ಸದಸ್ಯ:Samsheera 97/sandbox
ಈ ಮರದ ತೌರೂರು ದಕ್ಷಿಣ ಅಮೇರಿಕ. ಈ ಹಣ್ಣಿನ ಮರವನ್ನು ಕ್ರಿ.ಶ.೧೬೨೬ಕ್ಕೆ ಮೊದಲೆ ಭಾರತಕ್ಕೆ ಪೋರ್ಚುಗೀಸರು ತಂದರೆಂದು ತಿಳಿದು ಬರುತ್ತದೆ. ಜನಪ್ರಿಯವಾದ ಫಲವೃಕ್ಷವನ್ನು ರಾಜ್ಯದಲ್ಲೆಲ್ಲಾ ಬೆಳೆಯಲಾಗುತ್ತದೆ. ಪಪ್ಪಾಯ ಸದಾ ಹಸಿರಾಗಿರುವ ಒಂದು ಸಣ್ಣಮರ. ಈ ಮರವು ಹೆಣ್ಣು, ಗಂಡು ಮತ್ತು ದ್ವಿಲಿಂಗಿ ಎಂಬ ಮೂರು ಬಗೆಯ ಹೂಗಳನ್ನು ಬಿಡುತ್ತದೆ.ಪರಂಗಿಯಲ್ಲಿ ಹಲವಾರು ತಳಿಗಳಿವೆ.ಅವುಗಳಲ್ಲಿ ವಾಷಿಂಗ್ ಟನ್, ಹನಿಡ್ಯೂ ಅಥವಾ ಕೂರ್ಗ್ ಹನಿಡ್ಯೂ ಮುಖ್ಯವಾದವುಗಳು.
ಹವಾಗುಣ
ಬದಲಾಯಿಸಿಇದು ಶುಷ್ಕ ವಾತವರಣ ಮತ್ತು ಹೆಚ್ಚು ಉಷ್ಣತೆಯಲ್ಲಿ ಚೆನ್ನಾಗಿ ಬೆಳೆಯಬಲ್ಲದು. ಮಣ್ಣು ಇದನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಮದ್ಯಮ ಕಪ್ಪು ಮಣ್ಣು ಮತ್ತು ಕೆಂಪು ಗೋಡು ಮಣ್ಣು . ಈ ಬೆಳೆಗೆ ಸೂಕ್ತ.
ಉಪಯೋಗಳು
ಬದಲಾಯಿಸಿ೧. ಪರಂಗಿಯ ಎಲೆಯನ್ನು ಹೆಂಚಿನ ಮೇಲೆ ಅಥವಾ ಕೆಂಡದ ಮೇಲೆ ಬಾಡಿಸಿ ಬಾವು ಅಥವಾ ನೋವಿರುವ ಕಡೆ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ೨. ಪರಂಗಿಕಾಯಿಯ ಹಾಲನ್ನು ಹಚ್ಚುವುದರಿಂದ ನವೆ,ಕಜ್ಜಿ, ಮತ್ತು ಹುಳುಕಡ್ದಿ ಗುಣವಾಗುತ್ತದೆ.