ಸದಸ್ಯ:Roshnidsilva/sandbox5
ಚಳ್ಳೆ ಹಣ್ಣು
ಬದಲಾಯಿಸಿBird plum ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.
ಕನ್ನದದಲ್ಲಿ
ಬದಲಾಯಿಸಿಸೊಳ್ಳೆ, ಬೊಟ್ಟೆ, ಚೆಡ್ಲು, ಕೆಂದಲ್, ಮಣ್ಣಡಿಕೆ, ಚಳ್ಳಂಟು.
ಇತರ ಭಾಷೆಯಲ್ಲಿ
ಬದಲಾಯಿಸಿ(ಹಿಂದಿ) ಲಸುರ, (ಇಂ) ಅಸ್ಸಿರಿಯನ್ ಪ್ಲಮ್, ಬರ್ಡ್ ಲೈಮ್, (ಸಂ) ಉದ್ದಾಲಕ, ಬೌವರಕ, (ತ) ನರುವಿಲಿ, (ತೆ) ಬಂಕನೆಕ್ಕೆರ.
ಸಸ್ಯಶಾಸ್ತ್ರೀಯ ವಿಂಗಡಣೆ
ಬದಲಾಯಿಸಿಕಾರ್ಡೀಯ ಮಿಕ್ಸ Cordia myxa L.C. obliqua
ಕುಟುಂಬ
ಬದಲಾಯಿಸಿಬೊರಾಗಿನೇಸಿ Boraginaceae
ಹಣ್ಣಾಗುವ ಕಾಲ
ಬದಲಾಯಿಸಿಮೇ- ಜುಲೈ
ಪೌಷ್ಟಿಕಾಂಶಗಳು
ಬದಲಾಯಿಸಿಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣ.
ಆಹಾರ ಪದಾರ್ಥಗಳು
ಬದಲಾಯಿಸಿಹಣ್ಣಿನಿಂದ ಮದ್ಯ, ಕಾಯಿಗಳಿಂದ ಉಪ್ಪಿನಕಾಯಿ, ಸಾಂಬಾರ್.
ಔಷಧೀಯ ಗುಣ
ಬದಲಾಯಿಸಿ- ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಮತ್ತು ಕೆಮ್ಮು ನಿವಾರಕ.
- ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ.
- ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ.
- ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ
- ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ.
- ಗಾಯಕ್ಕೆ ತೊಗಟೆಯ ಗಂಧ ಲೇಪನ.
ಸಸ್ಯ ಮೂಲ, ಸ್ವರೂಪ
ಬದಲಾಯಿಸಿಏಷ್ಯಾ ಮೂಲದ ಚಳ್ಳೆಗಿಡ ೮-೧೦ ಮೀ ಎತ್ತರಕ್ಕೆ ಬೆಳೆಯಬಲ್ಲದು. ತೆಳ್ಳನೆಯ ಇಳಿ ಬಿಡ್ಡ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು.ಛಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು.
ಸಸ್ಯ ಪಾಲನೆ
ಬದಲಾಯಿಸಿಉಷ್ಣವಲಯದಲ್ಲಿ, ಸಮುದ್ರಮಟ್ಟದಿಂದ ೨೦೦-೧೫೦೦ ಮೀ ಎತ್ತರದಲ್ಲಿ ಬೆಳೆಯುವ ಮರ. ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಬೀಜ ಮತ್ತು ದಂಟುಸಸಿಗಳಿಂದ ಸಸ್ಯಾಭಿವೃದ್ಧಿ. ಹಕ್ಕಿ ಕೋತಿಗಳಿಂದ ಬೀಜಪ್ರಸಾರ.
ವಿಶಿಷ್ಟತೆ
ಬದಲಾಯಿಸಿಹಣ್ಣಿನ ಅರೆಪಾರದರ್ಶಕ ತಿರುಳು ಉತ್ತಮ ಅಂಟು. ಸೊಪ್ಪು ಪಶ್ನು ಗಳಿಗೆ ಮೇವು. ದೋಣಿ,ಆಟಿಗೆ, ಕೃಷಿ ಉಪಕರಣಗಳು ಮತ್ತು ಕೆತ್ತನೆ ಕಲಸಕ್ಕೆ ಮರದ ಬಳಕೆ ಕನ್ನಡ ಸಾಹಿತ್ಯದಲ್ಲಿ 'ಚಳ್ಳೆ ಹಣ್ಣು ತಿನ್ನಿಸು' ಎಂಬ ನುಡಿಗಟ್ಟಿನ ಪ್ರಯೊಗ ಸಾಮಾನ್ಯ.
ಉಲ್ಲೇಖ
ಬದಲಾಯಿಸಿ- http://www.fruitipedia.com/bird_plum%20Berchemia%20discolor.htm
- https://en.wikipedia.org/wiki/Cordia_myxa
- http://www.britannica.com/plant/Boraginaceae
Kingdom: Plantae (unranked): Angiosperms (unranked): Eudicots (unranked): Asterids Order: Lamiales Family: Boraginaceae Genus: Cordia Species: C. myxa Binomial name Cordia myxa L. Synonyms
Cordia obliqua Cordia domestica