ವ್ಯಕ್ತಿತ್ವ ವಿಕಸನ ಹಾಗು ವೃತ್ತಿ ಬೆಳವಣಿಗೆ :-

ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ,ಸದಾಚಾರ,ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ-ಸನ್ನಿವೇಶಗಳೊಡನೆಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ,ಪರೋಪಕಾರ ಬುದ್ಧಿ,ಪ್ರಾಮಾಣಿಕತೆ....ಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು.

ಈ ನಿಟ್ಟಿನಲ್ಲಿ ನೋಡಿದಾಗ ನಮಗೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಅರ್ಥವಾಗುತ್ತದೆ. ಹೂವಿಗೆ ಪರಿಮಳವಿದ್ದಂತೆ ,ಮಾನವರಿಗೆ ವ್ಯಕ್ತಿತ್ವ ಅಷ್ಟೇ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಮನುಷ್ಯ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳುತ್ತಾನೆ, ಅಂದರೆ ತನ್ನೆಲ್ಲ ಆಲೋಚನೆಗಳ ವಸ್ತುರೂಪವೇ ಮಾನವನಾಗಿರುತ್ತಾನೆ. ವ್ಯಕ್ತಿತ್ವವೆಂಬುದು ಹುಟ್ಟಿನಿಂದ ಸಾವಿನವರೆಗೆ ರೂಪುಗೊಳ್ಳುತ್ತಿರುತ್ತದೆ.personality emerges early and continues to change in meaningful ways throughout the lifespan. ಮನೋವಿಜ್ಞಾನಿಗಳ ಪ್ರಕಾರ ವ್ಯಕ್ತಿತ್ವ ರೂಪಣ ಐದು ಅಂಶಗಳನ್ನು ಆಧರಿಸಿದೆ.(The five factors have been defined as openness to experience, conscientiousness, extraversion, agreeableness, and neuroticism.)ಅವು ಯಾವುವೆಂದರೆ

೧.ಮುಕ್ತ ಅನುಭವ,

೨.ಆತ್ಮಸಾಕ್ಷಿ ಭಾವ,

೩.ಬಹಿರ್ಮುಖತ್ವ,

೪.ಒಪ್ಪಿಕೊಳ್ಳುವತನ,

೫.ನರವ್ಯಾಧಿತನ,


ವ್ಯಕ್ತಿತ್ವ ವಿಕಸನಗೊಳ್ಳಲು ಪ್ರಮುಖವಾಗಿ ಆರು ವಿಷಯಗಳಲ್ಲಿ ತನ್ನದೇ ಆದ ಪ್ರಭುತ್ವವನ್ನು ಸಾಧಿಸಿಕೊಳ್ಳಬೇಕಾಗುತ್ತದೆ. ಆ ಆರು ವಲಯಗಳೆಂದರೆ--

ಭೌದ್ಧಿಕ,

ಬದಲಾಯಿಸಿ

ಭಾವನಾತ್ಮಕ,

ಬದಲಾಯಿಸಿ

ಮಾನಸಿಕ,

ಬದಲಾಯಿಸಿ

ನೈತಿಕ,ಹಾಗೂ

ಬದಲಾಯಿಸಿ

ಆಧ್ಯಾತ್ಮಿಕ.

ಬದಲಾಯಿಸಿ

ವ್ಯಕ್ತಿತ್ವವನ್ನು ವೃದ್ಧಿಸುವ ತಂತ್ರಗಳು :

ಬದಲಾಯಿಸಿ
  1. ಪ್ರತಿದಿನ ಆಶಾದಾಯಕ ಹಾಗೂ ಅದೃಷ್ಟದ ದಿನ.
  2. ಪ್ರತಿಯೊಂದರ ಬಗ್ಗೆಯೂ ಆಶಾದಾಯಕವಾಗಿರಬೇಕು,
  3. ಪ್ರತಿಯೊಂದರ ಬಗ್ಗೆ ಮಾನಸಿಕ ಧನಾತ್ಮಕತೆ...
  4. ಪ್ರಾಮಾಣಿಕತೆಯೇ ಜೀವನದ ಪರಮ ಮಂತ್ರವಾಗಿರಬೇಕು.
  5. ನಿತ್ಯ ಹೊಸ ಅನುಭವ..
  6. ಅನ್ಯರಿಗಾಗಿ ಪ್ರಾರ್ಥನೆ..
  7. ಮುಕ್ತ ಮನೊಭಾವ..
  8. ಮಾನಸಿಕ ಚಟುವಟಿಕೆಗಳು..
  9. ನೈಜ ಪ್ರೀತಿಯ ಹಂಚಿಕೆ,
  10. ಸ್ವಶಕ್ತಿಯಲ್ಲಿ ವಿಶ್ವಾಸ..
  11. ವರ್ತಮಾನದಲ್ಲಿ ಬದುಕಿ,
  12. ಹೆಚ್ಚು ಹೆಚ್ಚು ಮನನ ಮಾಡಿಕೊಳ್ಳುವುದು
  13. ಯಾವುದನ್ನೂ ಮುಂದೂಡಬಾರದು,
  14. ಬೇರೆಯವರಿಂದ ಬರುವ ಹಿಮ್ಮಾಹಿತಿಯನ್ನು ಧನಾತ್ಮಕವಾಗಿ ಅಭ್ಯಸಿಸಿ,

ವ್ಯಕ್ತಿತ್ವವು ಪ್ರತಿಶತ ೨೫ ವಂಶಪಾರಂಪರ್ಯವಾಗಿ ಬರುತ್ತದೆ ಹಾಗು ಉಳಿದ ೭೫ ಪ್ರತಿಶತ ವ್ಯಕ್ತಿ ವಾಸಿಸುವ ಪರಿಸರವನ್ನು ಅವಲಂಬಿಸಿರುತ್ತದೆ.

ಭೌತಿಕ ಬೆಳವಣಿಗೆ :

ಬದಲಾಯಿಸಿ

ಮಾನವ ಏನನ್ನಾದರೂ ಸಾಧಿಸಲು ಪ್ರಪ್ರಥಮವಾಗಿ ದೇಹ ವರ್ಧನೆ ಅತಿ ಮುಖ್ಯ. ಜಾನಪದರು ಹೇಳುವಂತೆ "ಘಟ ಇದ್ರೆ ಮಠ ಕಟ್ಟಬಹುದು". ಅಂಗಾಲಲ್ಲಿ ತ್ರಾಣ ಇದ್ರೆ ಬಂಗಾಳಕ್ಕಾದರು ನದೀತೀನಿ" ಅಂದರೆ ದೇಹಾರೊಗ್ಯ ಅತಿ ಮುಖ್ಯ. ಇದನ್ನೇ ಸಂಸ್ಕೃತದಲ್ಲಿ "ಶರೀರಮಾಧ್ಯಂ ಖಲುಧರ್ಮ ಸಾಧನಮ್"-"ಹಿತ ಭುಕ್,ಮಿತ ಭಹುಕ್,ಋತ ಭುಕ್" ಧರ್ಮಾರ್ಥ ಕಾಮ ಮೋಕ್ಷಾಣಾಂ-ಆರೋಗ್ಯಂ ಮೂಲಮುತ್ತಮಮ್". ಅಂದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಆರೋಗ್ಯವೆಂಬುದು ಅತಿ ಅಗತ್ಯವೆಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಆಂಗ್ಲ ಗಾದೆ ಹೇಳುವಂತೆ "ಗಟ್ಟಿ ದೇಹದಲ್ಲಿ ಗಟ್ಟಿ ಚಿಂತನೆಗಳಿರುತ್ತವೆ."

ಬೌದ್ಧಿಕ ಬೆಳವಣಿಗೆ :

ಬದಲಾಯಿಸಿ

ಜೀವನದಲ್ಲಿ ಯಾವುದೇ ಸಾಧನೆಗೆ ಮಾನವನ ಬುದ್ಧಿ ಪ್ರಮುಖ ಪಾತ್ರ ವಹಿಸುತ್ತದೆ. ಮಾನವನ ಧೀಶಕ್ತಿಯಿಂದಾಗಿ ಇಂದಿನ ಎಲ್ಲ ಚಟುವಟಿಕೆಗಳು ಜರುಗುತ್ತಿವೆ. ವಿದ್ಯೆ ಬುದ್ಧಿ ಇವೆರಡು ಶಬ್ದಗಳು ಜೀವನ ಪರ್ಯಂತ ಜೊತೆ ಜೊತೆಯಅಲ್ಲೇ ಸಾಗುತ್ತಿರುತ್ತವೆ. ಹಾಗಾಗಿಯೇ ಬುದ್ಧಿಗೆ ಸಂಬಂಧಿಸಿದಂತೆ ಜಾನಪದರು ಹಲವಾರು ಗಾದೆಮಾತುಗಳನ್ನು ಕಟ್ಟಿದ್ದಾರೆ. ಅರಿವು ಇದ್ರೆ ಮರೆವು ಬರಲ್ಲ. ಹೇಳಿಕೊಟ್ಟ ಬುದ್ಧಿ ಕಟ್ಟಿಕೊಟ್ಟ ಬುತ್ತಿ ಬಾಳ ದಿನ ಉಳಿಯಲ್ಲ. ಹೇಳೋರಿಗೆ ಸುದ್ಧಿ ,ಕೇಳೋರಿಗೆ ಬುದ್ಧಿ. ಚಾಡಿ ಮಾತ ಕೇಳಿ ಚಾವಡಿ ಹಾಳಾಯ್ತಂತೆ. ಓದು ಒಕ್ಕಾಲು,ಬುದ್ಧಿ ಮುಕ್ಕಾಲು. ಕ್ಷಣಂ ಚಿತ್ತಂ,ಕ್ಷಣಂ ವಿತ್ತಂ. ಕುಶಾಗ್ರ ಬುದ್ಧಿನೋ,ಮುಸಲಾಗ್ರ ಬುದ್ಧಿನೋ? ವಿದ್ಯೆಗೆ ಎಣೆಯಿಲ್ಲ,ಬುದ್ಧಿಗೆ ಕಡೆಯಿಲ್ಲ,ಘೃತ ಬುದ್ಧಿಯೋ,ತೈಲ ಬುದ್ಧಿಯೋ? ವಿದ್ಯೆ ಬುದ್ಧಿಗ್ ಮೂಲ,ಬುದ್ಧಿ ಸೌಖ್ಯಕ್ಕೆ ಮೂಲ.ಬುದ್ಧಿ ಉಂಟೆ ಬುವ್ವ ತಿಂಟಾಡು,ಲೇಕುಂಟೆ ಗುವ್ವ ತಿಂಟಾಡು.

ಅಂದರೆ, ಬುದ್ಧಿ ಮಾನವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕ. ಯಾವುದನ್ನೇ ತಿಳಿಯುವ ಶಕ್ತಿ,ವಿಶಯದ ಬಗೆಗಿನ ತಿಳುವಳಿಕೆ, ವಿಶಯದ ಬಗೆಗಿನ ಆಳವಾದ ಅರಿವು, ವ್ಯಕ್ತಿಯ ಸ್ವಭಾವ, ಜ್ಞಾನ....ಈ ಎಲ್ಲವೂ ಜಾಣತನ ಅಥವಾ ವ್ಯಕ್ತಿಯ ಬುದ್ಧಿಯನ್ನು ಅವಲಂಬಿಸಿರುತ್ತವೆ.

ಭಾವನಾತ್ಮಕ ಬೆಳವಣಿಗೆ :

ಬದಲಾಯಿಸಿ

ಸಹಜವಾಗಿಯೇ ಮಾನವ ಭಾವನಾತ್ಮಕ ಜೀವಿ. ಭಾವನೆಗಳೇ ಇಲ್ಲದವನು ಪಶು ಸಮಾನ. ಭಾವನೆಗಳು ಮಾನವನನ್ನು ತನ್ನ ಜೀವನದ ಬಗ್ಗೆ ಕನಸು ಕಾಣಲು ಪ್ರೇರೆಪಿಸುತ್ತವೆ. ಸ್ವಪ್ನರಹಿತ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಭಾವನೆಗಳು ಜ್ಞಾನಕ್ಕಿಂತ ಹೆಚ್ಚು ಪರಿಣಾಮಕಾರಿ. ಭಾವನೆಗಳೆಂಬ ಅಗ್ನಿಗೆ ಆಸೆ -ಆಕಾಂಕ್ಷೆಗಳೇ ಸೌದೆಗಳು. ಭಾವನೆಗಳು ಅಂತರಂಗದ ಗತಿಬಿಂಬ-ಪ್ರತಿಬಿಂಬಗಳಂತೆ. ಯದ್ಭಾವಂ ತದ್ಭವತಿ. ನಿಮ್ಮ ಭಾವನೆಗಳು ಶಭ್ರವಾಗಿದ್ದರೆ ಒತ್ತಡಗಳಿಗೆ ಅವಕಾಶವಿರದು. ನಕಾರಾತ್ಮಕ ಚಿಂತನೆಗಳಿಂದ ದೂರ ನಿಂತಾಗ ಸಕಾರಾತ್ಮಕ ಭಾವನೆಗಳ ಜನನವಾಗುತ್ತದೆ. ಬಾವನೆಗಳು ಸ್ಪಷ್ಟವಾಗುತ್ತಾ ಹೋದಂತೆ ಸೃಜನಶೀಲತೆ ಹಾಗು ಆತ್ಮವಿಶ್ವಾಸಗಳು ವರ್ಧಿಸುತ್ತವೆ.

ಮಾನಸಿಕ ಬೆಳವಣಿಗೆ :

ಬದಲಾಯಿಸಿ

ವ್ಯಕ್ತಿತ್ವ ವಿಕಸನದಲ್ಲಿ ಮಾನಸಿಕ ಬೆಳವಣಿಗೆ ಪ್ರಮುಕ ಪಾತ್ರ ವಹಿಸುತ್ತದೆ. ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇಚ್ಛಾಶಕ್ತಿ ಕ್ರಿಯಾ ಶಕ್ತಿಗಳು ಸಕಾರಾತ್ಮಕವಾಗಿದ್ದಲ್ಲಿ ಮನಸ್ಸು ಸದಾ ಉತ್ಸಾಹಭರಿತವಾಗಿರುತ್ತದೆ.ಎಲ್ಲ ಬಗೆಯಅ ನಂಬಿಕೆಗಳು ಮನಸ್ಸನ್ನಾಧರಿಸಿರುತ್ತವೆ. ಇದನ್ನೇ ರಾಷ್ಟ್ರಕವಿ ಕುವೆಂಪುರವರು ಹೀಗೆ ಹೇಳುತ್ತಾರೆ.. "ಎಷ್ಟು ದೇವರ ನೀನೆಷ್ಟು ನಂಬಿದರೇನು, ಒಂದಿಷ್ಟು ನಂಬದಿರೆ ನಿನ್ನ ನೀನು."

ಮಾನಸಿಕವಾಗಿ ಅತಿ ಎತ್ತರಕ್ಕೆ ಬೆಳೆಯಲಾಗದಿದ್ದರೂ ಎಲ್ಲರ ಮನಸ್ಸಿಗೆ ಹತ್ತಿರವಾಗಿ ಬೆಳೆಯಬೇಕು.ಮನಸ್ಸನ್ನು ಕೆರಳಿಸಬಾರದು ಆದರೆ ಅರಳಿಸಬೇಕು.ಮನಸ್ಸನ್ನು ಅರಳಿಸಿ-ಪಳಗಿಸಿದರೆ, ಸುಖ-ದುಃಖಗಳಲ್ಲಿ ಸಮತೆಯನ್ನು ಹೊಂದಿ ಎಲ್ಲ ಕನಸುಗಳನ್ನು ನನಸಾಗಿಸಿಕೊಳ್ಳಬಹುದು. ಮನಸ್ಸು ಪರಿಶುದ್ಧವಾಗಿದ್ದರೆ ಶತೃವೂ ಮಿತ್ರನಾಗುತ್ತಾನೆ.ಗಾದೆ ಮಾತು ಹೇಳುವಮತೆ"ಮನಸ್ಸಿನಂತೆ ಮಹದೇವ" ಎಲ್ಲಕ್ಕೂ ಮನಸ್ಸೇ ಕಾರಣ. ಇದನ್ನೇ ಸಂಸ್ಕೃತದಲ್ಲಿ ಹೀಗೆ ಹೇಢಳುತ್ತಾರೆ..

"ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಅಂದರೆ ಮಾನವ ಬಯಸುವ ಮೋಕ್ಷ ಬಂಧನಗಳಿಗೆ ಮನಸ್ಸೇ ಮುಖ್ಯವಾಗುತ್ತದೆ.

ಜಾನ್‍ಮಿಲ್ಟನ್ ಹೇಳುವಂತೆ " ಮನಸ್ಸಿಗೆ ಮನವೇ ನೆಲೆ-ಮನಸ್ಸು ತನ್ನಲ್ಲಿಯೇ ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತದೆ. ನಾಕ ನರಕಗಳೆರಡೂ ಮನಸ್ಸಿನಲ್ಲಿಯೇ ಇರುತ್ತವೆ. ನರಕದಿಂದ ನಾಕವನ್ನೂ, ನಾಕದಿಂದ ನರಕವನ್ನೂ ಮನಸ್ಸೇ ಮಾಡುತ್ತದೆ."

ಚಿನ್ಮಯ ಚಿಂತಾಮಣಿ ಹೇಳುವಂತೆ "ಜನಿಸಿದ ರಾಗಾಧಿಕಮೆಂಬೀ, ಘನಕಲ್ಲೋಲಗಳಿಂದ, ಮನವೆಂಬ ಉದಕವು ಕದಡದಿರೆ, ಚಿನ್ಮಯನಿಲ್ಲಿಯೇ ತೋರ್ಕುಮ್."

ಕರ್ಮಯೋಗಿ ಸಿದ್ಧರಾಮ ಹೇಳುವಂತೆ "ಮನವೆಂದು ಬೇರಿಲ್ಲ,ಮಹಾದೇವನ ಅರುಹು ನೋಡಾ, ಸಂಕಲ್ಪ- ವಿಕಲ್ಪಗಳ ಧರಿಸಿದಲ್ಲಿ ಮನವೆನಿಸೀತು."

ಜಾನಪದರು ಕೇಳುತ್ತಾರೆ!! ಕತೆಯಿಲ್ಲದ ಮನೆ ಎಲ್ಲಿದೆ?ವ್ಯಥೆಯಿಲ್ಲದ ಮನ ಎಲ್ಲಿದೆ? ಅಂದರೆ, ಮಾನಸಿಕ ಸಮತೋಲನವೇ ಪ್ರಬುದ್ಧತೆ.ಇದನ್ನೇ ಸಂಸ್ಕೃತದಲ್ಲಿ ಹೆಎಗೆ ಹೇಳಲಾಗಿದೆ, "ಜಿತೇ ಮನಸಿ ಸರ್ವಮ್" ಅಂದರೆ ಮನಸ್ಸನ್ನು ಗೆದ್ದರೆ ಪ್ರಪಂಚವನ್ನು ಗೆದ್ದಂತೆಯೇ.

ನೈತಿಕ ಬೆಳವಣಿಗೆ :

ಬದಲಾಯಿಸಿ

ನೀತಿ ಸಮಾಜದ ಸಂಸ್ಕೃತಿಯ ನಿಯಮ. ನೀತಿಸಾರದ ಬಗ್ಗೆ ಸಾಕಷ್ಟು ಗ್ರಂಥಗಳು ರಚನೆಯಾಗಿವೆ. ಮಾನವ ಮನಸ್ಸಿಗೆ ಸರಿ-ತಪ್ಪುಗಳನ್ನು ತೋರಿಸುವ ಪ್ರಮುಖ ಕೆಲಸ ಮಾಡುವುದೇ ನೀತಿ. ನೀತಿಯಅ ಬಗೆಗೆ ಪ್ರಪಂಚವೇ ಮಾತಾಡುತ್ತಿರುತ್ತದೆ ಆದರೆ ಪಾಲನೆಯಲ್ಲಿ ಹಿಂದುಮುಂದಾಗಿರುತ್ತದೆ. ನೀತಿ ಸದಾ ಸಮುದಾತದ-ಸಮಾಜದ ಅಭ್ಯುದಯವನ್ನು ಬಯಸುತ್ತದೆ. ಹಿನದೂ ಪರಂಪರೆಯಲ್ಲಿ ಎಲ್ಲ ವೇದಗಳು,ಉಪನಿಷತ್ತುಗಳು,ಪುರಾಣಗಳು..ನೀತಿಯನ್ನು ಒತ್ತಿ ಹೇಳುತ್ತವೆ. ಅತ್ಯಂತ ಪ್ರಚಲಿತವಿರುವ ಗೋವಿನ ಹಾಡಿನಲ್ಲಿ ನೀತಿಯ ಎಳೆಗಳನ್ನು ಗುರುತಿಸಬಹುದು. ..ಸತ್ಯವೇ ನಮ ತಾಯಿ ತಂದೆ ಸತ್ಯವೇ ನಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನದೆದರೆ ಮೆಚ್ಚನಾ ಪರಮಾತ್ಮನು....


ನೀತಿಯನ್ನುಗುರುತಿಸುವಅಂಶಗಳು-

ಬದಲಾಯಿಸಿ

ನಿಷ್ಪಕ್ಷಪಾತತೆ, ಕ್ಷಮೆ, ನಮ್ರತೆ, ಸ್ವನಿಯಂತ್ರಣ, ಸಹಿಷ್ನುತೆ, ಒಳ್ಳೆಯತನ, ಅಂಟಿಕೊಳ್ಳದಿರುವುದು, ಧ್ಯಾನ, ಘನತೆ, ಸ್ಥೈರ್ಯ, ಸಹಾನುಭೂತಿ, ವಿಧೇಯತೆ, ಇಂದ್ರಿಯನಿಗ್ರಹ......

ಸಂಸ್ಕೃತ ಸುಭಾಷಿತವೊಂದು ಹೀಗೆ ಹೇಳುತ್ತದೆ..

"ಪರೋಪಕಾರಾರ್ಥೇ ಫಲಂತಿ ವೃಕ್ಷಃ ಪರೋಪಕಾರಾರ್ಥೇ ದುಹಂತಿ ಗಾವಃ ಪರೋಪಕಾರಾರ್ಥೇ ವಹಂತಿ ನದಯಾ ಪರೋಪಕಾರಾರ್ಥಮಿದಂ ಶರೀರಮ್."

-ಅಂದರೆ ಪರರಿಗಾಗಿಯೆ ಮರಗಳು ಹಣ್ಣನ್ನು ಕೊಡುತ್ತವೆ,ಪರರಿಗಾಗಿಯೆ ಹಸುಗಳು ಹಾಲನ್ನು ಕರೆಯುತ್ತವೆ, ಪರರಿಗಾಗಿಯೆ ನದಿಗಳು ಹರಿಯುತ್ತವೆ, ಇಡೀ ಪ್ರಕೃತಿಯೆ ಪರರ ಸೇವೆಯಲ್ಲಿ ತೊಡಗಿರುವಾಗ ಮಾನವರಾಗಿ ಬೇರೆಯವರ ಒಳಿತಿಗಾಗಿ ಬದುಕ ಸವೆಸಬೇಡವೇ? ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೆ.... ಇದನ್ನೇ ನಮ್ಮ ಜಾನಪದರು ಹೀಗೆ ಹೇಳುತ್ತಾರೆ..:ತಿರ್ಕಂಡ್ ತಿಂದ್ರೂ, ಕರ್ಕೋಂಡ್ ಉಣ್ಬೇಕಂತೆ".

ಆಧ್ಯಾತ್ಮಿಕ ಬೆಳವಣಿಗೆ :

ಬದಲಾಯಿಸಿ

ಮಾನವ ಜೀವನದಲ್ಲಿ ಅತಿ ಶ್ರೇಷ್ಟವಾದ ಕೆಲಸ ಅಥವ ಕರ್ಮವೆಂದರೆ ಆತ್ಮ ಚಿಂತನೆ. ಮಾನವ ಭಗವಂತನೊಡನೆ ನಡೆಸುವ ಸಂವಾದವೇ ಆಧ್ಯಾತ್ಮ. ಆತ್ಮ ಪರಮಾತ್ಮರ ನಡುವಿನ ಸಂಬಂಧ-ವ್ಯತ್ಯಾಸ, ಹಾಗೂ ಪರಿಕಲ್ಪನೆ,; ಮುಕ್ತಿ ಅಥವಾ ಪರಿನಿರ್ವಾಣ, ದ್ವೈತ-ಅದ್ವೈತಗಳ ಪರಿಕಲ್ಪನೆ...ಹೀಗೆ ಜೀವನಪರ್ಯಂತ ಆತ್ಮಾನುಭವದ ಹುಡುಕಾಟವೇ ಆಧ್ಯಾತ್ಮ. ತತ್ವಜ್ಞಾನ ಆಧ್ಯಾತ್ಮದ ಅಡಿಗಲ್ಲು. ಪಾಪ-ಪುಣ್ಯಗಳನ್ನು ಇಲ್ಲಿ ಅನುಭವಿಸಿ ಮುಕ್ತಿಗಾಗಿ ಹುಡುಕಾಡುತ್ತೇವೆ. ನಾನು ನನ್ನದೆಂಬ ಅಹಂಕಾರದಿಂದ ಹೊರಬರಲು ಪ್ರಯತ್ನಿಸುತ್ತೇವೆ. ಜನನ ಮರಣ ಚಕ್ರದಿಂದ ಬಿಡುಗಡೆ ಹೊದಲು ತವಕಿಸುತ್ತೇವೆ.

ಇದನ್ನೇ ಶಂಕರಾಚಾರ್ಯರು :

"ಪುನರಪಿ ಜನನಂ,ಪುನರಪಿ ಮರಣಮ್, ಪುನರಪಿ ಜನನೇ ಜಠರೇ ಶಯನಮ್.."

ಸಂಸ್ಕೃತದಲ್ಲಿ ಹೀಗೆ ಹೇಳಲಾಗಿದೆ :

"ಸತ್ಸಂಗತ್ವೇ ನಿಸ್ಸಂಗತ್ವಮ್,ನಿಸ್ಸಂಗತ್ವೇ ನಿರ್ಮೋಹತ್ವಮ್, ನಿರ್ಮೋಹತ್ವೇ ನಿಶ್ಚಲ ತತ್ವಮ್,ನಿಶಚಲ ತತ್ವೇ ಜೀವನ್ಮುಕ್ತಿಃ"

"ಅವಶ್ಯಂ ಅನುಭೋಕ್ತವ್ಯಂ, ಕೃತಕರ್ಮ ಶುಭಾಶುಭಮ್" ಅಂದರೆ ಜೀವನದಲ್ಲಿ ನಾವು ಮಾಡಿದ ಒಳಿತು-ಕೆಡಕುಗಳನ್ನು ನಾವೇ -ಇಲ್ಲಿಯೇ ಅನುಭವಿಸಿ ತೀರಬೇಕು.

ಮೋಕ್ಷ ಎಂಬ ಮಾತು ಜೀವನದ ನಾಲ್ಕು ಹಂತಗಳ ಕೊನೆಯಲ್ಲಿ ಬರುತ್ತದೆ. ಜನ್ಮದಾರಭ್ಯ ಮರಣಾಂತ್ಯದವರೆಗೆ ಮೋಕ್ಷದ ಹುಡುಕಾಟ ಸಾಗಿದರೂ ಮೋಕ್ಷವಾಗದಿರಬಹುದು. ಉತ್ತಮ ಮನುಷ್ಯತ್ವ ಮುಮುಕ್ಷತ್ವದ ಕಡೆಗೆ ಕೊಂಡೊಯ್ಯುತ್ತದೆ. ಇದಕ್ಕೆ ಅತ್ಯಗತ್ಯವಾದದ್ದು ಭಕ್ತಿ. ಇದನ್ನೇ ಸಂಸ್ಕೃತದಲ್ಲಿ..

"ಮೋಕ್ಷಕಾರಣ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ.." ಅಂದರೆ ಮೋಕ್ಷಕ್ಕೆ ಕಾರಣವಾಗುವ ಸಾಮಗ್ರಿಗಳಲ್ಲಿ ಭಕ್ತಿಯೇ ಶ್ರೇಷ್ಠವಾದುದು.

ಇಂಥ ಶ್ರೇಷ್ಠವಾದ ಭಕ್ತಿಯನ್ನು ಕುರಿತು ಸರ್ವಜ್ಞ ಹೀಗೆನ್ನುತ್ತಾನೆ..

ಭಕ್ತಿಯಿಂದಲೆ ಶಕ್ತಿ,ಭಕ್ತಿಯಿಂದಲೆ ಮುಕ್ತಿ, ಭಕ್ತಿವಿರಕ್ತಿ ಅಳಿದರೀ ಜಗದಲ್ಲಿ, ಮುಕ್ತಿಯಿಲ್ಲರಂದ ಸರ್ವಜ್ಞ.

ಭಕ್ತ ಭಗವಂತರ ನಡುವಿನ ದ್ವಂದ್ವದ ಸನ್ನಿವೇಶವನ್ನು ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ವರ್ಣಿಸಿದ್ದಾರೆ...

ದೇವರೆಂಬುದೇನು ಕಗ್ಗತ್ತಲೆಯ ಗವಿಯೇ? ನಾವರಿಯಲಾರದೆಲ್ಲದರ ಒಟ್ಟು ಹೆಸರೇ? ಕಾವನೋವನಿರಲ್ಕೆ ಜಗದ ಕತೆಯೇಕಿಂತು, ಸಾವು ಹುಟ್ಟುಗಳೇನು? ಮಂಕುತಿಮ್ಮ.

ಅಂದರೆ ನರ ನಾರಾಯಣನಾಗಲು ಮೇಲೆ ಹೇಳಿರುವ ಆರೂ ಅಂಶಗಳನ್ನು ಮನನ ಮಾಡಿಕೊಂಡು ಮಾನವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ಇದನ್ನೇ ಸಂಸ್ಕೃತದಲ್ಲಿ ಹೀಗೆ ಹೇಳಿದ್ದಾರೆ..

"ಯೇಷಾಂ ನ ವಿದ್ಯಾ ನ ತಪೋ ನ ದಾನಮ್, ನ ಜ್ಞಾನಂ ನ ಶೀಲಂ ನ ಗುಣೋ ನ ಧರ್ಮಃ, ತೇ ಮರ್ತ್ಯ ಲೋಕೇ ಭುವಿ ಭಾರ ಭೂತಾಃ, ಮನುಷ್ಯರೂಪೇಣ ಮೃಗಾಶ್ಚರಂತಿ."

- ಅಂದರೆ ಯಾರಲ್ಲಿ ವಿದ್ಯೆ ಇಲ್ಲವೋ,ಯಾರಲ್ಲಿ ದಾನವಿಲ್ಲವೋ,ಯಾರಲ್ಲಿ ಗ್ಞಾನವಿಲ್ಲವೋ, ಯಾರಲ್ಲಿ ಶೀಲವಿಲ್ಲವೋ, ಗುಣವಿಲ್ಲವೋ, ಧರ್ಮವಿಲ್ಲವೋ, ಅಂಥವರು ಈ ಭೂಮೆಗೆ ಭಾರವಾದ ಜೀವನವನ್ನು ನಡೆಸುತ್ತಾರೆ. ಹಾಗೆಯೇ ಮಾನವ ರೂಪದಲ್ಲಿದ್ದರೂ ಮೃಗಗಳಂತೆ ಚಲಿಸುತ್ತಾರೆ. ಅಂದರೆ ವ್ಯರ್ಥ ಜೀವನ ನಡೆಸುತ್ತಿರುತ್ತಾರೆ.