ವಿದ್ಯುತ್ಕಾಂತೀಯ ವಿಕಿರಣಗಳು ಮತ್ತು ಅವುಗಳ ಉಪಯೋಗಗಳು

೧) ರೇಡಿಯೋ ತರಂಗಗಳು : ರೇಡಿಯೋ ಪ್ರಸಾರಕ್ಕೆ ರೇಡಿಯೋ ತರಂಗಗಳು ಕಾರಣವಾಗಿವೆ. ತೂಗಾಡುವ ಸುರುಳಿಯಲ್ಲಿನ ದ್ವಿಧ್ವವ ಆಂಟಿನಾದಿಂದ ರೇಡಿಯೋ ತರಂಗಗಳು ಉತ್ಪತ್ತಿಯಾಗುತ್ತದೆ. ಈ ತರಂಗಗಳು ವಿದ್ಯುತ್ಕಾಂತೀಯ ತರಂಗಗಳಲ್ಲಿಯೇ ಅತೀ ಹೆಚ್ಚು ತರಂಗದೂರ ಹೋಂದಿರುವ ತರಂಗಗಳಾಗಿವೆ. ರೇಡಿಯೋ ತರಂಗಗಳು ವಿದ್ಯುತ್ಕಾಂತೀಯ ವಿಕಿರಣದ ಒಂದು ದೃಗ್ಗೋಚರವಲ್ಲದ ರೂಪವಾಗಿದೆ. ಉಪಯೋಗಗಳು ;

  1. ಕಡಿಮೆ ತರಂಗದೂರ ಹೊಂದಿರುವ ರೇಡಿಯೋ ತರಂಗಗಳನ್ನು ಸಂಪರ್ಕ ವ್ಯವಸ್ಥೆಗಳಾದ ರೇಡಾರ್ ಮತ್ತು ದೂರದರ್ಶನ ಪ್ರಸಾರದಲ್ಲಿ ಬಳಸುತ್ತಾರೆ.
  2. ಹೆಚ್ಚು ತರಂಗದೂರ ಹೊಂದಿರುವ ರೇಡಿಯೋ ತರಂಗಗಳನ್ನು ರೇಡಿಯೋ ಪ್ರಸಾರದಲ್ಲಿ ಉಪಯೋಗಿಸುತ್ತಾರೆ.
  3. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಜ್ಞೆಗಳನ್ನು ಕಳುಹಿಸಳು ವಾಕಿಟಾಕಿಗಳಲ್ಲಿ ರೇಡಿಯೋ ತರಂಗಗಳನ್ನು ಬಳಸುತ್ತಾರೆ.
  4. ಮೊಬೈಲ್ ಮತ್ತು ಉಪಗ್ರಹ ಸಂಪರ್ಕದಲ್ಲಿಯೂ ಸಹ ರೇಡಿಯೋ ತರಂಗಗಳನ್ನು ಬಳಸುತ್ತಾರೆ.
  5. ವಿಶೇಷವಾಗಿ ಜಿಪಿಎಸ್ ಗಳಲ್ಲಿ ರೇಡಿಯೋ ತರಂಗಗಳನ್ನು ಬಳಸಿಕೊಂಡು ನಾವು ಇರುವ ಸ್ಥಳ ತಿಳಿದುಕೊಳ್ಳಬಹುದು.

೧) ಸೂಕ್ಷ್ಮ ತರಂಗಗಳು : ಸೂಕ್ಷ್ಮ ತರಂಗಗಳನ್ನು ಚಿಕ್ಕ ತರಂಗದೂರದ ರೇಡಿಯೋ ತರಂಗಗಳೆಂದು ಸಹ ಕರೆಯುತ್ತಾರೆ. ಈ ತರಂಗಗಳನ್ನು ವಿಶೇಷ ನಿರ್ವಾತ ನಳಿಕೆಯಿಂದ ಉತ್ಪತ್ತಿ ಮಾಡುತ್ತಾರೆ. ಉಪಯೋಗಗಳು ;

  1. ಸೂಕ್ಷ್ಮ ತರಂಗಗಳನ್ನು ರೇಡಾರ್ ಮತ್ತು ಉಪಗ್ರಹದಲ್ಲಿ ಉಪಯೋಗಿಸುತ್ತಾರೆ.
  2. ಅಣು ಮತ್ತು ಪರಮಾಣುವಿನ ರಚನೆಯ ವಿಶ್ಲೇಷಣೆಯಲ್ಲಿ ಉಪಯೋಗಿಸುತ್ತಾರೆ.
  3. ಸೂಕ್ಷ್ಮ ತರಂಗಗಳಲ್ಲಿ ಹೆಚ್ಚು ದೂರ ಹೊಂದಿರುವ ತರಂಗಗಳನ್ನು ಮೊಬೈಲ್ ದೂರವಾಣಿಗಳಲ್ಲಿ ಬಳಸುತ್ತಾರೆ.

೩). ಆವಕೆಂಪು ವಿಕಿರಣ: ಆವಕೆಂಪು ವಿಕಿರಣಗಳು ಹೆಚ್ಚು ಚದುರುವಿಕೆ ಇಲ್ಲವೆ ತೂರಿಹೋಗಬಲ್ಲದು. ಕ್ರಿ.ಶ.1800ರಲ್ಲಿ ವಿಲಿಯಂ ಹರ್ಷಲ್ ನು ಆವಕೆಂಪು ವಿಕಿರಣಗಳನ್ನು ಆವಿಷ್ಕರಿಸಿದ. ಬಿಸಿಯಾದ ವಸ್ತುಗಳು ಆವಕೆಂಪು ವಿಕಿರಣಗಳು ಆಕರಗಳಾಗಿವೆ. ಮಾದ್ಯಮಗಳು ಆವಕೆಂಪು ವಿಕಿರಣಗಳನ್ನು ಹೆಚ್ಚಾಗಿ ಹೀರಿಕೊಳ್ಳುವುದಿಲ್ಲ ಮತ್ತು ಇವು ನಮಗೆ ಗೋಚರಿಸುವುದಿಲ್ಲ. ಉಪಯೋಗಗಳು ;

  1. ಇವುಗಳನ್ನು ದೂರದರ್ಶಕದ ದೂರನಿಯಂತ್ರಣ ಉಪಕರಣದಲ್ಲಿ ಉಪಯೋಗಿಸುತ್ತಾರೆ.
  2. ಅಣುರಚನೆಯ ವಿಶ್ಲೇಷಣೆಯಲ್ಲಿಯೂ ಬಳಸುತ್ತಾರೆ.

೪), ದೃಗ್ಗೋಚರ ಬೆಳಕು: ದಿನನಿತ್ಯ ನಮ್ಮ ಸುತ್ತಲಿನ ಪ್ರಪಂಚದ ದೃಶ್ಶವನ್ನು ನೋಡಲು ದೃಗ್ಗೋಚರ ಬೆಳಕನ್ನು ಉಪಯೋಗಿಸುತ್ತೇವೆ. ಇದು ವಿದ್ಯುತ್ಕಾಂತೀಯ ರೋಹಿತದ ಒಂದು ಚಿಕ್ಕ ಭಾಗವಾಗಿದ್ದು ನಮ್ಮ ಕಣ್ಣಿನ ಗ್ರಹಿಕೆಗೆ ಸಿಗುತ್ತದೆ. ರೋಹಿತದ ಈ ಭಾಗವು ವಿವಿಧ ಆವೃತ್ತಿಗಳ ವಿಕಿರಣಗಳನ್ನು ಹೊಂದಿದ ನೇರಳೆ ಮತ್ತು ಕೆಂಪು ಪ್ರದೇಶಗಳ ನಡುವೆ ಇದೆ. ಸರ್ ಐಸಾಕ್ ನ್ಯೂಟನ್ನು ದೃಗ್ಗೋಚರ ಬೆಳಕನ್ನು ಆವಿಷ್ಕರಿಸಿದ. ಆಶ್ರಗದ ಮೂಲಕ ಸೂರ್ಯನ ಬೆಳಕನ್ನು ಹಾಯಿಸುವುದರಿಂದ ಈ ರೋಹಿತವನ್ನು ನೋಡಲು ಸಾಧ್ಯ. ಬಹಳಷ್ಟು ದ್ಯುತಿ ಉಪರಣಗಳು ದೃಗ್ಗೋಚರ ಬೆಳಕನ್ನು ಉಪಯೋಗಿಸಿ ಕಾರ್ಯನಿರ್ವಸುತ್ತದೆ. ೫), ನೇರಳಾತೀತ ವಿಕಿರಣಗಳು: ಜೆ.ಡಬ್ಲ್ಯು. ರಿಟ್ಚರ್ ನು ಕ್ರಿ.ಶ.1801ರಲ್ಲಿ ನೇರಳಾತೀತ ಕಿರಣಗಳನ್ನು ಆವಿಷ್ಕರಿಸಿದನು.ಸ್ಪಟಿಕಶಿಲೆಯಿಂದ ಮುಚ್ಚಿದ ತಂತಿಯನ್ನು ವಿದ್ಯುತ್ ನಿಂದ ಬಿಸಿಮಾಡಿದಾಗ ನೇರಳಾತೀತ ಕಿರಣಗಳು ಉತ್ಪತ್ತಿಯಾಗುತ್ತವೆ. ಉಪಯೋಗಗಳು ;

  1. ನೇರಳಾತೀತ ಕಿರಣಗಳನ್ನು ಆಸ್ಪತ್ರೆಗಳಲ್ಲಿ ಶಸ್ತ್ರಕ್ರಿಯೆಯಲ್ಲಿ ಉಪಯೋಗಿಸುತ್ತಾರೆ.