ಸದಸ್ಯ:Samprat Durgekar/sandbox
ಕಾರವಾರದ ಕರಾವಳಿ ಉತ್ಸವ
ಉತ್ಸವ ಎಂದರೆ ಹಬ್ಬ ಅಥವಾ ಜಾತ್ರೆ ಎಂದು ಕರೆಯಬಹುದು. ಕರಾವಳಿ ಸ್ಥಳಗಳಲ್ಲಿ ನಡೆಯುವ ಉತ್ಸವಗಳನ್ನು ಕರಾವಳಿ ಉತ್ಸವಗಳೆಂದು ಕರೆಯಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾದ ಕಾರವಾರವು ಕನಾ೯ಟಕದ ವಾಯುವ್ಯ ಭಾಗಕ್ಕಿರುವ ಮುಖ್ಯ ನಗರಗಳಲೊಂದಾಗಿದೆ. ಇಲ್ಲಿನ ಕರಾವಳಿ ಉತ್ಸವವು ವಷ೯ಕೊಮ್ಮೆ ಇಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವವಾಗಿದೆ. ಈ ಉತ್ಸವವು ಕನಾ೯ಟಕದ ಸುಪ್ರಸಿದ್ಧ ಕಡಲ ತೀರಗಳಲೊಂದಾದ ರವೀಂದ್ರನಾಥ್ ಠಾಗೋರ್ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿವಷ೯ವು ಕಾರವಾರದ ಜಿಲ್ಲಾಡಳಿತವು ಉತ್ಸವದ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತಿದೆ.
ಈ ಉತ್ಸವವು ಕರಾವಳಿಯ ಜನರ ಸಂಪ್ರದಾಯವನ್ನು ಎತ್ತಿ ಹಿಡಿಯುತ್ತಿರುವ ಅಸ್ತ್ರವೆಂದರೆ ತಪ್ಪಾಗಲಾರದು. ಕರಾವಳಿಯ ಜನರ ಕಲೆ ಹಾಗೂ ಆಚರಣೆಗಳನ್ನು ಪ್ರತಿಬಿಂಬಿಸುತ್ತಿದೆ. ಈ ಉತ್ಸವದಲ್ಲಿ ಸಾಂಸ್ಕೃತಿಕ ಕಾಯ೯ಕ್ರಮಗಳಾದ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ನಾಟಕ ಹಾಗೂ ಹಾಸ್ಯಗಳಂತಹ ಕಾಯ೯ಕ್ರಮಗಳನ್ನು ಪ್ರದಶಿ೯ಸಲಗುತ್ತದೆ. ಸ್ಥಳಿಯ ಕಲಾವಿದರ ಜೊತೆಗೆ ದೇಶದ ನಾನಾ ಮೂಲೆಗಳಿಂದ ಕಲಾವಿದರು ಬಂದು ತಮ್ಮ ಕಲೆಯನ್ನು ಪ್ರದಶಿ೯ಸುತ್ತಾರೆ. ಕನ್ನಡ ಹಾಗೂ ಹಿಂದಿ ಚಲನಚಿತ್ರದ ಕೆಲವು ನಟ-ನಟಿಯರ ಹಾಗೂ ಸಂಗೀತಕಾರರ ಕಲಾ ಪ್ರದಶ೯ನವು ಉತ್ಸವಕ್ಕೆ ಮೆರುಗನ್ನು ನೀಡುತ್ತವೆ.ಉತ್ಸವವೆಂದರೆ ಕೇವಲ ಮನೋರಂಜನೆಗೆ ಸೀಮಿತವಾದುದ್ದಲ್ಲ, ಇದು ನಮ್ಮ ಜನರನ್ನು ಒಗ್ಗೂಡಿಸುವ ಯಂತ್ರವಿದ್ದಂತೆ. ಹಾಗೆಯೇ ಕಾರವಾರದ ಕರಾವಳಿ ಉತ್ಸವವು ಇಲ್ಲಿನ ಜನರಿಗೆ ಒಗ್ಗಟ್ಟಿನ ಪಾಠವನ್ನು ಹಾಗೂ ನಮ್ಮ ಸಂಪ್ರದಾಯದ ಮಹತ್ವವನ್ನು ಸಾರುತ್ತಿದೆ. ಜನರು ಕನಾ೯ಟಕ, ಗೋವಾ, ಮಹಾರಾಷ್ಟ್ರ ಹಾಗೂ ಭಾರತದ ಇತರ ರಾಜ್ಯಗಳಿಂದ ಬಂದು ಜಾತಿ, ಜನಾಂಗ ಹಾಗೂ ತಮ್ಮ ಮತ-ಧಮ೯ಗಳನ್ನು ಮರೆತು ಒಗ್ಗೂಡಿ ವಿಜೃಂಭಿಸುತ್ತಾರೆ.
ಪ್ರಮುಖವಾದ ಕಾಯ೯ಕ್ರಮಗಳನ್ನು ರವೀಂದ್ರನಾಥ್ ಠಾಗೋರ್ ಕಡಲತಿರದ ಮಯೂರವಮ೯ ವೇದಿಕೆಯಲ್ಲಿ ನಡೆಸಿಕೊಡುವುದು ಇಲ್ಲಿನ ರೂಢಿಯಾಗಿದೆ. ಉತ್ಸವದ ಸ್ಥಳವು ಬಣ್ಣ ಬಣ್ಣದ ಅಲಂಕಾರಿಕ ದೀಪಗಳಿಂದ ಅಲಂಕಾರಗೊಂಡು ಉತ್ಸವಕ್ಕೆ ಇನ್ನಷ್ಟು ಮೆರಗನ್ನು ನೀಡುತ್ತದೆ. ಹಲವು ಗೃಹೋಪಯೋಗಿ ವಸ್ತುಗಳು, ಆಹಾರ ಪಧಾಥ೯ಗಳು, ಅಲಂಕಾರಿಕ ವಸ್ತುಗಳು ಆಭರಣಗಳು, ಕರಕುಶಲ ವಸ್ತುಗಳು ಮಾರಾಟವಾಗಲ್ಪಡುತ್ತವೆ. ಇಲ್ಲಿನ ಹಲವು ಬಗೆಯ ಚಿತ್ರಕಲೆ, ಛಾಯಾಚಿತ್ರ, ನಾನಾ ತರಹದ ಹೂ-ಹಣ್ಣುಗಳಿಂದ ವಿನ್ಯಾಸಿತವಾದ ಆಕೃತಿ ಹಾಗೂ ವೈಜ್ಞಾನಿಕ ಸಾಧನಗಳ ಪ್ರದಶ೯ನಗಳು ಜನರ ಜ್ನಾನಾಭಿವೃದ್ಧಿಗೆ ಪೂರಕವಾಗಿವೆ.ಖಾದ್ಯ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಸಂದಭ೯ವಿದ್ದಂತೆ. ಕರಾವಳಿಯ ವಿವಿಧ ಬಗೆಯ ತಿನಿಸುಗಳು ಹಾಗೂ ಸಮುದ್ರದ ಮೀನಿನ ಆಹಾರಗಳು ಸಿದ್ಧವಿರುತ್ತವೆ. ಚಿಣ್ಣರಿಗೆ ಹಾಗೆ ಸಾಹಸ ಪ್ರಿಯರಿಗಂತೂ ಈ ಉತ್ಸವವು ಸ್ವಗ೯ವಿದ್ದಂತೆ. ಮೈ 'ಜುಂ' ಎನಿಸುವಂತಹ ಬೃಹತ್ ಚಕ್ರಗಳು, ಪುಟಾಣಿ ರೈಲು ಗಾಡಿ, ಸಕ೯ಸ್ ಹಾಗೂ ವಿವಿಧ ಸವಾರಿಗಳು ಜನರನ್ನು ತಮ್ಮೆಡೆಗೆ ಸೆಳೆಯುತ್ತವೆ.
ಗ್ರಾಮೀಣ ಪ್ರತಿಭೆಗಳನ್ನು ಹೊರತರುವ ಸಲುವಾಗಿ ವಿವಿಧ ಬಗೆಯ ಸ್ಪಧೆ೯ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚಿತ್ರಕಲೆ, ಈಜು ಸ್ಪಧೆ೯, ಕಬಡ್ಡಿ ಸ್ಪಧೆ೯, ವಾಲಿಬಾಲ್ ಹಾಗೂ ಇನ್ನಿತರ ಸ್ಪಧೆ೯ಗಳನ್ನು ಏಪ೯ಡಿಸಲಾಗುತ್ತದೆ. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಮೂರು-ನಾಲ್ಕು ದಿನಗಳು ನಡೆಯುವ ಈ ಉತ್ಸವವು ಕಾರವಾರದ ಜನರ ಮನದಲ್ಲಿ ಪ್ರತಿ ವಷ೯ವು ಹುಮ್ಮಸ್ಸನ್ನು ಮೂಢಿಸುತ್ತಿದೆ. ಜನರಲ್ಲಿ ಐಕ್ಯೆತೆಯನ್ನು ಮೂಢಿಸುತ್ತಿದೆ. ಇದು ಹೀಗೆಯೇ ಮುಂದುವರೆಯಲಿ ಎನ್ನುವುದು ಕಾರವಾರದ ಜನತೆಯ ಆಶಯ.