ಉತ್ಪನ್ನ (ಹಣಕಾಸು)

ಉತ್ಪನ್ನ ಎಂಬುದೊಂದು ಹಣಕಾಸಿಗೆ ಸಂಬಂಧಿಸಿದ ದಸ್ತಾವೇಜು ಸಾಧನವಾಗಿದ್ದು, ಇತರ ಕೆಲವು ಸ್ವತ್ತು, ಸೂಚಿ, ಸಂಗತಿ, ಮೌಲ್ಯ ಅಥವಾ ಸನ್ನಿವೇಶದಿಂದ (ಆಧಾರವಾಗಿರುವ ಸ್ವತ್ತು ಎಂದು ಇದಕ್ಕೆ ಹೆಸರು) ಇದು ಉತ್ಪತ್ತಿಯಾಗಿದೆ . ಸ್ವತಃ ಆಧಾರವಾಗಿರುವ ಸ್ವತ್ತನ್ನು ವ್ಯಾಪಾರ ಅಥವಾ ವಿನಿಮಯ ಮಾಡುವುದಕ್ಕಿಂತ ಹೆಚ್ಚಾಗಿ, ಆಧಾರವಾಗಿರುವ ಸ್ವತ್ತಿನ ಆಧಾರದ ಮೇಲೆ ಹಣ ಅಥವಾ ಸ್ವತ್ತುಗಳನ್ನು ಕಾಲಾನಂತರದಲ್ಲಿ ವಿನಿಮಯ ಮಾಡಿಕೊಳ್ಳಲು ಉತ್ಪನ್ನ ವ್ಯಾಪಾರಿಗಳು ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಮುಮ್ಮಾರಿಕೆಗಳ ಒಪ್ಪಂದವೊಂದು ಇದಕ್ಕೆ ನೀಡಬಹುದಾದ ಒಂದು ಸರಳ ಉದಾಹರಣೆಯಾಗಿದೆ: ಇದು ಆಧಾರವಾಗಿರುವ ಸ್ವತ್ತನ್ನು ಭವಿಷ್ಯದ ದಿನವೊಂದರಲ್ಲಿ ವಿನಿಮಯ ಮಾಡಲು ಮಾಡಿಕೊಂಡ ಒಂದು ಒಪ್ಪಂದವಾಗಿದೆ.

ಉತ್ಪನ್ನಗಳು ಬಹುಪಾಲು ಹೆಚ್ಚಿನ ಸನ್ನೆ-ಸಾಮರ್ಥ್ಯವನ್ನು ಹೊಂದಿದ್ದು, ಆಧಾರವಾಗಿರುವ ಮೌಲ್ಯದಲ್ಲಿನ ಒಂದು ಚಿಕ್ಕ ಸಂಚಲನೆಯು ಉತ್ಪನ್ನದ ಮೌಲ್ಯದಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಲ್ಲುದಾಗಿರುತ್ತದೆ.

ಒಂದು ವೇಳೆ ಆಧಾರವಾಗಿರುವ ಸ್ವತ್ತಿನ ಮೌಲ್ಯವು ತಾವು ನಿರೀಕ್ಷಿಸಿದ ಮಾರ್ಗದಲ್ಲಿಯೇ ಚಲಿಸಿದರೆ (ಉದಾಹರಣೆಗೆ, ನಿರ್ಧರಿತ ದಿಕ್ಕಿನಲ್ಲಿ ಚಲಿಸುತ್ತದೆ, ನಿರ್ದಿಷ್ಟ ವಲಯವೊಂದರ ಒಳಗೆ ಅಥವಾ ಹೊರಗೆ ನಿಲ್ಲುತ್ತದೆ, ಒಂದು ಗೊತ್ತಾದ ಮಟ್ಟವನ್ನು ಮುಟ್ಟುತ್ತದೆ), ಸಟ್ಟಾ ವ್ಯವಹಾರ ಮಾಡಲು ಮತ್ತು ಲಾಭ ಗಳಿಸಲು ಹೂಡಿಕೆದಾರರಿಂದ ಉತ್ಪನ್ನಗಳು ಬಳಸಲ್ಪಡಬಹುದು. ಇದಕ್ಕೆ ಪರ್ಯಾಯವಾಗಿ, ತಮ್ಮ ಆಧಾರವಾಗಿರುವ ಸ್ಥಾನಕ್ಕೆ ವಿರುದ್ಧ ದಿಕ್ಕಿನಲ್ಲಿ ಮೌಲ್ಯವು ಚಲಿಸುವ ಹಾಗೂ ಅದರ ಭಾಗ ಅಥವಾ ಎಲ್ಲವನ್ನೂ ಪರಸ್ಪರ ಹೊಡೆದುಹಾಕುವ ಒಂದು ಉತ್ಪನ್ನದ ಒಡಂಬಡಿಕೆಯೊಳಗೆ ಪ್ರವೇಶಿಸುವ ಮೂಲಕ ಆಧಾರವಾಗಿರುವ ಸ್ವತ್ತಿನಲ್ಲಿ ನಷ್ಟವಾಗದಂತೆ ರಕ್ಷಿಸಿಕೊಳ್ಳಲು ಅಥವಾ ಅಪಾಯ ತಗ್ಗಿಸಲು ವ್ಯಾಪಾರಿಗಳು ಉತ್ಪನ್ನಗಳನ್ನು ಬಳಸಿಕೊಳ್ಳಬಹುದು.

ಉತ್ಪನ್ನಗಳು ಈ ಕೆಳಕಂಡ ಅಂಶಗಳಿಂದ ಸಾಮಾನ್ಯವಾಗಿ ಸಂಪೂರ್ಣವಾಗಿ ವರ್ಗೀಕರಿಸಲ್ಪಡುತ್ತವೆ:

ಆಧಾರವಾಗಿರುವ ಸ್ವತ್ತಿನ ಮತ್ತು ಉತ್ಪನ್ನದ ನಡುವಿನ ಸಂಬಂಧ (ಉದಾಹರಣೆಗೆ, ಮುಂಗಡದ, ಪೂರ್ವಪಾವತಿ ಹಕ್ಕು, ವಸ್ತು ವಿನಿಮಯ) ಆಧಾರವಾಗಿರುವ ಸ್ವತ್ತುಗಳ ಬಗೆ (ಉದಾಹರಣೆಗೆ, ಬಾಲ್ಟಿಕ್‌ ವಿನಿಮಯ ಹಡಗು ರವಾನೆ ಸೂಚಿಗಳ ಮೇಲೆ ಅವಲಂಬಿತವಾಗಿರುವ ಸರಕು ಸಾಗಣೆ ಉತ್ಪನ್ನಗಳು), ನಿವ್ವಳ ಬೆಲೆಯ ಉತ್ಪನ್ನಗಳು, ವಿದೇಶಿ ವಿನಿಮಯ ಉತ್ಪನ್ನಗಳು ಮತ್ತು ಸಾಲದ ಉತ್ಪನ್ನಗಳು) ಅವುಗಳು ಮಾರಾಟವಾಗುವ ಮಾರುಕಟ್ಟೆ (ಉದಾಹರಣೆಗೆ, ವಿನಿಮಯ ಕೇಂದ್ರದಿಂದ ಮಾರಾಟವಾಗುವಂಥದು ಅಥವಾ ನೇರ ಮಾರಾಟದ್ದು)


ಆಧಾರವಾಗಿರುವ ಸ್ವತ್ತಿನ ಬೆಲೆಯ ಕುರಿತಾದ ಅಪಾಯವು ಒಬ್ಬ ಸಹಭಾಗಿಯಿಂದ ಮತ್ತೊಂದು ಸಹಭಾಗಿಗೆ ವರ್ಗಾವಣೆಯಾಗುವಲ್ಲಿ ಉತ್ಪನ್ನಗಳು ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ, ಓರ್ವ ಗೋಧಿ ಬೆಳೆವ ರೈತ ಮತ್ತು ಓರ್ವ ಗಿರಣಿಗಾರ, ಭವಿಷ್ಯದ ದಿನದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಗೋಧಿಗೆ ಪ್ರತಿಯಾಗಿ ಒಂದು ನಿರ್ದಿಷ್ಟ ಪ್ರಮಾಣದ ನಗದು ಹಣವನ್ನು ವಿನಿಮಯ ಮಾಡಿಕೊಳ್ಳಲು ಮುಮ್ಮಾರಿಕೆಗಳ ಒಪ್ಪಂದವೊಂದಕ್ಕೆ ಸಹಿಹಾಕಬಹುದು.

ಎರಡೂ ವ್ಯಕ್ತಿಗಳು ಭವಿಷ್ಯದ ಒಂದು ಅಪಾಯವನ್ನು ತಗ್ಗಿಸಿಕೊಂಡಿರುತ್ತಾರೆ: ಅಂದರೆ, ಗೋಧಿ ಬೆಳೆವ ರೈತನಿಗೆ ಬೆಲೆಯ ಅನಿಶ್ಚಿತತೆಯ ಅಪಾಯ, ಮತ್ತು ಗಿರಣಿಗಾರನಿಗೆ ಗೋಧಿಯ ಲಭ್ಯತೆಯಾಗದಿರುವ ಅಪಾಯ ಇವು ತಗ್ಗಿಸಲ್ಪಟ್ಟಿರುತ್ತವೆ. ಆದಾಗ್ಯೂ, ಹವಾಮಾನದ ಕಾರಣ ಅಥವಾ ಒಬ್ಬ ಸಹಭಾಗಿಯು ಒಡಂಬಡಿಕೆಯ ಕುರಿತಾಗಿ ವಚನಭಂಗ ಮಾಡುವ ಕಾರಣದಂಥ, ಒಡಂಬಡಿಕೆಯಿಂದ ನಿರ್ದಿಷ್ಟಪಡಿಸಲ್ಪಡದ ಸಂಗತಿಗಳಿಂದಾಗಿಯೂ ಗೋಧಿಯು ಸಿಗದಿರುವ ಅಪಾಯಗಳು ಇಲ್ಲಿ ಎದುರಾಗಬಹುದು. ತೀರುವೆ ಮನೆ ಎಂದು ಕರೆಯಲಾಗುವ ಒಂದು ಮೂರನೇ ಸಹಭಾಗಿಯು ಅಥವಾ ಸಂಸ್ಥೆಯು, ಮುಮ್ಮಾರಿಕೆಗಳ ಒಪ್ಪಂದವೊಂದನ್ನು ಖಚಿತಪಡಿಸುತ್ತದೆಯಾದರೂ, ಪರಸ್ಪರ ಎದುರಾಗಿರುವ ಸಹಭಾಗಿಗಳಿಗೆ, ಅಂದರೆ ಪೂರಕ ಸಹಭಾಗಿಗಳಿಗೆ ಪ್ರತಿಯಾಗಿ ಎಲ್ಲಾ ಉತ್ಪನ್ನಗಳೂ ಖಚಿತಪಡಿಸಲ್ಪಡುವುದಿಲ್ಲ. ಇನ್ನೊಂದು ದೃಷ್ಟಿಕೋನದಲ್ಲಿ ಹೇಳುವುದಾದರೆ, ರೈತ ಮತ್ತು ಗಿರಣಿಗಾರ- ಈ ಇಬ್ಬರೂ ಮುಮ್ಮಾರಿಕೆಗಳ ಒಪ್ಪಂದವೊಂದಕ್ಕೆ ಸಹಿಹಾಕಿದಾಗ, ಒಂದು ಅಪಾಯವನ್ನು ತಗ್ಗಿಸಿಕೊಳ್ಳುತ್ತಾರೆ ಮತ್ತು ಒಂದು ಅಪಾಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ: ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲ್ಪಟ್ಟ ಬೆಲೆಗಿಂತ ಕಡಿಮೆ ಬೆಲೆಗೆ ಗೋಧಿಯ ಬೆಲೆಯು ಕುಸಿದಾಗ, ರೈತನ ಅಪಾಯವು ತಗ್ಗುತ್ತದೆ ಮತ್ತು ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲ್ಪಟ್ಟ ಬೆಲೆಗಿಂತ ಘೋಧಿಯ ಬೆಲೆಯು ಹೆಚ್ಚಿದಾಗ, ರೈತನು ಅಪಾಯವನ್ನು ತನ್ನದಾಗಿಸಿಕೊಳ್ಳುತ್ತಾನೆ (ತನ್ಮೂಲಕ ತಾನು ಗಳಿಸಬಹುದಾಗಿದ್ದ ಹೆಚ್ಚುವರಿ ಆದಾಯವನ್ನು ಕಳೆದುಕೊಳ್ಳುತ್ತಾನೆ). ಮತ್ತೊಂದು ಕಡೆ, ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲಾದ ಬೆಲೆಗಿಂತ ಗೋಧಿಯ ಬೆಲೆಯು ಕುಸಿದಾಗ ಗಿರಣಿಗಾರನು ಅಪಾಯವನ್ನು ತನ್ನದಾಗಿಸಿಕೊಳ್ಳುತ್ತಾನೆ (ತನ್ಮೂಲಕ ತಾನು ಮಾರುಕಟ್ಟೆ ಬೆಲೆಯನುಸಾರ ವಾಸ್ತವವಾಗಿ ಕೊಡಬಹುದಾಗಿದ್ದುದಕ್ಕಿಂತ ಭವಿಷ್ಯದಲ್ಲಿ ಹೆಚ್ಚಿನ ಹಣವನ್ನು ಪಾವತಿಸುತ್ತಾನೆ) ಮತ್ತು ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲಾದ ಬೆಲೆಗಿಂತ ಗೋಧಿಯ ಬೆಲೆ ಏರಿದಾಗ ತನ್ನ ಅಪಾಯವನ್ನು ತಗ್ಗಿಸಿಕೊಳ್ಳುತ್ತಾನೆ. ಈ ಅರ್ಥದಲ್ಲಿ, ಒಬ್ಬ ಸಹಭಾಗಿಯು ಒಂದು ತೆರನಾದ ಅಪಾಯಕ್ಕೆ ವಿಮಾಗಾರನಾಗಿರುತ್ತಾನೆ (ಅಪಾಯ ತೆಗೆದುಕೊಳ್ಳುವವ), ಮತ್ತು ಪ್ರತಿ-ಸಹಭಾಗಿಯು ಮತ್ತೊಂದು ತೆರನಾದ ಅಪಾಯಕ್ಕೆ ವಿಮಾಗಾರನಾಗಿರುತ್ತಾನೆ (ಅಪಾಯ ತೆಗೆದುಕೊಳ್ಳುವವ).

ಓರ್ವ ವ್ಯಕ್ತಿ ಅಥವಾ ಸಂಸ್ಥೆಯು ಸ್ವತ್ತೊಂದನ್ನು (ಒಂದು ವ್ಯಾಪಾರದ ಸರಕಿನಂಥದು, ಗುರುತುಚೀಟಿ ಪಾವತಿಗಳನ್ನು ಹೊಂದಿರುವ ಒಂದು ಬಾಂಡ್‌ನಂಥದು, ಲಾಭಾಂಶಗಳನ್ನು ಪಾವತಿಸುವ ಒಂದು ಷೇರು, ಮತ್ತು ಇನ್ನೂ ಅನೇಕವು) ಖರೀದಿಸಿ, ಮುಮ್ಮಾರಿಕೆಗಳ ಒಪ್ಪಂದವೊಂದನ್ನು ಬಳಸಿಕೊಳ್ಳುವ ಮೂಲಕ ಅದನ್ನು ಮಾರಾಟ ಮಾಡಿದಾಗಲೂ ನಷ್ಟವಾಗದಂತೆ ರಕ್ಷಿಸಿಕೊಳ್ಳುವಿಕೆಯು ಸಂಭವಿಸುತ್ತದೆ. ಒಂದು ನಿರ್ದಿಷ್ಟಪಡಿಸಲಾದ ಪ್ರಮಾಣದ ಸಮಯದವರೆಗೆ ವ್ಯಕ್ತಿ ಅಥವಾ ಸಂಸ್ಥೆಯು ಸ್ವತ್ತಿನೊಂದಿಗೆ ಸಾಮಿಪ್ಯವನ್ನು ಹೊಂದಿರುತ್ತಾರೆ, ಮತ್ತು ಮುಮ್ಮಾರಿಕೆಗಳ ಒಪ್ಪಂದದ ಅನುಸಾರ ಒಂದು ನಿರ್ದಿಷ್ಟಪಡಿಸಲಾದ ಬೆಲೆಯಲ್ಲಿ ಭವಿಷ್ಯದಲ್ಲಿ ಅದನ್ನು ಅವರು ಮಾರಬಹುದಾಗಿರುತ್ತದೆ. ಸ್ವತ್ತಿನ ಭವಿಷ್ಯದ ಮೌಲ್ಯಕ್ಕೆ ಸಂಬಂಧಿಸಿದಂತಿರುವ ಮಾರುಕಟ್ಟೆಯ ಪ್ರಸಕ್ತ ಬೆಲೆ ಕಟ್ಟುವಿಕೆ ಅಥವಾ ನಿರ್ಧಾರಣೆಯಿಂದ ಭವಿಷ್ಯದ ಮಾರಾಟದ ಬೆಲೆಯು ಅನಿರೀಕ್ಷಿತವಾಗಿ ಮಾರ್ಗಬದಲಿಸುವ ಅಪಾಯವನ್ನು ತಗ್ಗಿಸುವ ಸಮಯಕ್ಕೆ ಸರಿಯಾಗಿ, ವ್ಯಕ್ತಿ ಅಥವಾ ಸಂಸ್ಥೆಯು ಸ್ವತ್ತನ್ನು ಹಿಡುವಳಿಯಲ್ಲಿಟ್ಟುಕೊಳ್ಳುವ ಪ್ರಯೋಜನವನ್ನು ಹೊಂದಲು ಇದು ನಿಸ್ಸಂದೇಹವಾಗಿ ಅನುವುಮಾಡಿಕೊಡುತ್ತದೆ.