ಸದಸ್ಯ:Sadanandamurthy/sandbox
ಇಂಗ್ಲಿಷ್ ಧ್ವನಿಲಿಪಿ
ಬದಲಾಯಿಸಿಇಂಗ್ಲಿಷ್ನಲ್ಲಿ ೪೪ ಭಾಷಾಧ್ವನಿಗಳು ಇವೆ. ಅವುಗಳಲ್ಲಿ ೨೦ ಸ್ವರಧ್ವನಿಗಳು ಮತ್ತು ೨೪ ವ್ಯಂಜನ ಧ್ವನಿಗಳು ಇವೆ. ಸ್ವರ ಧ್ವನಿಗಳಲ್ಲಿ ಪ್ಯೂರ್ ವಾವಿಲ್ಜ್ , ಡಿಪ್ತಾಂಗ್ಜ್ ಅಂದರೆ ಶುಧ್ಧ ಸ್ವರಗಳು ಮತ್ತು ದ್ವಿಸ್ವರ ಅಥವಾ ಸಂಯುಕ್ತ ಸ್ವರಗಳು ಎಂಬ ವಿಭಾಗಗಳಿವೆ. ಶುದ್ಧ ಸ್ವರಗಳು ೧೨ ಮತ್ತು ಸಂಯುಕ್ತ ಸ್ವರಗಳು ೮ ಇವೆ. ಇಂಗ್ಲಿಷ್‌ನಲ್ಲಿ ಧ್ವನಿಲಿಪಿ ಎಂಬ ಲಿಪಿ ಇದೆ. ಅಂತರ ರಾಷ್ಟ್ರೀಯ ಧ್ವನಿಲಿಪಿಯೂ ಸಹ ಇದೆ. ಅಂತರ ರಾಷ್ಟ್ರೀಯ ಇಂಗ್ಲ್ಲಿಷ್‌ನಲ್ಲಿ ಅಂದಾಜು ೫೦ ಧ್ವನಿಗಳು ಇವೆ ಎಂದು ಅಭಿಪ್ರಾಯ ಪಡಲಾಗಿದೆ. ಬ್ರಿಟಿಷ್ ಇಂಗ್ಲಿಷ್‌ನಲ್ಲಿ ೪೪ ಧ್ವನಿಗಳನ್ನು ಅಂಗೀಕರಿಸಿದ್ದಾರೆ. ಮೊದಲಿಗೆ ಇಂಗ್ಲಿಷ್ ಅನ್ನು ಬರೆಯುವ ಲಿಪಿಯ ಉಚ್ಛಾರಣಾ ರೀತಿಯನ್ನು ಗಮನಿಸೋಣ
A, B, C, D, E, F, G, H, I, J, K, L, M, N, O, P, Q, R, S, T, U, V, W, X, Y, Z
ಎಇ, ಬೀ, ಸೀ, ಡೀ, ಈ ಎಫ್, ಡ್ಜೀ, ಹೆಚ್, ಆಇ, ಜೆಇ, ಕೆಇ, ಎಲ್, ಎಂ, ಎನ್, ಔ, ಪೀ, ಕ್ಯೂ, ಆರ್, ಎಸ್, ಟೀ, ಯೂ, ವೀ, ಡಬ್ಲ್ಯೂ, ಎಕ್ಸ್, ವಾಯ್, ಜಡ್.
ಈಗ ಇಂಗ್ಲಿಷ್‌ನಲ್ಲಿ ಇವೆ ಎಂದು ಹೇಳಿರುವ ೧೨ ಶುದ್ಧ ಸ್ವರಗಳನ್ನು ನೋಡೋಣ.
I:, i, ʊ, ʊ:, e, ə, ə:, ɜ:, æ, ʌ, ɑ:, ɒ,
ಇವುಗಲ್ಲಿ ಕೆಲವು ಸ್ವರ ಚಿಹ್ನೆಗಳಿಗೆ ಕನ್ನಡದಲ್ಲಿ ಸಂವಾದಿಯಾದ ಚಿಹ್ನೆಗಳಿಲ್ಲ.
ಈಗ್ ಇಂಗ್ಲಿಷ್‌ನಲ್ಲಿ ಇವೆ ಎಂದು ಹೇಳಿರುವ 8 ದ್ವಿ ಸ್ವರಗಳನ್ನು ನೋಡೋಣ.
iə, ei, uə, ɔI, əʊ, ɐə, ai, aʊ,
ಈಗ್ ಇಂಗ್ಲಿಷ್‌ನಲ್ಲಿ ಇವೆ ಎಂದು ಹೇಳಿರುವ ೨೪ ವ್ಯಂಜನಗಳನ್ನು ನೋಡೋಣ.
b, d, f, g, h, dʒ, k, l, m, n, p, r, s, t, v, w, θ, ʃ, ŋ̍, ð, t͡ʃ, j, z, ʒ
ಕೆಲವು ಪದಗಳ ಉಚ್ಚಾರಣೆಯನ್ನು ನೋಡೋಣ
about-ಅಬೌಟ್, again-ಅಗೆಇನ್, college, ಕಾಲಿಜ್, knowledge-ನಾಲಿಜ್, (ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ 'age' ನಿಂದ ಕೊನೆಗೊಳ್ಳುವ ಪದಗಳು 'ಇಜ್ ಎಂಬ ಉಚ್ಚಾರಣೆಯಿಂದ ಕೊನೆಗೊಳ್ಳುತ್ತವೆ)