ಸದಸ್ಯ:Sandeep joyal/sandbox
ಗಂಜಾಂ ಅಂಜೂರ....
ಗಂಜಾಂ ಅಂಜೂರ್.... ತುಮಕೂರ್ ಹಲಸು... ದಾರವಾಡದ ಆಪೂಸು... ಮಲೆನಾಡಿನ ಅನಾನಸು...
ಒಂದೂವರೆ ದಶಕದ ಹಿಂದೆ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಇದ್ದ ಕನ್ನಡ ಪದ್ಯದ ಸಾಲುಗಳಲ್ಲಿ 'ಗಂಜಾಂ ಅಂಜೂರ'ದ ಪ್ರಸ್ತಾಪ ಇದ್ದುದು ಆ ಹಣ್ಣಿನ ವಿಶಿಷತೆಗೆ ಸಾಕ್ಷಿಯಂತಿದೆ. ಅಳಿವಿನ ಅಂಚಿನಲ್ಲಿರುವ ಗಂಜಾಂ ಅಂಜೂರದ ತಳಿಯನ್ನು ಉಳಿಸಲು ತೋಟಗಾರಿಕೆ ಇಲಾಖೆ ಪ್ರಯತ್ನ ನಡೆಸಿದ್ದು, ೮೦ ಗಿಡಗಳಿಗೆ ಹಾರೆಕೆ ಮಾಡಿ ಬೆಳೆಸುತ್ತಿದೆ. ಗಂಜಾಂನ ಸರ್ಕಾರಿ ತೋಟದಲ್ಲಿ ಇರುವ ಅಂಜೂರದ ಗಿಡಗಳು ಫಲ ಬಿಡುವ ಹಂತಕ್ಕೆ ಬೆಳೆದಿವೆ. ತೋಟಗಾರಿಕೆ ಬೆಳೆಗಳ ಪರಿಣಿತರ ಪ್ರಕಾರ ಸದ್ಯ ಅಸ್ತಿತ್ವದಲ್ಲಿರುವುದು ೩ ಅಂಜೂರದ ತಳಿಗಳು ಮಾತ್ರ. ಡಿಯಾನಾ ಮತ್ತು ಪೂನಾ ತಳಿಗಳನ್ನು ಹೊರತುಪಡಿಸಿದರೆ ಉಳಿದುದು ಗಂಜಾಂ ಅಂಜೂರದ ತಳಿ.
ಅಂಜೂರದ ಹಣ್ಣು ಕಡಿಮೆ ಆಮ್ಲತೆ ಹೊಂದಿದ್ದು, ಹೆಚ್ಚು ಸಕ್ಕರೆ ಅಂಶ ಇರುತ್ತದೆ. ತಾಜಾ ಹಣ್ಣಿನಲ್ಲಿ 'ಎ' ಮತ್ತು 'ಸಿ' ಜೀವಸತ್ವಗಳು ಸಮ್ರದ್ದವಾಗಿದೆ. ಅಂಜೂರದ ಗಿಡ ವರುಶದಲ್ಲಿ ಎರಡು ಬಾರಿ (ಏಪ್ರಿಲ್-ಮೇ ಮತ್ತು ಆಗಸ್ಟ್-ಸೆಪ್ಟಂಬರ್) ಹಣ್ಣು ಕೊಡುತ್ತದೆ .ಎರಡೂವರೆ ವರುಶದ ಗಿಡ ಒಂದು ಫಸಲಿಗೆ ೪ ಕೆ.ಜಿವರೆಗೆ ಹಣ್ಣು ಕೊಡುತ್ತದೆ. ಗಿಡದಿಂದ ಕೊಯ್ದ ಹಣ್ಣುನ್ನು ಪೊಟಾಶಿಯಂ ಮೆಟಾಬೈಸಲ್ಪೇಟ್ ದ್ರಾವಣದಿಂದ ಸಂಸ್ಕರಿಸಿ ಒಣಗಿಸಿದರೆ ಅದರ ನೈಜ ಬಣ್ಣ ಕೆಡದಂತೆ ಕಾಪಾಡಬಹುದು. ಆಕಾರ,ಬಣ್ಣ ಮತ್ತು ಗಾತ್ರದಲ್ಲಿ ಥೇಟ್ ಹತ್ತಿಯ ಹಣ್ಣಿನಂತೆ ಕಾಣುವ ಗಂಜಾಂ ಅಂಜೂರ ತನ್ನ ಸ್ವಾದದ ಕಾರಣಕ್ಕೆ ಹೆಸರಾಗಿದೆ. ತಿಳಿಗೆಂಪು ಬಣ್ಣದ ಗಂಜಾಂ ಅಂಜೂರ ಒಂದು ಕಾಲದಲ್ಲಿ 'ಅರಮನೆಯ ಹಣ್ಣು' ಎಂದೇ ಹೆಸರಾಗಿತ್ತು.ಕಾವೇರಿ ನದಿ ತಟದಲ್ಲಿ ಬೆಳೆಯುತ್ತಿದ ರಸಭರಿತ ಅಂಜೂರದ ಹಣ್ಣುಗಳನ್ನು ಮೈಸೂರು ಅರಮನೆಗೆ ಕೊಂಡೊಯ್ಯಲಾಗುತ್ತಿತ್ತು.ಆಯ್ದ ಹಣ್ಣುಗಳನ್ನು ಬಿದಿರು ಬುಟ್ಟಿಯಲ್ಲಿ ತುಂಬಿ ಪ್ರತಿದಿನ ರಾಜ ಪರಿವಾರದವರಿಗೆ ಕೊಡಲು ಗಂಜಾಂ ಲಕ್ಕಯ್ಯ (ಅಂಜೂರದ ಲಕ್ಕಯ್ಯ )ನ ಕುಟುಂಬದ ಸದಸ್ಯರು ನಿಯೋಜನೆಗೊಂಡಿದ್ದರು. ಅರಮನೆಗೆ ಭೇಟಿ ನೀಡುತ್ತಿದ್ದ ಬ್ರಿಟಿಶ್ ಅಧಿಕಾರಿಗಳು ಹಾಗೂ ಗಣ್ಯರಿಗೆ ಈ ಹಣ್ಣನ್ನು ಉಡುಗೊರೆಯಾಗಿ ಕೊಡಲಾಗುತ್ತಿತ್ತು ಎಂಬುದು ಹಿರಿಯ ಸಾಹಿತಿ ಪ್ರೊ.ಕರೀಮುದ್ದೀನ್ ಅವರ ಮಾತು.
ಮೈಸೂರು ದೊರೆ ಹೈದರಲಿ ಹಾಗೂ ಆತನ ಮಗ ಟಿಪ್ಪು ಸುಲ್ತಾನ್ ಕಾಲದಲ್ಲಿ ಗಂಜಾಂನಲ್ಲಿ ಅಂಜೂರ ವ್ಯಾವಸಯ ಸಮ್ರದ್ದವಾಗಿತ್ತು.ಅವಸಾನದ ಅಂಚಿನಲ್ಲಿದ್ದ ಗಂಜಾಂ ಅಂಜೂರದ ತಳಿಗಳನ್ನು ಉಳಿಸಲು ೧೯೪೦ ದಶಕಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅಂಜೂರ ಬೆಳೆಗರರಿಗೆ ಭೂಮಿ, ನೀರಿನ ಸವಲಭ್ಯ ಕಲ್ಪಿಸಿ ಪ್ರೋತ್ಸಾಹಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಗಂಜಾಂನಲ್ಲಿ ೧೫೦ಕ್ಕೂ ಹೆಚ್ಚು ಅಂಜೂರದ ಹಣ್ಣಿನ ತೋಟಗಳಿದ್ದವು ಎಂಬುದಕ್ಕೆ ದಾಖಲೆಗಳಿವೆ.
ಬರಹ : ಗಣಂಗೂರು ನಂಜೇಗೌಡ ಸುಧಾ ವಾರ ಪತ್ರಿಕೆ ೭ ಆಗಸ್ಟ್ ೨೦೧೪
ಜೋಯಲ್ ಸಂದಿಪ್ ದ್ವಿತೀಯ ಬಿ.ಕಾಮ್ ಸಂತ ಅಲೊಶೀಯಸ್ ಕಾಲೇಜ್ ಮಂಗಳೂರು