು ಹಿಂದಿರುಗಬಾರದೆAದು ನಿರ್ಧರಿಸಿದರು ಮಾನವೀಯ ಅನುಕಂಪ ಭಾರತಕ್ಕೆ ಬರುವಂತೆ ಮಾಡಿತು. ಎಂದಿನAತೆ ಕೆಲಸಕ್ಕೆ ತೊಡಗಿಸಿಕೊಂಡರು ಹಿಂದಿನ ಆಸಕ್ತಿ ಇದ್ದಂತಿರಲಿಲ್ಲ.

೧೯೧೪ ಸರಲ್ಲಿ ನಿವೃತ್ತಿ ಪಡೆದು ಪ್ರಾನ್ಸ್ನಲ್ಲಿ ತಮ್ಮ ಅಂತಿಮ ದಿನಗಳನ್ನು ಕಳೆದು ೭೧ ನೇ ವಯಸ್ಸಿನಲ್ಲಿ ನಿಧಾನ ಹೊಂದಿದರು.