ಸದಸ್ಯ:Sadhana H S/ನನ್ನ ಪ್ರಯೋಗಪುಟ

ಸಕಲೇಶಪುರ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಸಕಲೇಶ್ವರ ಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸಕಲೇಶಪುರದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಹೇಮಾವತಿ ನದಿ ತೀರದಲ್ಲಿದೆ, ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡ ಸಕಲೇಶ್ವರ ದೇವಾಲಯವು ಹೊಯ್ಸಳ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಉತ್ತುಂಗಕ್ಕೇರಿದ ಸಮಯದ ಒಂದು ಮಹಾನ್ ವಾಸ್ತುಶಿಲ್ಪ.ಇದು ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ.

ಪಟ್ಟಣದ ಪ್ರವೇಶದ್ವಾರದಲ್ಲಿ ಈ ದೇವಸ್ಥಾನವು ಯಾತ್ರಾರ್ಥಿಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ ಮತ್ತು ಈ ದೇವಸ್ಥಾನದ ಕಾರಣದಿಂದ ಪಟ್ಟಣಕ್ಕೆ ಈ ಹೆಸರು ಬಂದಿದೆ. ಈ ದೇವಾಲಯವು ಶಿವನ ದೈವದ ಪ್ರತಿಮೆಯನ್ನು ಹೊಂದಿದೆ, ಅದು ಎಲ್ಲರ ಕಣ್ಣಿಗೆ ಬೀಳುವಂತೆ ಮಾಡುತ್ತದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರೆಗೆ ಈ ದೇವಾಲಯ ಪ್ರಸಿದ್ಧವಾಗಿದೆ.