ಸದಸ್ಯ:Sachidananda79/sandbox೧
ಕನ್ನಡ ವರ್ಣಮಾಲೆ.
ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ.ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
೧.ಸ್ವರಗಳು -೧೩
೨.ವ್ಯಂಜನಗಳು -೩೪
೩.ಯೋಗವಾಹಗಳು-೦೨
ಸ್ವರ ಎಂದರೇನು?
ಬದಲಾಯಿಸಿಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
ಸ್ವರಗಳಲ್ಲಿ ಎಷ್ಟು ವಿಧ?ಅವು ಯಾವುವು?
ಬದಲಾಯಿಸಿಸ್ವರಗಳಲ್ಲಿ ಎರಡು ವಿಧ.ಅವು ಯಾವುವೆಂದರೆ ಹ್ರಸ್ವ ಸ್ವರಗಳು ಹಾಗೂ ದೀರ್ಘ ಸ್ವರಗಳು.
ಹ್ರಸ್ವ ಸ್ವರ ಎಂದರೇನು?ಅವು ಎಷ್ಟಿವೆ?
ಬದಲಾಯಿಸಿಹ್ರಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹ್ರಸ್ವ ಸ್ವರಗಳೆಂದು ಕರೆಯುವರು.
ದೀರ್ಘ ಸ್ವರ ಎಂದರೇನು?ಅವು ಎಷ್ಟಿವೆ?
ಬದಲಾಯಿಸಿಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.
ವ್ಯಂಜನ ಎಂದರೇನು?ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?
ಬದಲಾಯಿಸಿಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ.ಅವು ಯಾವುವೆಂದರೆ
- ವರ್ಗೀಯ ವ್ಯಂಜನಗಳು(೨೫:ಕ,ಚ,ಟ,ತ,ಪ-ವರ್ಗಗಳು)
- ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ)
ವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟು ವಿಧ? ಅವು ಯಾವುವು?
ಬದಲಾಯಿಸಿಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,
ಕ-ವರ್ಗ, = ಕ, ಖ, ಗ, ಘ, ಙ.
ಚ-ವರ್ಗ, = ಚ, ಛ, ಜ, ಝ, ಞ.
ಟ-ವರ್ಗ ,= ಟ, ಠ, ಡ, ಢ, ಣ.
ತ-ವರ್ಗ, = ತ, ಥ, ದ, ಧ, ನ.
ಪ-ವರ್ಗ,= ಪ, ಫ, ಬ, ಭ, ಮ.
ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ?
ಬದಲಾಯಿಸಿಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.
ಕನ್ನಡ ಒತ್ತಕ್ಷರಗಳು ಎಷ್ಟಿವೆ? ಅವು ಯಾವುವು?
ಬದಲಾಯಿಸಿಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:
ಕ್ಕ ಖ್ಖ ಗ್ಗ ಘ್ಘ ಙ್ಙ
ಚ್ಚ ಛ್ಛ ಜ್ಜ ಝ್ಝ ಞ್ಞ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ
ಯೋಗವಾಹಗಳೆಂದರೇನು? ಅವು ಎಷ್ಟಿವೆ?
ಬದಲಾಯಿಸಿಸ್ವತಂತ್ರವಲ್ಲದ- ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ.