ಸದಸ್ಯ:SANTHOSH C R BVR/ನನ್ನ ಪ್ರಯೋಗಪುಟ

ಕೃತಕ ಮೂತ್ರಪಿಂಡ(ಹೀಮೋಡಯಾಲಿಸಿಸ್)

ಬದಲಾಯಿಸಿ

ಮನುಷ್ಯ ಬದುಕುಳಿಯಲು ಮೂತ್ರಪಿಂಡಗಳು ಅತ್ಯಗತ್ಯವಾದ ಅಂಗಗಳಾಗಿವೆ ಸೋಂಕುಗಳು, ಗಾಯ ಅಥವಾ ಮೂತ್ರಪಿಂಡಗಳಿಗೆ ರಕ್ತ ಪೂರೈಕೆ ಮಿತಗೊಂಡಾಗ ಮೂತ್ರಪಿಂಡಗಳ ಚಟುವಟಿಕೆ ಕಡಿಮೆಯಾಗುತ್ತದೆ. ಇದು ದೇಹದಲ್ಲಿ ವಿಷಕಾರಿ ತ್ಯಾಜ್ಯಗಳು ಸಂಗ್ರಹವಾಗಲು ದಾರಿಮಾಡುತ್ತದೆ. ಕಾರಣವಾಗಬಹುದು. ಮೂತ್ರಪಿಂಡಗಳ ವಿಫಲತೆಯ ಪ್ರಕರಣಗಳಲ್ಲಿ ಕೃತಕ ಮೂತ್ರಪಿಂಡವನ್ನು ಬಳಸಬಹುದು. ಕೃತಕ ಮೂತ್ರಪಿಂಡ ಎಂಬುದು ಅಪೋಹನದ (dialysis) ಮೂಲಕ ನೈಟ್ರೋಜನ್‌ಯುಕ್ತ ತ್ಯಾಜ್ಯಗಳನ್ನು ರಕ್ತದಿಂದ ಹೊರತೆಗೆಯುವ ಉಪಕರಣವಾಗಿದೆ. ಕೃತಕ ಮೂತ್ರಪಿಂಡವು ತುಂಬಿರುವ ತೊಟ್ಟಿಯಲ್ಲಿ ನಿಲಂಬಿತವಾಗಿರುವ - ಅರೆಪಾರಕ ಪೊರೆಗಳ ಭಿತ್ತಿಯಿರುವ ಹಲವಾರು ನಳಿಕೆಗಳನ್ನು ಒಳಗೊಂಡಿದೆ. ಈ ದ್ರವವು ರಕ್ತದಷ್ಟೇ ಅಭಿಸರಣ ಒತ್ತಡವನ್ನು ಹೊಂದಿದೆ, ಆದರೆ ಇದು ನೈಟ್ರೋಜನ್‌ಯುಕ್ತ ತ್ಯಾಜ್ಯರಹಿತವಾಗಿದೆ ರೋಗಿಯ ರಕ್ತವು ಈ ನಳಿಕೆಗಳ ಮೂಲಕ ಹಾದುಹೋಗುತ್ತದೆ. ಹೀಗೆ ಹಾದುಹೋಗುವಾಗ ರಕ್ತದಿಂದ ತ್ಯಾಜ್ಯ ಪದಾರ್ಥಗಳು ಡಯಲೈಸಿಂಗ್ ದ್ರವದೊಳಗೆ ವಿಸರಣೆಯಿಂದ ಚಲಿಸುತ್ತವೆ. ಶುದ್ದೀಕರಿಸಿದ ರಕ್ತವು ರೋಗಿಯ ದೇಹದೊಳಗೆ ಪುನಃ ಪಂಪ್ ಮಾಡಲ್ಪಡುತ್ತದೆ. ಇದು ಮೂತ್ರಪಿಂಡದ ಕಾರ್ಯದಂತೆಯೇ ಇರುತ್ತದೆ ಆದರೆ ಇದು ಭಿನ್ನವಾಗಿದೆ. ಏಕೆಂದರೆ, ಈ ಪ್ರಕ್ರಿಯೆಯು ಮರುಹೀರಿಕೆಯನ್ನು ಒಳಗೊಂಡಿಲ್ಲ. ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರಲ್ಲಿ ಮೂತ್ರಪಿಂಡಗಳ ಆರಂಭಿಕ ಶೋಧಿತ ದ್ರವ ದಿನಕ್ಕೆ 1801 ಆಗಿದೆ. ಆದರೂ, ವಿಸರ್ಜನೆಯಾಗುವ ನಿಜವಾದ ಪ್ರಮಾಣವು ದಿನಕ್ಕೆ ಒಂದು ಅಥವಾ ಎರಡು ಲೀಟರ್ ಮಾತ್ರ ಏಕೆಂದರೆ ಉಳಿದ ಶೋಧಿತ ದವವು ಮೂತ್ರಪಿಂಡದ ನಾಳಗಳಲ್ಲಿ ಮರುಹೀರಿಕೆಯಾಗುತ್ತದೆ.