ಸದಸ್ಯ:Roshnidsilva/sandbox4
ಮಟ್ಪಾಡಿ ಕಮಲಾಕ್ಷಮ್ಮ ಉಡುಪಿಯ ಪ್ರಸಿದ್ದ ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನಗಳ ಧರ್ಮದರ್ಶಿಗಳಾಗಿದ್ದ ನಿಡಂಬೂರು ಬೀಡು ನಾರಾಯಣ ಬಲ್ಲಾಳ ಹಾಗೂ ಲಕ್ಷ್ಮಿಯಮ್ಮ ಇವರ ಏಕಮಾತ್ರ ಸಂತಾನವೇ ಕಮಲಾಕ್ಷಮ್ಮ. ಇವರಿಗೆ ತಂದೆಯೆ ಸಂಸ್ಕೃತದ ಗುರುವಾಗಿದ್ದರು.
ವಿಧ್ಯಾಭ್ಯಾಸ
ಬದಲಾಯಿಸಿಐದನೆಯ ತರಗತಿಯವರೆಗೆ ವಿಧ್ಯಾಭ್ಯಾಸ.ಕಮಲಾಕ್ಷಮ್ಮನವರಿಗೆ ಬಾಲ್ಯದಿಂದಲೇ ಕಾವ್ಯಾಸಕ್ತಿ ಇದ್ದದ್ದರಿಂದ ಕಾವ್ಯಧ್ಯಯನವು ರೂಢಿಯಾಯಿತು.
ಜೀವನ
ಬದಲಾಯಿಸಿಕಮಲಾಕ್ಷಮ್ಮನವರ ಪತಿ ವೆಂಕೋಬಾಚಾರ್ಯರು, ಇವರು ಉಡುಪಿಯ ಅದಮಾರು ಮಠದಲ್ಲಿ ದಿವಾನರಾಗಿದ್ದರು.ಈ ದಂಪತಿಗಳಿಗೆ ಸಂತಾನವಿರಲಿಲ್ಲ, ಅವರಿಬ್ಬರೂ ತಮ್ಮ ಸರಳತೆ, ಸನ್ನಡತೆಗಳಿಂದ ಉಡುಪಿಯ ಅಷ್ಟಮಠಗಳ ಪರಿಸರದಲ್ಲಿ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದರು. ಕಮಲಾಕ್ಷಮ್ಮನವರ ಮನೆ ಒಂದು ಛತ್ರವಿದ್ದಂತೆ ಬಂದವರು ಎಲ್ಲರು ಅಲ್ಲಿ ತಂಗಿ, ಉಂಡು ತಿಂದು ತೇಗಿದರೆಂದರೆ ಕಮಲಾಕ್ಷಮ್ಮನವರಿಗೆ ಧನ್ಯತಾಭಾವ. ಬೆಂಗಳೂರಿನ ಖ್ಯಾತ ಪತ್ರಕರ್ತೆ,ಲೇಖಕಿ ಆರ್. ಕಲ್ಯಾಣಮ್ಮ ಇವರಿಗೆ ಚಿರಪರಿಚಿತರು. ಅವರು ಬೆಂಗಳೂರಿನಿಂದ ಉಡುಪಿಗೆ ಬಂದಾಗಲೆಲ್ಲ ಕಮಲಾಕ್ಷಮ್ಮನವರ ಸ್ವಗೃಹವಾದ ಅಂಬಲಪಾಡಿಯ 'ವ್ಯಾಸ ಭವನ'ದಲ್ಲಿ ಅಥಿತಿಯಾಗಿ ತಂಗುತ್ತಿದ್ದರು.
ಸಾಹಿತ್ಯ
ಬದಲಾಯಿಸಿ- ಬೆಂಗಳೂರಿನ ಖ್ಯಾತ ಪತ್ರಕರ್ತೆ,ಲೇಖಕಿ ಆರ್. ಕಲ್ಯಾಣಮ್ಮನವರು ಸಂಪಾದಿಸಿ ಪ್ರಕತಿಸುತ್ತಿದ್ದ 'ಸರಸ್ವತಿ' ಪತ್ರಿಕೆಯಲ್ಲಿ ವಿವಿಧ ಲೇಖನಗಳು
- ಸತೀಧರ್ಮ- ಪತಿವ್ರತಾಧರ್ಮವನ್ನು ಕುರಿತು ಭಾಮಿನಿಷಟ್ಪದಿ ಛಂದಸ್ಸಿನಲ್ಲಿ ರಚಿತವಾದ ಖಂಡಕಾವ್ಯ
- ವಾತ್ಸಲ್ಯ