ಸದಸ್ಯ:Saishree Rao Jadav/sandbox
ಕಿತ್ತೂರು ಚೆನ್ನಮ್ಮ ಕೆಚ್ಚೆದೆಯ ವೀರರಾನಿ ನೀನಾದೆ ಮಲ್ಲಸರ್ಜನ ಕಣ್ಮಣಿ ಥ್ಯಾಕರೆಯ ಪಾಲಿಗೆ ನೀನಾದೆ ಭೈರವಿ ಮೋಸದಿಂದ ಕೊಂದ ಚಾಪ್ಲಿನ್ ಮಾಯಾವಿ ನೀಗೆದ್ದೆ ದೇಶಾಭಿಮಾನಿಗಳ ಮನ ಎಂದಿಗೂ ಅವರು ಮರೆಯರು ನಿನ್ನ ಯಶೋಗಾನ.
ಒನಕೆ ಓಬವ್ವ ಶಸ್ತ್ರ ವಿದ್ಯೆಯನು ಶಾಸ್ತ್ರ ವಿದ್ಯೆಯನು ಎಂದಿಗು ತಾನು ತಿಳಿದವಳಲ್ಲ ಭತ್ತವ ಕುಟ್ಟುವ ಒನಕೆಯಿಂದಲೇ ವೈರಿರುಂಡ ಚೆಂಡಾಡಿದಳಲ್ಲ ನಾಡನು ಉಳಿಸಿ ಕೀರ್ತಿಯ ಗಳಿಸಿ ತನ್ನ ಜೀವ ಬಲಿಕೊಟ್ಟಳಲ್ಲ. ಓಬಕ್ಕನ ದೇಶ ಪ್ರೇಮದ ಮುಂದೆ ಹೈದರಾಲಿ ಸೋತೋಡಿದನಲ್ಲ ಚಿತ್ರದುರ್ಗದ ಕೋಟೆಯ ಕಿಂಡಿ ಓಬವ್ವನ ಕಥೆಯನೊರೆದಿಹುದಲ್ಲ.