ಸದಸ್ಯ:Samsheera.punjalkatte/sandbox

ಮಲೆಕುಡಿಯರ ಅಧ್ಯಯನ;'

                            ನಮ್ಮ ದೇಶದಲ್ಲಿ ಹಲವಾರು ಬುಡಕಟ್ಟು ಜನಾಂಗಗಳಿವೆ. ವಿವಿಧ ಬುಡಕಟ್ಟುಗಳ ಜನರು ಬೇರೆ ಬೇರೆ ಪ್ರದೇಶಗಳಲ್ಲಿ ಹಂಚಿ ಹೋಗಿರುವುದು ತಿಳಿದ ವಿಷಯವೇ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೩೨ ಬುಡಕಟ್ಟು ಜನಾಂಗಗಳಿಗೆ ಸೇರಿದ ಜನರು ವಾಸವಾಗಿದ್ದಾರೆ ಎಂಬುದು ಸಮೀಕ್ಷೆಗಳ ಪ್ರಕಾರ ತಿಳಿದು ಬಂದ ವಿಚಾರ. ಬುಡಕಟ್ಟು ಜನಾಂಗಕ್ಕೆ ಸೇರಿದಂತಹ ಮಲೆಕುಡಿಯರು ಕರ್ನಾಡಕದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ದಕ್ಷಿಣ ಕನ್ನಡಲ್ಲಿ ವಾಸವಾಗಿರುವ ಇವರನ್ನು ಮಲೆಕುಡಿಯರು ಎಂದೂ, ಕೊಡಗಿನಲ್ಲಿ ಕುಡಿಯರು ಎಂದೂ  ಚಿಕ್ಕಮಗಳೂರಿನಲ್ಲಿ ಮಲೈ ಎಂದು ಕರೆಯುತ್ತಾರೆ. 
                     ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಕಾರ್ಕಳ, ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ವಾಸವಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಬಂಜಾರುಮಲೆ ಅಂಬಟೆಮಲೆ, ಎಲಿಮಲೆ, ಬಾರಿಮಲೆ, ಗಂಡಿಬಾಗಿಲುಗಳಲ್ಲಿಯು ಚಾರ್ಮಾಡಿ, ಶಿಶಿಲ, ಪುದುವೆಟ್ಟು, ಕೊಕ್ಕಡಪುಟ್ರಮೆ, ಶಿಬಾಜೆ, ಧರ್ಮಸ್ಥಳ, ನಾವೂರು, ಮಲವಂತಿಗೆ, ಕಳೆಂಜಿ, ನಿಡ್ಲೆ, ನಾರಾವಿ, ಕಲ್ಮಂಜ, ಸವಣಾಲು, ಬೆಳಾಲು ಮತ್ತು ಮಚ್ಚಿನ ಗ್ರಾಮದಲ್ಲಿಯೂ ವಾಸಮಾಡುತ್ತಿದ್ದಾರೆ.
                   ಮಲೆಕುಡಿಯರು ಹಿಂದೆ ಒಂದೊಂದು ಮಲೆಗಳನ್ನು ಆಶ್ರಯಿಸಿಕೊಂಡು ಬದುಕುತ್ತಿದ್ದರು. ಆದುದರಿಂದ ತಮ್ಮ ಗುಂಪಿಗೆ ಆಯಾ ಮಲೆಯ ಹೆಸರನ್ನೇ ಇರಿಸಿಕೊಳ್ಳುತ್ತಿದ್ದರು. ಸುಳ್ಯ ತಾಲೂಕಿನಲ್ಲಿ ಪೂಮಾಲೆ ಕುಡಿಯರು, ತೇಮಾಲೆ ಕುಡಿಯರು ಎಂಬ ಪಂಗಡಗಳಿವೆ. ಒಂದೊಂದು ಪಂಗಡವು ಸಹಾ ತಮ್ಮದೇ ಅದ ಭಾಷೆಯನ್ನು ಮಾತನಾಡುತ್ತಾರೆ. ಹೀಗೆ ತಮ್ಮದೆ ಆದ ಸಂಪ್ರದಅಯ, ರೀತಿ ರಿವಾಜುಗಳನ್ನು ಪಾಲಿಸುತ್ತಾ ಬಂದಿರುವವರು ಮಲೆಕುಡಿಯರು. 

   ಮಲೆಕುಡಿಯರು ಮತ್ತು ಅವರ ಹುಟ್ಟು
       ಎಲ್ಲದಕ್ಕೂ ಐತಿಹ್ಯ ಇರುವ ಹಾಗೆಯೇ ಮಲೆಕುಡಿಯರ  ಹುಟ್ಟಿಗೂ ಒಂದು ಐತಿಹ್ಯವಿದೆ.ಪ್ರಾರಂಭದಲ್ಲಿ ಪಾರ್ವತಿ ಮಗುವಿಗೆ ಮೊಲೆ ಉಣಿಸಿ ಪರ್ವತದಲ್ಲಿ ಬಿಡುವಾಗ ಮಗುವಿಗೆ ಒಂದು ಹೆಸರನ್ನಿಡಬೇಕೆಂದು ಯೋಚಿಸಿದಳು. ನಾನು ಮೊಲೆ ಕೊಟ್ಟು ಬಿಟ್ಟ ಕಾರಣ ಮಗುವಿಗೆ ಮೊಲೆ ಕುಡಿಯ ಎಂದು ಹೆಸರಿಡಬೇಕೆಂದು ನಿರ್ಧರಿಸಿದಳು. ಮತ್ತೆ ಕಾಲ ಕ್ರಮೇಣ ಈ ಮೊಲೆ ಕುಡಿಯ ಎಂಬ ಹೆಸರು  ರೂಪಾಂತರವಾಗಿ ಮಲೆ ಕುಡಿಯ ಎಂಬ ರೂಪ ಪಡೆಯಿತು. 
  
      ಕೃಷಿ
           ಮಲೆಕುಡಿಯರೂ ಸಹಾ ಕೃಷಿಯನ್ನು ತಮ್ಮ ಜೀವಾಳವನ್ನಾಗಿಸಿಕೊಂಡಿದ್ದಾರೆ. ಅವರು ಮುಖ್ಯವಾಗಿ ಭತ್ತ, ಅಡಿಕೆ, ತೆಂಗುಗಳನ್ನು ಹೆಚ್ಚಾಗಿ ಬೆಳೆಸುತ್ತಾರೆ. ಇದಲ್ಲದೇ ಅಡಿಕೆ ತೋಟದ ಮಧ್ಯದಲ್ಲಿ ಏಲಕ್ಕಿಯನ್ನು ಬೇಳೆಸುತ್ತಾರೆ. ಕರಿಮೆಣಸು ಇವರು ಬೆಳೆಸುವ ಮತ್ತೋಂದು ಬೆಳೆ. ಮಲೆ ಕುಡಿಯರಲ್ಲಿ ಬಹುಜನರು ಕೃಷಿ ಕಾರ್ಮಿಕರಾಗಿ ದುಡಿಯುವುದನ್ನು ಕಾಣಬಹುದು. 
  
     ಕೈಕಸುಬು
             ಮಲೆಕುಡಿಯರು ತಮ್ಮದೆ ಆದ ಕುಲ ಕಸುಬುಗಳನ್ನು ಹೊಂದಿದ್ದಾರೆ. ಇವರು ಬೆತ್ತದ ಬುಟ್ಟಿ ,ಕೋಳಿ ಮರಿಗಳನ್ನು ಮುಚ್ಚ್ಇಡುವ ಕೂಟಾಯ ಇವುಗಳನ್ನು ತಯಾರಿಸುತ್ತಾರೆ